ಚೀನಾಗೆ ಕರೆಂಟ್ ಶಾಕ್! ಇನ್ನೂ ಮುಂದಕ್ಕೆ ಕಾದಿದೆ ಮಾರಿ ಹಬ್ಬ!
ಜಗತ್ತಿನ ನಂ. 1 ಸ್ಥಾನಕ್ಕೆ ಲಗ್ಗೆ ಹಾಕಲು ಪ್ರಯತ್ನಿಸುತ್ತಿರುವ ಚೀನಾಗೆ ಕರೆಂಟ್ ಶಾಕ್ ಸಿಕ್ಕಿದೆ. ಚೀನಾದ 17 ಪ್ರಾಂತ್ಯಗಳಲ್ಲಿ ವಿದ್ಯುತ್ ಕೈಕೊಟ್ಟ ಪರಿಣಾಮ 'ಡ್ರ್ಯಾಗನ್' ವಿಲವಿಲ ಒದ್ದಾಡುತ್ತಿದೆ. ಕನಿಷ್ಠ ತನ್ನ ಪ್ರಜೆಗಳಿಗೂ ಸಮರ್ಪಕವಾಗಿ ವಿದ್ಯುತ್ ಒದಗಿಸಲು ಸಾಧ್ಯವಾಗದೆ ಚೀನಾ ನಲುಗುತ್ತಿದೆ. ಆದರೆ ಇದು ಇಷ್ಟಕ್ಕೇ ಮುಗಿದು ಹೋಗುತ್ತಾ..? ಇಲ್ಲ ಕಣ್ರೀ ಕಂಡಿತ ಇಲ್ಲ! ಯಾಕಂದ್ರೆ ಇದು ಸ್ಯಾಂಪಲ್ ಮಾತ್ರ, ಮುಂದೆ ಜಗತ್ತಿಗೆ ಇನ್ನೂ ಭೀಕರವಾದ ಗಂಡಾಂತರ ಕಾದಿದೆ. ಇದು ಆಶ್ಚರ್ಯ ಎನಿಸಿದರೂ ಸತ್ಯ.
ಜಾಗತಿಕ ಮಟ್ಟದಲ್ಲಿ ವಿದ್ಯುತ್‌ಗೆ ಸೃಷ್ಟಿಯಾಗಿರುವ ವಿಪರೀತ ಬೇಡಿಕೆ ಹಾಗೂ ಇಂಧನ ಕೊರತೆ ಮುಂಬರುವ ದಿನಗಳಲ್ಲಿ ಭೂಮಿಯನ್ನ ಕತ್ತಲೆ ಸಾಮ್ರಾಜ್ಯ ಮಾಡುವುದರಲ್ಲಿ ಅನುಮಾನವೇ ಇಲ್ಲ. ಒಂದು ಕಡೆ ಕಲ್ಲಿದ್ದಲು ಬೆಲೆ ವಿಪರೀತ ಏರಿಕೆ ಕಾಣುತ್ತಿದೆ. ಮತ್ತೊಂದು ಕಡೆ ಕಚ್ಚಾತೈಲ ಬ್ಯಾರಲ್‌ಗೆ 100 ಡಾಲರ್ ಮುಟ್ಟುವ ಮುನ್ಸೂಚನೆ ಸಿಗುತ್ತಿದೆ. ಇನ್ನು ನೈಸರ್ಗಿಕ ಇಂಧನಗಳ ಬೆಲೆ ಏರಿಕೆ ವಿದ್ಯುತ್ ತಯಾರಿಕೆ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ಅಭಿವೃದ್ಧಿಶೀಲ ದೇಶಗಳ ಪಾಲಿಗೆ ನುಂಗಲಾರದ ತುತ್ತಾಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೂ ಇದು ದೊಡ್ಡ ಆಘಾತ ನೀಡಲಿದೆ.

