Scorpion Venom: ಚಿನ್ನಕ್ಕಿಂತ ಹೆಚ್ಚಾಯಿತು ಚೇಳಿನ ಬೆಲೆ: ಕೋಟಿ ಕೋಟಿ ಬೆಲೆ ಬಾಳುತ್ತೆ ಈ ಚೇಳಿನ ವಿಷ!
ಜಗತ್ತಿನಲ್ಲಿ ಕೆಲ ವಸ್ತುಗಳು ಯಾವಾಗಲೂ ದುಬಾರಿ. ಆದರೆ ನೀವು ನಂಬ್ತಿರೋ ಬಿಡ್ತಿರೋ ಗೊತ್ತಿಲ್ಲ ಮಾರಣಾಂತಿಕ ವಿಷಗಳು ಇದಕ್ಕೆ ಹೊರತಾಗಿಲ್ಲ. ವಿಷ ಎಂದಾಕ್ಷಣ ನಮಗೆಲ್ಲರಿಗೂ ಮೊದಲು ನೆನಪಿಗೆ ಬರುವುದು ಹಾವುಗಳು. ಹಾವುಗಳಂತೆಯೇ ಚೇಳಿನ ವಿಷವು ಅಪಾಯಕಾರಿಯಾಗಿದೆ. ಇದು ನವ್ಯಾರೂ ಊಹಿಸುವುದಕ್ಕಿಂತ ಹೆಚ್ಚು ದುಬಾರಿಯಾಗಿದೆ. ಚೇಳಿನ ವಿಷ ದುಬಾರಿನಾ ಅಂತಾ ಗಾಬರಿ ಆದ್ರಾ? ನಿಮಗಿದು ಅಚ್ಚರಿ ಅನಿಸಿದರೂ ನಿಜವೇ....
ಭೂಮಿಯ ಮೇಲಿನ ಅತ್ಯಂತ ಅಪಾಯಕಾರಿ ಚೇಳಿನ ವಿಷವು ವಿಶ್ವದ ಅತ್ಯಂತ ಅಮೂಲ್ಯವಾದ ದ್ರವವಾಗಿದೆ. ಏಕೆಂದರೆ ಅದು ಕೊಲ್ಲುವುದರ ಜೊತೆಗೆ ಅನೇಕ ಉಪಯೋಗಗಳನ್ನು ಹೊಂದಿದೆ. ಪ್ರಸ್ತುತ ದಿನಗಳಲ್ಲಿ ಇದು ತುಂಬಾ ದುಬಾರಿಯಾಗುತ್ತಿದೆ. ಆದ್ದರಿಂದ ಪ್ರಪಂಚದಾದ್ಯಂತ ಹೆಚ್ಚು ಹಣವನ್ನು ಗಳಿಸಲು ಬಯಸುವ ಜನರು ಅದನ್ನು ಖರೀದಿಸಿಲು ಮುಂದಾಗುತ್ತಿದ್ದಾರೆ. ಅಂದಹಾಗೆ ಈ ಚೇಳಿನ ವಿಷದ ಬೆಲೆ ಎಷ್ಟು ಎಂದು ತಿಳಿದರೆ ನೀವು ಕೂಡ ಚೇಳು ಫಾರ್ಮ್ ಅನ್ನು ಪ್ರಾರಂಭಿಸಲು ಆಸಕ್ತಿ ಹೊಂದುವುದರಲ್ಲಿ ಅನುಮಾನವೇ ಇಲ್ಲ.

ಚೇಳುಗಳು ಸಣ್ಣ ಜೀವಿಗಳಾಗಿರಬಹುದು ಆದರೆ ಅದರ ವಿಷ ಮಾತ್ರ ತುಂಬಾನೇ ದುಬಾರಿ. ಅದರಿಂದ ಸಿಗುವ ವಿಷವು ಅಧಿಕ ಬೆಲೆ ಬಾಳುವಂಥಹದ್ದು. ಚಿನ್ನಕ್ಕಿಂತಲೂ ಚೇಳಿನ ವಿಷವನ್ನು ಅಧಿಕ ಹಣಕ್ಕೆ ಮಾರಲಾಗುತ್ತದೆ. ಚೇಳುಗಳಲ್ಲಿ ನಾನಾ ವಿಧದ ಚೇಳುಗಳಿವೆ. ಅವುಗಳಲ್ಲಿ ಯಾವ ಚೇಳಿನ ವಿಷ ಹೆಚ್ಚು ಬೆಲೆಬಾಳುತ್ತದೆ ಎನ್ನುವುದನ್ನು ತಿಳಿಯೋಣ.
ಡೆತ್‌ಸ್ಟಾಕರ್ ಚೇಳಿನ ವಿಷ:
ಡೆತ್‌ಸ್ಟಾಕರ್ ಚೇಳಿನ ವಿಷವು ತುಂಬಾ ಲಾಭದಾಯಕವಾಗಿದೆ. ಇನ್ಸೈಡರ್ ಪ್ರಕಾರ, ಇದರ 5 ಲೀಟರ್ ವಿಷ $39 ಮಿಲಿಯನ್ ಗಳಿಸುತ್ತದೆ. ಇದು ಭಾರತದಲ್ಲಿ ಸರಿಸುಮಾರು 32 ಕೋಟಿ ರೂಪಾಯಿ. ಡೆತ್‌ಸ್ಟಾಕರ್ ವಿಷದ ಒಂದು ಹನಿಯ ಬೆಲೆ USD 130 ಇದೆ. ಅಂದರೆ ಇದು ಭಾರತೀಯ ರೂಪಾಯಿಗಳಲ್ಲಿ 11,000 ಆಗಿದೆ. ಒಂದು ಚೇಳು ಒಂದು ಬಾರಿಗೆ ಕೇವಲ ಎರಡು ಮಿಲಿಗ್ರಾಂ ವಿಷವನ್ನು ಉತ್ಪಾದಿಸುತ್ತದೆ.

