Maha Kumbh Mela 2025: ಮಹಾಕುಂಭ ಮೇಳಕ್ಕೆ ಗೂಗಲ್‌ನಿಂದ ವಿಶೇಷ ಗುಲಾಬಿ ಪುಷ್ಪನಮನ

ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳ-2025ಕ್ಕೆ ವಿಶ್ವದ ಮೂಲೆಮೂಲೆಯಿಂದ ಭಕ್ತರು ಆಗಮಿಸುತ್ತಿದ್ದಾರೆ. ಕೋಟ್ಯಂತರ ಮಂದಿ ಸದ್ಯ ಪ್ರಯಾಗ್‌ರಾಜ್‌ನಲ್ಲಿ ಬೀಡುಬಿಟ್ಟಿದ್ದು, ಭಕ್ತಿ ಮುಳುಗಿದ್ದಾರೆ. ವಿಶ್ವದ ಅತಿ ದೊಡ್ಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾದ ಮಹಾಕುಂಭ ಮೇಳಕ್ಕೆ ಗೂಗಲ್‌ (Google) ಕೂಡ ವಿಶೇಷ ಗೌರವ ನೀಡುವ ಮೂಲಕ ಗಮನ ಸೆಳೆದಿದೆ.

ಗೂಗಲ್‌ನಲ್ಲಿ ಮಹಾಕುಂಭ ಮೇಳ ಎಂದು ಸರ್ಚ್‌ ಮಾಡಿದ ಕೂಡಲೇ ಸ್ಕ್ರೀನ್‌ ಮೇಲ್ಭಾಗದಿಂದ ಗುಲಾಬಿ ಹೂಗಳು ಬೀಳುವಂತೆ ಗೌರವ ಸಲ್ಲಿಸಿದೆ. ಇದು ನೋಡಲು ನೈಜವಾಗಿ ಕೂಡ ಇದ್ದು, ಮಹಾಕುಂಭ ಮೇಳಕ್ಕೆ ವಿಶೇಷವಾಗಿ ಪುಷ್ಪನಮನದ ಮೂಲಕ ಗೂಗಲ್‌ ನಮಿಸಿದೆ.

Google Honors Maha Kumbh Mela 2025 With Virtual Rose Petal Shower

ಸೋಶಿಯಲ್‌ ಮೀಡಿಯಾದಲ್ಲಿ ಕೂಡ ಎಲ್ಲೆಡೆ ಮಹಾಕುಂಭ ಮೇಳದ ಕುರಿತಾದ ಫೋಟೋ ಹಾಗೂ ವಿಡಿಯೋಗಳು ಹರಿದಾಡುತ್ತಿದ್ದು, ಜಾಗತಿಕ ಹಬ್ಬ ಎನ್ನುವಂತೆ ಪ್ರಯಾಗ್‌ರಾಜ್‌ನಲ್ಲಿ ಧಾರ್ಮಿಕ ಸಂಭ್ರಮ ಮನೆಮಾಡಿದೆ. ಗೂಗಲ್ ತನ್ನ ಸರ್ಚ್‌ ಸ್ಕ್ರೀನ್‌ನಲ್ಲಿ ಗುಲಾಬಿ ದಳದ ಅನಿಮೇಷನ್‌ನೊಂದಿಗೆ ನಡೆಯುತ್ತಿರುವ ಮಹಾ ಕುಂಭವನ್ನು ಆಚರಿಸುತ್ತಿದೆ.

ನೀವು ಗೂಗಲ್‌ನಲ್ಲಿ ಕುಂಭ, ಮಹಾ ಕುಂಭ, ಕುಂಭಮೇಳ, ಮಹಾಕುಂಭ, ಮಹಾಕುಂಭಮೇಳ ಎಂದು ಸರ್ಚ್‌ ಮಾಡಿದ ಕೂಡಲೇ ಆ ಪುಟ ತೆರೆದ ತಕ್ಷಣ ಗುಲಾಬಿ ದಳಗಳು ಸ್ಕ್ರೀನ್‌ ಮೇಲ್ಭಾಗದಿಂದ ಕೆಳಗೆ ಬೀಳುತ್ತದೆ. ಈ ಆನಿಮೇಷನ್‌ ಮಹಾಕುಂಭಕ್ಕೆ ಪುಷ್ಪನಮನದಂತೆಯೇ ಇದೆ. ಇ-ಮೇಲ್, ಫೇಸ್‌ಬುಕ್, ಎಕ್ಸ್ ಮತ್ತು ವಾಟ್ಸಾಪ್ ಮೂಲಕ ಇತರರೊಂದಿಗೆ ಅನಿಮೇಶನ್ ಈ ಅನ್ನು ಶೇರ್‌ ಮಾಡಿಕೊಳ್ಳಲು ಕೂಡ ಗೂಗಲ್‌ ಅವಕಾಶ ಕಲ್ಪಿಸಿದೆ.

