Get Updates
Get notified of breaking news, exclusive insights, and must-see stories!

ಕೋವಿಡ್ 19 ವಿರುದ್ಧ ಖೋಡೆಸ್‌ನಿಂದ ವೈರಾನಾರ್ಮ್ ಔಷಧಿ, ಏನು ವಿಶೇಷ?

ಬೆಂಗಳೂರು ಮೂಲದ ಖೋಡೆ ಉದ್ಯಮ ಸಮೂಹವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ, ನಿಸರ್ಗ ಸಹಜ ಗಿಡಮೂಲಿಕೆಗಳನ್ನು ಬಳಸಿ ಅಭಿವೃದ್ಧಿಪಡಿಸಲಾದ ಆಯುಷ್ ಅನುಮೋದಿತ ಆಯುರ್ವೇದ ಔಷಧಿ 'ವೈರಾನಾರ್ಮ್' ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ಮೂಲಕ, ಖೋಡೆ ಸಮೂಹವು ಪರ್ಯಾಯ ಔಷಧ ಉದ್ಯಮ ಕ್ಷೇತ್ರವನ್ನು ಪ್ರವೇಶಿಸಿದೆ.

ಕ್ಯಾಪ್ಸೂಲ್ ರೂಪದಲ್ಲಿ ಲಭ್ಯವಿರುವ 'ವೈರಾನಾರ್ಮ್' ಅನ್ನು ಅಲ್ತಿಯಾ ಡಿ.ಆರ್.ಎಫ್, ಲೈಫ್ ಸೈನ್ಸಸ್‌ನ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಸುದೀರ್ಘಾವಧಿಯ 3ನೇ ಹಂತದ ಕ್ಲಿನಿಕಲ್ ಟ್ರಯಲ್ (ಚಿಕಿತ್ಸಾ ಪ್ರಯೋಗ)ಗೆ ಒಳಪಡಿಸಿದ ವಿಶಿಷ್ಟ ಆಯುರ್ವೇದ ಕ್ಯಾಪ್ಸೂಲ್ ಇದಾಗಿದೆ ಎಂದು ಖೋಡೆ ಉದ್ಯಮ ಸಮೂಹದ ಉಪಾಧ್ಯಕ್ಷ ಸ್ವಾಮಿ ಖೋಡೆ ಹೇಳಿದರು.

ಕ್ಲಿನಿಕಲ್ ಟ್ರಯಲ್ ಗಳಲ್ಲಿ ಪರಿಣಾಮಕಾರಿ ಎಂದು ದೃಢಪಟ್ಟಿರುವ 'ವೈರಾನಾರ್ಮ್' ಅನ್ನು ಅಪೇಕ್ಷಿತ ಫಲಿತಾಂಶ ಪರೀಕ್ಷೆ ಹಾಗೂ ಸುರಕ್ಷತಾ ಅಧ್ಯಯನಗಳಿಗೆ ಒಳಪಡಿಸಲಾಗಿದೆ. ಇದು ದೇಹದಲ್ಲಿ ನ್ಯೂಟ್ರೋಫಿಲ್- ಲಿಂಫೋಸೈಟ್ ಅನುಪಾತವನ್ನು (ಆರೋಗ್ಯಕರ ವ್ಯಕ್ತಿಯಲ್ಲಿ ಎನ್.ಎಲ್.ಆರ್. ಮೌಲ್ಯಾಂಕವು 0.75 ರಿಂದ 3 ರ ಒಳಗೆ ಇರುತ್ತದೆ) ತಗ್ಗಿಸುವ ಮೂಲಕ ವೈರಾಣುಗಳ ಸಂಖ್ಯೆ ಹೆಚ್ಚುವುದನ್ನು ತಡೆಯುತ್ತದೆ.

