ಟ್ರಾಯ್ ನಲ್ಲಿ ಟಿವಿ ವಾಹಿನಿ ದರ ಪಟ್ಟಿ, ಕನ್ನಡ ಚಾನೆಲ್ ಆಯ್ಕೆ ಹೇಗೆ?

ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹೊರ ತಂದಿರುವ ಹೊಸ ಕೇಬಲ್ ನೀತಿ ಫೆಬ್ರವರಿ 1 ರಿಂದ ಜಾರಿಗೆ ಬರಲಿದೆ. ಕೇಬಲ್ ಟಿವಿ ಮತ್ತು ಡಿಟಿಹೆಚ್ ದರದ ಮಾಹಿತಿಗಳನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಫೆ.1ರ ವೇಳೆಗೆ ಶೇ90ರಷ್ಟು ಗ್ರಾಹಕರು ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುತ್ತಾರೆ ಎಂಬ ನಿರೀಕ್ಷೆಯನ್ನು ಟ್ರಾಯ್ ಹೊಂದಿದೆ.

ದೂರದರ್ಶನದ ಉಚಿತ ಚಾನೆಲ್ ಗಳು ಸೇರಿದಂತೆ 100 ಚಾನೆಲ್ ಗಳ ಪ್ಯಾಕೇಜ್ ಗೆ 184ರು ಎಂದು ಈ ಹಿಂದೆ ನಿಗದಿ ಪಡಿಸಲಾಗಿತ್ತು. ಆದರೆ, ಈಗ ಈ ಮೊತ್ತ 154ರು ಗಳಾಗಲಿವೆ. ಚಂದಾದಾರರಿಕೆ ಮೊತ್ತ 130ರು ಪ್ಲಸ್ ತೆರಿಗೆ ಮೊತ್ತ ಸೇರಲಿದೆ.

ಫ್ರೀ ಟು ಏರ್ ಚಾನೆಲ್ ಗಳನ್ನು ನೀಡಲು ಇದಕ್ಕಿಂತ ಹೆಚ್ಚಿನ ಮೊತ್ತ ಪಡೆಯಬಾರದು ಎಂದು ಟ್ರಾಯ್ ಸೂಚಿಸಿದೆ. 100 ರು ಚಾನೆಲ್ ಗಳ ನಂತರ ಬೇಕಾದ ಚಾನೆಲ್ ಪಡೆಯಲು ಪ್ರತಿ 25 ಚಾನೆಲ್ ಗಳಿಗೆ 20 ರು ನಂತೆ ದರ ನಿಗದಿಯಾಗಿದೆ. ಎಚ್ ಡಿ ಚಾನೆಲ್ ಗಳು ಬೇಕಾದರೆ ದರ ಇನ್ನಷ್ಟು ಹೆಚ್ಚಾಗಲಿದೆ.

ನೂರಾರು ಚಾನೆಲ್ ಗಳು ಉಚಿತ

ನೂರಾರು ಚಾನೆಲ್ ಗಳು ಉಚಿತ

ನೂರಾರು ಚಾನೆಲ್ ಉಚಿತವಿದೆ: ದೂರದರ್ಶನದ ಉಚಿತ 26 ಚಾನೆಲ್ ಸೇರಿದಂತೆ 100 ಚಾನೆಲ್(74 Free to Air) ಗಳನ್ನು ವೀಕ್ಷಿಸಬಹುದು. ಇದಕ್ಕಾಗಿ 130 ರೂ. ಶುಲ್ಕ ನಿಗದಿಪಡಿಸಲಾಗಿದ್ದು, ಇದರೊಂದಿಗೆ ಶೇ. 18 ರಷ್ಟು ಜಿ.ಎಸ್.ಟಿ. ಪಾವತಿಸಿ 154 ರೂ.ಗೆ 100 ಚಾನಲ್ ಗಳನ್ನು ಗ್ರಾಹಕರು ವೀಕ್ಷಿಸಬಹುದಾಗಿದೆ. HD ಚಾನೆಲ್ ಹೊರತು ಪಡಿಸಿ ಎಸ್ ಡಿ ಚಾನೆಲ್ ಗಳ 100ರ ಪ್ಯಾಕ್ ಗೆ 184ರು ಗಿಂತ ಅಧಿಕ ನೀಡಬೇಡಿ ಎಂದು ಟ್ರಾಯ್ ಸೂಚಿಸಿದೆ. ಪ್ರತಿ 25 ಉಚಿತ ಚಾನೆಲ್ ಗಳಿಗೆ ಜಿ.ಎಸ್.ಟಿ. ಸೇರಿ 25 ರೂ.ಪಾವತಿಸಬೇಕಿದೆ. ಪ್ರತಿಯೊಂದು ಚಾನೆಲ್ ಗೂ 1 ಪೈಸೆಯಿಂದ 19 ರೂ.ರವರೆಗೆ ದರ ನಿಗದಿಯಾಗಿದೆ ಎಂದು ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಸಂಸ್ಥೆ(ಟ್ರಾಯ್) ತಿಳಿಸಿದೆ.

