ಕಾರ್ಗಿಲ್ ವಿಜಯ್ ದಿವಸ್ 2022: ಈ ದಿನದ ಇತಿಹಾಸ, ಮಹತ್ವ ಮತ್ತು ವಿಶೇಷತೆ ತಿಳಿಯಿರಿ
ಭಾರತೀಯರ ಪಾಲಿಗೆ ಜುಲೈ 26 ಎನ್ನುವುದು ಕೇವಲ ಒಂದು ದಿನವಲ್ಲ. ದೇಶದ ಗಡಿ ನುಗ್ಗಲು ಯತ್ನಿಸಿದ ಪರಕೀಯರಿಗೆ ಪಾಠ ಕಲಿಸಿದ ದಿನ. ರಾಷ್ಟ್ರಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರ ಯೋಧರನ್ನು ಗೌರವಿಸುವ ವಿಶೇಷ ಹಬ್ಬವಿದೆ. ಇಂಥದೊಂದು ಹಬ್ಬಕ್ಕೆ ನಾವು ಇಟ್ಟುಕೊಂಡಿರುವ ಹೆಸರೇ ಕಾರ್ಗಿಲ್ ವಿಜಯ್ ದಿವಸ್.
ಅದು 1999ರ ಜುಲೈ 26ರ ದಿನ. ಪಾಕಿಸ್ತಾನದ ವಿರುದ್ಧ ಭಾರತವು ದಿಗ್ವಿಜಯದ ಧ್ವಜವನ್ನು ಎತ್ತಿ ಹಿಡಿದ ದಿನ. ಹೀಗಾಗಿ ಈ ದಿನವನ್ನು ಪ್ರತಿವರ್ಷ ಕಾರ್ಗಿಲ್ ವಿಜಯ್ ದಿವಸ್ ಎಂದು ಆಚರಿಸಲಾಗುತ್ತದೆ. ಕಾರ್ಗಿಲ್‌ನಲ್ಲಿ 60 ದಿನಗಳ ಕಾಲ ನಡೆದ ಸಂಘರ್ಷದಲ್ಲಿ ಪಾಕಿಸ್ತಾನದ ಸೇನೆಯನ್ನು ಭಾರತೀಯ ಯೋಧರು ಹಿಮ್ಮೆಟ್ಟಿಸಿದರು.
ಆಪರೇಷನ್ ವಿಜಯ್ ಭಾಗವಾಗಿ ಟೈಗರ್ ಹಿಲ್ ಮತ್ತು ಇತರೆ ಪೋಸ್ಟ್‌ಗಳನ್ನು ವಶಪಡಿಸಿಕೊಳ್ಳಲಾಯಿತು. ಈ ಯುದ್ಧದಲ್ಲಿ ಹುತಾತ್ಮರಾದ ನೂರಾರು ಭಾರತೀಯ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದಲೇ ಈ ದಿನವನ್ನು ಆಚರಿಸಲಾಗುತ್ತದೆ. ಕಾರ್ಗಿಲ್ ವಿಜಯ್ ದಿವಸ್ ಕುರಿತಾದ ಇತಿಹಾಸ, ಮಹತ್ವ ಮತ್ತು ವಿಶೇಷತೆಯನ್ನು ತಿಳಿದುಕೊಳ್ಳೋಣ.

