Motorola: ಭಾರತೀಯ ಮಾರುಕಟ್ಟೆಗೆ ಇದೇ ತಿಂಗಳು ಮೊಟೊರಾಲಾ ಕಂಪನಿಯ ಎರಡು ಬಜೆಟ್ ಫ್ರೆಂಡ್ಲಿ ಫೋನ್
ಬಜೆಟ್ ಸೆಗ್ಮೆಂಟ್‌ನಲ್ಲಿ ಹಲವು ಕಂಪನಿಯ ಫೋನ್‌ಗಳು ಈಗ ಮಾರಾಟಕ್ಕೆ ಲಭ್ಯ. ಈ ರೇಂಜ್‌ನಲ್ಲಿ ಗ್ರಾಹಕರನ್ನು ಸೆಳೆಯಲು ಹಲವು ಪ್ರತಿಷ್ಠಿತ ಕಂಪನಿಗಳು ತಾಮುಂದೆ ನಾಮುಂದೆ ಎಂದು ರೇಸ್‌ನಲ್ಲಿ ಬಿದ್ದಿವೆ. ಇದೇ ಸೆಗ್ಮೆಂಟ್‌ನಲ್ಲಿ ಸದ್ದು ಮಾಡಲು ಮೊಟೊರೊಲಾದ ಇನ್ನೊಂದು ಸ್ಮಾರ್ಟ್‌ಫೋನ್ ರೆಡಿ ಆಗಿದೆ.
ಸದ್ಯ ಅಮೆರಿಕದ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಮಿಡ್ ರೇಂಜ್ ಫೋನ್‌ಗಳಾದ Moto G Power 5G ಮತ್ತು Moto G 5G ಸದ್ಯದಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಹೊಸ Moto G ಸರಣಿಯ ಸ್ಮಾರ್ಟ್‌ಫೋನ್‌ಗಳು ಕಳೆದ ವರ್ಷ ಮಾರುಕಟ್ಟೆಗೆ ಬಂದಿದ್ದ Moto G Power 5G (2023) ಮತ್ತು Moto G 5G (2023) ಅಪ್‌ಡೇಟ್ ವರ್ಷನ್‌ಗಳಾಗಿವೆ.

ಈ ಫೋನ್ ಯಾವಾಗ ಲಾಂಚ್?
ಈ ಫೋನ್ ಪೂರ್ಣ ಎಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ದರವನ್ನು ಹೊಂದಿದೆ . Moto G Power 5G ಮೀಡಿಯಾ ಟೆಕ್ ಡೈಮೆನ್ಸಿಟಿ 7020 ಪ್ರೊಸೆಸರ್ ಅನ್ನು ಹೊಂದಿದ್ದು, Moto G 5G ಸ್ನಾಪ್‌ಡ್ರಾಗನ್ 4 Gen 1 SoC ನಲ್ಲಿ ಕಾರ್ಯನಿರ್ವಹಿಸುತ್ತದೆ. ಎರಡೂ ಮಾದರಿಗಳು ವಾಟರ್ ರೆಸಿಸ್ಟೆನ್ಸಿ ಹೊಂದಿವೆ. ಅಲ್ಲದೆ ಎರಡೂ ಮೊಬೈಲ್‌ಗಳು 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.
Moto G Power 5G ಮೊಬೈಲ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಇದೇ 29 ರಂದು ಬಿಡುಗಡೆ ಆಗಲಿವೆ. Moto G Power 5Gಯ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 25 ಸಾವಿರದ ಆಸುಪಾಸಿನಲ್ಲಿ ಇರಲಿದೆ. ನೀವು ಈ ಮೊಬೈಲ್‌ಗಳನ್ನು Motorola.com ಅಥವಾ ಅಮೆಜಾನ್‌ನಲ್ಲಿ ಇ ಕಾಮರ್ಸ್ ವೆಬ್‌ಸ್ಟೈಟ್‌ನಲ್ಲಿ ಲಭ್ಯ. ಮೊಟೊ 5ಜಿ ಪವರ್ ಎರಡು ಆಯ್ಕೆ ಬಣ್ಣಗಳಲ್ಲಿ ಲಭ್ಯ.