ಗೂಗಲ್‌ ಸರ್ಚ್ ಇಂಜಿನ್ ಮಹಾ ಕುಂಭ-2025 ರ ಪ್ರಾರಂಭವನ್ನು ಪ್ರಯಾಗರಾಜ್‌ನಲ್ಲಿ ಈ ರೀತಿ ಅನನ್ಯವಾಗಿ ಆಚರಿಸುತ್ತಿದೆ. ನೀವು ಮಹಾ ಕುಂಭವನ್ನು ಗೂಗಲ್‌ನಲ್ಲಿ ಹುಡುಕಿದಾಗ ಅದು ಮಹಾ ಕುಂಭದ ಗೌರವಾರ್ಥವಾಗಿ ಪರದೆಯ ಮೇಲೆ ಗುಲಾಬಿ ದಳಗಳನ್ನು ಸುರಿಸುತ್ತಿದೆ ಎಂದು ಮಹಾ ಕುಂಭ ಮೇಳದ ಅಧಿಕೃತ ಎಕ್ಸ್‌ ಅಕೌಂಟ್‌ ಕೂಡ ಟ್ವೀಟ್‌ ಮಾಡಿದೆ.

Google Honors Maha Kumbh Mela 2025 With Virtual Rose Petal Shower

ಸುಮಾರು 144 ವರ್ಷಗಳಿಗೊಮ್ಮೆ ಬಂದಿರುವ ಈ ಮಹಾಕುಂಭಮೇಳಕ್ಕೆ ಪ್ರತಿದಿನವೂ ಜನಸ್ತೋಮವೇ ಹರಿದುಬರುತ್ತಿದೆ. ಮಹಾಕುಂಭ ಶುರುವಾದ ಮೊದಲ ಎರಡು ದಿನಗಳಲ್ಲಿ ಸುಮಾರು 5 ಕೋಟಿ ಜನರು ಮಹಾಕುಂಭಕ್ಕೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ. ಈ ಕಾರ್ಯಕ್ರಮವನ್ನು ಆಯೋಜಿಸುತ್ತಿರುವ ಉತ್ತರ ಪ್ರದೇಶ ಸರ್ಕಾರವು ಈ ಇಡೀ ಮಹಾಕುಂಭಮೇಳದ ಅವಧಿಯಲ್ಲಿ ಸುಮಾರು 45 ಕೋಟಿ ಜನ ಸೇರುವ ನಿರೀಕ್ಷೆಯಿದೆ ಎಂದು ಅಂದಾಜಿಸಿದೆ.

ಮಹಾಕುಂಭ ಆಚರಣೆಯ ಅಂಗವಾಗಿ ತ್ರಿವೇಣಿ ಮಾರ್ಗದಲ್ಲಿ ಸಂವಿಧಾನ ಗ್ಯಾಲರಿಯನ್ನು ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಖನ್ನಾ ಉದ್ಘಾಟಿಸಿದ್ದಾರೆ. ಸಚಿವ ಖನ್ನಾ ನೇತೃತ್ವದಲ್ಲಿ ಪ್ರದರ್ಶನದ ಮಾರ್ಗದರ್ಶಿ ಪ್ರವಾಸ ಮತ್ತು ಭಾರತೀಯ ಸಂವಿಧಾನಕ್ಕೆ ಮೀಸಲಾದ ವಿಶೇಷವಾಗಿ ಸಂಗ್ರಹಿಸಲಾದ ಗ್ರಂಥಾಲಯವನ್ನು ಒಳಗೊಂಡಿದೆ.

ಇದು ಖಂಡಿತವಾಗಿಯೂ ಹೆಚ್ಚು ಮಹತ್ವದ್ದಾಗಿದೆ. ಏಕೆಂದರೆ ಕುಂಭವು ಸೂರ್ಯನೊಂದಿಗೆ ಮತ್ತು ವಿಶೇಷವಾಗಿ ಗುರುಗ್ರಹದೊಂದಿಗೆ ನಮ್ಮ ಗ್ರಹದ ಸಂಬಂಧವಾಗಿದೆ. ಇದು ಜನವರಿ 23ರ ಹೊತ್ತಿಗೆ ಆಕಾಶದಲ್ಲಿ ಸಾಲುಗಟ್ಟಿರುವ ಸಮಯ. ಅವೆಲ್ಲವೂ 144 ವರ್ಷಗಳ ನಂತರ ಇವು ಸಾಲುಗಟ್ಟಿ ನಿಲ್ಲುತ್ತವೆ. ಅದನ್ನು ನೋಡುವುದು ಪುಣ್ಯ ಎಂದು ಆಧ್ಯಾತ್ಮಿಕ ನಾಯಕ ಸದ್ಗುರು ಜಗ್ಗಿ ವಾಸುದೇವ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+