ಕಾರ್ಗಿಲ್ ವಿಜಯ್ ದಿವಸ್ ಇತಿಹಾಸ ತಿಳಿಯಿರಿ
1971ರ ಇಂಡೋ-ಪಾಕ್ ಯುದ್ಧದ ನಂತರದಲ್ಲಿ ಹಲವಾರು ಸಶಸ್ತ್ರ ಒಪ್ಪಂದಗಳನ್ನು ಮಾಡಿಕೊಳ್ಳಲಾಯಿತು. ಇದರ ಮಧ್ಯೆ 1998ರಲ್ಲಿ ಉಭಯ ರಾಷ್ಟ್ರಗಳು ಪರಮಾಣು ಪರೀಕ್ಷೆ ನಡೆಸಿದವು. ಕಾಶ್ಮೀರ ಸಮಸ್ಯೆಯನ್ನು ಶಾಂತಿಯುತವಾಗಿ ಇತ್ಯರ್ಥಗೊಳಿಸಿಕೊಳ್ಳುವ ಸಂಬಂಧ 1999ರಲ್ಲಿ ಲಾಹೋರ್ ಒಪ್ಪಂದಕ್ಕೆ ಎರಡೂ ರಾಷ್ಟ್ರಗಳು ಅಂಕಿತ ಹಾಕಿದವು. ಇದರ ಮಧ್ಯೆ 'ಆಪರೇಷನ್ ಬದ್ರ' ಹೆಸರಿನಲ್ಲಿ ಪಾಕಿಸ್ತಾನವು ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಭಾರತದ ಭೂಪ್ರದೇಶದ ಒಳನುಸುಳುವಿಕೆಯನ್ನು ಶುರು ಮಾಡಿತು. ಇದು ಕಾಶ್ಮೀರ ಮತ್ತು ಲಡಾಖ್ ನಡುವಿನ ಸಂಪರ್ಕ ಕಡಿತದ ಗುರಿಯನ್ನು ಹೊಂದಿತ್ತು. ಈ ಯುದ್ಧವು ಕಾಶ್ಮೀರ ವಿವಾದ ಇತ್ಯರ್ಥಕ್ಕಾಗಿ ಭಾರತವನ್ನು ಒತ್ತಾಯಿಸಿತು.
1999ರ ಮೇ ಮತ್ತು ಜುಲೈ ತಿಂಗಳಿನಲ್ಲಿ ಕಾರ್ಗಿಲ್ ಜಿಲ್ಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯಿತು. ಈ ಯುದ್ಧದ ಹಿಂದೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ಇದ್ದರು ಎಂದು ಹೇಳಲಾಗುತ್ತದೆ. ಪ್ರಾಥಮಿಕ ಹಂತದಲ್ಲಿ ಭಾರತದ ನಿಯಂತ್ರಣದಲ್ಲಿದ್ದ ವಿವಿಧ ಆಯಕಟ್ಟಿನ ಸ್ಥಳಗಳಲ್ಲಿ ತಮ್ಮ ಸೇನೆಯನ್ನು ನಿಯೋಜಿಸುವ ಮೂಲಕ ಪಾಕಿಸ್ತಾನವು ಆ ಪ್ರದೇಶಗಳನ್ನು ವಶಕ್ಕೆ ಪಡೆದುಕೊಂಡಿತ್ತು. ಎರಡನೇ ಹಂತದಲ್ಲಿ ಯುದ್ಧತಂತ್ರದ ಮೂಲಕ ಭಾರತವು ತಕ್ಕ ತಿರುಗೇಟು ನೀಡಿತು. ಅಂತಿಮವಾಗಿ ವಾಯುಪಡೆಯ ಸಹಾಯದಿಂದ ಭಾರತೀಯ ಸೇನೆಯು ಯುದ್ಧವನ್ನು ಮುಕ್ತಾಯಗೊಳಿಸಿತು.