ಆದ್ದರಿಂದ, ಇದನ್ನು ರೋಗಲಕ್ಷಣವಿಲ್ಲದ ಹಾಗೂ ರೋಗಲಕ್ಷಣದೊಂದಿಗೆ ಅಲ್ಪ ಪ್ರಮಾಣದಿಂದ ಸಾಧಾರಣ ಪ್ರಮಾಣದವರೆಗಿನ ಕೋವಿಡ್ ಸೋಂಕಿತರಿಗೆ ಈಗಾಗಲೇ ನೀಡುತ್ತಿರುವ ಚಿಕಿತ್ಸೆಯ ಜೊತೆಗೆ ಹೆಚ್ಚುವರಿಯಾಗಿ ನೀಡಬಹುದು. ಅಲ್ಪ ಪ್ರಮಾಣದ ಸೋಂಕಿನ ಪ್ರಮಾಣವು ಸಾಧಾರಣ ಹಂತಕ್ಕೆ ಹೋಗದಂತೆ ತಡೆಯಲು ಇದು ಸಹಕಾರಿಯಾಗಿದೆ ಎಂದು ಈ ಔಷಧಿಯನ್ನು ಸೂತ್ರೀಕರಿಸಿರುವ ಡಾ.ಕೆ.ಜಿ.ಪದ್ಮನಾಭನ್ ವಿವರಿಸಿದರು.

ವೈರಾಣುಗಳ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ

ವೈರಾಣುಗಳ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ

ಮನುಷ್ಯನ ದೇಹವು ಕಾಯಿಲೆಯ ವಿರುದ್ಧ ತೋರುವ ‘ಜೀವಕೋಶ ಮಧ್ಯವರ್ತಿ ಪ್ರತಿರೋಧ'ವು ವೈರಾಣುಗಳ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದೀಗ ಅಭಿವೃದ್ಧಿಪಡಿಸಲಾಗಿರುವ ‘ವೈರಾನಾರ್ಮ್', ವ್ಯಕ್ತಿಯ ‘ಜೀವಕೋಶ ಮಧ್ಯವರ್ತಿ ಪ್ರತಿರೋಧ'ವನ್ನು ಹೆಚ್ಚಿಸುವ ಮೂಲಕ ಬೇಗನೇ ಚೇತರಿಸಿಕೊಳ್ಳಲು ಹಾಗೂ ಸೋಂಕು ಹರಡುವುದನ್ನು ತಡೆಯಲು ಸಹಕರಿಸುತ್ತದೆ ಎಂದು ತಿಳಿಸಿದರು.

ಇದು, ಕೋವಿಡ್ ನ ಪ್ರಮುಖ ರೋಗಲಕ್ಷಣವಾದ ಕೆಮ್ಮಿನ ತೀವ್ರತೆ, ಅದರ ಅವಧಿ ಹಾಗೂ ಉಸಿರೆಳೆತವನ್ನು (ವೇಗದ ಉಸಿರಾಟವನ್ನು) ತಗ್ಗಿಸುತ್ತದೆ ಎಂಬುದು ಕ್ಲಿನಿಕಲ್ ಟ್ರಯಲ್ ಗಳಲ್ಲಿ ದೃಢಪಟ್ಟಿದೆ. ಈ ಔಷಧಿಗೆ ಬಳಸುವ ಗಿಡಮೂಲಿಕೆ ಅಂಶಗಳು ವೈರಾಣುವು ಮೂಗಿನಲ್ಲಾಗಲೀ ಅಥವಾ ಗಂಟಲಿನಲ್ಲಾಗಲೀ ಜೀವಕೋಶದೊಂದಿಗೆ ಬೆಸೆದುಕೊಳ್ಳುವುದಕ್ಕೆ ಅವಕಾಶ ನೀಡದಿರುವ ಮೂಲಕ ವ್ಯಕ್ತಿಗೆ ರೋಗದಿಂದ ರಕ್ಷಣೆ ನೀಡುತ್ತವೆ ಎಂದರು.