ಹೊಸ ವ್ಯವಸ್ಥೆ ಬಗ್ಗೆ ಗೊಂದಲ

ಹೊಸ ವ್ಯವಸ್ಥೆ ಬಗ್ಗೆ ಗೊಂದಲ

ಕೇಬಲ್ ಆಪರೇಟರ್‌ಗಳಿಗೂ ಹೊಸ ವ್ಯವಸ್ಥೆ ಬಗ್ಗೆ ಇನ್ನು ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ. ಆದರೆ, ಯಾವುದೇ ಕಾರಣಕ್ಕೂ ಸೆಟ್‌ ಆಪ್ ಬಾಕ್ಸ್ ಬದಲಾವಣೆ ಮಾಡುವುದು ಬೇಡ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಒಂದೆರಡು ತಿಂಗಳು ಗ್ರಾಹಕರಿಗೆ ಗೊಂದಲ ಉಂಟಾಗಬಹುದು ಬಳಿಕ ಎಲ್ಲವೂ ಸರಿಯಾಗಲಿದೆ ಎನ್ನುವುದು ಕೇಬಲ್ ಆಪರೇಟರ್‌ಗಳ ಮಾತು. ಗ್ರಾಮೀಣ ಭಾಗದ ಗ್ರಾಹಕರಿಗೂ ಇದರಿಂದ ಹೆಚ್ಚಿನ ಸಂಕಷ್ಟ ಉಂಟಾಗಲಿದೆ. ಪ್ರೀಪೇಯ್ಡ್ ಪ್ಯಾಕೇಜ್ ನಲ್ಲಿ ಮುಂಚಿತವಾಗಿ ಹಣ ಕಟ್ಟಿ ಎಂದು ಅವರಿಗೆ ವಿವರಿಸಿ ಹೇಳುವುದು ಕಷ್ಟ ಎಂದು ಕೇಬಲ್ ಆಪರೇಟರ್ಸ್ ಗೊಣಗುತ್ತಿದ್ದಾರೆ

ವೆಬ್ ಸೈಟ್ ನಲ್ಲಿ ಚಾನೆಲ್ ಆಯ್ಕೆ ಹೇಗೆ

ವೆಬ್ ಸೈಟ್ ನಲ್ಲಿ ಚಾನೆಲ್ ಆಯ್ಕೆ ಹೇಗೆ

ಆಯ್ಕೆ ಹೇಗೆ? : ಒಂದು ಚಾನೆಲ್ ಅಥವಾ ಚಾನೆಲ್ ಗಳ ಸಮೂಹಗಳಿರುವ ಪ್ಯಾಕೆಜ್ ಹಾಕಿಸಿಕೊಳ್ಳಬಹುದು. ಜೀ, ಸೋನಿ, ಸ್ಟಾರ್, ಕಲರ್ಸ್ ವಾಹಿನಿ ಹೀಗೆ ಪ್ಯಾಕೆಜ್ ಗಳು ಸಿದ್ಧವಾಗಿವೆ. ಕೇಬಲ್/ ಡಿಟಿಎಚ್ ಅಪರೇಟರ್ ಸಂಪರ್ಕಿಸಿ, ಬೇಕಾದ ಪ್ಯಾಕೇಜ್ ಪಡೆಯಿರಿ

ಟ್ರಾಯ್ ಚಾನೆಲ್ ಸೆಲೆಕ್ಟರ್ ಆಪ್ ಹಾಗೂ ವೆಬ್ ಸೈಟಿಗೆ ಭೇಟಿ ಕೊಡಿ. ಚಾನೆಲ್ ಸೆಲೆಕ್ಟರ್ ಅಪ್ಲಿಕೇಷನ್ ಬಳಸಿ ಗ್ರಾಹಕರು ತಮ್ಮ ಇಚ್ಛೆಯ ಕೇಬಲ್ ಟಿವಿ ಅಥವಾ ಡಿಟಿಎಚ್ ಅಡಿಯಲ್ಲಿನ 100 ಅಥವಾ ಅದಕ್ಕಿಂತ ಹೆಚ್ಚು ಚಾನೆಲ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ನೀವು ಆಯ್ಕೆ ಮಾಡಿದ ಒಟ್ಟು ಚಾನೆಲ್ ಹಾಗೂ ಒಟ್ಟು ಮೊತ್ತವನ್ನು ವೆಬ್ ಸೈಟ್ ನ ಮೇಲ್ಭಾಗದಲ್ಲಿ ನೋಡಬಹುದು. ಕೇಬಲ್ ಟಿವಿ ಬಿಲ್ ಮತ್ತು ನಿಯಮಗಳನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗಲಿದೆ. ನಿಮ್ಮ ಆಯ್ಕೆಯ ಚಾನೆಲ್ ಪಡೆಯಲು ಟ್ರಾಯ್ ವೆಬ್ ಸೈಟ್ ಗೆ ಭೇಟಿ ಕೊಡಿ

