Metro Stunt: ಮಿನಿ ಸ್ಕರ್ಟ್ ಧರಿಸಿ ಓಡಾಡಿದ ಹುಡುಗಿ, ಸ್ನಾನ ಮಾಡಿದ ಯುವಕ, ಸ್ಟಂಟ್ ಮಾಡಿದ ಮತ್ತೊಬ್ಬ..
ಮೆಟ್ರೋದಲ್ಲಿ ಮಿನಿ ಸ್ಕರ್ಟ್ ಧರಿಸಿ ಓಡಾಡಿದ್ದಾಯ್ತು. ಮೆಟ್ರೋದಲ್ಲಿ ಸ್ನಾನ ಕೂಡ ಮಾಡಿ ಆಯ್ತು. ಈಗ ಸ್ಟಂಟ್ ಸರದಿ. ಸಾಮಾಜಿಕ ಜಾಲತಾಣದಲ್ಲಿ ಹೀಗೊಂದು ವಿಡಿಯೋ ವೈರಲ್ ಆಗಿದೆ. ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮೆಟ್ರೋದಲ್ಲಿ ಸ್ಟಂಟ್ ಮಾಡಿದ್ದು ಕಂಡು ಬಂದಿದೆ.
ಇತ್ತೀಚೆಗಷ್ಟೇ ಮಿನಿ ಸ್ಕರ್ಟ್ ಧರಿಸಿ ದಿಲ್ಲಿ ಮೆಟ್ರೋದಲ್ಲಿ ಪ್ರಯಾಣಿಸಿದ್ದ ಹುಡುಗಿಯ ವಿಡಿಯೋ ವೈರಲ್ ಆಗಿತ್ತು. "ದೆಹಲಿ ಮೆಟ್ರೋ ಗರ್ಲ್" ಕುರಿತು ಇನ್ನೂ ಅಂತರ್ಜಾಲದಲ್ಲಿ ಚರ್ಚೆ ನಡೆಯುತ್ತಿದೆ. ರಿದಮ್ ಚನಾನಾ ಎಂಬ 19 ವರ್ಷ ವಯಸ್ಸಿನ ಪಂಜಾಬ್‌ನ ಹುಡುಗಿ ಮಿನಿ ಸ್ಕರ್ಟ್ ತೊಟ್ಟು ಮೆಟ್ರೋದಲ್ಲಿ ಪ್ರಾಯಾಣಿಸುವ ಮೂಲಕ ಸಾರ್ವಜನಿಕರ ಆಸಕ್ತಿಯನ್ನು ಕೆರಳಿಸಿದ್ದಳು. ತರುವಾಯ ಆಕೆಯ ವಿಲಕ್ಷಣ ಫ್ಯಾಷನ್ ಶೈಲಿಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

ದೆಹಲಿ ಮೆಟ್ರೋ ಸವಾರಿ ಮಾಡುವಾಗ ಅವರು ಬಿಕಿನಿಯಂತಹ ವೇಷಭೂಷಣಗಳನ್ನು ಧರಿಸಿರುವ ಸಾಕಷ್ಟು ವೀಡಿಯೊಗಳನ್ನು ನಾವು ನೋಡಿದ್ದೇವೆ. ಈ ಬಾರಿ ದೆಹಲಿಯ ಮೆಟ್ರೋ ಕಂಪಾರ್ಟ್‌ಮೆಂಟ್‌ನೊಳಗೆ ವ್ಯಕ್ತಿಯೊಬ್ಬ ಸ್ಟಂಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೊವನ್ನು ರಾಹುಲ್ ಸಿಂಗ್ ಎಂಬ ರಚನೆಕಾರರು Instagram ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಇದು 296,000 ಕ್ಕೂ ಹೆಚ್ಚು ಲೈಕ್ಸ್‌ಗಳನ್ನು ಈ ವಿಡಿಯೋ ಗಳಿಸಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ವ್ಯಕ್ತಿಯೊಬ್ಬ ದೆಹಲಿ ಮೆಟ್ರೋದಲ್ಲಿ ಸ್ಟಂಟ್ ಮಾಡುತ್ತಿರುವುದನ್ನು ಕಾಣಬಹುದು. ವೀಡಿಯೊವನ್ನು ಇಲ್ಲಿ ವೀಕ್ಷಿಸಿ:
ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ವ್ಯಕ್ತಿಯ ಕಾರ್ಯ ಹಾಗೂ ಅವನ ಆತ್ಮವಿಶ್ವಾಸವನ್ನು ಶ್ಲಾಘಿಸಿದ್ದಾರೆ. ಇನ್ನೂ ಕೆಲವರು ಇದು ಮೂರ್ಖತನದ ಕೃತ್ಯ ಎಂದು ವ್ಯಕ್ತಿಯನ್ನು ದೂಷಿಸಿದ್ದಾರೆ.

ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋದಲ್ಲಿ, ನ್ಯೂಯಾರ್ಕ್ ಸಿಟಿ ಮೆಟ್ರೋ ರೈಲಿನಲ್ಲಿ ವ್ಯಕ್ತಿಯೊಬ್ಬರು ಸ್ನಾನ ಮಾಡುತ್ತಿರುವುದು ಕಂಡು ಬಂದಿತ್ತು. ಇದನ್ನು ಹಂಚಿಕೊಂಡಾಗಿನಿಂದ ಕ್ಲಿಪ್ 1.4 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ವ್ಯಕ್ತಿಯ ಧೈರ್ಯವನ್ನು ಆತ್ಮವಿಶ್ವಾಸವನ್ನು ಶ್ಲಾಘಿಸಿದ್ದರು. ಇನ್ನೂ ಅನೇಕರು ಅಸಹ್ಯಕರ ಮೂರ್ಖರ ನಡೆ ಎಂದು ಆಕ್ರೋಶಗೊಂಡಿದ್ದರು. ಇನ್ನೂ ಕೆಲವರು ಅಪಹಾಸ್ಯ ಮಾಡಿದ್ದರು.
ನೆಟ್ಟಿಗರೊಬ್ಬರು, "ಈ ಪೀಳಿಗೆ ಈ ದೃಶ್ಯವನ್ನು ನೋಡಿ ನಿಜವಾಗಿಯೂ ಹತಾಶವಾಗಿದೆ" ಎಂದು ಪೋಸ್ಟ್ ಮಾಡಿದ್ದಾರೆ.
"ನೀವು ಎಲ್ಲಿ ಬೇಕಾದರು ಸ್ನಾನ ಮಾಡಿ ಆದರೆ ಇತರರನ್ನು ಒದ್ದೆ ಮಾಡದಂತೆ ಬಹಳ ಜಾಗರೂಕರಾಗಿರ. ಅವರು ಒರಟಾಗಿದ್ದರೆ ನಿಮ್ಮನ್ನು ತುಂಬಾ ಪ್ರೀತಿಸುತ್ತಾರೆ" ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು,' ಯಾವ ಊರು ಸ್ವಾಮಿ ನಿಂದು' ಎಂದು ಪ್ರಶ್ನೆ ಮಾಡಿದ್ದಾರೆ.
ಈ ಹಿಂದೆ ದೆಹಲಿ ಮೆಟ್ರೋದಲ್ಲಿ ರಿದಮ್ ಚನಾನಾ ಎಂಬ ಹುಡುಗಿ ತನ್ನ ಬಟ್ಟೆಯ ಆಯ್ಕೆಯಿಂದ ಸಾಮಾಜಿಕ ಮಾಧ್ಯಮದ ಗಮನ ಸೆಳೆದಿದ್ದಳು.ಈ ಬಗ್ಗೆ ಮಾತನಾಡಿದ್ದ ಹುಡುಗಿ,"ಮೆಟ್ರೋ ಒಳಗೆ ವಿಡಿಯೋಗ್ರಫಿ ಇಲ್ಲ ಎಂಬ ತಮ್ಮದೇ ಆದ ನಿಯಮವನ್ನು ಡಿಎಂಆರ್‌ಸಿ ಈಗ ಮರೆತಿರುವುದು ವಿಚಿತ್ರವಾಗಿದೆ" ಎಂದಿದ್ದಳು. 'ನನ್ನ ಉಡುಪಿನಲ್ಲಿ ಅವರಿಗೆ ಸಮಸ್ಯೆಯಿದ್ದರೆ ಅದನ್ನು ಶೂಟ್ ಮಾಡಿದವರಿಂದಲೂ ಸಮಸ್ಯೆಯಾಗಬೇಕು' ಎಂದು ವಿವರಿಸಿದ್ದಳು.
ಅದೇನೇ ಇರಲಿ ರಾಷ್ಟ್ರ ರಾಜಧಾನಿ ಮೆಟ್ರೋದಲ್ಲಿ ಇಂತಹ ಘಟನೆಗಳು ಆಗಾಗ ಮರುಕಳಿಸುತ್ತಿದ್ದು ಸಾಮಾಜಿಕ ಜಾಲತಾಣದಲ್ಲಿ ನೋಡುಗರಿಗೆ ಕುತೂಹಲ ಮೂಡಿಸಿರುವುದಂತೂ ಸುಳ್ಳಲಲ್ಲ.












Click it and Unblock the Notifications