ಸಮೀಕ್ಷೆಗಳ ಸಮೀಕ್ಷೆ : ಕರ್ನಾಟಕದಲ್ಲಿ ಯಾರಿಗೆ ಎಷ್ಟು, ಸ್ಥಾನ?
Recommended Video
ಬೆಂಗಳೂರು, ಮೇ 19 : ಲೋಕಸಭಾ ಚುನಾವಣೆಯ ಮತದಾನ ಮುಕ್ತಾಯವಾಗಿದೆ. ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಭಾನುವಾರ ಪ್ರಕಟವಾಗಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಫಲಿತಾಂಶಗಳ ಸಮೀಕ್ಷೆಗಳ ಸಮೀಕ್ಷೆ ಮಾಹಿತಿ ಇಲ್ಲಿದೆ.
ಭಾನುವಾರ ಸಂಜೆ ವಿವಿಧ ವಾಹಿನಿಗಳು ನಡೆಸಿದ ಮತದಾನೋತ್ತರ ಸಮೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 18 ಮತ್ತು 23ರಂದು ಎರಡು ಹಂತದಲ್ಲಿ ಚುನಾವಣೆ ನಡೆದಿತ್ತು. ಮೇ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿದೆ.
ರಾಜ್ಯದ 28 ಕ್ಷೇತ್ರಗಳ ಪೈಕಿ ಮಂಡ್ಯ ಹೊರತುಪಡಿಸಿ 27 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದವು. ಕಾಂಗ್ರೆಸ್ 22, ಜೆಡಿಎಸ್ 6 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.
ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಬಿಜೆಪಿ ರಾಜ್ಯದಲ್ಲಿ ಹೆಚ್ಚು ಸ್ಥಾನಗಳಿಸಲಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಕಡಿಮೆ ಸ್ಥಾನಗಳು ಬರಲಿವೆ. ಇತರರರು 1 ಸ್ಥಾನದಲ್ಲಿ ಜಯಗಳಿಸಬಹುದು ಎಂದು ಕೆಲವು ಸಮೀಕ್ಷೆ ಹೇಳಿದೆ.

ಬಿಜೆಪಿಗೆ ಹೆಚ್ಚಿನ ಬಲ
ಚಾಣಾಕ್ಯ ಮತ್ತು ಇಂಡಿಯಾ ಟಿವಿ ಸಮೀಕ್ಷೆ ಪ್ರಕಾರ ಕರ್ನಾಟಕದ 28 ಕ್ಷೇತ್ರಗಳ ಫಲಿತಾಂಶ ಇಲ್ಲಿದೆ.
ಚಾಣಾಕ್ಯ ಸಮೀಕ್ಷೆ ಪ್ರಕಾರ
* ಬಿಜೆಪಿ 23
* ಮೈತ್ರಿಕೂಟ 5
* ಇತರರು 0
ಇಂಡಿಯಾ ಟಿವಿ ಸಮೀಕ್ಷೆ
* ಬಿಜೆಪಿ 17
* ಕಾಂಗ್ರೆಸ್ 8
* ಜೆಡಿಎಸ್ 03
* ಇತರೆ 0

ಬಿಜೆಪಿಗೆ 20+ ಸ್ಥಾನ
ಟೈಮ್ಸ್ ನೌ ಮತ್ತು ವಿಎಂಆರ್ ಹಾಗೂ ನ್ಯೂಸ್ ನೇಷನ್ ಸಮೀಕ್ಷೆ ಪ್ರಕಾರ ಬಿಜೆಪಿ 20+ ಸ್ಥಾನಗಳಲ್ಲಿ ಕರ್ನಾಟಕದಲ್ಲಿ ಜಯಗಳಿಸಲಿದೆ.
ಟೈಮ್ಸ್ ನೌ ವಿಎಂಆರ್ ಸಮೀಕ್ಷೆ
* ಎನ್‌ಡಿಎ 21
* ಯುಪಿಎ 7
* ಇತರರು 0
ನ್ಯೂಸ್ ನೇಷನ್
* ಎನ್‌ಡಿಎ 18
* ಯುಪಿಎ 10
* ಇತರರು 0

ಬಿಜೆಪಿಗೆ 21 ರಿಂದ 25
ಇಂಡಿಯಾ ಟುಡೆ-ಆಕ್ಸಿಸ್ ಮತ್ತು ಸಿ-ವೋಟರ್ ಸಮೀಕ್ಷೆ ಪ್ರಕಾರ ಬಿಜೆಪಿ 21 ರಿಂದ 25 ಸೀಟುಗಳು ಕರ್ನಾಟಕದಲ್ಲಿ ಬರಲಿವೆ.
ಇಂಡಿಯಾ ಟುಡೆ-ಆಕ್ಸಿಸ್
* ಬಿಜೆಪಿ 21-25
* ಕಾಂಗ್ರೆಸ್ - ಜೆಡಿಎಸ್ 03-06
* ಇತರರು 01
ಸಿ-ವೋಟರ್
ಬಿಜೆಪಿ - 21
ಕಾಂಗ್ರೆಸ್ -ಜೆಡಿಎಸ್ 9
ಇತರರು 01

ಸಿಎನ್‌ಎನ್, ಎಬಿಪಿ ಸಮೀಕ್ಷೆ
ಸಿಎನ್‌ಎನ್ ಮತ್ತು ಎಬಿಪಿ ಸಮೀಕ್ಷೆಗಳ ಪ್ರಕಾರ ಕರ್ನಾಟಕದ 28 ಕ್ಷೇತ್ರಗಳ ಸಮೀಕ್ಷೆ ಫಲಿತಾಂಶ ಇಲ್ಲಿದೆ.
ಸಿಎನ್‌ಎನ್
ಬಿಜೆಪಿ 22
ಕಾಂಗ್ರೆಸ್ 6
ಇತರೆ 0
ಎಬಿಪಿ
ಬಿಜೆಪಿ 15
ಕಾಂಗ್ರೆಸ್ 13
ಇತರೆ 0

ಒಂದೇ ಟಿವಿಯ ಎರಡು ಸಮೀಕ್ಷೆ
ರಿಪಬ್ಲಿಕ್ ಟಿವಿ, ಸಿ ವೋಟರ್ ಮತ್ತು ರಿಪಬ್ಲಿಕ್ ಜನ್ ಕೀ ಬಾತ್ ಸಮೀಕ್ಷೆ ಪ್ರಕಾರ ಬಿಜೆಪಿ ಹೆಚ್ಚಿನ ಸ್ಥಾನಗಳಿಸಲಿದೆ.
* ರಿಪಬ್ಲಿಕ್ ಸಿ ವೋಟರ್ ಪ್ರಕಾರ ಬಿಜೆಪಿ 18, ಕಾಂಗ್ರೆಸ್ ಜೆಡಿಎಸ್ 9, ಇತರೆ 1
* ರಿಪಬ್ಲಿಕ್ ಜನ್ ಕೀ ಬಾತ್ ಪ್ರಕಾರ ಬಿಜೆಪಿ 18-20, ಕಾಂಗ್ರೆಸ್-ಜೆಡಿಎಸ್ 7-10, ಇತರೆ 01












Click it and Unblock the Notifications