ಮೋದಿ ಆಸ್ತಿ ವಿವರ: ಸ್ವಂತ ಕಾರು ಹೊಂದಿಲ್ಲ, ಸಾಲ ಮಾಡಿಲ್ಲ
Recommended Video
ವಾರಣಾಸಿ, ಏಪ್ರಿಲ್ 26 : ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪುನರ್ ಆಯ್ಕೆ ಬಯಸಿ, ಹಾಲಿ ಸಂಸದ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ನಾಮಪತ್ರದ ಜೊತೆಗೆ ಸಲ್ಲಿಸಿರುವ ಆಸ್ತಿ ವಿವರ ಇಲ್ಲಿದೆ.
ಗುರುವಾರದಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ದಶಾಶ್ವಮೇಧ ಘಾಟ್ ತನಕ ರೋಡ್ ಶೋ ನಡೆಸಿ, ಸಂಜೆ ವೇಳೆ ಗಂಗಾರತಿಯಲ್ಲಿ ಪಾಲ್ಗೊಂಡಿದ್ದರು.
ಶುಕ್ರವಾರ ಎನ್ಡಿಎ ಮುಖಂಡರಾದ ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್, ಎಲ್ಜೆಪಿ ಮುಖ್ಯಸ್ಥ ರಾಮ್ವಿಲಾಸ್ ಪಾಸ್ವಾನ್, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಬಿಹಾರ ಸಿಎಂ ನಿತೀಶ್ ಕುಮಾರ್, ತಮಿಳುನಾಡು ಸಿಎಂ ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಪನ್ನೀರಸೆಲ್ವಂ ಜೊತೆ ಸಭೆ ನಡೆಸಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್, ಪಿಯೂಷ್ ಗೋಯೆಲ್, ಜೆ.ಪಿ ನಡ್ಡಾ, ನಿತಿನ್ ಗಡ್ಕರಿ ಸೇರಿದಂತೆ ಬಿಜೆಪಿಯ ಹಲವು ನಾಯಕರು ಉಪಸ್ಥಿತರಿದ್ದಾರೆ.
ಮೋದಿ ಅವರು ಅರ್ಜಿ 26(ಎ)ನಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಮೋದಿ ಸ್ವವಿವರ
ಹೆಸರು: ನರೇಂದ್ರ ಮೋದಿ
ವಯಸ್ಸು : 68
ತಂದೆ : ದಾಮೋದರ್ ದಾಸ್ ಮೋದಿ
ವಿಳಾಸ : ಸೋಮೇಶ್ವರ್ ಟೆನಾಮೆಂಟ್, ರಣಿಪ್, ಅಹಮದಾಬಾದ್.
ಪಕ್ಷ : ಭಾರತೀಯ ಜನತಾ ಪಾರ್ಟಿ
ಕ್ಷೇತ್ರ: ವಾರಣಾಸಿ
ಮತದಾನ ಹಕ್ಕು : 55 ಸಬರಮತಿ ವಿಧಾನಸಭಾ ಕ್ಷೇತ್ರ.
* 1 ಇಮೇಲ್ ಐಡಿ, 1 ವೆಬ್ ಸೈಟ್, 1 ಫೇಸ್ಬುಕ್, 1 ಟ್ವಿಟ್ಟರ್ ಖಾತೆ ಹೊಂದಿದ್ದಾರೆ.
* 1967ರಲ್ಲಿ ಗುಜರಾತಿನಲ್ಲಿ ಎಸ್ಎಸ್ ಸಿ, 1978ರಲ್ಲಿ ದೆಹಲಿ ವಿವಿಯಿಂದ ಬಿ.ಎ, 1983ರಲ್ಲಿ ಗುಜರಾತ್ ವಿವಿಯಿಂದ ಎಂ.ಎ ಪದವಿ ಪಡೆದಿದ್ದಾರೆ.

ಐಟಿ ರಿಟರ್ನ್ಸ್ ವಿವರ
ನರೇಂದ್ರ ಮೋದಿ:
2013-14 : 9,68,711 ರು ಆದಾಯ.
2014-15: 8,58,780 ರು
2015-16 : 19,23,160 ರು
2016-17 : 14,59,750 ರು
2017-18 : 19,92,520 ರು
* ಪತ್ನಿ ಜಶೋದಾಬೆನ್ ಐಟಿ ರಿಟರ್ನ್ಸ್ ದಾಖಲೆ ವಿವರ ತಿಳಿದಿಲ್ಲ ಎಂದು ನಮೂದಿಸಿದ್ದಾರೆ.
* ಯಾರು ಅವಲಂಬಿಯರಿಲ್ಲ. ಯಾವುದೇ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿಲ್ಲ ಎಂದು ಘೋಷಿಸಿದ್ದಾರೆ.

