Year Ender 2022: ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆಗಿರುವುದೇನು?

ಕೈಯಲ್ಲಿ ಮೊಬೈಲ್ ಇದೆ, ಬೇಕಾದ ಮಾಹಿತಿ ಗೂಗಲ್ ಮಾಡಿದರೆ ಅಂಗೈ ತುದಿಯಲ್ಲೇ ಸಿಗುತ್ತದೆ. 2022ನೇ ವರ್ಷ ಮುಗಿಯುತ್ತಾ ಬಂತು. ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆಗಿರುವುದು ಏನು? ಎಂಬ ರಿಪೋರ್ಟ್‌ ಅನ್ನು ಗೂಗಲ್ ಬಿಡುಗಡೆ ಮಾಡಿದೆ.

ಮನರಂಜನೆ, ಕ್ರೀಡೆ, ರಾಜಕೀಯ ಸೇರಿದಂತೆ ವಿವಿಧ ವಲಯಗಳಲ್ಲಿ ಅತಿ ಹೆಚ್ಚು ಸರ್ಚ್‌ ಆಗಿರುವ ವಿಷಯಗಳನ್ನು ಬಿಡುಗಡೆ ಮಾಡಲಾಗಿದೆ. 2021ಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಬೇರೆ-ಬೇರೆ ವಿಚಾರಗಳನ್ನು ಅತಿ ಹೆಚ್ಚು ಹುಡುಕಲಾಗಿದೆ.

ಭಾರತದಲ್ಲಿ 2022ರ ಟಾಪ್ ಸರ್ಚ್‌ನಲ್ಲಿರುವುದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್). ಕ್ರೀಡೆ ಬಿಟ್ಟರೆ ಕೋವಿನ್ ಪೋರ್ಟ್‌ಲ್ ಅನ್ನು ಅತಿ ಹೆಚ್ಚು ಹುಡುಕಲಾಗಿದೆ. ಕೋವಿಡ್ ವಿರುದ್ಧದ ಲಸಿಕೆ ಪಡೆಯಲು ಪೋರ್ಟಲ್ ಅನ್ನು ಜನರು ಹುಡುಕಾಡಿದ್ದಾರೆ.

Googles Year in Search 2022: Here is what India searched online in this year

ನವೆಂಬರ್ 20ರಂದು FIFA World Cup ಆರಂಭವಾಗಿದೆ. ಆದರೆ ಈ ಬಾರಿ ಭಾರತದಲ್ಲಿ ಗೂಗಲ್‌ನಲ್ಲಿ ಹುಡುಕಾಡಿದ ಮೂರನೇ ಅತಿ ಹೆಚ್ಚಿನ ವಿಷಯ ಇದೇ ಆಗಿದೆ. ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಡಿದ 4 ಮತ್ತು 5 ವಿಷಯವೂ ಕ್ರೀಡೆಗೆ ಸಂಬಂಧಿಸಿದ್ದು, Asia Cup ಮತ್ತು ICC Men's T20 World Cup ಅನ್ನು ಜನರು ಹೆಚ್ಚಾಗಿ ಹುಡುಕಾಡಿದ್ದಾರೆ ಎಂದು ಗೂಗಲ್ ವರದಿ ಹೇಳಿದೆ.

ಸಿನಿಮಾಗಳ ಹುಡುಕಾಟ; ಗೂಗಲ್ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಡಿದ 6ನೇ ವಿಚಾರ ಸಿನಿಮಾಗೆ ಸಂಬಂಧಿಸಿದ್ದು. 6ನೇ ಸ್ಥಾನದಲ್ಲಿ Brahmastra: Part One - Shiva ಇದೆ. 9ನೇ ಸ್ಥಾನದಲ್ಲಿ ಕೆಜಿಎಫ್ ಚಾಪ್ಟರ್-2 ಇದೆ.

Near me ಎಲ್ಲಿ ಹುಡುಕಿದ್ದು ಏನು?; 2021 ಮತ್ತು 2022ರಲ್ಲಿ ಭಾರತದಲ್ಲಿ ಜನರು Near me ನಲ್ಲಿ ತಮ್ಮ ಹತ್ತಿರದ ಪ್ರದೇಶಗಳ ಕೋವಿಡ್ ಪ್ರಕರಣಗಳ ಸಂಖ್ಯೆ, ಕೋವಿಡ್ ಮಾರ್ಗಸೂಚಿ ಪ್ರಕಾರ ಇರುವ ನಿಯಮಗಳೇನು?, ಕೋವಿಡ್ ಲಸಿಕೆ ಎಲ್ಲಿ ಸಿಗುತ್ತದೆ? ಎಂದು ಸರ್ಚ್‌ ಮಾಡಿದ್ದಾರೆ.

Googles Year in Search 2022: Here is what India searched online in this year

ಇದರ ಜೊತೆಗೆ ಈ ವರ್ಷ ಹತ್ತಿರದ ಈಜುಕೊಳ, ಹತ್ತಿರದ ವಾಟರ್ ಪಾರ್ಕ್, ಹತ್ತಿರದ ಸಿನಿಮಾ ಹಾಲ್‌ಗಳನ್ನು ಹುಡುಕಾಡಿದ್ದಾರೆ. ಅದೇ ಕಳೆದ ವರ್ಷ ಹತ್ತಿರದಲ್ಲಿ ಕೋವಿಡ್ ಪರೀಕ್ಷಾ ಕೇಂದ್ರ ಎಲ್ಲಿದೆ, ಆಕ್ಸಿಜನ್ ಸಿಲಿಂಡರ್ ಎಲ್ಲಿ ಸಿಗುತ್ತದೆ, ಹತ್ತಿರದ ಕೋವಿಡ್ ಆಸ್ಪತ್ರೆ ಯಾವುದು? ಎಂದು ಸರ್ಚ್‌ ಮಾಡಿದ್ದರು.

ಅಗ್ನಿಪಥ್ ಯೋಜನೆ; ಕೇಂದ್ರ ಸರ್ಕಾರ ಘೋಷಣೆ ಮಾಡಿದ ನೂತನ ಅಗ್ನಿಪಥ್ ಯೋಜನೆ ಕುರಿತು 2022ರಲ್ಲಿ ಜನರು ಗೂಗಲ್ ಮಾಡಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ನಡೆಯುತ್ತಿರುವ ಕಾರಣ ನ್ಯಾಟೋ ಎಂದು ಹುಡುಕಾಡಿದ್ದಾರೆ. ಎನ್‌ಎಫ್‌ಟಿ ಮತ್ತು ಬ್ಲಾಕ್ ಫಂಗಸ್ ಎಂದರೇನು? ಎಂದು ಜನರು ಅತಿ ಹೆಚ್ಚಾಗಿ ಹುಡುಕಾಟ ನಡೆಸಿದ್ದಾರೆ.

ಇನ್ನೂ 2022ರಲ್ಲಿ ಅತಿ ಹೆಚ್ಚು ಹುಡುಕಿದ ರಾಜಕಾರಣಿಗಳು ಬಿಜೆಪಿಯಲ್ಲಿದ್ದ ನೂಪುರ್ ಶರ್ಮಾ, ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು, ಬ್ರಿಟನ್ ಪ್ರಧಾನಿಯಾದ ರಿಷಿ ಸುನಕ್ ಮತ್ತು ಲಲಿತ್ ಮೋದಿ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+