ಹೀಗಾಗಿ ಅದನ್ನು ಅಂತಹ ದೊಡ್ಡ ಪ್ರಮಾಣದಲ್ಲಿ ಒಂದೇ ಸಲ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಇದು ಬಹಳ ಕಡಿಮೆ ಪ್ರಮಾಣದಲ್ಲಿ ಮಾತ್ರ ಲಭ್ಯವಿರುತ್ತದೆ. ಉತ್ತರ ಆಫ್ರಿಕಾ ಮತ್ತು ಮಧ್ಯಪ್ರಾಚ್ಯದ ಮರುಭೂಮಿಗಳು ಮತ್ತು ಕುರುಚಲು ಕಾಡುಗಳಲ್ಲಿ ಕಂಡುಬರುವ ಡೆತ್‌ಸ್ಟಾಕರ್ ಮನುಷ್ಯನಿಗೆ ತಿಳಿದಿರುವ ಮಾರಕ ವಿಷಕಾರಿ ಜೀವಿಯಾಗಿದೆ.
ಡೆತ್‌ಸ್ಟಾಕರ್ ಚೇಳು ಕಚ್ಚಿದರೆ ಏನಾಗುತ್ತೆ?
ಅದಾಗ್ಯೂ ಈ ಡೆತ್‌ಸ್ಟಾಕರ್ ಮನುಷ್ಯನಿಗೆ ಕಚ್ಚಿದರೆ ಇದರಿಂದ ಸಾಯುವ ಪ್ರಮಾಣ ಕಡಿಮೆ. ಆದರೆ ಇದರ ನೋವು ಮನುಷ್ಯನಿಗೆ ತಡೆಯಲಾಗುವುದಿಲ್ಲ. ತುಂಬಾ ಅಹಿತಕರ ಅನುಭವವನ್ನು ನೀಡುತ್ತದೆ. ಚೇಳಿನ ಕಡಿತ ಅಪರೂಪವಾಗಿ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ. ಆದರೆ ಇದರಿಂದ ಚಿಕ್ಕ ಮಕ್ಕಳು ಮತ್ತು ವೃದ್ಧರು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಆದರೆ ಮಧ್ಯವಯಸ್ಕರಲ್ಲಿ ಅದು ತೀವ್ರವಾದ ನೋವನ್ನು ಉಂಟುಮಾಡಬಹುದು.
ಈ ಚೇಳು ಕಚ್ಚಿದರೆ ಚೂರಿಯಿಂದ ಇರಿದಷ್ಟು ನೋವಾಗುತ್ತದೆ. ಆದರೆ ನೀವು ಜೀವಂತವಾಗಿರುತ್ತೀರಿ. ಈ ಪ್ರಮಾಣದ ನೋವು ಡೆತ್‌ಸ್ಟಾಕರ್ ಕಚ್ಚಿದಾಗ ಆಗುತ್ತದೆ. ಜಗತ್ತಿನಲ್ಲಿ ಇದೇ ರೀತಿಯ ಮಾರಣಾಂತಿಕ ವಿಷವನ್ನು ಹೊಂದಿರುವ ಸಾಕಷ್ಟು ಜೀವಿಗಳಿವೆ. ಆದರೆ ಅವುಗಳ ವಿಷಗಳು ಡೆತ್‌ಸ್ಟಾಕರ್‌ನಷ್ಟು ನೋವುಂಟು ಮಾಡುವ ಗುಣಲಕ್ಷಣಗಳನ್ನು ಹೊಂದಿಲ್ಲ.
ಡೆತ್‌ಸ್ಟಾಕರ್ ವಿಷದ ಉಪಯೋಗ
ಅದರ ವಿಷವು ತುಂಬಾ ನೋವುಂಟು ಮಾಡುವುದರ ಹಿಂದೆ ಕೆಲವು ಕಾರಣಗಳಿವೆ. ಡೆತ್‌ಸ್ಟಾಕರ್ ವಿಷದ ಒಳಗೆ ಕ್ಲೋರೊಟಾಕ್ಸಿನ್ ಎಂಬ ಪೆಪ್ಟೈಡ್ ಇದೆ. ಇದು ಕೆಲವು ರೀತಿಯ ಕ್ಯಾನ್ಸರ್ ಮತ್ತು ಇತರ ಮಾರಣಾಂತಿಕ ಕಾಯಿಲೆಗಳ ಚಿಕಿತ್ಸೆ ಸೇರಿದಂತೆ ಹಲವಾರು ವೈದ್ಯಕೀಯ ಪ್ರಗತಿಗಳಲ್ಲಿ ಬಳಸಲಾಗುತ್ತದೆ. ವಿಷವು ಮೆದುಳಿನ ಗೆಡ್ಡೆಗಳಿಗೆ ಚಿಕಿತ್ಸೆ ನೀಡುವ ಮತ್ತು ಮಧುಮೇಹದ ಚಿಕಿತ್ಸೆಯಲ್ಲಿ ಈ ವಿಷವನ್ನು ಸಹ ಬಳಸಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..












Click it and Unblock the Notifications