Kalonji Seeds Health Benefits: ಕಪ್ಪು ಜೀರಿಗೆ ಆರೋಗ್ಯಕ್ಕೆ ಇಷ್ಟೊಂದು ಪ್ರಯೋಜನಕಾರಿಯೇ!? ನೀವೇ ತಿಳಿಯಿರಿ.
ಕಪ್ಪು ಜೀರಿಗೆಯನ್ನು ಕಾಳಾಜೀರಾ ಕಲೋಂಜಿ, ಕರಿ ಜೀರಿಗೆ ಅಂತಲೂ ಕರೆಯುತ್ತಾರೆ. ಜೀರಿಗೆ ಮಾತ್ರವಲ್ಲದೇ ಕಪ್ಪು ಜೀರಿಗೆಯೂ ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ ಜೊತೆಗೆ ಉತ್ತಮ ಪರಿಮಳ ನೀಡುವ ಗುಣವನ್ನ ಕಪ್ಪು ಜೀರಿಗೆ ಹೊಂದಿದೆ. ಅಡುಗೆ ರುಚಿಯನ್ನು ಹೆಚ್ಚಿಸುವ ಗುಣವನ್ನು ಮಾತ್ರವಲ್ಲ, ಅತ್ಯುತ್ತಮ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ.
ಇಂದಿನ ದಿನನಿತ್ಯದ ಆಹಾರ ಪದ್ದತಿಯಿಂದಾಗಿ ಜನರು ತಮ್ಮ ಆರೋಗ್ಯದ ಕಾಳಜಿ ಅನಿವಾರ್ಯವಾಗಿರುತ್ತದೆ. ಹೀಗಾಗಿ ಆರೋಗ್ಯದ ದೃಷ್ಟಿಯಿಂದ ಕಪ್ಪು ಜೀರಿಗೆ ಬಹಳ ಒಳ್ಳೆಯದು. ಇದರ ಆಂಟಿ ಆಕ್ಸಿಡೆಂಟು ಗುಣ ದೇಹದೊಳಗೆ ಹಾಗೂ ಚರ್ಮದ ಮೇಲೆ ಉಂಟಾಗಿರುವ ಉರಿಯೂತವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಕ್ಯಾಲ್ಸಿಯಂ, ಕಬ್ಬಿಣ, ಸತು, ಮೆಗ್ನೀಸಿಯಮ್ ಮತ್ತು ಪೊಟ್ಯಾಶಿಮ್ನಂತಹ ಪೋಷಕಾಂಶಗಳಿಂದ ಕೂಡಿರುವ ಕಪ್ಪು ಜೀರಿಗೆ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದನ್ನ ಇಲ್ಲಿ ತಿಳಿಸಲಾಗಿದೆ.

ಕಪ್ಪು ಜೀರಿಗೆ ಪ್ರಯೋಜನಗಳು ಇಲ್ಲಿವೆ!
ಅಸ್ತಮಾ, ಅಲರ್ಜಿ ಗೆ ಪರಿಹಾರ!
ಹೌದು, ಅಸ್ತಮಾ ಹಾಗೂ ಇತರ ಶ್ವಾಸನಾಳಗಳಿಗೆ ಸಂಬಂಧಿಸಿದ ಅಲರ್ಜಿ ಸಮಸ್ಯೆಗಳಿಗೆ ಕಪ್ಪು ಜೀರಿಗೆ ತುಂಬಾ ಉಪಯುಕ್ತವಾಗಿದೆ. ಕಪ್ಪು ಜೀರಿಗೆ ತಿನ್ನುವುದರಿಂದ ಇತರೆ ತೊಂದರೆಗಳಿಂದ ರಕ್ಷಿಸಲು ನೆರವಾಗುತ್ತದೆ. ಅಲ್ಲದೇ ಉಸಿರಾಟದ ತೊಂದರೆನಿರಾಳಗೊಳಿಸಲೂ ನೆರವಾಗುತ್ತದೆ.