‘ವೈರಾನಾರ್ಮ್’ ಎನ್.ಎಲ್. ಅನುಪಾತ ಕಡಿಮೆ

‘ವೈರಾನಾರ್ಮ್’ ಎನ್.ಎಲ್. ಅನುಪಾತ ಕಡಿಮೆ

"ಪರ್ಯಾಯ ಔಷಧಿಗಳ ಪೈಕಿ ‘ವೈರಾನಾರ್ಮ್' ಮಾತ್ರವೇ ಎನ್.ಎಲ್. ಅನುಪಾತವನ್ನು ಕಡಿಮೆಗೊಳಿಸುತ್ತದೆ ಎಂಬುದನ್ನು ಕ್ಲಿನಿಕಲ್ ಟ್ರಯಲ್‌ನಲ್ಲಿ ಕ್ರಮಬದ್ಧವಾಗಿ ಸಾಬೀತುಪಡಿಸಿರುವ ಔಷಧವಾಗಿದೆ. ರೋಗ ಪ್ರತಿರೋಧದ ಮೂಲಭೂತ ತತ್ತ್ವಗಳನ್ನು ಆಧರಿಸಿ ‘ವೈರಾನಾರ್ಮ್' ಅನ್ನು ಅಭಿವೃದ್ಧಿಪಡಿಸಿರುವುದರಿಂದ ವೈರಸ್‌ನ ರೂಪಾಂತರಗಳಿಗೂ ಇದು ಪರಿಣಾಮಕಾರಿಯಾಗಿರುತ್ತದೆ" ಎಂದೂ ಪದ್ಮನಾಭನ್ ಹೇಳಿದರು.

ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್ಒ) ಕೋವಿಡ್ ಬಾಧಿತ ಗರ್ಭಿಣಿಯರಿಗೆ ಹಾಗೂ ಮಗುವಿಗೆ ಜನ್ಮ ನೀಡಿದ ತಾಯಂದಿರ ಮೇಲೆ ‘ವೈರಾನಾರ್ಮ್' ಬೀರುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಅನುಮತಿ ನೀಡಿದೆ ಎಂದು ಅಲ್ತಿಯಾ ಡಿ.ಆರ್.ಎಫ್.ನ ಡಾ. ಮನು ಜಗ್ಗಿ ತಿಳಿಸಿದರು.

250 ಕೋವಿಡ್ ಸೋಂಕಿತರ ಮೇಲೆ ಪ್ರಯೋಗ

250 ಕೋವಿಡ್ ಸೋಂಕಿತರ ಮೇಲೆ ಪ್ರಯೋಗ

ರಾಷ್ಟ್ರೀಯ ಆಸ್ಪತ್ರೆಗಳ ಮೌಲ್ಯಾಂಕನ ಮಂಡಳಿಯ (NABH) ಮಾನ್ಯತೆ ಹೊಂದಿದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಸಿ.ಟಿ.ಆರ್.ಐ. (ಕ್ಲಿನಿಕಲ್ ಟ್ರಯಲ್ಸ್ ರಿಜಿಸ್ಟ್ರಿ- ಇಂಡಿಯಾ) ಅನುಮೋದನೆ ಪಡೆದು ಈ ಕ್ಲಿನಿಕಲ್ ಟ್ರಯಲ್ ನಡೆಸಲಾಗಿದೆ. ಇದಕ್ಕಾಗಿ 250 ಕೋವಿಡ್ ಸೋಂಕಿತರನ್ನು ಆಯ್ಕೆ ಮಾಡಿ 6 ತಿಂಗಳ ಕಾಲ ಪರೀಕ್ಷೆಗಳನ್ನು ನಡೆಸಲಾಯಿತು. ಸಿ.ಟಿ.ಆರ್.ಐ. ಮಾರ್ಗದರ್ಶಿ ಸೂತ್ರದ ಪ್ರಕಾರ, ಇವರನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿತ್ತು. ಇದರಲ್ಲಿ, ಒಂದು ಗುಂಪಿನ 125 ಜನರಿಗೆ ‘ವೈರಾನಾರ್ಮ್' ಕೊಡಲಾಗುತ್ತಿತ್ತು. ಇನ್ನೊಂದು ಗುಂಪಿನ 125 ಜನರಿಗೆ ‘ವೈರಾನಾರ್ಮ್' ಕೊಡುತ್ತಿರಲಿಲ್ಲ. ‘ವೈರಾನಾರ್ಮ್' ಅನ್ನು ಯಾರಿಗೆ ಕೊಟ್ಟಿರಲಿಲ್ಲವೋ ಅವರಿಗಿಂತ ಅದನ್ನು ಯಾರಿಗೆ ಕೊಡಲಾಗಿತ್ತೋ ಅವರಲ್ಲಿ ಚೇತರಿಕೆಯು ಉತ್ತಮವಾಗಿರುವುದು ವಿಶ್ಲೇಷಣೆಗಳಿಂದ ದೃಢಪಟ್ಟಿದೆ ಎಂದು ಕ್ಲಿನಿಕಲ್ ಟ್ರಯಲ್ ನ ಪ್ರಧಾನ ಮೇಲ್ವಿಚಾರಕ ಡಾ.ರಾಧಾಶ್ಯಾಮ್ ನಾಯ್ಕ್ ವಿವರಿಸಿದರು.

