ಸೂಕ್ಷ್ಮತೆ, ಸ್ವಾವಲಂಬನೆ, ಸ್ವಪ್ರಯತ್ನಕ್ಕೆ ಇಂಬು ಕೊಟ್ಟ ಲಾಕ್ ಡೌನ್ ಗೆ ದೀರ್ಘ ನಮಸ್ಕಾರ
ಮಾರ್ಚ್ 23ನೇ ತಾರೀಕು. ಕೊರೊನಾ ಎಂಬ ಮಹಾಮಾರಿ ಎಲ್ಲೆಲ್ಲೂ ಹಬ್ಬುತ್ತಿತ್ತು. ಟಿವಿಯಲ್ಲಿ ಸುದ್ದಿ ವಾಹಿನಿಯನ್ನು ವೀಕ್ಷಿಸುತ್ತಿದ್ದೆ. ನಾಳೆಯಿಂದ ಇಡೀ ಕರ್ನಾಟಕ ಲಾಕ್ ಡೌನ್ ಎಂಬ ವರದಿ ಬರುತ್ತಿತ್ತು.
ಅದನ್ನು ನೋಡಿದ ತಕ್ಷಣ ಅಪಾರ್ಟ್ಮೆಂಟಿನ ನಾಲ್ಕು ಗೋಡೆಗಳ ಜೈಲೆಂಬ ವಾಸಸ್ಥಾನದಿಂದ ನಮ್ಮಹಳ್ಳಿಯ ಸ್ವಚ್ಚಂದ ಪರಿಸರಕ್ಕೆ ಅದೇ ದಿನ ರಾತ್ರಿ ಎದ್ದೆವೋ ಬಿದ್ದೆವೋ ಎಂದು ಹಾರಿ ಬಂದು, ಸ್ವಸ್ಥಾನವನ್ನು ಸೇರಿಕೊಂಡಿದ್ದೆವು.
ಬಂದ ನಾಲ್ಕಾರು ದಿನಗಳು ಎಲ್ಲವೂ ಸರಿಯಾಗಿಯೇ ಇದ್ದವು. ಆದರೆ ಟಿವಿಯಲ್ಲಿ ಯಾವುದೇ ಧಾರಾವಾಹಿಗಳಿಲ್ಲದೆ, ಹೊರಗೆಲ್ಲಿಯೂ ಹೋಗಲಿಕ್ಕಾಗದೆ ಬೇಸರ ಶುರುವಾಯಿತು. ಆಗ ನನ್ನನ್ನು ಎಚ್ಚರಿಸಿದ್ದು ನನ್ನ ಗತ ಜೀವನದ ಚಟುವಟಿಕೆಗಳು.

ನಗರಕ್ಕೆ ಹೋಗಿ ನೆಲೆಸಿದ ನಂತರ ಹಳ್ಳಿಯಲ್ಲಿದ್ದಾಗ ನಾನು ಮಾಡುತ್ತಿದ್ದ ಕೆಲಸಗಳಿಗೆಲ್ಲಾ ಪೂರ್ಣವಿರಾಮ ಬಿದ್ದಿತ್ತು. ಒಂದು ಜಾಗದ ಕೊರತೆ ಇರಬಹುದು,ಇನ್ನೊಂದು ಸಮಯದ ಅಭಾವವೂ ಇರಬಹುದು,ಮತ್ತೊಂದು ನಮಗೆ ಬೇಕಿದ್ದೆಲ್ಲಾ ಅಂಗಡಿಯಲ್ಲಿ ಕೊಳ್ಳುವಂಥ ಸಾಮರ್ಥ್ಯವೂ ಬಂದಿರಬಹುದು.
ಅಲ್ಲಿಯವರೆಗೂ ಒಂದು ವರ್ಷಕ್ಕೆ ಮನೆಗೆ ಬೇಕಾಗುವಷ್ಟು ಹಪ್ಪಳ, ಸೆಂಡಿಗೆ, ಉಪ್ಪಿನಕಾಯಿಗಳನ್ನೆಲ್ಲಾ ನಾನೇ ಮಾಡುತಿದ್ದೆ.ಈಗ ನಿಂತುಹೋಗಿದ್ದ ಅವುಗಳಿಗೆಲ್ಲ ಪುನಶ್ಚೇತನ ಬಂದಿತು. ಮಾರ್ಚ್, ಏಪ್ರಿಲ್ ತಿಂಗಳ ಬಿಸಿಲು ಕೈ ಬೀಸಿ ಕರೆಯುತ್ತಿತ್ತು. ಅದನ್ನು ವ್ಯರ್ಥಗೊಳಿಸಲು ಇಷ್ಟವಾಗದೆ ಕಾರ್ಯನಿರತಳಾದೆ.
ಮನೆಯಲ್ಲಿಯೇ ಬೆಳೆದ ಮಾವಿನಕಾಯಿಯ ಮಿಡಿ ಉಪ್ಪಿನಕಾಯಿ, ಹಲಸಿನ ಕಾಯಿಯ ಹಪ್ಪಳ, ಅಕ್ಕಿ ಹಪ್ಪಳ, ಸಂಡಿಗೆಗಳೆಲ್ಲ ಕೆಲವೇ ದಿನಗಳಲ್ಲಿ ತಯಾರಾದವು. ಅದರಿಂದಾದ ತೃಪ್ತಿ, ಆನಂದವನ್ನು ಪದಗಳಲ್ಲಿ ಬಣ್ಣಿಸಲಾಗದು.ಹೇಳಿ ಕೇಳಿ ನಮ್ಮದು ಕರಾವಳಿ ತೀರ.

