ಚಾಕುವನ್ನು ಹರಿತಗೊಳಿಸುವ ಕೋತಿ: ಲಂಕಾ ದಾಳಿಗೆ ವಾನರಸೇನೆ ತಯಾರಿ ಎಂದ ನೆಟ್ಟಿಗರು!
ಮಂಗ ಚಾಕುವನ್ನು ಹರಿತಗೊಳಿಸುತ್ತಿರುವ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ವಾನರಸೇನೆ ಲಂಕಾ ದಾಳಿಗೆ ತಯಾರಿ ನಡೆಸುತ್ತಿದೆ ಎಂದು ಕಾಮೆಮಟ್ ಮಾಡಿದ್ದಾರೆ.
ಪ್ರಾಣಿಗಳು ಹೇಗಿದ್ದರೂ ಚಂದ ಏನು ಮಾಡಿದರೂ ಅಂದ. ಅವುಗಳು ಮಾಡುವ ಕೆಲಸಗಳಿಗೆ ಮನಸೋಲದವರಿಲ್ಲ. ದಾಳಿ ಮಾಡುವ ಪ್ರಾಣಿಗಳನ್ನು ಬಿಟ್ಟು ಉಳಿದ ಸಾಧು ಪ್ರಾಣಿಗಳು ಮಾಡುವ ಕೆಲಸಗಳು ಜನರಿಗೆ ಇಷ್ಟವಾಗುತ್ತವೆ. ಆದರೆ ಕೆಲವೊಂದು ಬಾರಿ ಭಯಾನಕವಾದ ದೃಶ್ಯಗಳು ಭೀತಿಯನ್ನು ಹುಟ್ಟಿಸುತ್ತವೆ.
ಕಾಡು ಪ್ರಾಣಿಗಳು ಮನುಷ್ಯರೊಂದಿಗೆ ಬೆರೆಯಲು ಶುರು ಮಾಡಿವೆ. ಜನರೊಂದಿಗೆ ವಾಸಿಸುತ್ತಾ ಜನರು ಮಾಡುವ ಕಾರ್ಯಗಳನ್ನು ಅನುಸರಿಸಲು ಆರಂಭಿಸಿವೆ. ನಿತ್ಯ ಸ್ನಾನ ಮಾಡುವುದು, ಕೆಲಸ ಮಾಡುವುದು, ಮನಷ್ಯನಂತೆ ಜೀವಿಸುವುದನ್ನು ಪ್ರಾಣಿಗಳೂ ರೂಢಿಸಿಕೊಳ್ಳುತ್ತಿವೆ. ಇಂತಹ ಹಲವಾರು ವಿಡಿಯೋಗಳನ್ನು ಸಮಾಜಿಕ ಜಾಲತಾಣಗಳಲ್ಲಿ ಕಾಣಬಹುದು. ಹೀಗೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು ನೋಡಿದವರು ಬೆರಗಾಗಿದ್ದಾರೆ.

