ಹರಿಯಾಣ ಚುನಾವಣೆ: ಸಮೀಕ್ಷೆ ಹೇಳುತ್ತಿದೆ ಗೆಲುವು ಯಾರಿಗೆಂದು
ಬೆಂಗಳೂರು, ಅಕ್ಟೋಬರ್ 21: ಹರಿಯಾಣಾ ವಿಧಾನಸಭೆ ಚುನಾವಣೆ ಈಗಷ್ಟೆ ಮುಗಿದಿದ್ದು ಚುನಾವಣೋತ್ತರ ಸಮೀಕ್ಷೆಗಳು ಹೊರಬೀಳುತ್ತಿವೆ.
ಮಹಾರಾಷ್ಟ್ರ ಮತ್ತು ಹರ್ಯಾಣಾ ಚುನಾವಣೆ ಸಂಬಂಧ ಚುನಾವಣೋತ್ತರ ಸಮೀಕ್ಷೆಯನ್ನು ನ್ಯೂಸ್ ಎಕ್ಸ್ ಮತ್ತು ಪೋಲ್ ಸ್ಟಾರ್ ಇಂಡಿಯಾ ಮಾಡಿದ್ದು, ಸಮೀಕ್ಷೆ ಪ್ರಕಾರ ಹರಿಯಾಣದಲ್ಲಿ ಬಿಜೆಪಿ ಜಯಭೇರಿ ಭಾರಿಸಲಿದೆ.
ಹರಿಯಾಣಾದಲ್ಲಿ 90 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಆಡಳಿತಾರೂಢ ಬಿಜೆಪಿ ಭಾರಿ ಅಂತರದಿಂದ ಜಯಗಳಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆ ಹೇಳುತ್ತಿದೆ. ಸಮೀಕ್ಷೆ ವರದಿ ಪ್ರಕಾರ ಕಳೆದ ಬಾರಿಗಿಂತಲೂ ದೊಡ್ಡ ಜಯವನ್ನು ಬಿಜೆಪಿ ಗಳಿಸಲಿದೆ.

90 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಸಮೀಕ್ಷೆ ಪ್ರಕಾರ ಹರಿಯಾಣಾದಲ್ಲಿ ಬಿಜೆಪಿಯು 77 ವಿಧಾನಸಭೆ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ. 11 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಇತರೆ ಪಕ್ಷಗಳು ಅಥವಾ ಪಕ್ಷೇತರರು 2 ಸ್ಥಾನದಲ್ಲಿ ಗೆಲುವು ಸಾಧಿಸಲಿದೆ.
ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 74 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು, ಕಾಂಗ್ರೆಸ್ 15 , ಐಎನ್‌ಎಲ್‌ಡಿ 19 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು.












Click it and Unblock the Notifications