ಪಂಜಾಬ್ ಚುನಾವಣೆ: ಸ್ಪರ್ಧಿಗಳ ಪರ ಕುಟುಂಬವೇ ಕಣಕ್ಕೆ!
ಚಂಡೀಗಢ, ಜನವರಿ 24: ಪಂಜಾಬ್‌ನಲ್ಲಿ ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಡುವೆ ಭರ್ಜರಿಯಾಗಿ ಎಲ್ಲಾ ಪಕ್ಷಗಳು ಚುನಾವಣಾ ಪ್ರಚಾರವನ್ನು ನಡೆಸುತ್ತಿದೆ. ಕಾಂಗ್ರೆಸ್, ಬಿಜೆಪಿ, ಅಕಾಲಿದಳ ಸೇರಿದಂತೆ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ತೊರೆದು ತನ್ನದೇ ಆದ ಪಕ್ಷ ಪಂಜಾಬ್ ಲೋಕ ಕಾಂಗ್ರೆಸ್ ರಚನೆ ಮಾಡಿದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕೂಡಾ ಪ್ರಚಾರವನ್ನು ನಡೆಸುತ್ತಿದ್ದಾರೆ. ಈ ನಡುವೆ ಕೆಲವು ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಇಡೀ ಕುಟುಂಬವೇ ಚುನಾವಣಾ ಕಣಕ್ಕೆ ಇಳಿದಿದೆ.
ಹದಿನೈದು ವರ್ಷ ವಯಸ್ಸಿನ ಏಕೊಮ್ ವಾರಿಂಗ್ ರಾಜಕೀಯಕ್ಕೆ ತುಂಬಾ ಚಿಕ್ಕವಿರಬಹುದು. ಆದರೆ ಚುನಾವಣಾ ಪ್ರಚಾರಕ್ಕೆ ಹೊಸತು ಅಲ್ಲ. ಪಂಜಾಬ್‌ನ ತನ್ನ ತಂದೆ ಅಮರಿಂದರ್ ಸಿಂಗ್ ರಾಜಾ ವಾರಿಂಗ್‌ರ ಗಿಡ್ಡರ್‌ಬಾಹಾ ವಿಧಾನಸಭೆ ಕ್ಷೇತ್ರದಲ್ಲಿ ಮತದಾರರೊಂದಿಗೆ ಸಂಪರ್ಕ ಸಾಧಿಸುವಲ್ಲಿ ನಿರತಳಾಗಿದ್ದಾಳೆ. ಕಳೆದ 10 ವರ್ಷಗಳಲ್ಲಿ ತನ್ನ ತಂದೆ ಮಾಡಿದ ಅಭಿವೃದ್ಧಿ ಕಾರ್ಯಗಳಿಗಾಗಿ ತನ್ನ ತಂದೆಯನ್ನು ಆಯ್ಕೆ ಮಾಡುವಂತೆ ಕೈಮುಗಿದು ಏಕೋಮ್ ವಾರಿಂಗ್ ಮನೆ ಮನೆಗೆ ತೆರಳಿ ಮತದಾರರನ್ನು ಮನವಿ ಮಾಡುತ್ತಿದ್ಧಾಳೆ.
ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು ಪಂಜಾಬ್‌ನ ಮುಕ್ತಸರ್ ಜಿಲ್ಲೆಯ ಗಿಡ್ಡರ್‌ಬಾಹಾ ವಿಧಾನಸಭೆ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಈ ಹಿಂದೆ 2012 ಮತ್ತು 2017 ರಲ್ಲಿ ಈ ಸ್ಥಾನದಿಂದ ಆಯ್ಕೆಯಾಗಿದ್ದರು. ಫೆಬ್ರವರಿ 20 ರಂದು ನಡೆಯಲಿರುವ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಕಣದಲ್ಲಿರುವ ಹಲವಾರು ಇತರ ಸ್ಪರ್ಧಿಗಳ ಕುಟುಂಬ ಸದಸ್ಯರು ಮುಂಬರುವ ಚುನಾವಣೆಗಳಿಗೆ ಬೆಂಬಲವನ್ನು ಪಡೆಯಲು ಮನೆ-ಮನೆಗೆ ಹೋಗುತ್ತಿದ್ದಾರೆ.

ಕೊರೊನಾ ವೈರಸ್ ಸೋಂಕು ಕಾರಣದಿಂದಾಗಿ ಭಾರತದ ಚುನಾವಣಾ ಆಯೋಗವು ದೊಡ್ಡ ಸಭೆಗಳು ಮತ್ತು ರ್‍ಯಾಲಿಗಳನ್ನು ನಿಷೇಧ ಮಾಡಿದೆ. ಈ ನಿಟ್ಟಿನಲ್ಲಿ ಅಭ್ಯರ್ಥಿಗಳ ಕುಟುಂಬದ ಸದಸ್ಯರು ತಮ್ಮ ಕುಟುಂಬದಿಂದ ಸ್ಪರ್ಧಿಸುವವರಿಗೆ ಮತ ಚಲಾಯಿಸಿ ಎಂದು ಮನವಿ ಮಾಡಲು ಮತದಾರರನ್ನು ವೈಯಕ್ತಿಕವಾಗಿ ಭೇಟಿ ಮಾಡುತ್ತಿದ್ದಾರೆ.