ಉತ್ಪಾದನೆಯೇ ನಿಂತು ಹೋಗಿದೆ
ಚೀನಾದ ಕಾರ್ಖಾನೆಗಳಲ್ಲಿ ಕೆಲಸ ನಿಂತುಹೋಗಿ ಸಣ್ಣಪುಟ್ಟ ಕೈಗಾರಿಕೆಗಳಿಗೆ ಬರೆ ಎಳೆದಂತಾಗಿದೆ. ಚೀನಾದ 17 ಪ್ರಾಂತ್ಯಗಳಲ್ಲಿ ವಿದ್ಯುತ್ ಕೈಕೊಟ್ಟಿದೆ. ಅಂದಹಾಗೆ ಕರೆಂಟ್ ಕೈಕೊಟ್ಟಿರುವ 17 ಪ್ರಾಂತ್ಯಗಳೇ ಚೀನಾ 'ಜಿಡಿಪಿ'ಗೆ ಆನೆ ಬಲ ತುಂಬುತ್ತಿವೆ. ಚೀನಾ ಜಿಡಿಪಿ ಪೈಕಿ ಶೇ.66ರಷ್ಟು ಉತ್ಪನ್ನಗಳು ಇದೇ ಪ್ರಾಂತ್ಯದಲ್ಲಿ ತಯಾರಾಗುತ್ತವೆ. ಆದ್ರೆ ಚೀನಾ ಸರ್ಕಾರದ ಲೆಕ್ಕಾಚಾರ ತಲೆಕೆಳಗಾಗಿದ್ದು, ವಿದ್ಯುತ್ ಸಮಸ್ಯೆಗೆ ಪರಿಹಾರ ಹುಡುಕಲು ಡ್ರ್ಯಾಗನ್ ಪರದಾಡುತ್ತಿದೆ. ಹಾಗಾದ್ರೆ ಚೀನಾದಲ್ಲಿ ವಿದ್ಯುತ್ ಕೈಕೊಡಲು ಕಾರಣ ಏನು ಅನ್ನೋದನ್ನ ತಿಳಿಯೋಣ ಬನ್ನಿ.

ಚೀನಾಗೆ ಕಲ್ಲಿದ್ದಲು ಕೈಕೊಟ್ಟಿತು
ಯಾವುದೇ ದೇಶದ ಆರ್ಥಿಕ ಬೆಳವಣಿಗೆ ಆ ದೇಶದ ಇಂಧನ ಶಕ್ತಿ ಮೇಲೆ ಅವಲಂಬಿತವಾಗಿರುತ್ತೆ. ಅದ್ರಲ್ಲೂ ಆಧುನಿಕ ಜಗತ್ತಿನಲ್ಲಿ ವಿದ್ಯುತ್ ಎಲ್ಲವನ್ನೂ ನಿಯಂತ್ರಿಸುತ್ತದೆ. ಈ ಕಾರಣಕ್ಕೆ ಪ್ರತಿಯೊಂದು ದೇಶವು ಕರೆಂಟ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಬಯಸುತ್ತದೆ. ಇಷ್ಟು ದಿನ ಚೀನಾ ಕೂಡ ಅದೇ ರೀತಿ ಬದುಕಿತ್ತು. ಚೀನಾದ ಒಟ್ಟು ವಿದ್ಯುತ್ ಪೈಕಿ ಶೇ. 60ರಷ್ಟು ವಿದ್ಯುತ್ ಕಲ್ಲಿದ್ದಲಿಂದ ಉತ್ಪಾದನೆ ಆಗಬೇಕಿದೆ. ಆದರೆ ಕಲ್ಲಿದ್ದಲ ಕೊರತೆ ಕೂಡ ಚೀನಾಗೆ ಹಿನ್ನಡೆ ತಂದಿದೆ ಎನ್ನುತ್ತಿದೆ ತಜ್ಞರ ತಂಡ. ಅಂದಹಾಗೆ ಇದಕ್ಕೆಲ್ಲಾ ಕಾರಣವಾಗಿದ್ದು ಆಸ್ಟ್ರೇಲಿಯಾ ಜೊತೆಗಿನ ಗುದ್ದಾಟ.

