Get Updates
Get notified of breaking news, exclusive insights, and must-see stories!

ಹೊಸ ಕಾರ್ಮಿಕ ನೀತಿ ಸಂಹಿತೆ 2022-23: ವಾರಕ್ಕೆ ನಾಲ್ಕೇ ದಿನ ಕೆಲಸ, ಸಂಬಳ ಕಡಿತ!

ನವದೆಹಲಿ, ಡಿಸೆಂಬರ್‌ 23: ವೇತನ (Salary), ಸಾಮಾಜಿಕ ಭದ್ರತೆ (Social security), ಕೈಗಾರಿಕಾ ಸಂಬಂಧ (industrial relations) ಹಾಗೂ ವೃತ್ತಿ ಸುರಕ್ಷತೆ (occupation safety), ಆರೋಗ್ಯ ಹಾಗೂ ಕಾರ್ಯನಿರ್ವಹಣೆ ಪರಿಸ್ಥಿತಿಗಳಿಗೆ (health and working conditions) ಸಂಬಂಧಿಸಿ ನಾಲ್ಕು ಹೊಸ ಕಾರ್ಮಿಕ ನೀತಿ ಸಂಹಿತೆಗಳನ್ನು (labour codes) ಅನ್ನು ಕೇಂದ್ರ ಸರ್ಕಾರವು ಕನಿಷ್ಠ 13 ರಾಜ್ಯಗಳಲ್ಲಿ ಜಾರಿಗೆ ತರುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರವು ಈಗಾಗಲೇ ಈ ನೀತಿ ಸಂಹಿತೆ ಅಡಿಯಲ್ಲಿ ನಿಯಮಗಳನ್ನು ಅಂತಿಮಗೊಳಿಸಿದೆ. ಈಗ ಈ ವಿಚಾರದಲ್ಲಿ ರಾಜ್ಯ ಸರ್ಕಾರಗಳು ತಮ್ಮ ರಾಜ್ಯದಲ್ಲಿ ನಿಯಮವನ್ನು ರೂಪಿಸಬೇಕಾಗಿದೆ. ಈ ನಡುವೆ ಈ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಅಧಿಕಾರಿಗಳು, "ನಾಲ್ಕು ಕಾರ್ಮಿಕ ನೀತಿ ಸಂಹಿತೆಗಳು ಮುಂದಿನ ವರ್ಷ ಅಂದರೆ 2022-23 ರಲ್ಲಿ ಹಲವಾರು ರಾಜ್ಯಗಳಲ್ಲಿ ಜಾರಿಗೆ ಬರಲಿದೆ. ಕರಡನ್ನು ಅಂತಿಮಗೊಳಿಸುವ ಕಾರ್ಯವನ್ನು ಕೇಂದ್ರ ಸರ್ಕಾರ ಈ ವರ್ಷದ ಫೆಬ್ರವರಿಯಲ್ಲೇ ಮಾಡಿದೆ. ಆದರೆ ಕಾರ್ಮಿಕರು ಸಹವರ್ತಿ ವಿಚಾರವಾದ ಕಾರಣ ರಾಜ್ಯ ಸರ್ಕಾರಗಳು ಈ ನೀತಿ ಸಂಹಿತೆಯನ್ನು ಒಂದೇ ಬಾರಿಗೆ ಜಾರಿಗೊಳಿಸಬೇಕೆಂದು ಕೇಂದ್ರ ಸರ್ಕಾರವು ಬಯಸಿದೆ," ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಈ ಬಗ್ಗೆ ಇತ್ತೀಚೆಗೆ ರಾಜ್ಯಸಭೆಯಲ್ಲಿ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್ ಯಾದವ್, "ಉದ್ಯೋಗ ಸುರಕ್ಷತೆ, ಆರೋಗ್ಯ ಹಾಗೂ ಕೆಲಸದ ವಿಚಾರದ ನೀತಿ ಸಂಹಿತೆಯು ಕನಿಷ್ಠ 13 ರಾಜ್ಯಗಳು ಈಗಾಗಲೇ ಪ್ರಕಟ ಮಾಡಿರುವ ನೀತಿ ಸಂಹಿತೆ ಆಗಿದೆ," ಎಂದು ಹೇಳಿದ್ದಾರೆ.