ತಂದೆಯ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಏಕೊಮ್ ವಾರಿಂಗ್
"ಕಳೆದ 10 ವರ್ಷಗಳಲ್ಲಿ ನಡೆದ "ಅಭೂತಪೂರ್ವ" ಅಭಿವೃದ್ಧಿ ಕಾರ್ಯಗಳಿಗಾಗಿ ಗಿಡ್ಡರ್‌ಬಹಾದ ಮತದಾರರು ತಮ್ಮ ತಂದೆಗೆ ಮತ ಚಲಾಯಿಸುತ್ತಾರೆ ಮತ್ತು ಅವರನ್ನು ಮತ್ತೆ ವಿಜಯಶಾಲಿಯಾಗಿಸುತ್ತಾರೆ," ಎಂದು ಏಕೊಮ್ ವಾರಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ನನ್ನ ತಂದೆ ಪ್ರದೇಶದ ಜನರಿಗೆ ಭರವಸೆ ನೀಡಿದ್ದನ್ನು ಮಾಡಿದ್ದಾರೆ. ಇದರಂತೆ ಆದರೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ," ಎಂದು ಕೂಡಾ ತಿಳಿಸಿದರು.
ಇನ್ನು ಈ ಹದಿನೈದು ವರ್ಷ ವಯಸ್ಸಿನ ಏಕೊಮ್ ವಾರಿಂಗ್ ತನ್ನ ತಂದೆಯ ಪರವಾಗಿ ಪ್ರಚರ ಮಾಡುವ ಸಂದರ್ಭದಲ್ಲಿ ಹೊಲಗಳಿಗೆ ನೀರನ್ನು ನೀಡಿದ ಅಮರಿಂದರ್ ಸಿಂಗ್ ರಾಜಾ ವಾರಿಂಗ್‌ರನ್ನು ಹಳ್ಳಿಯ ವೃದ್ಧರೊಬ್ಬರು ಹೊಗಳಿದ್ದಾರೆ. ಕೆಲವು ದಿನಗಳ ಹಿಂದೆ ಏಕೊಮ್ ವಾರಿಂಗ್ ತನ್ನ ತಂದೆಯ ಚುನಾವಣಾ ಕಚೇರಿಯನ್ನು ಗಿಡ್ಡರ್‌ಬಾಹಾದಲ್ಲಿ ಉದ್ಘಾಟಿಸಿದರು. ಕಳೆದ ಸೆಪ್ಟೆಂಬರ್‌ನಲ್ಲಿ ಚರಣ್‌ಜೀತ್ ಸಿಂಗ್ ಚನ್ನಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಸಾರಿಗೆ ಸಚಿವರಾದರು.
ಪತಿಯ ಪರವಾಗಿ ಪತ್ನಿಯ ಪ್ರಚಾರ
ಕಾಂಗ್ರೆಸ್ ಅಭ್ಯರ್ಥಿ ದಲ್ವಿರ್ ಸಿಂಗ್ ಗೋಲ್ಡಿ ಪತ್ನಿ ಸಿಮ್ರತ್ ಕೌರ್ ಖಂಗುರಾ ಕೂಡ ತಮ್ಮ ಪತಿಯ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ. ಹಾಲಿ ಶಾಸಕರಾಗಿರುವ ಗೋಲ್ಡಿ ಮತ್ತೆ ಧುರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್‌ರನ್ನು ಎದುರಿಸಲಿದ್ದಾರೆ. ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ 39 ವರ್ಷ ಪ್ರಾಯದ ಸಿಮ್ರತ್ ಕೌರ್ ಖಂಗುರಾ ಕ್ಷೇತ್ರದ ಪ್ರತಿ ಮನೆಗೆ ಭೇಟಿ ನೀಡುತ್ತಿದ್ದಾರೆ. "ಮತದಾರರಿಂದ ಉತ್ತಮ ಪ್ರತಿಕ್ರಿಯೆಯನ್ನು ಇದೆ," ಎಂದು ಕೂಡಾ ಹೇಳಿದ್ದಾರೆ. ಬೆಳಗ್ಗೆ 7:30ಕ್ಕೆ ಪ್ರಚಾರ ಆರಂಭಿಸಿದ ಖಂಗೂರ ಸಂಜೆಯ ವೇಳೆಗೆ ಮನೆಗೆ ಮರಳುತ್ತಾರೆ. "ನಾನು ಜನರನ್ನು ಭೇಟಿ ಮಾಡುವುದು ಮೊದಲ ಬಾರಿಗೆ ಅಥವಾ ಎರಡನೆಯ ಬಾರಿಗೆ ಅಲ್ಲ. ನಾನು ಆಗಾಗ್ಗೆ ಅವರ ಬಳಿಗೆ ಹೋಗುತ್ತೇನೆ ಮತ್ತು ನನಗೆ ಆತ್ಮೀಯ ಸ್ವಾಗತ ಸಿಗುತ್ತದೆ," ಎಂದು ಹೇಳುತ್ತಾರೆ.
ಎಎಪಿ ನಾಯಕ ಭಗವಂತ್ ಮಾನ್ ತನ್ನ ಪತಿಯ ವಿರುದ್ಧ ಅಭ್ಯರ್ಥಿ ಎಂಬ ಬಗ್ಗೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ದಲ್ವಿರ್ ಸಿಂಗ್ ಗೋಲ್ಡಿ ಪತ್ನಿ ಸಿಮ್ರತ್ ಕೌರ್ ಖಂಗುರಾ, ಭಗವಂತ್ ಮಾನ್‌ರನ್ನು ನಾನು ಇಲ್ಲೆಲ್ಲಿಯೂ ನೋಡೇ ಇಲ್ಲ ಎಂದಿದ್ದಾರೆ. ಸಂಗ್ರೂರ್ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿರುವ ಭಗವಂತ್ ಮನ್ 2014 ಮತ್ತು 2019 ರಲ್ಲಿ ಲೋಕಸಭೆ ಚುನಾವಣೆಯ ಸಮಯದಲ್ಲಿ ಕೇವಲ ಎರಡು ಬಾರಿ ಮಾತ್ರ ಧುರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.












Click it and Unblock the Notifications