‘ಟಿ’ ಜೀವಕೋಶಗಳ ಪ್ರತಿರೋಧವನ್ನು ಉತ್ತೇಜಿಸುತ್ತದೆ

‘ಟಿ’ ಜೀವಕೋಶಗಳ ಪ್ರತಿರೋಧವನ್ನು ಉತ್ತೇಜಿಸುತ್ತದೆ

ಗಮನ ಸೆಳೆದ ಮತ್ತೊಂದು ಅಂಶವೆಂದರೆ, ಇದು ಕಿರಿಯ ವಯಸ್ಕರು (40ಕ್ಕಿಂತ ಕಡಿಮೆ ವರ್ಷ) ಹಾಗೂ ಹಿರಿಯ ವಯಸ್ಕರು (60ಕ್ಕಿಂತ ಹೆಚ್ಚು ವರ್ಷ), ಎರಡೂ ವಯೋಮಾನದವರಲ್ಲಿ, ‘ಟಿ' ಜೀವಕೋಶಗಳ ಪ್ರತಿರೋಧವನ್ನು ಉತ್ತೇಜಿಸುವ ಜೊತೆಗೆ ಜೀವಕೋಶೀಯ ಉರಿಯೂತವನ್ನು ಕಡಿಮೆಗೊಳಿಸುತ್ತದೆ ಎಂಬುದು ಕಂಡುಬಂದಿದೆ. ಕೋವಿಡ್ 2ನೇ ಅಲೆಯು ಹಿರಿಯ ವಯಸ್ಸಿನವರ ಜೊತೆಗೆ ಕಿರಿಯ ವಯಸ್ಸಿನವರನ್ನೂ ಬಾಧಿಸುತ್ತಿರುವ ಈ ಸನ್ನಿವೇಶದಲ್ಲಿ ಇದು ಹೆಚ್ಚು ಗಮನ ಸೆಳೆದಿದೆ. ಜೀವಕೋಶ ಪ್ರತಿರೋಧದಲ್ಲಿ ಆಗುವ ಹೆಚ್ಚಳವು ದೀರ್ಘಾವಧಿ ಚೇತರಿಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಅಲ್ಲದೇ, ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಗಳಂತಹ ಸಹವರ್ತಿ ರೋಗಗಳಿಂದ ಬಾಧಿತರಾದವರಿಗೂ ‘ವೈರಾನಾರ್ಮ್' ಸುರಕ್ಷಿತ ಎಂಬುದು ಸಾಬೀತಾಗಿದೆ ಎಂದು ಆರೋಗ್ಯ ಸೇವಾ ಉದ್ಯಮ ಪರಿಣತ ರಾಜೀವ್ ನಾಗಿ ತಿಳಿಸಿದರು.

