ಭರ್ಜರಿ ಫೀಚರ್ಸ್ ಹೊಂದಿರುವ Motorola ಮೊಬೈಲ್ ಲಗ್ಗೆ ಇಡಲು ಸಿದ್ಧ? ಬೆಲೆ ಎಷ್ಟು ಗೊತ್ತಾ?
ಭಾರತದ ಮಾರುಕಟ್ಟೆಗೆ ದಿನವೂ ಹೊಸ ಹೊಸ ಮೊಬೈಲ್‌ಗಳು ಬರುತ್ತಲೇ ಇರುತ್ತವೆ. ಈ ಮೊಬೈಲ್‌ಗಳು ತಮ್ಮ ವಿಶೇಷತೆಗಳಿಂದ ಗ್ರಾಹಕರನ್ನು ಸೆಳೆಯುತ್ತವೆ. ಚೀನಾದ ಮೂಲದ ಕಂಪನಿಗಳು ನಮ್ಮ ಮಾರುಕಟ್ಟೆಯಲ್ಲಿ ತಮ್ಮ ಪ್ರಭುತ್ವ ಸಾಧಿಸಿವೆ. ಮತ್ತೊಂದು ಮೊಬೈಲ್ ಭಾರತೀಯ ಗ್ರಾಹಕರನ್ನು ಸೆಳೆಯಲು ಸಿದ್ಧವಾಗಿದೆ.
ಈಗಾಗಲೇ ಮಾರುಕಟ್ಟೆಯಲ್ಲಿ ಮೊಟೊರಾಲಾ ಕಂಪನಿಯ ಮೊಬೈಲ್‌ಗಳು ಅಬ್ಬರಿಸುತ್ತಿವೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಕಂಪನಿಯ ಇನ್ನೊಂದು ಮೊಬೈಲ್ ಲಾಂಚ್ ಆಗಲಿದೆ. ಮೊಟೊರಾಲಾ ಎಡ್ಜ್ 50 ಅಲ್ಟ್ರಾ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ.

ಕಂಪನಿಯು ತನ್ನ ಅಧಿಕೃತ ಸಾಮಾಜಿಕ ತಾಣದ ಮೂಲಕ ತನ್ನ ಬಿಡುಗಡೆಯನ್ನು ಖಚಿತಪಡಿಸಿದೆ. ಇದು ಮೊಟೊರೊಲಾದಿಂದ ಅಲ್ಟ್ರಾ ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗಿದೆ. ಈ ಮೊಬೈಲ್ ಇತ್ತೀಚೆಗಷ್ಟೇ ಜಾಗತಿಕ ಮಾರುಕಟ್ಟೆಯಲ್ಲಿ ಪರಿಚಯಿಸಲಾಗಿದ್ದು, ಇದೀಗ ಭಾರತಕ್ಕೂ ಲಗ್ಗೆ ಇಡಲಿದೆ.
ಈಗಾಗಲೇ ಭಾರತದಲ್ಲಿ Motorola Edge 50 Pro ಅನ್ನು ಬಿಡುಗಡೆ ಮಾಡಿದೆ, ಇದರ ಬೆಲೆ 31,999 ರೂ. ಇದು ಮಿಡ್ ರೆಂಜ್ ಮೊಬೈಲ್ ಆಗಿದೆ. ಇದಕ್ಕೆ ನೀಡುವ ಬೆಲೆಯು ಇದರಲ್ಲಿ ನೀಡಿರುವ ಫೀಚರ್ಸ್‌ಗೆ ಸರಿಯಾಗಿದೆ. ಇನ್ನು ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಬೆಲೆ ಬಹುಶಃ ಈ ಮೊಬೈಲ್‌ಗಿಂತ ಹೆಚ್ಚಾಗಿದೆ.
ಮತ್ತು ಇದರಲ್ಲಿ ನೀಡಲಾದ ವೈಶಿಷ್ಟ್ಯಗಳು ಅದರ ಬೆಲೆಗೆ ಸಾಕಷ್ಟು ಸರಿಯಾಗಿವೆ. ಆದಾಗ್ಯೂ, ಉತ್ತಮ ಸ್ಪೆಕ್ಸ್‌ನೊಂದಿಗೆ ಬರುವುದರಿಂದ, ಅಲ್ಟ್ರಾ ಮಾದರಿಯ ಬೆಲೆ ಬಹುಶಃ ಇದಕ್ಕಿಂತ ಹೆಚ್ಚಾಗಿರುತ್ತದೆ.
ಕ್ಯಾಮೆರಾ ಹೇಗಿದೆ?
Motorola Edge 50 Ultra ಮೊಬೈಲ್ ಕ್ಯಾಮೆರಾ ಸೆಟಪ್ ಆಕರ್ಷಕಾವಾಗಿದೆ. ಹಿಂಭಾಗದಲ್ಲಿ OIS ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ಹೊಂದಿರುತ್ತದೆ. ಈ ಸಾಧನವು Android 14 OS ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 16GB ಜಿಬಿ ರ್ಯಾಮ್ ಹೊಂದಿರಲಿದೆ.

