ಜೂನ್ 6ರಂದು ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ ನೀಡಲಿದೆ OnePlus 12
ಭಾರತದಲ್ಲಿ ಚೀನಾ ಕಂಪನಿಯ ಮೊಬೈಲ್‌ಗಳಿಗೆ ಭಾರೀ ಬೇಡಿಕೆ ಇದೆ. ಚೀನಾ ಮೂಲದ ಹಲವು ಕಂಪನಿಗಳು ದಿನವೂ ಒಂದಿಲ್ಲಾ ಒಂದು ಹೊಸ ತಂತ್ರಜ್ಞಾನಗಳಿಂದ ಕೂಡಿದ ಮೊಬೈಲ್ ಲಾಂಚ್ ಮಾಡುತ್ತಲೇ ಇರುತ್ತವೆ. ಭಾರತದಲ್ಲಿ ಅಷ್ಟೇ ಅಲ್ಲಾ ವಿಶ್ವದಲ್ಲೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಒನ್‌ಪ್ಲಸ್ ಕಂಪನಿ ತನ್ನ ಮತ್ತೊಂದು ಫೋನ್ ಲಾಂಚ್ ಮಾಡಲು ತೆರೆಯ ಮರೆಯ ಸರ್ಕಸ್ ನಡೆಸಿದೆ.
OnePlus ಕಡಿಮೆ ಬೆಲೆಯಲ್ಲಿ ಶಕ್ತಿಯುತ ವೈಶಿಷ್ಟ್ಯಗಳು ಮತ್ತು ಆಕರ್ಷಕ ವಿನ್ಯಾಸದೊಂದಿಗೆ ಸ್ಮಾರ್ಟ್‌ಫೋನ್‌ಗಳನ್ನು ನೀಡುತ್ತದೆ. OnePlus 12 ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ನೀವು ಈ ಮೊಬೈಲ್ ಕಂಪನಿಯ ಅಭಿಮಾನಿಯಾಗಿದ್ದು, ಹೊಸ ಫೋನ್ ತೆಗೆದುಕೊಳ್ಳುವ ಯೋಚನೆಯಲ್ಲಿದ್ದರೆ, ನಿಮಗಿದೋ ಖುಷಿಯ ವಿಚಾರ. ಇನ್ನೇನು ಕೆಲವೇ ದಿನಗಳಲ್ಲಿ ಒನ್ ಪ್ಲಸ್ ಸ್ಮಾರ್ಟ್‌ಫೋನ್ ಲಾಂಚ್ ಮಾಡಲಿದೆ.

ಒನ್ ಪ್ಲಸ್ ತನ್ನ ಮೊಬೈಲ್ ಫೋನ್‌ನ್ನು ಅಪ್‌ಡೇಟ್ ಮಾಡಿ ಲಾಂಚ್ ಮಾಡುವುದಾಗಿ ಸುದ್ದಿಗಳು ಹರಿದಾಡುತ್ತಿದ್ದವು. ಈಗ ಈ ಬಗ್ಗೆ ಬಿಗ್ ಅಪ್‌ಡೇಟ್ ಸಿಕ್ಕಿದೆ. OnePlus ಹೊಸ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲಿದೆ.
ಲಾಂಚ್ ಯಾವಾಗ?
ಒನ್ ಪ್ಲಸ್ 12 ರ ಈ ಹೊಸ ರೂಪಾಂತರವನ್ನು ನೀವು ಪಡೆಯಲು ಬಯಸಿದರೆ, ಅದು ಸೀಮಿತ ಆವೃತ್ತಿಯ ಸ್ಮಾರ್ಟ್‌ಫೋನ್ ಆಗಿರುತ್ತದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಬಳಕೆದಾರರು ವಿಭಿನ್ನ ವಿನ್ಯಾಸದ ಸ್ಮಾರ್ಟ್‌ಫೋನ್ ಪಡೆಯುತ್ತಾರೆ. ಇಲ್ಲಿಯವರೆಗೆ ಈ ರೂಪಾಂತರವು ಚೀನಾದ ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಿತ್ತು, ಆದರೆ ಈಗ ಕಂಪನಿಯು ಇದನ್ನು ಭಾರತದಲ್ಲಿ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ.
