ಅಯ್ಯೋ ವಿಧಿಯಾಟವೇ....! ಹನುಮನ ವೇಷಧಾರಿಗೆ ಹೃದಯಾಘಾತ: ನಟನೆಯಲ್ಲಿ ಮುಳಗಿದ್ದಾನೆಂದು ನಂಬಿದ ಜನ- ವಿಡಿಯೋ
ಅಯೋಧ್ಯೆಯಲ್ಲಿ ಬಾಲರಾಮ ವಿರಾಜಮಾನನಾಗಿದ್ದಾನೆ. ಇಡೀ ವಿಶ್ವವೇ ಎದುರು ನೋಡುತ್ತಿದ್ದ ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಮತ್ತು ಬಾಲರಾಮ ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ಸೋಮವಾರ ಶುಭ ಮುಹೂರ್ತದಲ್ಲಿ ಸಂಪನ್ನಗೊಂಡಿದೆ. ಆದರೆ ಈ ದಿನ ಅಹಿತಕರ ಘಟನೆಯೊಂದು ನಡೆದು ಹೋಗಿದೆ. ಈ ಘಟನೆಯ ವಿಡಿಯೋ ಕಂಡು ಪ್ರತಿಯೊಬ್ಬರ ದು:ಖ ಕಣ್ತುಂಬಿ ಬಂದಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗುತ್ತಿದ್ದರೆ ಇತ್ತ ಹರಿಯಾಣದ ಭಿವಾನಿಯಲ್ಲಿ ಹನುಮನ ವೇಷಧಾರಿಗೆ ಹೃದಯಾಘಾತವಾಗಿದೆ. ನಟನೆಯ ವೇಳೆ ವೇದಿಕೆ ಮೇಲೆ ಕುಸಿದು ಬಿದ್ದು ವ್ಯಕ್ತಿ ಉಸಿರು ಚೆಲ್ಲಿದ್ದಾನೆ. ಆದರೆ ಈ ಘಟನೆಯನ್ನು ಹನುಮನ ನಟನೆ ಎಂದು ಜನ ಭಾವಿಸಿ ಘೋಷಣೆಗಳನ್ನು ಕೂಗಿದ್ದಾರೆ. ಕೆಲ ಹೊತ್ತು ಹನುಮನ ಪಾತ್ರಧಾರಿ ಮಲಗಿದ್ದ ಸ್ಥಳದಿಂದ ಮೇಲೇಳಲೇ ಇಲ್ಲ.

ಅನುಮಾನ ಬಂದು ಅಲ್ಲೇ ಇದ್ದ ವ್ಯಕ್ತಿ ಆತನನ್ನು ನಾಡಿ ಮಿಡಿತ ನೋಡಿದಾಗ ಆತನಿಗೇ ಏನೋ ಆಗಿದೆ ಎಂದು ಅನುಮಾನ ಬಂದಿದೆ. ತಕ್ಷಣ ಗಾಬರಿಗೊಂಡು ಸ್ಥಳದಲ್ಲಿದ್ದವರು ಕೈ ಕಾಲು ಉಜ್ಜಲು ಪ್ರಾರಂಭಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು. ಈ ಘಟನೆಯ ಸಂಪೂರ್ಣ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜನ ವಿಧಿಯಾಟಕ್ಕೆ ಮರುಕ ವ್ಯಕ್ತಪಡಿಸಿದ್ದಾರೆ.
हरियाणा के भिवानी में आज प्राण प्रतिष्ठा के मौके पर आयोजित रामलीला में 25 साल में हरीश मेहता हनुमान का रोल निभा रहे थे। उन्हें मंच पर ही दिल का दौरा पड़ा और वे गिर गये। लोगों को लगा कि वे एक्टिंग कर रहे हैं। अस्पताल ले गये। लेकिन महज़ 25 साल के हरीश को बचाया नहीं जा सका। pic.twitter.com/0enH0kjdYF
— Bhadohi Wallah (@Mithileshdhar) January 22, 2024
ಮೃತರನ್ನು ಹರೀಶ್ ಮೆಹ್ತಾ ಎಂದು ಗುರುತಿಸಲಾಗಿದ್ದು, ಕಳೆದ 25 ವರ್ಷಗಳಿಂದ ರಾಮಲೀಲಾದಲ್ಲಿ ಹನುಮಾನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ಬೆನ್ನಲ್ಲೆ ಹರಿಯಾಣದ ಭಿವಾನಿಯಲ್ಲಿ ರಾಮಾಯಣದ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಸೋಮವಾರ (ಜನವರಿ 22) ಇಡೀ ದೇಶವೇ ರಾಮ ಮೂರ್ತಿ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ಆಚರಿಸುತ್ತಿದ್ದಾಗ ಈ ಘಟನೆ ನಡೆದಿದೆ.

ಹರಿಯಾಣದ ಭಿವಾನಿಯಲ್ಲಿ ರಾಮಲೀಲಾ ಆಯೋಜನೆ
ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭದ ಸಂದರ್ಭದಲ್ಲಿ ಹರಿಯಾಣದ ಭಿವಾನಿಯಲ್ಲಿ ರಾಮಲೀಲಾ ಆಯೋಜಿಸಲಾಗಿತ್ತು. ಈ ವೇಳೆ ಹನುಮಂತನ ಪಾತ್ರವನ್ನು ನಿರ್ವಹಿಸುತ್ತಿದ್ದ ವ್ಯಕ್ತಿಗೆ ವೇದಿಕೆಯಲ್ಲಿ ಪ್ರದರ್ಶನ ಮಾಡುವಾಗ ಹೃದಯಾಘಾತವಾಗಿದೆ. ವೇದಿಕೆಯಲ್ಲಿ ಹಾಗೂ ಸಭಿಕರಲ್ಲಿ ಇದ್ದವರು ಆತ ನಟಿಸುತ್ತಿದ್ದಾರೆ ಎಂದು ಭಾವಿಸಿ ಸಮಯಕ್ಕೆ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ.
ಪ್ರದರ್ಶನ ನೀಡುತ್ತಿರುವಾಗ ವೇದಿಕೆಯ ಮೇಲೆ ಕುಸಿದ ವ್ಯಕ್ತಿ
ಆ ವ್ಯಕ್ತಿ ಪ್ರದರ್ಶನ ನೀಡುತ್ತಿರುವಾಗ ವೇದಿಕೆಯ ಮೇಲೆ ಕುಸಿದುಬಿದ್ದು, ಅವರು ನಟಿಸುತ್ತಿಲ್ಲ ಎಂದು ಜನರಿಗೆ ತಿಳಿಯುವಷ್ಟರಲ್ಲಿ ತಡವಾಗಿತ್ತು. ಓರ್ವ ವ್ಯಕ್ತಿ ಕುಸಿದು ಬಿದ್ದ ಹರೀಶ್ ಮೆಹ್ತಾ ಅವರ ನಾಡಿ ಮಿಡಿತ ಪರಿಶೀಲನೆ ಮಾಡಿದ್ದಾರೆ. ಅನುಮಾನ ಬಂದು ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆಂದು ಘೋಷಿಸಿದ್ದಾರೆ.












Click it and Unblock the Notifications