2025 Holiday List: ಕರ್ನಾಟಕದ 2025ರ ಸರ್ಕಾರಿ ರಜೆ ದಿನಗಳು, ಪಟ್ಟಿ
ಬೆಂಗಳೂರು, ನವೆಂಬರ್ 14: 2024ನೇ ವರ್ಷ ಪೂರ್ಣಗೊಳ್ಳಲು ಕೆಲವೇ ದಿನಗಳು ಬಾಕಿ ಇದೆ. 2025ನೇ ವರ್ಷವನ್ನು ಸ್ವಾಗತಿಸಲು ಜನರು ತಯಾರಾಗುತ್ತಿದ್ದಾರೆ. ಹೊಸ ವರ್ಷದಲ್ಲಿ ಕರ್ನಾಟಕದಲ್ಲಿ ಸಿಗುವ ಸರ್ಕಾರಿ ರಜೆಗಳು ಎಷ್ಟು? ಎಂಬುದರ ಮೇಲೆ ಜನರು ತಮ್ಮ ಪ್ರವಾಸದ ಯೋಜನೆ ರೂಪಿಸುತ್ತಾರೆ. ಕರ್ನಾಟಕ ಸರ್ಕಾರ 2025ನೇ ಸಾಲಿನ ಸರ್ಕಾರಿ ರಜೆ ಪಟ್ಟಿಯನ್ನು ಜನರ ಮಾಹಿತಿಗಾಗಿ ಬಿಡುಗಡೆ ಮಾಡಿದೆ.
ಕರ್ನಾಟಕ ಸರ್ಕಾರ ಗುರುವಾರ ಸರ್ಕಾರವು 2025ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಿದೆ. ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳಂದು ಇರುವ ಸರ್ಕಾರಿ ರಜೆಯನ್ನು ಈ ಪಟ್ಟಿಯಲ್ಲಿ ಸೇರಿಸಿಲ್ಲ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ರಜೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಗಣರಾಜ್ಯೋತ್ಸವ (26/01/2025), ಯುಗಾದಿ ಹಬ್ಬ (30/03/2025), ಮೂಹರಂ ಕಡೆ ದಿನ (06/07/2025) ಮತ್ತು ಮಹಾಲಯ ಅಮವಾಸ್ಯೆ (21/09/2025) ಹಾಗೂ ಎರಡನೇ ಶನಿವಾರದಂದು ಬರುವ ಕನಕದಾಸ ಜಯಂತಿ (08/11/2025) ನಮೂದಿಸಿರುವುದಿಲ್ಲ.
ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಛೇರಿಗಳು ಮುಚ್ಚಲ್ಪಡುತ್ತವೆ. ಕಛೇರಿಯ ಜರೂರು ಕೆಲಸವನ್ನು ವಿಲೇವಾರಿ ಮಾಡುವ ಬಗ್ಗೆ ಇಲಾಖಾ ಮುಖ್ಯಸ್ಥರುಗಳು ಸೂಕ್ತ ವ್ಯವಸ್ಥೆ ಮಾಡತಕ್ಕದ್ದು ಎಂದು ಆದೇಶ ಹೇಳಿದೆ. ರಜೆ ದಿನಗಳನ್ನು ಸಾರ್ವತ್ರಿಕ ರಜಾ ದಿನಗಳು, ಪರಿಮಿತ ರಜಾ ದಿನಗಳು ಎಂದು ಎರಡು ಪಟ್ಟಿಯನ್ನು ಮಾಡಲಾಗಿದೆ.
ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗದಿತ ದಿನಾಂಕದಂದು ಬೀಳದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು ಎಂದು ಸ್ಪಷ್ಟಪಡಿಸಲಾಗಿದೆ.
ದಿನಾಂಕ 03/09/2025 (ಬುಧವಾರ) ಕೈಲ್ ಮೂಹರ್ತ, ದಿನಾಂಕ 18/10/2025 (ಶನಿವಾರ) ತುಲ ಸಂಕ್ರಮಣ ಹಾಗೂ ದಿನಾಂಕ 05/12/2025 (ಶುಕ್ರವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.
2025ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳು
* 14.01.2025, ಮಂಗಳವಾರ. ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
* 26.02.2025, ಬುಧವಾರ. ಮಹಾಶಿವರಾತ್ರಿ
* 31.03.2025, ಸೋಮವಾರ. ಖುತುಬ್-ಎ-ರಂಜಾನ್
* 10.04.2025, ಗುರುವಾರ. ಮಹಾವೀರ ಜಯಂತಿ
* 14.04.2025, ಸೋಮವಾರ. ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ
* 18.04.2025, ಶುಕ್ರವಾರ. ಗುಡ್ ಫ್ರೈಡೆ
* 30.04.2025, ಬುಧವಾರ. ಬಸವ ಜಯಂತಿ, ಅಕ್ಷಯ ತೃತೀಯ
* 1.05.2025, ಗುರುವಾರ. ಕಾರ್ಮಿಕ ದಿನಾಚರಣೆ
* 7.06.2025, ಶನಿವಾರ. ಬಕ್ರೀದ್
* 15.08.2025, ಶುಕ್ರವಾರ. ಸ್ವಾತಂತ್ರ್ಯ ದಿನಾಚರಣೆ
* 27.08.2025, ಬುಧವಾರ. ವರಸಿದ್ಧಿ ವಿನಾಯಕ ವ್ರತ
* 5.09.2025, ಶುಕ್ರವಾರ. ಈದ್-ಮಿಲಾದ್
* 1.10.2025, ಬುಧವಾರ. ಮಹಾನವಮಿ, ಆಯುಧಪೂಜೆ, ವಿಜಯದಶಮಿ
* 2.10.2025, ಗುರುವಾರ. ಗಾಂಧಿ ಜಯಂತಿ
* 7.10.2025, ಮಂಗಳವಾರ. ವಾಲ್ಮೀಕಿ ಜಯಂತಿ
* 20.10.2025, ಸೋಮವಾರ. ನರಕ ಚತುದರ್ಶಿ
* 22.10.2025, ಬುಧವಾರ. ಬಲಿಪಾಡ್ಯಮಿ, ದೀಪಾವಳಿ
* 01.11.2025, ಶನಿವಾರ. ಕನ್ನಡ ರಾಜೋತ್ಸವ
* 25.12.2025, ಗುರುವಾರ. ಕ್ರಿಸ್‌ಮಸ್
* ಶ್ರೀ ರಾಮನವಮಿ (06.04.2025) ಮತ್ತು ಬ್ರಹ್ಮಶ್ರೀ ನಾರಾಯಣಗುರು ಜಯಂತಿ (07.09.2025) ಭಾನುವಾರದಂದು ಹಾಗೂ ಋಗ್ ಉಪಕರ್ಮ ಮತ್ತು ಯಜುರ್ ಉಪಕರ್ಮ (09.08.2025) ಎರಡನೇ ಶನಿವಾರದಂದು ಬರುವುದರಿಂದ ಈ ಪರಿಮಿತ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.
* ಸೌರಮಾನ ಯುಗಾದಿ (14.04.2025) ಸೋಮವಾರ, ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಹಾಗೂ ತಿರುಓಣಂ (05.09.2025) ಶುಕ್ರವಾರ ಈದ್-ಮಿಲಾದ್ ನಿಮಿತ್ತ ಘೋಷಿಸಿರುವ ಸಾರ್ವತ್ರಿಕ ರಜಾ ದಿನಗಳಂದು ಬರುವುದರಿಂದ ಈ ಪರಿಮಿತ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.












Click it and Unblock the Notifications