ಹೇರಳವಾಗಿದ್ದ ತೆಂಗಿನ ಮರದ ಗರಿಗಳಿಂದ ಒಂದಷ್ಟು ಕಸಗುಡಿಸುವ ಪೊರಕೆಗಳು ತಯಾರಿಸಲ್ಪಟ್ಟವು. ಮನೆಗೂ ಉಪಯೋಗವಾಗುವದರ ಜೊತೆಗೆ ನಾಲ್ಕಾರು ಕಾಸು ಕೈಗೂ ಸೇರಿತು. ಸ್ವಸಂಪಾದನೆ ಮತ್ತೆ ಶುರುವಾಗಿತ್ತು. ಹೊರಗಡೆ ಹೋಗುವ ಅವಕಾಶವೇ ಇಲ್ಲದಾದಾಗ ದೇವರ ಮೇಲಿನ ಭಕ್ತಿಯು ಹೆಚ್ಚಿ, ಸಮಯ ಕೊಲ್ಲಲು, ದೇವರ ಸ್ತೋತ್ರಗಳ ಮೊರೆ ಹೋಗಬೇಕಾಯಿತು.
ದೇವರಿಗೆ ದೀಪ ಹಚ್ಚಲು ಬತ್ತಿಗಳ ಅಭಾವ ಕಂಡು ಬಂದಾಗ, ಹತ್ತಿರದಲ್ಲಿ ಅಂಗಡಿಗಳೂ ಇಲ್ಲದಿದ್ದುದರಿಂದ ಸ್ವಪ್ರಯತ್ನದಿಂದ ಬತ್ತಿ ಮಾಡುವುದನ್ನು ಕಲಿತೆ. ಈಗ ಒಂದು ದಿನದಲ್ಲಿ ನೂರಾರು ಬತ್ತಿಗಳನ್ನು ಮಾಡುವ ಸಾಮರ್ಥ್ಯ ಬಂದಿದೆ. ಬತ್ತಿಗಾಗಿ ವ್ಯಯ ಮಾಡುತ್ತಿದ್ದ ಹಣವೂ ಉಳಿಯುತ್ತಿದೆ.
'ಮನಸಿದ್ದರೆ ಮಾರ್ಗ 'ಎಂಬಂತೆ ಎಲ್ಲವನ್ನೂ ನಾವೇ ಕಲಿತು ಮಾಡಬಹುದು ಎಂಬ ಆತ್ಮವಿಶ್ವಾಸ ನನ್ನಲ್ಲಿ ಮೂಡಿದೆ. ಏನೇ ಆಗಲಿ ಗತ ಜೀವನದ ನೆನಪುಗಳನ್ನು ಮರಳಿಸಿದ, ಸೂಕ್ಷ್ಮತೆ, ಸ್ವಾವಲಂಬನೆ, ಸ್ವಪ್ರಯತ್ನಕ್ಕೆ ಇಂಬುಕೊಟ್ಟ ಲಾಕ್ ಡೌನ್ ಗೆ ಒಂದು ದೀರ್ಘ ನಮಸ್ಕಾರ.
-
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Jobs: ರಾಜ್ಯದ ಕಾರಾಗೃಹ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಹತ್ವದ ಆದೇಶ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ?











Click it and Unblock the Notifications