ಡಿಸ್‌ಪ್ಲೇ ಹಾಗೂ ಪ್ರೊಸೆಸರ್ ಹೇಗಿದೆ?
ಜಾಗತಿಕ ಮಾರುಕಟ್ಟೆಯಲ್ಲಿ Motorola Edge 50 Ultra ಅನ್ನು Qualcomm ನ Snapdragon 8s Gen 3 ಚಿಪ್‌ನೊಂದಿಗೆ ಪರಿಚಯಿಸಲಾಗಿದೆ. ಅಲ್ಟ್ರಾ ಮಾದರಿಯ ಮೊಬೈಲ್ 6.7-ಇಂಚಿನ ಓಎಲ್‌ಇಡಿ ಡಿಸ್‌ಪ್ಲೇಯನ್ನು ಹೊಂದಿರುತ್ತದೆ, ಈ ಸ್ಮಾರ್ಟ್‌ಫೋನ್ ನ ರಿಫ್ರೇಶ್ ದರ 144Hz ಇರುತ್ತದೆ. ಹೆಚ್ಚುವರಿಯಾಗಿ. ಈ ಮೊಬೈಲ್ IP68 ರೇಟಿಂಗ್ ಅನ್ನು ಹೊಂದಿದೆ.
ಈ ಫೋನ್‌ನಲ್ಲಿ 4,500mAh ಬ್ಯಾಟರಿ ನೀಡಲಾಗುತ್ತಿದೆ. ಅಲ್ಲದೆ ಇದು 125W ವೈರ್ಡ್ ಚಾರ್ಜಿಂಗ್ ಬೆಂಬಲದೊಂದಿಗೆ ಗ್ರಾಹಕರ ಕೈ ಸೇರಲಿದೆ. ಅಲ್ಲದೆ 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಬೆಲೆ
ಈ ಸ್ಮಾರ್ಟ್ ಫೋನ್ ಪ್ರೀಮಿಯಂ ಫೀಚರ್ಸ್ ಹೊಂದಿದ್ದು, ಈ ಮೊಬೈಲ್ ಬೆಲೆ 40,000 ರಿಂದ 50,000 ರೂ. ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಈಗಾಗಲೇ ಈ ರೇಂಜ್‌ನಲ್ಲಿ ಹಲವು ಕಂಪನಿಯ ಮೊಬೈಲ್‌ಗಳು ಧೂಳೆಬ್ಬಿಸಿವೆ. ಈ ಮೊಬೈಲ್ ಲಾಂಚ್ ಅದಲ್ಲಿ ಬೇರೆ ಕಂಪನಿಯ ಮೊಬೈಲ್‌ಗಳಿಗೆ ತೊಂದರೆ ಕಟ್ಟಿಟ್ಟ ಬುತ್ತಿ. ಈಗಾಗಲೇ ಮೊಟೊರಾಲ ಕಪಂನಿಯ ಹಲವು ಮೊಬೈಲ್‌ಗಳು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿವೆ.












Click it and Unblock the Notifications