ವ್ಯವಸ್ಥಾಪಕ ನಿರ್ದೇಶಕ ಸ್ವಾಮಿ ಖೋಡೆ

ವ್ಯವಸ್ಥಾಪಕ ನಿರ್ದೇಶಕ ಸ್ವಾಮಿ ಖೋಡೆ

ಈ ಆಯುರ್ವೇದ ಕ್ಯಾಪ್ಸೂಲ್ ಬಿಡುಗಡೆಯಾಗುತ್ತಿರುವುದಕ್ಕೆ ತಮ್ಮ ಖುಷಿಯನ್ನು ಹಂಚಿಕೊಂಡ ಖೋಡೆ ಉದ್ಯಮ ಸಮೂಹದ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಸ್ವಾಮಿ ಖೋಡೆ, "ನಮ್ಮ ಕುಟುಂಬದ ಹಿರಿಯರ ಆಶೀರ್ವಾದ ಹಾಗೂ ದೂರದರ್ಶಿತ್ವದ ಬಲದಿಂದ ಅಪ್ಪಟ ನೈಸರ್ಗಿಕ ಗಿಡಮೂಲಿಕೆಗಳ ಅಂಶಗಳನ್ನು ಬಳಸಿ ಅಡ್ಡಪರಿಣಾಮಗಳಲ್ಲಿದ ಉತ್ಪನ್ನ ರೂಪಿಸುವಲ್ಲಿ ನಾನು ಶಕ್ತಿ ಮೀರಿ ತೊಡಗಿಸಿಕೊಂಡಿದ್ದೇನೆ. ಕ್ಲಿನಿಕಲ್ ಟ್ರಯಲ್‌ನಲ್ಲಿ ‘ವೈರಾನಾರ್ಮ್' ಪರಿಣಾಮಕಾರಿ ಎಂದು ದೃಢಪಟ್ಟಿದ್ದು, ಅದರ ಹಿಂದಿನ ತಾಂತ್ರಿಕ ವಿವರಗಳನ್ನು ಜನರ ಮುಂದಿಡಲು ಸಂತೋಷವಾಗುತ್ತಿದೆ" ಎಂದರು.

‘ವೈರಾನಾರ್ಮ್' ಸದ್ಯಕ್ಕೆ ಎಲ್.ಕೆ.ವೆಲ್ನೆಸ್ ಸೆಂಟರ್ (#75, 3ನೇ ಕ್ರಾಸ್, ರೆಸಿಡೆನ್ಸಿ ರಸ್ತೆ, ಬೆಂಗಳೂರು-560025) ಇಲ್ಲಿ ಲಭ್ಯವಿದೆ. ಆಸಕ್ತರು 080-40934216/ 93801 74977 ಸಂಪರ್ಕಿಸಬಹುದು. ಇದರ ಬೆಲೆ 60 ಕ್ಯಾಪ್ಸೂಲ್ ಗಳ ಬಾಟಲಿಗೆ ರೂ 2000 ಇದೆ.

ಕೆಂಗಲ್ ಶ್ರೀಪಾದ ರೇಣು ಹಾಗೂ ತಜ್ಞವೈದ್ಯರು ಸುದ್ದಿಗೋಷ್ಠಿಯಲ್ಲಿದ್ದರು.

