Maruti Suzuki: ಇದೇ ತಿಂಗಳು ಮಾರುತಿ ಕಂಪನಿಯ ಕಾರು ಖರೀದಿಸಿ 68000 ಉಳಿಸಿ
ನೀವು ಏನಾದ್ರೂ ಕಾರುಗಳನ್ನು ಖರೀದಿಸುವ ಯೋಚನೆಯಲ್ಲಿದ್ದರೆ, ಈ ತಿಂಗಳು ಸೂಕ್ತ ಸಮಯ. ನೀವು ಮಾರುತಿ ಸುಜುಕಿ ಕಾರ್‌ಗಳನ್ನು ಪಡೆದಲ್ಲಿ ಸಾವಿರಾರು ರೂಪಾಯಿ ಲಾಭವನ್ನು ಪಡೆಯಬಹುದಾಗಿದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿಗೂ ಪೆಟ್ಟು ಬೀಳದು. ಹಾಗಿದ್ದರೆ, ಮಾರುತಿ ಕಂಪನಿ ಯಾವೆಲ್ಲಾ ಕಾರ್‌ಗಳ ಮೇಲೆ ಆಫರ್ ನೀಡುತ್ತಿದೆ ಎಂಬುದರ ಮಾಹಿತಿ ಇಲ್ಲಿದೆ.
ಮಾರುತಿ ಕಂಪನಿ ತನ್ನ ಹ್ಯಾಚ್‌ಬ್ಯಾಕ್ ಕಾರ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ. ನೀವು ಮಾರುತಿ ಕಂಪನಿಯ ಕಾರ್‌ಗಳನ್ನು ಖರೀದಿಸಿದ್ದೇ ಆದಲ್ಲಿ ಸುಮಾರು 68 ಸಾವಿರ ರೂ. ವರೆಗೆ ಹಣವನ್ನು ಉಳಿಸಬಹುದಾಗಿದೆ. ಈ ರಿಯಾಯಿತಿಯು 31 ಮೇ 2024 ರವರೆಗೆ ಮಾತ್ರ ಅನ್ವಯಿಸುತ್ತದೆ. ಆಫರ್‌ಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ನೀವು ಮಾರುತಿ ಸುಜುಕಿ ಶೋರೂಮ್ ಸಂಪರ್ಕಿಸಿ.
]

ಮಾರುತಿ ಆಲ್ಟೊ ಕೆ10
ಮಧ್ಯಮ ವರ್ಗದವರ ಕನಸಿನ ಕಾರ್ ಮಾರುತಿ ಸುಜುಕಿ ಅಲ್ಟೋ ಕೆ10 ಕೊಳ್ಳುವ ಆಸೆ ನಿಮ್ಮದಾಗಿದ್ದರೆ, ನೀವು 63,100 ರೂಪಾಯಿಗಳ ವರೆಗೆ ಹಣವನ್ನು ಉಳಿಸಬಹುದಾಗಿದೆ. ಈ ಕಾರಿನ ಎಕ್ಸ್ ಶೋರಮ್ ಬೆಲೆ 3.99 ರಿಂದ ಆರಂಭವಾಗುತ್ತದೆ. ಪ್ರತಿ ಲೀಟರ್‌ಗೆ ಈ ಕಾರ್ ಸುಮಾರು 25 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ. ಅಲ್ಲದೆ ಈ ಕಾರಿನಲ್ಲಿ ಐದು ಜನರು ಅರಾಮವಾಗಿ ಕುಳಿತುಕೊಳ್ಳಬಹುದು. ಇದಕ್ಕೆ 1000 ಸಿಸಿ ಎಂಜಿನ ನೀಡಲಾಗುತ್ತಿದೆ.
ವ್ಯಾಗನ್ ಆರ್ ಮೇಲೆ ಭರ್ಜರಿ ರಿಯಾಯಿತಿ
ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರು ಎಂಬ ಹೆಗ್ಗಳಿಕೆಗೆ ವ್ಯಾಗನ್ ಆರ್ ಪಾತ್ರವಾಗಿದೆ. ಈ ತಿಂಗಳು ಈ ಕಾರ್‌ನ್ನು ನೀವು ಖರೀದಿಸಿದರೆ, 68,100 ರೂಪಾಯಿ ರಿಯಾಯಿತಿ ಪಡೆಯಬಹುದಾಗಿದೆ. ವ್ಯಾಗನ್ ಆರ್ ಬೆಲೆ 5.54 ಲಕ್ಷ ರೂ.ದಿಂದ ಆರಂಭವಾಗುತ್ತದೆ. ಈ ಕಾರು ಒಂದು ಲೀಟರ್‌ನಲ್ಲಿ 26 ಕಿಮೀ ಮೈಲೇಜ್ ನೀಡುತ್ತದೆ. ಈ ಕಾರಿನಲ್ಲಿ 1.0L ಮತ್ತು 1.2L ಎಂಜಿನ್ ಆಯ್ಕೆಗಳು ಲಭ್ಯವಿದೆ.

ಮಾರುತಿ ಸೆಲೆರಿಯೊ
ಮಾರುತಿ ಸೆಲೆರಿಯೊವನ್ನು ಮೇ ತಿಂಗಳಲ್ಲಿ ಖರೀದಿಸಿದರೆ 58,100 ರೂಪಾಯಿ ರಿಯಾಯಿತಿ ಪಡೆಯಬಹುದು. ಈ ಕಾರು ಒಂದು ಲೀಟರ್ ನಲ್ಲಿ 26 ಕಿ.ಮೀ ಮೈಲೇಜ್ ನೀಡುತ್ತದೆ. ಇದು 1000 ಸಿಸಿ ಪೆಟ್ರೋಲ್ ಎಂಜಿನ್ ಹೊಂದಿದೆ. ಸೆಲೆರಿಯೊ ಬೆಲೆ 5.36 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ.
ಮಾರುತಿ ಎಸ್-ಪ್ರೆಸ್ಸೊ
ಈ ತಿಂಗಳು ಮಾರುತಿ ಸುಜುಕಿಯ ಮೈಕ್ರೋ SUV S-Presso ಖರೀದಿಸಿದ್ದೇ ಆದಲ್ಲಿ ಖಂಡಿತವಾಗಿಯೂ 58,100 ರೂಪಾಯಿಗಳ ಲಾಭ ಪಡೆಯುತ್ತೀರಿ. ಈ ಕಾರಿನ ಬೆಲೆ 4.26 ಲಕ್ಷ ರೂಪಾಯಿಗಳಿಂದ ಆರಂಭವಾಗಲಿದ್ದು, ಒಂದು ಲೀಟರ್‌ನಲ್ಲಿ 26 ಕಿಮೀ ಮೈಲೇಜ್ ನೀಡುತ್ತದೆ.
ಮಾರುತಿ ಕಂಪನಿಯ ಈ ಆಫರ್ ಈ ತಿಂಗಳಲ್ಲಿ ಕೊನೆಗೊಳ್ಳಲಿದೆ. ಈ ಬಂಪರ್ ಆಫರ್ ಗ್ರಾಹಕರಿಗೆ ಮೇ 31ರ ವರೆಗೆ ಇರುತ್ತದೆ. ಬರೀ ಇದೇ ಕಾರ್‌ಗಳಲ್ಲ ಬೇರೆ ಕಾರ್‌ಗಳನ್ನು ನೀವು ಕೊಂಡಾಗಲೂ ಗ್ರಾಹಕ ಹಣವನ್ನು ಉಳಿಸಬಹುದು.












Click it and Unblock the Notifications