ಮೊಟೊ 5ಜಿ ಪವರ್ ಏನೆಲ್ಲಾ ವಿಶೇಷತೆಗಳಿವೆ
ಮೊಟೊ 5ಜಿ ಪವರ್ ಡ್ಯೂಯಲ್ ಸಿಮ್ ಹೊಂದಿದ್ದು, ಆಂಡರ್ಯಾಡ್ 14 ಬೆಂಬಲವನ್ನು ಹೊಂದಿದೆ. ಈ ಫೋನ್ 6.7 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು 8 ಜಿಬಿ ರ್ಯಾಮ್ ಹಾಗೂ 128 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದೆ. Moto G Power 5G ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು ಕ್ವಾಡ್ ಪಿಕ್ಸೆಲ್ ತಂತ್ರಜ್ಞಾನಕ್ಕೆ ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಹೊಂದಿದ್ದು, 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸೆನ್ಸಾರ್ ಕ್ಯಾಮೆರಾ ಹೊಂದಿದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ರೆಕಾರ್ಡ್ಗಾಗಿ ಫ್ರಂಟ್‌ನಲ್ಲಿ 16 ಮೆಗಾ ಫಿಕ್ಸಲ್ ಕ್ಯಾಮೆರಾ ನೀಡಲಾಗಿದೆ. ಇದರೊಂದಿಗೆ 33 ವ್ಯಾಟ್ ಟರ್ಬೊ ಫಾಸ್ಟ್ ಚಾರ್ಜರ್ ಲಭ್ಯವಿದೆ.
ಮೊಟೊ ಜಿ 5ಜಿ ಯಾವೆಲ್ಲಾ ಫೀಚರ್ಸ್ ಹೊಂದಿದೆ?
ಮೊಟೊ ಜಿ 5ಜಿ ಮೊಬೈಲ್ ಭಾರತೀಯ ಮಾರುಕಟ್ಟೆಯಲ್ಲಿ ಇದೇ 21ರಿಂದ ಲಭ್ಯ. ಇದರ ಅಂದಾಜು ಬೆಲೆ 17 ಸಾವಿರ ಆಗಿದೆ. ಇದು 4 ಜಿಬಿ ರ್ಯಾಮ್ ಹಾಗೂ 128 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದೆ.
Moto G 5G ಮೊಬೈಲ್ ಸಹ ಸಹ Android 14 ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 120Hz ರಿಫ್ರೆಶ್ ದರದೊಂದಿಗೆ 6.6-ಇಂಚಿನ ಎಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಹ್ಯಾಂಡ್‌ಸೆಟ್ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 4 ಜನ್ 1 SoC ನಲ್ಲಿ ಕಾರ್ಯನಿರ್ವಹಿಸುತ್ತದೆ, 4GB RAM ಮತ್ತು 128GB ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. ಲಭ್ಯವಿರುವ RAM ಅನ್ನು ವಾಸ್ತವಿಕವಾಗಿ 8GB ವರೆಗೆ ವಿಸ್ತರಿಸಬಹುದು. ಇದರಲ್ಲಿ 50 ಮೆಗಾ ಪಿಕ್ಸಲ್ ಕ್ಯಾಮೆರಾ ಸೆಟಪ್ ಇದ್ದು, ಫ್ರಂಟ್ ಕ್ಯಾಮೆರಾ 8 ಮೆಗಾಪಿಕ್ಸಲ್ ಹೊಂದಿದೆ. ಇದರೊಂದಿಗೆ 18 ವ್ಯಾಟ್ ಟರ್ಬೊ ಫಾಸ್ಟ್ ಚಾರ್ಜರ್ ನೀಡಲಾಗುತ್ತದೆ.












Click it and Unblock the Notifications