ಭಾರತದ ಬೆನ್ನಿಗೆ ಚೂರಿ ಹಾಕಿದ ಪಾಕಿಸ್ತಾನದ ಹುನ್ನಾರ
ಕಳೆದ 1999ರ ಫೆಬ್ರವರಿಯಲ್ಲಿ ಭಾರತದ ಅಂದಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ, ಭಾರತ-ಪಾಕಿಸ್ತಾನ 'ಭಾಯಿ ಭಾಯಿ' ಎಂಬ ಕಲ್ಪನೆಯಲ್ಲಿ ಭಾರತದಿಂದ ಲಾಹೋರಿಗೆ ಐತಿಹಾಸಿಕ ಬಸ್ ಸೇವೆ ಆರಂಭಿಸಿದರು. 1999ರ ಫೆಬ್ರವರಿ 21ರಂದು ಬಸ್ ಪ್ರಾರಂಭಿಸಿ, ಲಾಹೋರ್ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಸ್ನೇಹದ ಹಸ್ತ ಚಾಚುವ ಹೃದಯ ವೈಶಾಲ್ಯತೆ ತೋರಿದ್ದರು.
ಒಂದು ಕಡೆ ಸ್ನೇಹ ಹಸ್ತಕ್ಕೆ ಕೈಕುಲುಕಿದ್ದ ಪಾಕಿಸ್ತಾನ, ಇನ್ನೊಂದು ಮಗ್ಗಲಿನಲ್ಲಿ ಭಾರತದ ಬೆನ್ನಿಗೆ ಚೂರಿ ಹಾಕುವ ಹುನ್ನಾರ ನಡೆಸಿತ್ತು. ಶ್ರೀನಗರದಿಂದ ಲೇಹ್ ಸಂಪರ್ಕಿಸುವ ಏಕೈಕ ರಸ್ತೆ ಮಾರ್ಗ ಅಂದರೆ ರಾಷ್ಟ್ರೀಯ ಹೆದ್ದಾರಿ 1ಡಿ. ಈ ಹೆದ್ದಾರಿ ಜೋಜಿ ಲಾ ಪಾಸ್ ಮತ್ತು ಕಾರ್ಗಿಲ್ ಎಂಬ ಪ್ರದೇಶಗಳ ಮೂಲಕ ಹಾದು ಹೋಗುತ್ತದೆ. ಈ ಕಾರ್ಗಿಲ್ ಪ್ರದೇಶವನ್ನು ವಶಪಡಿಸಿಕೊಳ್ಳುವ ಮೂಲಕ ಕಾಶ್ಮೀರದಿಂದ ಲಡಾಕ್ ಭಾಗವನ್ನು ಬೇರ್ಪಡಿಸಿ ಸಿಯಾಚಿನ್ ಪ್ರದೇಶವನ್ನು ಕಬಳಿಸುವ ಹುನ್ನಾರ ರಚಿಸಿತು.

ಕಾರ್ಗಿಲ್ ವಿಜಯ್ ದಿವಸ್ 2022ರ ಮಹತ್ವ
1990ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಟ ಹುತಾತ್ಮರಾದ ಭಾರತೀಯ ಯೋಧರನ್ನು ಗೌರವಿಸುವ ಉದ್ದೇಶದಿಂದ ಕಾರ್ಗಿಲ್ ವಿಜಯ್ ದಿವಸ್ ಅನ್ನು ಆಚರಿಸಲಾಗುತ್ತದೆ. ಭಾರತದಾದ್ಯಂತ ಈ ದಿನವನ್ನು ವಿಶೇಷವಾಗಿ ಸ್ಮರಿಸಿಕೊಳ್ಳಲಾಗುತ್ತದೆ. ನವದೆಹಲಿಯಲ್ಲಿ ಪ್ರಧಾನಮಂತ್ರಿಗಳು ಪ್ರತಿ ವರ್ಷ ಈ ದಿನದಂದು ಇಂಡಿಯಾ ಗೇಟ್ ಬಳಿ ಇರುವ ಅಮರ್ ಜವಾನ್ ಜ್ಯೋತಿಯಲ್ಲಿ ಸೈನಿಕರಿಗೆ ಗೌರವ ಸಲ್ಲಿಸುತ್ತಾರೆ.

23ನೇ ಕಾರ್ಗಿಲ್ ವಿಜಯ್ ದಿವಸ್
ಭಾರತದಲ್ಲಿ ಈ ವರ್ಷ ಕಾರ್ಗಿಲ್ ವಿಜಯ್ ದಿವಸ್‌ನ 23ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಭಾರತೀಯ ಸೇನೆಯು ದೆಹಲಿಯಿಂದ ಕಾರ್ಗಿಲ್ ವಿಜಯ್ ದಿವಸ್ ಮೋಟಾರ್ ಬೈಕ್ ಯಾತ್ರೆಗೆ ಚಾಲನೆ ನೀಡುತ್ತದೆ.
ಮಂಗಳವಾರದಂದು ಯುದ್ಧ ಸ್ಮಾರಕದಲ್ಲಿ ಧ್ವಜಾರೋಹಣ ಸಮಾರಂಭಕ್ಕಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ವೇಳೆ ಹುತಾತ್ಮ ಯೋಧರ ಕುಟುಂಬಗಳನ್ನು ಆಹ್ವಾನಿಸಲಾಗಿದೆ. ಡ್ರಾಸ್‌ನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ನೃತ್ಯ ಪ್ರದರ್ಶನ, ದೇಶಭಕ್ತಿ ಗೀತೆ ಮತ್ತು ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ












Click it and Unblock the Notifications