ಡಾ.ರಾಧೇಶ್ಯಾಮ್ ನಾಯ್ಕ್

ಡಾ.ರಾಧೇಶ್ಯಾಮ್ ನಾಯ್ಕ್

1) ಡಾ.ರಾಧೇಶ್ಯಾಮ್ ನಾಯ್ಕ್ ಪ್ರಶಸ್ತಿ ಪುರಸ್ಕೃತ ಕ್ಯಾನ್ಸರ್ ಚಿಕಿತ್ಸಾ ತಜ್ಞರು. ಅವರು ಅಂತರರಾಷ್ಟ್ರೀಯ ಮನ್ನಣೆಯ ಮುಂಚೂಣಿ ಕೆಒಎಲ್. ತಮ್ಮ ಕ್ಷೇತ್ರದಲ್ಲಿ 29ಕ್ಕೂ ಹೆಚ್ಚು ಅನುಭವ ಹೊಂದಿದವರು. ಅಮೆರಿಕದ ಆಂಡರ್ಸನ್ ಇನ್ಸ್ ಟಿಟ್ಯೂಟ್, ಆಕ್ಸ್ ಫರ್ಡ್ನ ಇಂಟರ್ ನ್ಯಾಷನಲ್ ಸ್ಕೂಲ್ ಫಾರ್ ಕ್ಯಾನ್ಸರ್ ಕೇರ್, ಆಸ್ಟ್ರೇಲಿಯಾದ ನ್ಯೂ ಸೌಥ್ ಯೂನಿವರ್ಸಿಟಿ ಸೇರಿದಂತೆ ಅತ್ಯಾಧುನಿಕ ತರಬೇತಿಗಳನ್ನು ಪಡೆದಿದ್ದಾರೆ. ಹಲವಾರು ನಿಯತಕಾಲಿಕಗಳಲ್ಲಿ ತಮ್ಮ ವಿದ್ವತ್ ಪ್ರಬಂಧಗಳನ್ನು ಬರೆದಿದ್ದಾರೆ.

50ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕ್ಲಿನಿಕಲ್ ಟ್ರಯಲ್ ಗಳನ್ನು ನಡೆಸಿದ್ದಾರೆ. ಅಸ್ಥಿಮಜ್ಜೆ ಕಸಿಯು ಅವರ ಆಸಕ್ತಿಯ ಕ್ಷೇತ್ರವಾಗಿದೆ. ಕರ್ನಾಟಕದಲ್ಲಿ ಮೊತ್ತ ಮೊದಲ ಅಸ್ಥಿಮಜ್ಜೆ ಕಸಿ ಶಸ್ತ್ರಚಿಕಿತ್ಸೆ ಮಾಡಿದ ಗರಿಮೆ ಅವರದ್ದಾಗಿದೆ. ಇದುವರೆಗೆ 500ಕ್ಕೂ ಹೆಚ್ಚು ಅಸ್ಥಿಮಜ್ಜೆ ಕಸಿ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದಾರೆ.

