ಜೂನ್ 24ಕ್ಕೆ ಲಾಂಚ್ ಆಗಲಿದೆ ಒನ್‌ಪ್ಲಸ್ ಅಗ್ಗದ 5ಜಿ ಮೊಬೈಲ್
ಭಾರತೀಯ ಮಾರುಕಟ್ಟೆಯಲ್ಲಿ ತಮ್ಮದೇ ಆದ ಪ್ರಭಾವ ಹೊಂದಿರುವ ಚೀನಿ ಕಂಪನಿಗಳು ದಿನಕ್ಕೊಂದು ಮೊಬೈಲ್ ಲಾಂಚ್ ಮಾಡುವ ಮೂಲಕ, ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದೆ. ಮುಂದಿನ ವಾರದಲ್ಲಿ ಚೀನಾ ಮೂಲದ ಒನ್‌ಪ್ಲಸ್ ತನ್ನ ಅಗ್ಗದ 5G ಸ್ಮಾರ್ಟ್‌ಫೋನ್ ಲಾಂಚ್ ಮಾಡಲು ಸಿದ್ಧವಾಗಿದೆ. ಈ ಬಗ್ಗೆ ಕಂಪನಿ ಸಾಮಾಜಿಕ ತಾಣದಲ್ಲಿ ಬಹಿರಂಗ ಪಡಿಸಿದೆ.
ಒನ್‌ಪ್ಲಸ್ ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ತನ್ನ ಹಲವು ಮೊಬೈಲ್‌ಗಳನ್ನು ಹೊಂದಿದೆ. ಕಂಪನಿ ಕಳೆದ ತಿಂಗಳು OnePlus Nord CE 4 ಅನ್ನು ಮಿಡ್ ಬಜೆಟ್ ರೇಂಜ್‌ನಲ್ಲಿ ಬಿಡುಗಡೆ ಮಾಡಿತ್ತು. ಈ ಫೋನ್ 24,999 ರೂಗಳಿಗೆ ಗ್ರಾಹಕರ ಜೇಬು ಸೇರುತ್ತಿತ್ತು. ಈಗ ಕಂಪನಿ ಇದಕ್ಕೂ ಅಗದ್ದ OnePlus Nord CE 4 Lite ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದೆ, ಈ ಮೊಬೈಲ್ ಕಳೆದ ತಿಂಗಳು ಲಾಂಚ್ ಆಗಿರುವ ಮೊಬೈಲ್‌ಗಿಂತ ಕಡಿಮೆ ಬೆಲೆಯದ್ದಾಗಿರಲಿದೆ.

