ಯಡಿಯೂರಪ್ಪ ಸಚಿವ ಸಂಪುಟ: ಯಾರಿಗೆ ಯಾವ ಖಾತೆ ಅಧಿಕೃತ ಪಟ್ಟಿ

ಬೆಂಗಳೂರು, ಫೆಬ್ರವರಿ 10: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 25 ದಿನಗಳ ಬಳಿಕ ಮೊದಲ ಬಾರಿಗೆ ಸಚಿವ ಸಂಪುಟವನ್ನು ವಿಸ್ತರಣೆ ಮಾಡಿದ್ದರು. ಮೊದಲ ಹಂತದಲ್ಲಿ 17 ಮಂದಿ ಶಾಸಕರನ್ನು ತಮ್ಮ ಕ್ಯಾಬಿನೆಟ್ ಗೆ ಸೇರಿಸಿಕೊಂಡಿದ್ದರು. ಇದಾದ ಬಳಿಕ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ಫೆಬ್ರವರಿ 06ರಂದು ನಡೆಯಿತು. ಬಿಜೆಪಿಗೆ ವಲಸೆ ಬಂದು ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ 10 ಮಂದಿ ಶಾಸಕರಿಗೆ ರಾಜ್ಯಪಾಲ ವಜುಭಾಯಿವಾಲ ಪ್ರತಿಜ್ಞಾ ವಿಧಿ ಬೋಧಿಸಿದರು. ರಾಜಭವನದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.

"ಪಕ್ಷ ನಮ್ಮ ಮೇಲೆ ನಂಬಿಕೆಯಿಟ್ಟು ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ನಿಭಾಯಿಸುತ್ತೇವೆ" ಎಂಬ ವಾಕ್ಯವನ್ನು ಉರು ಹೊಡೆದಂತೆ ಎಲ್ಲಾ ನೂತನ ಸಚಿವರುಗಳು ಮಾಧ್ಯಮದವರನ್ನು ಕಂಡ ತಕ್ಷಣ ಹೇಳಿದ ಕ್ಲೀಷೆ ಎನಿಸುವ ವಾಕ್ಯ.

ಸಚಿವ ಸ್ಥಾನ ಸಿಗದ ಆಕಾಂಕ್ಷಿಗಳ ಅಸಮಾಧಾನದ ಹೊಗೆ ಇನ್ನೂ ಬೂದಿ ಮುಚ್ಚಿದ ಕೆಂಡದಂತೆ ಇನ್ನೂ ಇದೆ. ಈ ನಡುವೆ ಖಾತೆ ಹಂಚಿಕೆ ಸರ್ಕಸ್ ಇನ್ನೂ ಮುಂದುವರೆಯಲಿದ್ದು, ಲೋಕಲ್ ರಿಂಗ್ ಮಾಸ್ಟರ್ ಯಡಿಯೂರಪ್ಪ ಅವರು ಹೈಕಮಾಂಡ್ ನಾಯಕರ ಆದೇಶದ ಅನುಸಾರವಾಗಿ ಖಾತೆ ಹಂಚಿಕೆ ಮಾಡಿದ್ದಾರೆ.

Karnataka New Cabinet Ministers Portfolios

ಬಿ.ಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ, ವಿಕಾಸಸೌಧ, ವಿಧಾನಸೌಧಗಳಲ್ಲಿ ಕೊಠಡಿ ಹಂಚಿಕೆ ಕಾರ್ಯ ಮುಕ್ತಾಯವಾಗಿದೆ. ಗೃಹ ಹಂಚಿಕೆ ಕಾರ್ಯ ಬಾಕಿಯಿದೆ.

