Exit Poll of Polls: ಮಹಾರಾಷ್ಟ್ರ, ಹರ್ಯಾಣದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

ದೇಶದ ಕುತೂಹಲ ಕೆರಳಿಸಿರುವ ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಅಕ್ಟೋಬರ್ 21ರಂದು ಶಾಂತಿಯುತ ಮುಕ್ತಾಯಗೊಂಡಿದೆ. ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಳ್ಳುತ್ತಿದ್ದು, ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟಕ್ಕೆ ಜಯಸಿಗಲಿದೆ ಹಾಗೂ ಹರ್ಯಾಣದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ.

ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭೆಗೆ 288 ಕ್ಷೇತ್ರಗಳಿಗೆ ಸೋಮವಾರದಂದು ಶೇ 55.45ರಷ್ಟು ಮತದಾನ ನಡೆದಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪಕ್ಷವನ್ನು ಪುನಃ ರಾಜ್ಯದಲ್ಲಿ ಅಧಿಕಾರಕ್ಕೆ ತರಲಿದ್ದಾರೆಯೇ? ಎಂದು ದೇಶವೇ ಕುತೂಹಲದಿಂದ ಕಾಯುತ್ತಿದೆ.

ಚುನಾವಣಾ ಫಲಿತಾಂಶ ಅಕ್ಟೋಬರ್ 24ರಂದು ಪ್ರಕಟವಾಗಲಿದೆ. ಸೋಮವಾರದಂದು ಹರ್ಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಿತು. ಶೇ 61.92ರಷ್ಟು ಮತದಾನ ನಡೆದಿದೆ. ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡಿವೆ.

Maharashtra & Haryana Election Exit Poll of Poll Results 2019

ಹರ್ಯಾಣದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಪುನಃ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾರೆಯೇ? ಎಂದು ಕಾದು ನೋಡಬೇಕಿದೆ. ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳ ನಡುವೆ ನಾಳೆ ಎರಡು ಲೋಕಸಭಾ ಕ್ಷೇತ್ರಗಳು ಮತ್ತು 51 ವಿಧಾನಸಭಾ ಕ್ಷೇತ್ರಗಳಿಗೂ ಉಪ ಚುನಾವಣೆ ನಡೆಸಲಾಗಿದೆ. ಬಿಹಾರದ ಸಮಷ್ಟಿಪುರ್ ಮತ್ತು ಮಹಾರಾಷ್ಟ್ರದ ಸತಾರಾ ಲೋಕಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಸಲಾಗಿದೆ.

ಉತ್ತರ ಪ್ರದೇಶ-11, ಗುಜರಾತ್-6, ಕೇರಳ ಮತ್ತು ಬಿಹಾರ್ ತಲಾ 5, ಪಂಜಾಬ್ ಮತ್ತು ಅಸ್ಸಾಂ ತಲಾ 4, ಸಿಕ್ಕಿಂ 3, ತಮಿಳುನಾಡು, ರಾಜಸ್ತಾನ ಮತ್ತು ಆಂಧ್ರಪ್ರದೇಶ ತಲಾ 2 ಹಾಗೂ ಒಡಿಶಾ , ತೆಲಂಗಾಣ, ಮಧ್ಯಪ್ರದೇಶ , ಛತ್ತೀಸ್ ಗಢ, ಮೇಘಾಲಯ, ಪುದುಚೆರಿ ಮತ್ತು ಅರುಣಾಚಲ ಪ್ರದೇಶಗಳ ತಲಾ ಒಂದೊಂದು ಸ್ಥಾನಗಳ ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21 ಚುನಾವಣೆ ನಡೆಸಲಾಗಿದೆ. ಅಕ್ಟೋಬರ್ 24ರಂದು ಅಂತಿಮ ಫಲಿತಾಂಶ ಬರಲಿದೆ.

ಮಹಾರಾಷ್ಟ್ರ ಸಮೀಕ್ಷೆಗಳ ಸಮೀಕ್ಷೆ: 288 ಸ್ಥಾನ
ಇಂಡಿಯಾ ಟುಡೇ:
ಬಿಜೆಪಿ ಪ್ಲಸ್ 166-194
ಕಾಂಗ್ರೆಸ್ ಪ್ಲಸ್- 72-90
ಇತರೆ: 22-34


ರಿಪಬ್ಲಿಕ್ ಟಿವಿ- ಜನ್ ಕಿ ಬಾತ್

ಬಿಜೆಪಿ ಪ್ಲಸ್ 223

ಕಾಂಗ್ರೆಸ್: 54

ಇತರೆ: 11


ಟೈಮ್ಸ್ ನೌ ವಿಎಂಆರ್

ಬಿಜೆಪಿ ಪ್ಲಸ್ 230
ಕಾಂಗ್ರೆಸ್ ಪ್ಲಸ್:48
ಇತರೆ: 10


ಎಬಿಪಿ ಸಿ ವೋಟರ್ಸ್

ಬಿಜೆಪಿ ಪ್ಲಸ್: 204
ಕಾಂಗ್ರೆಸ್ ಪ್ಲಸ್: 69
ಇತರೆ: 15


ಟಿವಿ9 ಸಿಸಿರೋ

ಬಿಜೆಪಿ ಪ್ಲಸ್: 197
ಕಾಂಗ್ರೆಸ್ ಪ್ಲಸ್: 75
ಇತರೆ: 16


ನ್ಯೂಸ್ ಎಕ್ಸ್ ಪೋಲ್ ಸ್ಟಾರ್ಟ್
ಬಿಜೆಪಿ ಪ್ಲಸ್: 188-200
ಕಾಂಗ್ರೆಸ್ ಪ್ಲಸ್: 74-89
ಇತರೆ: 6-10.


ಹರ್ಯಾಣ 90 ಸ್ಥಾನಗಳು
ಟೈಮ್ಸ್ ನೌ
ಬಿಜೆಪಿ ಪ್ಲಸ್: 71
ಕಾಂಗ್ರೆಸ್ ಪ್ಲಸ್: 11
ಇತರೆ: 8


ಜನ್ ಕಿ ಬಾತ್
ಬಿಜೆಪಿ ಪ್ಲಸ್: 57
ಕಾಂಗ್ರೆಸ್ ಪ್ಲಸ್: 17
ಇತರೆ: 16


ನ್ಯೂಸ್ ಎಕ್ಸ್
ಬಿಜೆಪಿ ಪ್ಲಸ್: 77
ಕಾಂಗ್ರೆಸ್ ಪ್ಲಸ್: 11
ಇತರೆ: 2


ಟಿವಿ 9 ಭಾರತ್ ವರ್ಷ್
ಬಿಜೆಪಿ ಪ್ಲಸ್: 47
ಕಾಂಗ್ರೆಸ್ ಪ್ಲಸ್: 23
ಇತರೆ: 20


ಸಿಎನ್ಎನ್ ಐಪಿಎಸ್ಒಎಸ್
ಬಿಜೆಪಿ ಪ್ಲಸ್: 75
ಕಾಂಗ್ರೆಸ್ ಪ್ಲಸ್: 10
ಇತರೆ: 5


ಹರ್ಯಾಣ 90 ಸ್ಥಾನಗಳ ಸಮೀಕ್ಷೆ Poll of Poll
ಬಿಜೆಪಿ ಪ್ಲಸ್: 63
ಕಾಂಗ್ರೆಸ್ ಪ್ಲಸ್: 16
ಇತರೆ: 11

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+