ಆಸ್ಟ್ರೇಲಿಯಾ ಜೊತೆ ಕಿರಿಕ್
ಒಂದು ಕಡೆ 'ಕ್ವಾಡ್' ಹಾಗೇ ಮತ್ತೊಂದು ಕಡೆ 'ಆಕಸ್' ಒಕ್ಕೂಟಗಳನ್ನ ರಚಿಸಿಕೊಂಡು ಚೀನಾ ವಿರುದ್ಧ ಗುಟುರು ಹಾಕಲು ಆಸ್ಟ್ರೇಲಿಯಾ ಸಿದ್ಧವಾಗದೆ. ಆದರೆ ಚೀನಾ ಬಗ್ಗಿಸೋದು ಅಷ್ಟು ಸುಲಭದ ಮಾತಲ್ಲ. ಈ ಕಾರಣಕ್ಕೆ ಚೀನಾಗೆ ಪರೋಕ್ಷವಾಗಿ ಪೆಟ್ಟು ಕೊಡಲು ಆಸ್ಟ್ರೇಲಿಯಾ ಶ್ರಮಿಸುತ್ತಿದೆ..! ಆಸ್ಟ್ರೇಲಿಯಾ ಹಾಗೂ ಚೀನಾ ನಡುವಿನ ವ್ಯಾಪಾರ ಸಂಬಂಧ ಹಳಸಿ ಹೋಗಿದೆ. ಹೀಗಾಗಿ ಆಸ್ಟ್ರೇಲಿಯಾದಿಂದ ರಫ್ತು ಮಾಡುತ್ತಿದ್ದ ಕಲ್ಲಿದ್ದಲು ಕೂಡ ಚೀನಾಗೆ ಸಿಗುತ್ತಿಲ್ಲ. ಹೀಗಾಗಿ ಕಲ್ಲಿದ್ದಲ ಕೊರತೆ ಉಂಟಾಗಿ ವಿದ್ಯುತ್ ಸಮಸ್ಯೆ ಎದುರಾಗಿದೆ ಎನ್ನಲಾಗುತ್ತಿದೆ. ಹಾಗೇ ಮಾಲಿನ್ಯ ನಿಯಂತ್ರಣಕ್ಕಾಗಿ ಚೀನಾ ಕಲ್ಲಿದ್ದಲು ಬಳಕೆ ಮೇಲೆ ನಿರ್ಬಂಧ ಹೇರಿರುವ ಪರಿಣಾಮ ವಿದ್ಯುತ್ ಕೊರತೆ ಉಂಟಾಗಿದೆ ಅಂತಲೂ ಹೇಳಲಾಗ್ತಿದೆ. ಆದಷ್ಟು ಬೇಗ ಸಮಸ್ಯೆಯಿಂದ ಹೊರ ಬರುವುದಾಗಿ 'ಸ್ಟೇಟ್ ಗ್ರೀಡ್ ಕಾರ್ಪೊರೇಷನ್ ಆಫ್ ಚೀನಾ' ವಿಶ್ವಾಸ ವ್ಯಕ್ತಪಡಿಸಿದೆ.

ವಾಯುಮಾಲಿನ್ಯ ಕೂಡ ಮಾಯ..!
10-15 ವರ್ಷದ ಹಿಂದೆ ಚೀನಾ ಎಂದರೆ ಮಾಲಿನ್ಯ, ಮಾಲಿನ್ಯ ಅಂದ್ರೆ ಚೀನಾ ಎಂದು ಜಗತ್ತು ಜರಿಯುತ್ತಿತ್ತು. ಆದರೆ ಈಗ ಇದೇ ಚೀನಾ ಪ್ರಕೃತಿ ಸೊಬಗಿನ ತವರಾಗಿದೆ. ಅದರಲ್ಲೂ ಚೀನಾ ರಾಜಧಾನಿ ಬೀಜಿಂಗ್ ಎಷ್ಟು ಸುಧಾರಿಸಿದೆ ಎಂದರೆ, ಕೆಲವೇ ವರ್ಷಗಳಲ್ಲಿ ಸಂಪೂರ್ಣ ವಾಯು ಮಾಲಿನ್ಯವನ್ನ ಸರ್ಕಾರ ಕಂಟ್ರೋಲ್‌ಗೆ ತಂದಿದೆ. ಮಾಲಿನ್ಯ ನಿಯಂತ್ರಣದ ಹಿಂದೆ ಹಲವು ಕಠಿಣ ಕ್ರಮಗಳು ಕೂಡ ಪ್ರಭಾವ ಬೀರಿವೆ. ಅದರಲ್ಲೂ ಕಾರ್ಬನ್ ಮತ್ತು ಸಿಎಫ್‌ಸಿ ಅನಿಲ ಹೊರಸೂಸುವ ಯಂತ್ರ, ಮತ್ತಿತರ ವಸ್ತುಗಳಿಗೆ ನಿಷೇಧ ಹೇರಿದ್ದು ಫಲ ನೀಡಿದೆ. ಇನ್ನು ಕೈಗಾರಿಕೆಗಳಿಗೆ ನೀಡಿದ ಖಡಕ್ ವಾರ್ನಿಂಗ್ ಕೂಡ ಚೀನಾದ ಮಾಲಿನ್ಯ ನಿಯಂತ್ರಿಸಿದೆ.