ಬಿಡುಗಡೆ ಯಾವಾಗ?
OnePlus ಇಂಡಿಯಾ ತನ್ನ ಅಧಿಕೃತ X ಹ್ಯಾಂಡಲ್‌ನಿಂದ ಟೀಸರ್ ವೀಡಿಯೊವನ್ನು ಬಿಡುಗಡೆ ಮಾಡುವ ಮೂಲಕ ಫೋನ್‌ನ ಬಿಡುಗಡೆ ದಿನಾಂಕವನ್ನು ದೃಢಪಡಿಸಿದೆ. OnePlus ನ ಈ ಫೋನ್ ಜೂನ್ 24 ರಂದು ಸಂಜೆ 7 ಗಂಟೆಗೆ ಬಿಡುಗಡೆ ಮಾಡಲಿದೆ. ಕಂಪನಿಯು ಈ ಸ್ಮಾರ್ಟ್‌ಫೋನ್ ಅನ್ನು ಆಲ್-ಡೇ ಎಂಟರ್‌ಟೈನ್‌ಮೆಂಟ್ ಎಂಬ ಅಡಿಬರಹದೊಂದಿಗೆ ಪ್ರಚಾರ ಮಾಡಿದೆ, ಅಂದರೆ ಫೋನ್‌ನಲ್ಲಿ ದೊಡ್ಡ ಬ್ಯಾಟರಿಯನ್ನು ನೀಡುವ ಸಾಧ್ಯತೆ ದಟ್ಟವಾಗಿದೆ.
ಒನ್‌ಪ್ಲಸ್ ಕಂಪನಿ ಈ ಹೊಸ ಮೊಬೈಲ್‌ನ ಟೀಸರ್ ಹಂಚಿಕೊಂಡಿದೆ. ಇದು 15 ಸೆಕೆಂಡ್‌ಗಳ ವಿಡಿಯೋ ಆಗಿದೆ. ಎಂದಿನಂತೆ ಫೋನ್ ಹಿಂಭಾಗದಲ್ಲಿ ಡ್ಯೂಯಲ್ ಕ್ಯಾಮೆರಾ ಸೆಟಪ್ ಕಾಣಬಹುದು. ಅಲ್ಲದೆ ಡ್ಯುಯಲ್ ಎಲ್‌ಇಡಿ ಲೈಟ್‌ಗಳನ್ನು ಕಾಣಬಹುದು. ಕಳೆದ ವರ್ಷ ಬಿಡುಗಡೆಯಾದ OnePlus Nord CE 3 Lite ಗೆ ಹೋಲಿಸಿದರೆ ಫೋನ್‌ನ ವೈಶಿಷ್ಟ್ಯಗಳನ್ನು ಸಹ ನವೀಕರಿಸಲಾಗುತ್ತದೆ.
ಕ್ಯಾಮೆರಾ ಹೇಗಿರಬಹುದು?
OnePlus ನ ಈ ಫೋನ್‌ನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ನೊಂದಿಗೆ ಮಾರುಕಟ್ಟೆ ಬರಲಿದೆ. ಪ್ರೈಮರಿ ಕ್ಯಾಮೆರಾ 50 ಮೆಗಾಪಿಕ್ಸಲ್ ಇರುವ ಸಾಧ್ಯತೆ ಇದ್ದು, ಫ್ರಂಟ್ ಕ್ಯಾಮೆರಾ 16 ಮೆಗಾ ಪಿಕ್ಸಲ್ ಇರುವ ಸಂಭವ ಇದೆ. ಮುಂಭಾಗದ ಕ್ಯಾಮೆರಾ ಮೂಲಕ ವಿಡಿಯೋ ಕರೆಗಳು ಹಾಗೂ ಸೆಲ್ಫಿ ಫೋಟೋ ತೆಗೆದುಕೊಳ್ಳಬಹುದು. ಅಲ್ಲದೆ ಈ ಮೊಬೈಲ್ 5,110mAh ಬ್ಯಾಟರಿಯೊಂದಿಗೆ ಬರುವ ಸಾಧ್ಯತೆ ಇದೆ. ಅಲ್ಲದೆ 80 ವ್ಯಾಟ್ ಸೂಪರ್ ವೋಕ್ ಚಾರ್ಜಿಂಗ್ ಸೌಲಭ್ಯ ಹೊಂದಿರುವ ಸಾಧ್ಯತೆ ಇದೆ. ಇದು ಕಳೆದ ವರ್ಷ ಬಿಡುಗಡೆಯಾದ ನಾರ್ಡ್ ಸಿಇ 3 ಲೈಟ್‌ಗೆ ಹೋಲಿಸಿದರೆ ದೊಡ್ಡ ಗಾತ್ರದ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಬರಲಿದೆ.

ಈ ಫೋನ್ 120Hz OLED ಡಿಸ್‌ಪ್ಲೇ ಹೊಂದಿರುವ ಸಾಧ್ಯತೆ ಇದ್ದು, 2,100 ನೀಟ್ಸ್ ಬೆಳಕನ್ನು ನೀಡುತ್ತದೆ. ಇದರ ಕಾರ್ಯ ಕ್ಷಮತೆ ಇನ್‌ಡೋರ್ ಹಾಗೂ ಔಟ್ ಡೋರ್ ಉತ್ತಮವಾಗಿರುವ ಸಾಧ್ಯತೆ ಇದೆ. OnePlus Nord CE 4 Lite Android 14 ಆಧಾರಿತ Oxygen OS ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಫೋನ್ ಚೀನಾದಲ್ಲಿ ಬಿಡುಗಡೆಯಾದ OnePlus Nord 3V ಯ ಮರುಬ್ರಾಂಡೆಡ್ ಆವೃತ್ತಿಯಾಗಿರಬಹುದು.
-
ಇರಾನ್ನ ವಾಯುನೆಲೆ, ಶಸ್ತ್ರಾಸ್ತ್ರ ಡಿಪೋ ಮೇಲೆ ಯುಎಸ್ ಜಂಟಿ ದಾಳಿ, ರಷ್ಯಾ ಬೆಂಬಲ? ಇಲ್ಲಿವೆ ಪ್ರಮುಖಾಂಶಗಳು -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ











Click it and Unblock the Notifications