ಈ ನೀತಿ ಸಂಹಿತೆಯಿಂದಾಗಿ ಏನೆಲ್ಲಾ ಬದಲಾವಣೆ ಆಗಲಿದೆ?

ಈ ನೀತಿ ಸಂಹಿತೆಯಿಂದಾಗಿ ಏನೆಲ್ಲಾ ಬದಲಾವಣೆ ಆಗಲಿದೆ?

ಈ ಹೊಸ ನೀತಿ ಸಂಹಿತೆ ಜಾರಿಯಾದರೆ ಉದ್ಯೋಗ ವಲಯದಲ್ಲಿ ಹಲವಾರು ಬದಲಾವಣೆಗಳು ಉಂಟು ಮಾಡಲಿದೆ. ಮುಖ್ಯವಾಗಿ ಕೆಲಸದ ಸಮಯ ಬದಲಾವಣೆ ಆಗಲಿದೆ. ಅಂದರೆ ನೀವು ದಿನಕ್ಕೆ 12 ಗಂಟೆ ಕೆಲಸ ಮಾಡಬೇಕಾಗುತ್ತದೆ. ಹಾಗೆಯೇ ಸಂಬಳ ಹಾಗೂ ಪಿಎಫ್‌ ಕೊಡುಗೆಯ ಮೊತ್ತ ಕೂಡಾ ಬದಲಾಗಲಿದೆ. ಹೊಸ ನೀತಿ ಸಂಹಿತೆಯು ಜಾರಿ ಆದ ಬಳಿಕ ಪಿಎಫ್‌ ಕೊಡುಗೆ ಮೌಲ್ಯ ಹೆಚ್ಚಾಗಲಿದೆ. ಇದರಿಂದಾಗಿ ನಿಮ್ಮ ಕೈಗೆ ಲಭಿಸುವ ಸಂಬಳವು ಕಡಿಮೆ ಆಗಲಿದೆ. ಇನ್ನು ವಾರದ ನಾಲ್ಕು ದಿನ ಮಾತ್ರ ಕೆಲಸ ಜಾರಿಯಾಗುವ ಸಾಧ್ಯತೆಯೂ ಇದೆ. 48 ಗಂಟೆಗಳ ಸಾಪ್ತಾಹಿಕ ಕೆಲಸದ ಅವಶ್ಯಕತೆ ಕಡ್ಡಾಯ ಎಂದು ಕಾರ್ಮಿಕ ಸಚಿವಾಲಯ ಈಗಾಗಲೇ ಸ್ಪಷ್ಟಪಡಿಸಿರುವ ಹಿನ್ನೆಲೆಯಿಂದಾಗಿ ನೌಕರರು ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಬೇಕಾಗಬಹುದು.

ನಾಲ್ಕು ಕಾರ್ಮಿಕ ನೀತಿ ಸಂಹಿತೆಗಳು ಯಾವುದು?

ನಾಲ್ಕು ಕಾರ್ಮಿಕ ನೀತಿ ಸಂಹಿತೆಗಳು ಯಾವುದು?