ತೂಕ ಕಡಿಮೆಗೊಳಿಸಲು ಸಹಾಯಕ
ದಪ್ಪ ಇರುವವರು ತೂಕ ಕಡಿಮೆಗೊಳಿಸುವುದು ಕಪ್ಪು ಜೀರಿಗೆಯನ್ನು ತಿಂದರೆ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಕಪ್ಪು ಜೀರಿಗೆಯ ನಿಯಮಿತ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಇದರಲ್ಲಿ ಆರೋಗ್ಯಕರ ಕೊಬ್ಬಿನ ಆಮ್ಲಗಳಿದ್ದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟಗಳು ಸಂತುಲಿತ ಪ್ರಮಾಣದಲ್ಲಿ ಕಡಿಮೆ ಮಾಡಲು ಸಹಾಯಕವಾಗಿದೆ. ಪ್ರತಿದಿನ 8 ರಿಂದ 10 ಬೀಜಗಳನ್ನು ಸೇವಿಸಿ. ಕೆಲವೇ ದಿನಗಳಲ್ಲಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಸ್ವಲ್ಪ ಕಪ್ಪು ಜೀರಿಗೆ ಪುಡಿ ಮತ್ತು ಒಂದು ಚಮಚ ಜೇನುತುಪ್ಪವನ್ನು ನಿಂಬೆ ರಸದಲ್ಲಿ ಬೆರೆಸಿ ದಿನಕ್ಕೆ ಎರಡು ಬಾರಿ ಕುಡಿದರೂ ಕೂಡಾ ತೂಕ ಕಡಿಮೆಯಾಗುತ್ತದೆ.
ಕ್ಯಾನ್ಸರ್ ಬರುವುದರಿಂದ ತಡೆಯುತ್ತದೆ
ಹೌದು, ಕಪ್ಪು ಜೀರಿಗೆಯ ಸೇವನೆಯಿಂದ ವಿಶೇಷವಾಗಿ ಸ್ತನ ಕ್ಯಾನ್ಸರ್ ನ ಜೀವಕೋಶಗಳ ಬೆಳವಣಿಗೆಯನ್ನು ನಿಗ್ರಹಿಸುವ ಮೂಲಕ ಕ್ಯಾನ್ಸರ್ ಚಿಕಿತ್ಸೆಗೆ ನೆರವಾಗುತ್ತದೆ. ಕಪ್ಪು ಜೀರಿಗೆ ಸೇವನೆಯಿಂದ ಬಾಯಿಯ ಕ್ಯಾನ್ಸರ್, ಕರುಳು ಹಾಗೂ ಗರ್ಭಕಂಠದ ಕ್ಯಾನ್ಸರ್ ಬರುವುದರಿಂದಲೂ ರಕ್ಷಿಸಲು ಸಹಾಯಕವಾಗಿದೆ. ಇನ್ನೂ ಕಪ್ಪು ಜೀರಿಗೆಯನ್ನ ಸೇವಿಸುವುದರಿಂದ ಯಕೃತ್ ನ ಆರೋಗ್ಯ ವೃದ್ಧಿಸುತ್ತದೆ.

ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯಕ
ಕಪ್ಪು ಜೀರಿಗೆಯನ್ನ ನಿಯಮಿತವಾಗಿ ಸೇವಿಸುವುದರಿಂದ ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ. ಅಧಿಕ ರಕ್ತದೊತ್ತಡವಿರುವ ವ್ಯಕ್ತಿಗಳು ನಿಯಮಿತವಾಗಿ ಕಪ್ಪು ಜೀರಿಗೆಯನ್ನು ಸೇವಿಸಿದಾಗ ಅಧಿಕ ರಕ್ತದೊತ್ತಡ ಕಡಿಮೆ ಮಾಡುತ್ತದೆ. ಇನ್ನೂ ಮಧುಮೇಹ ಬರುವುದರಿಂದ ರಕ್ಷಿಸುತ್ತದೆ. ಇನ್ನೂ ಮೂತ್ರಪಿಂಡಗಳಲ್ಲಿ ಕಲ್ಲು ಒಂದು ಸಾಮಾನ್ಯವಾಗಿ ಕಂಡುಬರುತ್ತಿರುವ ಕಾಯಿಲೆಯಾಗಿದೆ. ಇದರಿಂದ ಆರೋಗ್ಯವನ್ನ ರಕ್ಷಿಸಿಕೊಳ್ಳಲು ನಿತ್ಯದ ಆಹಾರದಲ್ಲಿ ಕಪ್ಪು ಜೀರಿಗೆಯನ್ನು ಸೇರಿಸಿಕೊಳ್ಳುವ ಮೂಲಕ ಮೂತ್ರಪಿಂಡಗಳಲ್ಲಿ ಕಲ್ಲುಗಳು ಕರಗಲು ಸಹಾಯ ಮಾಡುತ್ತೇವೆ
ಸಂಧಿವಾತ, ಮೂಳೆ, ಹಲ್ಲು ನೋವು ಕಡಿಮೆ ಮಾಡುತ್ತದೆ
ಹೌದು, ಕಪ್ಪು ಜೀರಿಗೆಯನ್ನು ನಿಯಮಿತವಾಗಿ ಸೇವಿಸುವ ಮೂಲಕ ಸಂಧಿವಾತ ಹಾಗೂ ಮೂಳೆಸಂದುಗಳ ನೋವಿನ ತೊಂದರೆ ಇರುವ ವ್ಯಕ್ತಿಗಳ ನೋವು ಕಡಿಮೆಯಾಗುತ್ತದೆ. ಅಲ್ಲದೇ ಹಲ್ಲು ನೋವಿಗೆ ಇದರ ಉರಿಯೂತ ನಿವಾರಕ ಹಾಗೂ ಬ್ಯಾಕ್ಟೀರಿಯಾ ನಿವಾರಕ ಗುಣಗಳು ಹಲ್ಲುನೋವನ್ನು ಗುಣಪಡಿಸುವ ಕ್ಷಮತೆ ಹೊಂದಿವೆ. ಹಲ್ಲು ನೋವಿದ್ದರೆ ಕಪ್ಪು ಜೀರಿಗೆ ಎಣ್ಣೆಯಿಂದ ನೋವಿರುವ ಭಾಗವನ್ನು ಬೆರಳಿನಿಂದ ನಯವಾಗಿ ಉಜ್ಜಿಕೊಳ್ಳುವ ಮೂಲಕ ಸೋಂಕನ್ನು ನಿವಾರಿಸಿ ಹಲ್ಲುನೋವನ್ನು ಹೋಗಲಾಡಿಸುತ್ತದೆ.

ಆರೋಗ್ಯಕರ ಚರ್ಮ ಮತ್ತು ಕೂದಲಿಗೆ ಉತ್ತಮ
ನಿಯಮಿತವಾಗಿ ಕಪ್ಪು ಜೀರಿಗೆಯನ್ನ ಸೇವಿಸುವುದರರಿಂದ ಕೂದಲು ಹಾಗೂ ಚರ್ಮವನ್ನು ಸೌಮ್ಯಗೊಳಿಸುತ್ತದೆ. ಕೂದಲ ಬೆಳವಣಿಗೆಯನ್ನು ಸಹಾ ಹೆಚ್ಚಿಸುತ್ತದೆ ಹಾಗೂ ಚರ್ಮದಲ್ಲಿದ್ದ ಕಲೆಗಳನ್ನು ನಿವಾರಿಸಲೂ ನೆರವಾಗುತ್ತದೆ. ಇನ್ನೂ ಕಪ್ಪು ಜೀರಿಗೆಯ ಬೀಜಗಳಲ್ಲಿರುವ ಬ್ಯಾಕ್ಟೀರಿಯಾ ಮತ್ತು ವೈರಸ್ ನಿರೋಧಕ ಗುಣಗಳು ಹಲವು ಸೋಂಕುಗಳಿಂದ ನಮ್ಮನ್ನು ರಕ್ಷಿಸುತ್ತದೆ.












Click it and Unblock the Notifications