108MP ಕ್ಯಾಮೆರಾದೊಂದಿಗೆ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ Poco M6 Plus
ಭಾರತದ ಮಾರುಕಟ್ಟೆಯಲ್ಲಿ ತನ್ನ ಛಾಪು ಮೂಡಿಸಿರುವ ಚೀನಾ ಮೂಲದ ಪೋಕೊ ಮೊಬೈಲ್ ಕಂಪನಿ ಈಗ ಮತ್ತೊಂದು ಸ್ಮಾರ್ಟ್‌ಫೋನ್ ರಿಲೀಸ್ ಮಾಡಲು ಸಿದ್ಧತೆ ನಡೆಸಿದೆ. ಭರ್ಜರಿ ಫೀಚರ್ಸ್‌ಗಳನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್ ಗ್ರಾಹಕರನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ.
ಪೋಕೊ ಕಂಪನಿ ಮಿಡ್ ರೇಂಜ್ ಗ್ರಾಹಕರನ್ನೇ ಟಾರ್ಗೆಟ್ ಮಾಡಿದ್ದು, ಮತ್ತೊಂದು ಶಕ್ತಿಶಾಲಿ ಫೋನ್ ಲಾಂಚ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. Poco M6 Plus ಭಾರತದಲ್ಲಿ ಸದ್ಯದಲ್ಲೇ ಬಿಡುಗಡೆ ಆಗಲಿದ್ದು, ಇದು 108MP ಡ್ಯುಯಲ್ ರಿಯರ್ ಕ್ಯಾಮೆರಾ ಸೆನ್ಸಾರ್ ಹೊಂದಿರಲಿದೆ. ಫೋನ್ 5G ಡ್ಯುಯಲ್ ಸಿಮ್‌ನೊಂದಿಗೆ ಬರಲಿದೆ.

ವಿಶೇಷತೆಗಳೇನು?
ಪೋಕೋ ಎಂ 6 ಪ್ಲಸ್ ಹಲವು ವಿಶೇಷತೆಗಳನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ 6.79 ಇಂಚಿನ ಫುಲ್ ಎಚ್‌ಡಿ ಡಿಸ್‌ಪ್ಲೇ ಹೊಂದಿದೆ. 120Hz ರಿಫ್ರೆಶ್ ರೇಟ್ ಬೆಂಬಲವನ್ನು ಹೊಂದಿದೆ. ಅಲ್ಲದೆ ಈ ಫೋನ್ 850 ನಿಟ್ಸ್ ಪೀಕ್ ಬ್ರೈಟ್‌ನೆಸ್‌ನೊಂದಿಗೆ ಬಳಕೆದಾರರ ಕೈ ಸೇರಲಿದೆ.
ಕ್ಯಾಮೆರಾ ಹೇಗಿದೆ?
ಈ ಫೋನ್ ಹಿಂಭಾಗದಲ್ಲಿ ಎರಡು ಕ್ಯಾಮೆರಾ ಹೊಂದಿದೆ. ಪ್ರೈಮರಿ ಕ್ಯಾಮೆರಾ 108 MP ಅಲ್ಟ್ರಾ ವೈಡ್ ಬೆಂಬಲದೊಂದಿಗೆ ಬರಲಿದೆ. ಅಲ್ಲದೆ 2 MP ಮ್ಯಾಕ್ರೋ ಸೆನ್ಸರ್ ಅನ್ನು ಹೊಂದಿರಲಿದೆ. ಎಲ್ಲ ಫೋನ್‌ಗಳಲ್ಲಿ ಇರುವಂತೆ ಈ ಫೋನ್‌ಗಳಲ್ಲಿ ನೈಟ್ ಹಾಗೂ ಡೇ ಮೂಡ್‌ನ್ನು ನೀಡಲಾಗಿದೆ. ಇನ್ನು ವಿಡಿಯೋ ಕಾಲ್ ಹಾಗೂ ಸೆಲ್ಫಿಗಾಗಿ 13 MP ಕ್ಯಾಮೆರಾವನ್ನು ನೀಡಲಿದೆ.

ಚಿಪ್‌ಸೆಟ್ ಯಾವುದು?
ಫೋನ್ ಪಂಚ್-ಹೋಲ್ ನಾಚ್ ಡಿಸ್ಪ್ಲೇ ಹೊಂದಿದೆ. ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 4 ಜನರೇಷನ್ 2 ಸುಧಾರಿತ ಚಿಪ್ ಸೆಟ್ ನೀಡಲಿದೆ. ಅಲ್ಲದೆ ಈ ಫೋನ್ ಸುಧಾರಿತ ಆಂಡ್ರಾಯ್ಡ್ 14 ಬೆಂಬಲವನ್ನು ಹೊಂದಿರಲಿದೆ. ಈ ಫೋನ್ 4 ರ್ಯಾಮ್ ಮತ್ತು 128 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿರಲಿದ್ದು, ಈ ಫೋನ್ ವಿಶೇಷತೆ ಅಂದತೆ 1 ಟಿಬಿ ಹೈಬ್ರಿಡ್ ಸ್ಲಾಟ್ ನೀಡಲಾಗುವುದು.
ಈ ಫೋನ್‌ನಲ್ಲಿ 3.5mm ಹೆಡ್‌ಫೋನ್ ಜ್ಯಾಕ್ ನೀಡಲಾಗುತ್ತಿದೆ.. ಫೋನ್ IP53 ರೇಟಿಂಗ್‌ನೊಂದಿಗೆ ಬರಲಿದೆ. ಫೋನ್ ಡ್ಯುಯಲ್ ಬ್ಯಾಂಡ್ ವೈ-ಫೈನೊಂದಿಗೆ ಹೊಂದಿರಲಿದೆ. ಅಲ್ಲದೆ ಬ್ಲೂಟೂತ್ v5.0, USB-C ಸಂಪರ್ಕವನ್ನು ಒದಗಿಸಲಾಗುವುದು. Poco M6 Plus 5G ಸ್ಮಾರ್ಟ್‌ಫೋನ್ 5030 mAh ಬ್ಯಾಟರಿಯೊಂದಿಗೆ ನೀಡಲಾಗುವುದು, ಇದರೊಂದಿಗೆ 33W ವೇಗದ ಚಾರ್ಜಿಂಗ್ ಬೆಂಬಲ ಲಭ್ಯವಿದೆ.
ಪೊಕೊ ಬಡ್ಸ್ X1
ಸೋರಿಕೆಯಾದ ವರದಿಯನ್ನು ನಂಬುವುದಾದರೆ, Poco M6 Pro ಜೊತೆಗೆ Poco ಇಯರ್‌ಬಡ್‌ಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದು Poco Buds X1 ಎಂಬ ಹೆಸರಿನೊಂದಿಗೆ ಬಿಡುಗಡೆಯಾಗಲಿದೆ. Poco Buds X1 ನ ಅಧಿಕೃತ ಬಿಡುಗಡೆಯನ್ನು ಕಂಪನಿಯು ಸಾಮಾಜಿಕ ಮಾಧ್ಯಮ ವೇದಿಕೆಯ ಮೂಲಕ ಘೋಷಿಸಿದೆ.












Click it and Unblock the Notifications