ಕೇಂದ್ರ ಸರ್ಕಾರ ಮತ್ತು ಕೆಲವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ ಕಾರ್ಮಿಕ ನೀತಿ ಸಂಹಿತೆ ಅಡಿಯಲ್ಲಿ ನಿಯಮಗಳನ್ನು ಪ್ರಕಟ ಮಾಡಿದೆ. ಉಳಿದ ಎಲ್ಲಾ ರಾಜ್ಯಗಳು ಈ ನೀತಿ ಸಂಹಿತೆಯ ಅಡಿ ನಿಯಮವನ್ನು ಜಾರಿಗೆ ತರುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಕೇಂದ್ರ ಸರ್ಕಾರವು ಆಗಸ್ಟ್ 8, 2019 ರಂದು ವೇತನದ ಸಂಹಿತೆ 2019, ಕೈಗಾರಿಕಾ ಸಂಬಂಧಗಳ ಸಂಹಿತೆ 2020, ಸಾಮಾಜಿಕ ಭದ್ರತೆಯ ಸಂಹಿತೆ 2020 ಹಾಗೂ ಸೆಪ್ಟೆಂಬರ್ 29, 2020 ರಂದು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆಗಳು 2020 ಅಧಿಸೂಚನೆ ನೀಡಿದೆ.

ಮೊದಲೇ ಈ ಸಂಹಿತೆಯನ್ನು ಪ್ರಕಟಿಸಿದೆ 24 ರಾಜ್ಯಗಳು

ಮೊದಲೇ ಈ ಸಂಹಿತೆಯನ್ನು ಪ್ರಕಟಿಸಿದೆ 24 ರಾಜ್ಯಗಳು

ಮಧ್ಯಪ್ರದೇಶ, ಬಿಹಾರ, ಉತ್ತರಾಖಂಡ, ಕರ್ನಾಟಕ, ಉತ್ತರ ಪ್ರದೇಶ, ಗುಜರಾತ್, ಒಡಿಶಾ, ಪಂಜಾಬ್, ಛತ್ತೀಸ್‌ಗಢ, ತ್ರಿಪುರ, ರಾಜಸ್ಥಾನ, ಜಾರ್ಖಂಡ್, ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಮಹಾರಾಷ್ಟ್ರ, ಗೋವಾ, ಮಿಜೋರಾಂ, ತೆಲಂಗಾಣ, ಅಸ್ಸಾಂ, ಮಣಿಪುರ, ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ, ಪುದುಚೇರಿ ಮತ್ತು ದೆಹಲಿಯ ಜಿ.ಎನ್.ಸಿ.ಟಿ. ಯಲ್ಲಿ ಈ ಸಂಹಿತೆಯನ್ನು ಪ್ರಕಟ ಮಾಡಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್ ಯಾದವ್‌ ಮಾಹಿತಿ ನೀಡಿದ್ದಾರೆ.

ಕೈಗಾರಿಕಾ ಸಂಹಿತೆಯ ಕರಡು ನಿಯಮ: ರಾಜ್ಯಗಳು

ಕೈಗಾರಿಕಾ ಸಂಹಿತೆಯ ಕರಡು ನಿಯಮ: ರಾಜ್ಯಗಳು

ಅದೇ ರೀತಿ, ಕೈಗಾರಿಕಾ ಸಂಬಂಧಗಳ ಸಂಹಿತೆಯ ಕರಡು ನಿಯಮಗಳನ್ನು ಮೊದಲೇ 20 ರಾಜ್ಯಗಳು ಪ್ರಕಟ ಮಾಡಿದೆ. ಮಧ್ಯಪ್ರದೇಶ, ಬಿಹಾರ, ಉತ್ತರಾಖಂಡ, ಉತ್ತರ ಪ್ರದೇಶ, ಗುಜರಾತ್, ಒಡಿಶಾ, ಪಂಜಾಬ್, ಛತ್ತೀಸ್‌ಗಢ, ತ್ರಿಪುರ, ಕರ್ನಾಟಕ, ಜಾರ್ಖಂಡ್, ಅರುಣಾಚಲ ಪ್ರದೇಶ, ಹರಿಯಾಣ, ಹಿಮಾಚಲ ಪ್ರದೇಶ, ತೆಲಂಗಾಣ, ಮಣಿಪುರ, ಅಸ್ಸಾಂ, ಗೋವಾ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ, ಪುದುಚೇರಿಯಲ್ಲಿ ಕೈಗಾರಿಕಾ ಸಂಬಂಧಗಳ ಸಂಹಿತೆಯ ಕರಡು ನಿಯಮವನ್ನು ಪ್ರಕಟ ಮಾಡಲಾಗಿದೆ ಎಂದು ಕೂಡಾ ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್ ಯಾದವ್‌ ತಿಳಿಸಿದ್ದಾರೆ.