ಚೀನಾದಲ್ಲಿ ಬಡವರೇ ಇಲ್ಲ..!
ಒಂದು ಕಾಲದಲ್ಲಿ ತೀವ್ರ ಬಡತನ ತುಂಬಿದ ರಾಷ್ಟ್ರವಾಗಿದ್ದ ಚೀನಾದಲ್ಲಿ ಈಗ ಬಡವರೇ ಇಲ್ಲ. ಪವರ್ ಫುಲ್ ರಾಷ್ಟ್ರಗಳೇ ಬಡತನದ ಸಂಕೋಲೆಯಲ್ಲಿ ನರಳುತ್ತಿರುವ ಸಂದರ್ಭದಲ್ಲಿ ಚೀನಾ ಮಾತ್ರ ಜಗತ್ತು ಮೆಚ್ಚುವ ಕೆಲಸ ಮಾಡಿದೆ. ಚೀನಾ ತನ್ನ ದೇಶದಲ್ಲಿದ್ದ 77 ಕೋಟಿ ಬಡವರನ್ನು ವಿಷ ವರ್ತುಲದಿಂದ ಹೊರತಂದಿದೆ. ಫೆಬ್ರವರಿ ತಿಂಗಳಲ್ಲಿ ಈ ವಿಚಾರ ಹಂಚಿಕೊಂಡಿದ್ದ ಚೀನಾ, ಸತತ 40 ವರ್ಷಗಳ ಪರಿಶ್ರಮದ ನಂತರ ಗುರಿ ತಲುಪುವಲ್ಲಿ ಯಶಸ್ವಿಯಾಗಿತ್ತು. ಇದರ ಜೊತೆಗೆ ಶ್ರೀಮಂತರ ಪಟ್ಟಿಯಲ್ಲೂ ಚೀನಾ ನಂಬರ್ 1 ಸ್ಥಾನ ಅಲಂಕರಿಸಿದೆ.
Recommended Video

ಅಲ್ಲಾಡಿ ಹೋಗಿದೆ ಅಮೆರಿಕ
ಕೊರೊನಾ ಕಾಟಕ್ಕೆ ಸಿಲುಕಿರುವ ಅಮೆರಿಕ ಅಲ್ಲಾಡಿ ಹೋಗಿದೆ. ಈವರೆಗೂ ಅಮೆರಿಕ ಕಂಡು, ಕೇಳರಿಯದ ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಈ ಹೊತ್ತಲ್ಲೇ ಅಮೆರಿಕದ ಶತ್ರು ಚೀನಾ ಅಭಿವೃದ್ಧಿ ಹೊಂದುತ್ತಿರುವುದು ಸಹಜವಾಗಿ ಅಮೆರಿಕ ನಾಯಕರ ಕಣ್ಣು ಕೆಂಪಾಗಿಸಿದೆ. ಕೊರೊನಾ ವಕ್ಕರಿಸಿದ ಆರಂಭದಲ್ಲಿ ಚೀನಾ ಆರ್ಥಿಕ ಸ್ಥಿತಿ ತೀರಾ ಕುಸಿತ ಕಂಡಿತ್ತು. ಆದರೆ ಕೊರೊನಾ ಹೆಡೆಮುರಿ ಕಟ್ಟುವಲ್ಲಿ ಅಲ್ಲಿನ ಸರ್ಕಾರ ಯಶಸ್ವಿಯಾಗಿತ್ತು. ಬಳಿಕ ಚೀನಾ ಆರ್ಥಿಕ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. 2021ರ ಮೊದಲ ತ್ರೈಮಾಸಿಕದಲ್ಲೇ ಚೀನಾ ಜಿಡಿಪಿ ಶುಭಾರಂಭ ಮಾಡಿದೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು












Click it and Unblock the Notifications