ಮಂಗನ ಚೇಷ್ಟೆಗೆ ಕಾಮೆಂಟ್
ವೈರಲ್ ವಿಡಿಯೋದಲ್ಲಿ ಮಂಗವೊಂದು ಮನುಷ್ಯನಂತೆ ಚಾಕುವನ್ನು ಹರಿತಗೊಳಿಸುತ್ತಿರುವುದು ಕಂಡು ಬಂದಿದೆ. ಇದನ್ನು ಕಂಡು ಜನ ಆಶ್ಚರ್ಯಗೊಂಡಿದ್ದಾರೆ. ಈ ವಿಡಿಯೋ ಶೇರ್ ಆದ ತಕ್ಷಣ ವೈರಲ್ ಆಗಿದ್ದು, ಜನರು ತಮಾಷೆಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ಅವರು ಕೋತಿ ಚಾಕು ಹರಿತಗೊಳಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋ ಶೇರ್ ಮಾಡಿದ ತಕ್ಷಣ ಸಾವಿರಾರು ಲೈಕ್‌ಗಳು ಬಂದಿದ್ದು, ಈ ಮಂಗನ ಚೇಷ್ಟೆ ನೋಡಿ ಜನರು ಕೋತಿಗೆ ಸಂಬಂಧಿಸಿದ ಮಾತುಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ.
|
ಅನುಭವವಿರುವಂತೆ ಚಾಕು ಹರಿತಗೊಳಿಸಿದ ಕೋತಿ
ಈ ಹಿಂದೆ ಕೋತಿ ಇಂತಹ ಕೃತ್ಯವನ್ನು ಮಾಡುವುದನ್ನು ನೀವು ನೋಡಿರಲು ಸಾಧ್ಯವಿಲ್ಲ. ಈ ವಿಡಿಯೋದಲ್ಲಿ ಕೋತಿಯು ಅನುಭವವಿರುವಂತೆ ಕೈಯಲ್ಲಿ ಚಾಕುವನ್ನು ಹರಿತಗೊಳಿಸುತ್ತಿರುವುದು ಕಂಡುಬಂದಿದೆ. ಚಾಕುವನ್ನು ಹರಿತವಾಗುವಂತೆ ತೀಕ್ಷ್ಣಗೊಳಿಸುತ್ತದೆ. ಚಾಕುವನ್ನು ಹರಿತಗೊಳಿಸುವಾಗ, ಕೋತಿ ನೀರು ಹಾಕುವುದು ಸಹ ಕಂಡುಬಂದಿದೆ.

ಲಂಕಾ ದಾಳಿಗೆ ವಾನರಸೇನೆ ತಯಾರಿ
ಉತ್ಸಾಹದಿಂದ ಕೋತಿ ಚಾಕುವನ್ನು ಕಲ್ಲಿನ ಮೇಲೆ ಉಜ್ಜಿ ಹರಿತಗೊಳಿಸುತ್ತದೆ. ಕೋತಿಯು ಚಾಕುವನ್ನು ನಿರಂತರವಾಗಿ ಕಲ್ಲಿನಿಂದ ಉಜ್ಜುವ ಮೂಲಕ ಹರಿತಗೊಳಿಸುತ್ತಿರುವುದನ್ನು ಕಂಡು ನೆಟ್ಟಿಗರು ಸಾಕಷ್ಟು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಕೋತಿ ಯಾರೋ ಚಾಕುವನ್ನು ಹರಿತಗೊಳಿಸುವುದನ್ನು ನೋಡಿರಬೇಕು, ಅದನ್ನೇ ಅನುಸರಿಸುತ್ತಿದೆ ಎಂದು ಹೇಳುತ್ತಿದ್ದಾರೆ.
ಐಪಿಎಸ್ ರೂಪಿನ್ ಶರ್ಮಾ ಅವರು ಈ ವಿಡಿಯೋವನ್ನು ಹಂಚಿಕೊಳ್ಳುವಾಗ ರಾಮಾಯಣದ ಸಂದರ್ಭ ಎಂದು ಬರೆದಿದ್ದಾರೆ. ರಾವಣನ ಲಂಕೆಯ ಯಾತ್ರೆಗೂ ಮುನ್ನ ವಾನರ ಸೇನೆಯು ಈ ರೀತಿಯಾಗಿ ಸಿದ್ಧವಾಯಿತು ಎಂದು ಅವರು ಬರೆದಿದ್ದಾರೆ.

ನೆಟ್ಟಿಗರ ಕಾಮೆಂಟ್
ಕೆಲವು ಬಳಕೆದಾರರು ವೀಡಿಯೋವನ್ನು ನೋಡಿ ಆಶ್ಚರ್ಯಪಟ್ಟರು. ಕೆಲವರು ಜೋರಾಗಿ ನಗುತ್ತಿರುವ ಎಮೋಜಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಒಬ್ಬ ಬಳಕೆದಾರನು 'ಕೋತಿಯ ಕೈಯಲ್ಲಿ ರೇಜರ್' ಎಂದು ಬರೆದಿದ್ದಾನೆ. ಮತ್ತೊಬ್ಬರು 'ಈಗ ಪ್ರಾಣಿಗಳು ಸಹ ಸುರಕ್ಷಿತವಾಗಿಲ್ಲ' ಎಂದು ಬರೆದಿದ್ದಾರೆ.












Click it and Unblock the Notifications