ಈ ಹಿಂದಿನ ಸಂಪುಟ ಅಪ್ಡೇಟ್: ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಪುಟದಲ್ಲಿ ಮೂರು ಡಾ.ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ ಮತ್ತು ಗೋವಿಂದ ಕಾರಜೋಳಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ. ಕ್ರಮವಾಗಿ ಒಕ್ಕಲಿಗ, ಲಿಂಗಾಯತ ಹಾಗೂ ದಲಿತ ಸಮುದಾಯದ ಓಲೈಕೆ ಇದಾಗಿದೆ. ಆದರೆ, ಹಿಂದುಳಿದ ನಾಯಕರಾಗಿರುವ, ಡಿಸಿಎಂ ಸ್ಥಾನ ಆಕಾಂಕ್ಷಿಗಳಾಗಿದ್ದ ಕೆಎಸ್ ಈಶ್ವರಪ್ಪ ಹಾಗೂ ಬಿ ಶ್ರೀರಾಮುಲುಗೆ ನಿರಾಶೆಯಾಗಿದೆ. ಸಂಪುಟದಲ್ಲಿ ಬಸವರಾಜ ಬೊಮ್ಮಾಯಿ ಬಡ್ತಿ ಸಿಕ್ಕಿದ್ದು ಗೃಹ ಸಚಿವರಾಗಿದ್ದಾರೆ.

ಕರ್ನಾಟಕ ಸಂಪುಟ ದರ್ಜೆ ಸಚಿವರ ಪಟ್ಟಿ: ಯಾರಿಗೆ ಯಾವ ಖಾತೆ?