ದೂರು ನೀಡಲು ಟ್ರಾಯ್ ಸಹಾಯವಾಣಿ ಬಳಸಿ

ದೂರು ನೀಡಲು ಟ್ರಾಯ್ ಸಹಾಯವಾಣಿ ಬಳಸಿ

ಏರ್ ಟೆಲ್, ಡಿಶ್ ಟಿವಿ, ಹಾಥ್ವೇ, ಸಿಟಿ ಕೇಬಲ್, ಸ್ಥಳೀಯ ಕೇಬಲ್ ಆಪರೇಟರ್ ಗಳು ತಮ್ಮ ದರ ಪಟ್ಟಿಯನ್ನು ಈಗಾಗಲೇ ಚಂದಾದರಿಗೆ ಪ್ರದರ್ಶಿಸತೊಡಗಿವೆ. ಪ್ರಸಾರಕಾರರು, ಡಿಟಿಎಚ್ ಆಪರೇಟರ್ ಗಳು ಮತ್ತು Multi System Operators(ಎಂಎಸ್ಒ)ಗಳ ಜತೆ ಟ್ರಾಯ್ ಅಧಿಕಾರಿಗಳು ಮಹತ್ವದ ಸಭೆ ನಡೆಸಿದ ಬಳಿಕ ದರಗಳನ್ನು ನಿಗದಿ ಮಾಡಲಾಗಿದೆ. ದರ ಪಟ್ಟಿ ಬಗ್ಗೆ ಯಾವುದಾದರೂ ಡೌಟ್​ಗಳಿದ್ದರೆ 011-23237922 (ಎ.ಕೆ. ಭಾರಧ್ವಾಜ್​) ಮತ್ತು 011-23220209 (ಅರವಿಂದ್​ ಕುಮಾರ್​) ಇಲ್ಲವೇ ಇ- ಮೇಲ್​ [email protected] ಅಥವಾ [email protected]. ಗೆ ಸಂಪರ್ಕಿಸಬಹುದು

ಕನ್ನಡ ಪೇಯ್ಡ್ ಚಾನೆಲ್ ಗಳ ದರ

ಕನ್ನಡ ಪೇಯ್ಡ್ ಚಾನೆಲ್ ಗಳ ದರ

ಹೊಸ ಕೇಬಲ್ ಮತ್ತು ಡಿಟಿಹೆಚ್ ನಿಯಮಗಳ ಪ್ರಕಾರ, ಕನ್ನಡದ ಪೇಯ್ಡ್ ಚಾನೆಲ್ ಗಳ ದರಗಳನ್ನು ಟ್ರಾಯ್ ವೆಬ್ ಸೈಟ್ ನಲ್ಲಿ ನೀಡಲಾಗಿದೆ.
* ನ್ಯೂಸ್ 18 ಕನ್ನಡ 25 ಪೈಸೆ
* ಸ್ಟಾರ್ ಸ್ಪೋರ್ಟ್ಸ್ ಕನ್ನಡ 19 ರೂ
* ಚಿಂಟು ಟಿವಿ ಕನ್ನಡ 6 ರೂ
* ಉದಯ ಕಾಮಿಡಿ 6 ರೂ
* ಉದಯ ಮೂವೀಸ್ 16 ರೂ
* ಉದಯ ಮ್ಯೂಸಿಕ್ 6 ರೂ
* ಉದಯ ಟಿವಿ 17 ರೂ
* ಕಲರ್ಸ್ ಕನ್ನಡ 19 ರೂ
* ಸ್ಟಾರ್ ಸುವರ್ಣ 19 ರೂ
* ಜೀ ಕನ್ನಡ 19 ರೂ
* ಸುವರ್ಣ ಪ್ಲಸ್ ಚಾನಲ್ ಗೆ 5 ರೂ
****
* ಡಿಸ್ಕವರಿ ಚಾನೆಲ್ ಗೆ 4 ರೂ
* ಡಿಸ್ಕವರಿ ಕಿಡ್ಸ್ ಚಾನೆಲ್ ಗೆ 3 ರೂ
* ಅನಿಮಲ್ ಪ್ಲಾನೆಟ್ ಗೆ 24 ರೂ
* ಸೋನಿ ಇ.ಎಸ್.ಪಿ.ಎನ್. HD 7 ರೂ
* ಸೋನಿ ಇ.ಎಸ್.ಪಿ.ಎನ್. ಗೆ 5 ರೂ
* ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಗೆ 4 ರೂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+