ಸಾಮಾಜಿಕ ಭದ್ರತೆ ಸಂಹಿತೆ ಕರಡು ನಿಯಮ: ರಾಜ್ಯಗಳು

ಸಾಮಾಜಿಕ ಭದ್ರತೆ ಸಂಹಿತೆ ಕರಡು ನಿಯಮ: ರಾಜ್ಯಗಳು

18 ರಾಜ್ಯಗಳು ಸಾಮಾಜಿಕ ಭದ್ರತೆಯ ಸಂಹಿತೆಯ ಕರಡು ನಿಯಮಗಳನ್ನು ಮೊದಲೇ ಪ್ರಕಟಿಸಿವೆ. ಮಧ್ಯಪ್ರದೇಶ, ಬಿಹಾರ, ಉತ್ತರಾಖಂಡ, ಉತ್ತರ ಪ್ರದೇಶ, ಪಂಜಾಬ್, ಛತ್ತೀಸ್‌ಗಢ, ಒಡಿಶಾ, ಜಾರ್ಖಂಡ್, ಅರುಣಾಚಲ ಪ್ರದೇಶ, ಹರಿಯಾಣ, ಮಹಾರಾಷ್ಟ್ರ, ತ್ರಿಪುರ, ಹಿಮಾಚಲ ಪ್ರದೇಶ, ಮಣಿಪುರ, ಅಸ್ಸಾಂ, ಗುಜರಾತ್, ಗೋವಾ ಮತ್ತು ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರ ಸಾಮಾಜಿಕ ಭದ್ರತೆಯ ಸಂಹಿತೆಯ ಕರಡು ನಿಯಮಗಳನ್ನು ಮೊದಲೇ ಪ್ರಕಟ ಮಾಡಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್ ಯಾದವ್‌ ಹೇಳಿದ್ದಾರೆ.

ಔದ್ಯೋಗಿಕ ಸುರಕ್ಷತೆ, ಆರೋಗ್ಯ ಸಂಹಿತೆ: ರಾಜ್ಯಗಳು

ಔದ್ಯೋಗಿಕ ಸುರಕ್ಷತೆ, ಆರೋಗ್ಯ ಸಂಹಿತೆ: ರಾಜ್ಯಗಳು

13 ರಾಜ್ಯಗಳು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆಯ ಕರಡು ನಿಯಮಗಳನ್ನು ಮೊದಲೇ ಪ್ರಕಟಿಸಿವೆ. ಉತ್ತರಾಖಂಡ, ಉತ್ತರ ಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ, ಒಡಿಶಾ, ಅರುಣಾಚಲ ಪ್ರದೇಶ, ಹರಿಯಾಣ, ಜಾರ್ಖಂಡ್, ಪಂಜಾಬ್, ಮಣಿಪುರ, ಬಿಹಾರ, ಹಿಮಾಚಲ ಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರ ಈ ಮೊದಲೇ ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆಯ ಕರಡು ನಿಯಮಗಳನ್ನು ಪ್ರಕಟ ಮಾಡಿದೆ ಎಂದು ಕೇಂದ್ರ ಕಾರ್ಮಿಕ ಸಚಿವರು ವಿವರಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)

Recommended Video

      Deepak Chahar ಟೆಸ್ಟ್ ಪಂದ್ಯ ಆಗದಿದ್ದರೂ ಅಭ್ಯಾಸದಲ್ಲಿ ತೊಡಗಿದ್ದು ಹೀಗೆ | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+