ಡಾಬರ್‌ನ ಅಲ್ತಿಯಾ ಡಿ.ಆರ್.ಎಫ್. ಲೈಫ್ ಸೈನ್ಸಸ್‌ನ

ಡಾಬರ್‌ನ ಅಲ್ತಿಯಾ ಡಿ.ಆರ್.ಎಫ್. ಲೈಫ್ ಸೈನ್ಸಸ್‌ನ

2) ಡಾ. ಮನು ಜಗ್ಗಿ ಅವರು ಡಾಬರ್‌ನ ಅಲ್ತಿಯಾ ಡಿ.ಆರ್.ಎಫ್. ಲೈಫ್ ಸೈನ್ಸಸ್‌ನ ಮುಖ್ಯ ಕಾರ್ಯವಾಹಕ ಅಧಿಕಾರಿಯಾಗಿದ್ದಾರೆ. ಗಿಡಮೂಲಿಕೆ ಆಧಾರಿತ ಹಾಗೂ ಆಧುನಿಕ ಔಷಧಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಸುಮಾರು 30 ವರ್ಷಗಳ ಅನುಭವ ಹೊಂದಿದ್ದಾರೆ.
ಕ್ಯಾನ್ಸರ್ ಇಮ್ಯುನಾಲಜಿಯಲ್ಲಿ ಡಾಕ್ಟರೇಟ್ ಪಡೆದಿರುವ ಅವರು ಕ್ಯಾನ್ಸರ್, ಚಯಾಪಚಯ ಕಾಯಿಲೆಗಳು, ಉರಿಯೂತ ಹಾಗೂ ಪ್ರತಿರೋಧ ನ್ಯೂನತೆಗಳಿಗೆ ಚಿಕಿತ್ಸಾ ಪರಿಹಾರ ಕಂಡುಹಿಡಿಯುವುದರಲ್ಲಿ ತೊಡಗಿಸಿಕೊಂಡಿದ್ದಾರೆ.
ಅಂತರರಾಷ್ಟ್ರೀಯ ನಿಯಂತ್ರಕ ಅಗತ್ಯಗಳ ಬಗ್ಗೆ ಅಪಾರ ಜ್ಞಾನ ಹಾಗೂ ಅನುಭವ ಹೊಂದಿರುವ ಅವರು ಈ ಉತ್ಪನ್ನ ಹೊರಬರುವಲ್ಲಿ ಹೆಚ್ಚಿನ ಕಾಣಿಕೆ ನೀಡಿದ್ದಾರೆ. ಸರ್ಕಾರದ ಹಲವಾರು ಸಲಹಾ ಸಮಿತಿಗಳಲ್ಲಿ ಸೇವೆ ಸಲ್ಲಿಸುವ ಅವರು ಹಲವಾರ ಪೇಟೆಂಟ್ ಗಳನ್ನು ಹೊಂದಿದ್ದಾರೆ. ಜೊತೆಗೆ, ಹಲವು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಅವರು, ಹಲವಾರು ರಾಷ್ಟ್ರೀಯ ಹಾಗೂ ಜೈವಿಕ ಸಂಶೋಧನಾ ಕಾರ್ಯಪಡೆ ಸಮಿತಿಗಳ ಸದಸ್ಯರೂ ಆಗಿದ್ದಾರೆ.

ಮೆಡ್ ಕಾರ್ಪ್ ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ

3) ರಾಜೀವ್ ನಾಗಿ ಅವರು ‘ವೈರಾನಾರ್ಮ್' ನ ಕ್ಲಿನಿಕಲ್ ಟ್ರಯಲ್ ನಡೆಸಿರುವ ಸಿ.ಆರ್.ಒ.ಆದ ಆನ್ ಕಾರ್ನ್ ಮೆಡ್ ಕಾರ್ಪ್ ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದಾರೆ. ಟೆಲೆಫ್ಲೆಕ್ಸ್, ಆಸ್ಟ್ರಾಜೆನಿಕಾ, ಅಲೆರ್ಗನ್, ಜಾನ್ಸನ್ ಅಂಡ್ ಜಾನ್ಸನ್ ಕನ್ಸ್ಯೂಮರ್, ಬಾಕ್ಸ್ಟರ್, ಐಸಿಐ ಗಳಲ್ಲಿ ಪ್ರಮುಖ ಸ್ಥಾನಗಳನ್ನು ನಿರ್ವಹಿಸಿರುವ ಅವರು 26ಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿದ್ದಾರೆ.
ಸಿಂಗಾಪುರದ ಇನ್ಸೀಡ್, ನವದೆಹಲಿಯ ಐಎಂಐ ಗಳಲ್ಲಿ ವ್ಯಾಸಂಗ ಮಾಡಿರುವ ಅವರು, ಅಡ್ವಾಮೆಡ್, ಅಮೆರಿಕನ್ ಔಷಧ ತಯಾರಿಕರ ಒಕ್ಕೂಟ ಸೇರಿದಂತೆ ಹಲವಾರು ಸಂಸ್ಥೆಗಳ ಸದಸ್ಯರಾಗಿದ್ದಾರೆ.

Recommended Video

      ಕೊರೋನಾ ರೋಗಿಗಳ ಮುಂದೆ ಆಸ್ಪತ್ರೆ ಸಿಬ್ಬಂದಿಗಳ ಮಸ್ತ್‌ ಡ್ಯಾನ್ಸ್ | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+