ಈ ಪೋನಿನ ಹೆಸರು ಏನು?
ಜೂನ್‌ನಲ್ಲಿ ಒನ್ ಪ್ಲಸ್ 12 ರ ಹೊಸ ರೂಪಾಂತರವನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದೆ. ನೀವು ಒನ್ ಪ್ಲಸ್ ನ ಹೊಸ ಫೋನ್ ಖರೀದಿಸಲು ಬಯಸಿದ್ದಲ್ಲಿ ಕೊಂಚ ದಿನ ಕಾಯಬೇಕು. ಜೂನ್ 6, 2024 ರಂದು ಒನ್ ಪ್ಲಸ್ 12 ನ ಹೊಸ ಬಣ್ಣ ರೂಪಾಂತರವನ್ನು ಪರಿಚಯಿಸುತ್ತದೆ. ಒನ್ ಪ್ಲಸ್ ಗ್ಲೇಶಿಯಲ್ ವೈಟ್ ಹೆಸರಿನ ಹೊಸ ರೂಪಾಂತರವನ್ನು ಪರಿಚಯಿಸಬಹುದು.
ಹಿಮಾವೃತ ಹಿಮನದಿಗಳ ಸೌಂದರ್ಯದಿಂದ ಸ್ಫೂರ್ತಿ ಪಡೆದು ಇದರ ಡಿಸೈನ್ ಮಾಡಲಾಗಿದೆ ಎಂದು ಕಂಪನಿ ಹೇಳಿದೆ. ಕಂಪನಿಯ ಪ್ರಕಾರ, ಮುಂಬರುವ ರೂಪಾಂತರವು ಬಳಕೆದಾರರಿಗೆ ವಿಭಿನ್ನ ಅನುಭವವನ್ನು ನೀಡುತ್ತದೆ ಎಂದು ಸ್ಪಷ್ಟಪಡಿಸಿದೆ.
ಡಿಸ್‌ಪ್ಲೇ, ಕ್ಯಾಮೆರಾ ಹೇಗಿರಲಿದೆ?
ನೂತನ ಒನ್ ಪ್ಲಸ್ 12 ಫೋನ್ 6.82 ಇಂಚಿನ ಅಮ್ಲೋಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು 120hz ರಿಫ್ರೆಶ್ ದರದೊಂದಿಗೆ ಗ್ರಾಹರಕ ಕೈ ಸೇರಲಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಮೊಬೈಲ್‌ನಲ್ಲಿ ಸ್ನ್ಯಾಪ್ ಡ್ರ್ಯಾಗನ್ 8 ಜನರೇಷನ್ 3 ಪ್ರೊಸೆಸರ್ ಬಳಸಲಾಗಿದೆ. ಇದು 24 ಜಿಬಿ ರ್ಯಾಮ್ ಹಾಗೂ 1 ಟಿಬಿ ಇಂಟರ್ನಲ್ ಸ್ಟೋರೇಜ್ ನೊಂದಿಗೆ ಬರಲಿದೆ.
ಈ ಸ್ಮಾರ್ಟ್‌ಫೋನ್ 5400 mAh ಬ್ಯಾಟರಿಯೊಂದಿಗೆ 100 ವ್ಯಾಟ್ ವೇಗದ ಚಾರ್ಜಿಂಗ್‌ನೊಂದಿಗೆ ಹೊರ ಬರಲಿದೆ. ಈ ಫೋನಿನ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಪ್ರೈಮರಿ ಕ್ಯಾಮೆರಾ 50 ಮೆಗಾ ಪಿಕ್ಸಲ್‌ನಿಂದ ಕೂಡಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಅಲ್ಲದೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಕಂಪನಿ 32 ಮೆಗಾ ಪಿಕ್ಸಲ್ ಕ್ಯಾಮೆರಾ ನೀಡಲಿದೆ.












Click it and Unblock the Notifications