ಕರ್ನಾಟಕ ಸಂಪುಟ ದರ್ಜೆ ಸಚಿವರು
ಕ್ರಮ ಸಂಖ್ಯೆ ಸಚಿವರ ಹೆಸರು ಖಾತೆ
01 ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ, ಡಿಪಿಎಆರ್, ಬೆಂಗಳೂರು ನಗರಾಭಿವೃದ್ಧಿ, ಇಂಧನ, ಗುಪ್ತಚರ ವಾರ್ತೆ ಖಾತೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಸಣ್ಣ ಕೈಗಾರಿಕೆ, ಯೋಜನಾ ಖಾತೆ ಹಾಗೂ ಇನ್ನಿತರ ಎಲ್ಲಾ ಹಂಚಿಕೆಯಾಗದ ಖಾತೆಗಳು.
02 ಬಸವರಾಜ ಬೊಮ್ಮಾಯಿ ಗೃಹ
03 ಕೆ.ಎಸ್.ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
04 ವಿ. ಸೋಮಣ್ಣ ವಸತಿ
05 ಆರ್.ಅಶೋಕ್ ಕಂದಾಯ (ಮುಜರಾಯಿ ಹೊರತುಪಡಿಸಿ)
06 ಲಕ್ಷ್ಮಣ ಸವದಿ ಸಾರಿಗೆ
07 ಜಗದೀಶ್ ಶೆಟ್ಟರ್ ಬೃಹತ್ ಮತ್ತು ಮಧ್ಯಮ ಕೈಗಾರಿಕೆ (ಸಕ್ಕರೆ ಖಾತೆ ಹೊರತುಪಡಿಸಿ), ಹೆಚ್ಚುವರಿಯಾಗಿ ಸಾರ್ವಜನಿಕ ಉದ್ದಿಮೆ ಖಾತೆ
08 ಡಾ. ಅಶ್ವಥ್ ನಾರಾಯಣ್ ಉನ್ನತ ಶಿಕ್ಷಣ ಸಚಿವ, ಐಟಿ-ಬಿಟಿ, ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ, ಹೆಚ್ಚುವರಿಯಾಗಿ ಕೌಶಲ್ಯಾಭಿವೃದ್ಧಿ
09 ಗೋವಿಂದ ಕಾರಜೋಳ ಲೋಕೋಪಯೋಗಿ, ಹೆಚ್ಚುವರಿಯಾಗಿ ಸಮಾಜ ಕಲ್ಯಾಣ
10 ಮಾಧುಸ್ವಾಮಿ ಕಾನೂನು ಮತ್ತು ಸಂಸದೀಯ ವ್ಯವಹಾರ, ಹೆಚ್ಚುವರಿಯಾಗಿ ಸಣ್ಣ ನೀರಾವರಿ (ಜಲ ಸಂಪನ್ಮೂಲ ಖಾತೆಯಿಂದ)
11 ಬಿ. ಶ್ರೀರಾಮುಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ (ವೈದ್ಯಕೀಯ ಶಿಕ್ಷಣ ಹೊರತುಪಡಿಸಿ), ಹೆಚ್ಚುವರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
12 ಸಿ.ಸಿ ಪಾಟೀಲ್ ಗಣಿ ಮತ್ತು ಭೂ ವಿಜ್ಞಾನ
13 ಸುರೇಶ್ ಕುಮಾರ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ
14 ಶಶಿಕಲಾ ಜೊಲ್ಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ
15 ಪ್ರಭು ಚೌಹಾಣ್ ಪಶು ಸಂಗೋಪನೆ, ಹೆಚ್ಚುವರಿಯಾಗಿ ಅಲ್ಪಸಂಖ್ಯಾತ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ
16 ಕೋಟಾ ಶ್ರೀನಿವಾಸ ಪೂಜಾರಿ (ಎಂಎಲ್ಸಿ) ಬಂದರು ಮತ್ತು ಮೀನುಗಾರಿಕೆ, ಒಳನಾಡು ಸಾರಿಗೆ ಇಲಾಖೆ ಹಾಗೂ ಮುಜರಾಯಿ
17 ಸಿ.ಟಿ ರವಿ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಹೆಚ್ಚುವರಿಯಾಗಿ ಯುವಜನ ಮತ್ತು ಕ್ರೀಡಾ ಖಾತೆ
18 ಎಚ್. ನಾಗೇಶ್ ಅಬಕಾರಿ
19 ರಮೇಶ್ ಜಾರಕಿಹೊಳಿ ಬೃಹತ್ ಹಾಗೂ ಮಧ್ಯಮ ನೀರಾವರಿ ಇಲಾಖೆ (ಜಲ ಸಂಪನ್ಮೂಲ)
20 ಎಸ್. ಟಿ ಸೋಮಶೇಖರ್ ಸಹಕಾರ
21 ಆನಂದ್ ಸಿಂಗ್ ಅರಣ್ಯ, ಪರಿಸರ
22 ಡಾ. ಕೆ ಸುಧಾಕರ್ ವೈದ್ಯಕೀಯ ಶಿಕ್ಷಣ
23 ಬೈರತಿ ಬಸವರಾಜು ಬೆಂಗಳೂರು ಮಹಾನಗರ (ಬಿಡಿಎ, ಬಿಬಿಎಂಪಿ, ಬಿಡಬ್ಲ್ಯೂ ಎಸ್ಎಸ್ ಬಿ, ಬಿಎಂಆರ್ ಡಿಎ, ಬಿಎಂಆರ್ ಸಿಎಲ್, ಕೆಯುಡಬ್ಲ್ಯೂ ಎಸ್ ಡಿಬಿ, ಕೆಯುಐಡಿ ಎಫ್ ಸಿ, ಟೌನ್ ಶಿಪ್ ನಿರ್ದೇಶನಾಲಯ) ಹೊರತು ಪಡಿಸಿ ನಗರಾಭಿವೃದ್ಧಿ
24 ಶಿವರಾಮ ಹೆಬ್ಬಾರ್ ಕಾರ್ಮಿಕ ಹಾಗೂ ಸಕ್ಕರೆ
25 ಬಿ.ಸಿ ಪಾಟೀಲ್ ಕೃಷಿ
26 ಕೆ ಗೋಪಾಲಯ್ಯ ಆಹಾರ ಮತ್ತು ಪಡಿತರ ವಿತರಣೆ
27 ಕೆ.ಸಿ ನಾರಾಯಣ ಗೌಡ ಪೌರಾಡಳಿತ, ಹೆಚ್ಚುವರಿಯಾಗಿ ತೋಟಗಾರಿಕೆ
28 ಶ್ರೀಮಂತ ಪಾಟೀಲ್ ಜವಳಿ
Karnataka New Cabinet Ministers Portfolios

Karnataka New Cabinet Ministers Portfolios

Karnataka New Cabinet Ministers Portfolios


As On 11-Feb-2020:

Karnataka New Cabinet Ministers Portfolios

Karnataka New Cabinet Ministers Portfolios

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+