ನಗದು, ಹೂಡಿಕೆ, ಚರಾಸ್ತಿ ವಿವರ
ಕೈಲಿರುವ ನಗದು 38,750 ರು (2018ರಲ್ಲಿ 48,944 ರು)
* ಗಾಂಧಿನಗರದ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಠೇವಣಿ: 4,143 ರು
* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಲ್ಲಿ ಎಫ್ ಡಿ 1,27,81,574 ರು (2018ರಲ್ಲಿ 1,07,96,228ರೂ)
* ಎಲ್ & ಟಿ ಇನ್‌ಫ್ರಾಸ್ಟ್ರಕ್ಚರ್ ಬಾಂಡ್ ನಲ್ಲಿ ಆದಾಯ ತೆರಿಗೆ ಉಳಿಸುವ ನಿಟ್ಟಿನಲ್ಲಿ 20 ಸಾವಿರ ಗಳ ಮೌಲ್ಯದ ಬಾಂಡ್ ಹೊಂದಿದ್ದಾರೆ.
* ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಸರ್ಕಾರಿ ಒಡೆತನದ ಹೂಡಿಕೆಯಲ್ಲಿ 7,61,466ರು (2018ರಲ್ಲಿ 5,18,235ರೂ) ಮೌಲ್ಯದ ಬಾಂಡ್.
* ಎಲ್ ಐಸಿಯಲ್ಲಿ 1,90,347ರು ( 2018ರಲ್ಲಿ 1,59,281ರೂಗಳ ವಿಮೆ ) ಪಾಲಿಸಿಯನ್ನು ಹೊಂದಿದ್ದಾರೆ.

ಚಿನ್ನಾಭರಣ ಇತರೆ ಚರಾಸ್ತಿ
45 ಗ್ರಾಂ ಚಿನ್ನ: 1,13,800 ರು ಮೌಲ್ಯ
ಟಿಡಿಎಸ್ ಕಡಿತ 2018-19ರ ಆರ್ಥಿಕ ವರ್ಷ : 85,145 ರು (ಅಂದಾಜು)
ಪ್ರಧಾನಿ ಸಚಿವಾಲಯ 1,40,895 ರು
ಒಟ್ಟಾರೆ ಮೊತ್ತ : 1,41,36,119 ರು
ಸ್ಥಿರಾಸ್ತಿ:
ಗುಜರಾತ್ ನ ಗಾಂಧಿನಗರದ ವಸತಿ ಕಟ್ಟಡವೊಂದರಲ್ಲಿ ಶೇ.25 ರಷ್ಟು ಮೌಲ್ಯದ ಶೇರುಗಳನ್ನು ಹೊಂದಿದ್ದಾರೆ. 1.30,488 ರು ಮೌಲ್ಯದ ಫ್ಲಾಟ್ ಹೊಂದಿದ್ದಾರೆ. ನಿರ್ಮಾಣ ಹೂಡಿಕೆ 2,57,208 ರು
ಒಟ್ಟಾರೆ 1,10,00,000 ರು ಸ್ಥಿರಾಸ್ತಿ ಮೌಲ್ಯ.
* ನವದೆಹಲಿಯ ಲೋಕ್ ಕಲ್ಯಾಣ್ ಮಾರ್ಗ್ ನಲ್ಲಿ ಸರ್ಕಾರಿ ಮನೆ, ಗಾಂಧಿನಗರದಲ್ಲಿ ಸರ್ಕಾರಿ ವಸತಿ ಹೊಂದಿದ್ದಾರೆ.
* ಯಾವುದೇ ಸಾಲ, ಯಾವುದೇ ತೆರಿಗೆ ಬಾಕಿ ಹೊಂದಿಲ್ಲ.
* ಸರ್ಕಾರಿ ಹುದ್ದೆ ಹಾಗೂ ಬ್ಯಾಂಕಿನ ಬಡ್ಡಿದರವೇ ಆದಾಯದ ಮೂಲ ಎಂದಿದ್ದಾರೆ.












Click it and Unblock the Notifications