ಡಾ. ಪುಷ್ಪಾ ಅಮರನಾಥ್ ಬಗ್ಗೆ ನಿಮಗೆ ಗೊತ್ತಿಲ್ಲದ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ
ಮಹಿಳೆ ನಾಲ್ಕು ಗೋಡೆಗೆ ಮಾತ್ರ ಸೀಮಿತವಲ್ಲ. ಮಹಿಳೆ ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಇನ್ನಿತರ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಗೌರವಿಸಲು ಹಾಗೂ ಇತರರಿಗೆ ಮಾದರಿಯಾಗಲು ಈ ಮಹಿಳಾ ದಿನಾಚರಣೆ ಸಹಕಾರಿಯಾಗಿದೆ. ಒಂದು ಹೆಣ್ಣು ಸಂಸಾರದ ಕಣ್ಣು. ಒಂದು ಹೆಣ್ಣು ಶಿಕ್ಷಣವನ್ನ ಕಲಿತರೇ ಆ ಮನೆ ಸುಗಮವಾಗಿ ನಡೆಯಲಿದೆ. ಒಂದು ಹೆಣ್ಣಿಗೆ ಶಿಕ್ಷಣ ಎಷ್ಟು ಮುಖ್ಯ ಎಂಬುದನ್ನ ಪುಷ್ಪಾ ಅಮರನಾಥ್ ತಿಳಿಸಿದ್ದಾರೆ.
ಮಹಿಳಾ ದಿನಾಚರಣೆಯ ಪ್ರಯುಕ್ತ ಕಾಂಗ್ರೆಸ್ ನಾಯಕಿ ಡಾ. ಪುಷ್ಪಾ ಅಮರನಾಥ್ ಅವರು ಒನ್ ಇಂಡಿಯಾ ಕನ್ನಡ ವೆಬ್‌ಗೆ ಸಂದರ್ಶನವನ್ನ ನೀಡಿದ್ದು, ಮಹಿಳೆಯರ ಶ್ರಮ ಹಾಗೂ ಅವರ ಕಷ್ಟ, ನೋವು-ನಲಿವು ಹಾಗೂ ಮೀಸಲಾತಿ ಕುರಿತು ಮಾತನಾಡಿದ್ದಾರೆ. ಮೈಸೂರಿನ ತಿ. ನರಸೀಪುರದ ಬನ್ನೂರು ಗ್ರಾಮದ ಪುಷ್ಪಾರವರು, ಹುಣಸೂರಿನ ಅಮರ್‌ನಾಥ್ ಅವರನ್ನು ವಿವಾಹವಾಗಿದ್ದಾರೆ. ಕಾಂಗ್ರೆಸ್ ನಲ್ಲಿಯೇ ಮೊದಲಿನಿಂದಲೂ ಗುರುತಿಸಿಕೊಂಡಿದ್ದ ಪುಷ್ಪಾ ಅಮರ್ನಾಥ್ ಮೊದಲ ಬಾರಿ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದಾಗ 2015-2017ರವರೆಗೆ ಮೈಸೂರು ಜಿ.ಪಂ ಅಧ್ಯಕ್ಷೆಯಾಗಿದ್ದರು. ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ, ಎಐಸಿಸಿ ಸದಸ್ಯೆಯಾಗಿಯೂ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ.

ಒಬ್ಬ ಶಾಸಕಿಯಂತೆ ಡಾ. ಪುಷ್ಪಾ ಅಮರನಾಥ್ ಅವರು ಮೈಸೂರು ಜಿಲ್ಲೆಯಲ್ಲಿ ಹಲವಾರು ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಕೊಂಡವರು. ಸಹಜವಾಗಿ ಎಲ್ಲರ ದೃಷ್ಟಿ ಅವರ ಮೇಲೆ ನೆಟ್ಟಿತ್ತು. ಅದರಂತೆ ಕಾಂಗ್ರೆಸ್‌ನಲ್ಲಿ ಉತ್ತಮ ಕಾರ್ಯಚಟುವಟಿಕೆಯಲ್ಲಿ ತೊಡಗಿದ್ದ ಪುಷ್ಪಾ ಅಮರನಾಥ್ ಅವರಿಗೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸ್ಥಾನ ಒಲಿದು ಬಂದಿತ್ತು. ನನಗೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಹುದ್ದೆಯನ್ನು ಖಂಡಿತವಾಗಿಯೂ ನಿರೀಕ್ಷಿಸಿರಲಿಲ್ಲ. ಅಧ್ಯಕ್ಷೆ ಸ್ಥಾನ ಆಯ್ಕೆಯಾಗಿದ್ದೇನೆಂದು ತಿಳಿದಾಗ ನನ್ನ ಸಂತೋಷವಾಗುತ್ತು. ಇಂತಹ ದೊಡ್ಡ ಹುದ್ದೆ ನೀಡಿದ್ದಕ್ಕೆ ನನ್ನ ಪಕ್ಷಕ್ಕೆ ಧನ್ಯವಾದಗಳು. ಹಾಗೂ ಈ ಹುದ್ದೆಯನ್ನ ಅತ್ಯಂತ ಜವಾಬ್ದಾರಿಯನ್ನೂ ನಿಭಾಯಿಸಿದ್ದೇನೆ ಎಂದು ತಿಳಿಸಿದರು.
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸ್ಥಾನಕ್ಕೆ 15 ಹೆಸರುಗಳನ್ನ ಪಕ್ಷ ಸೂಚಿಸಿತ್ತು. ಬಳಿಕ ನಮ್ಮೆಲ್ಲರೂ ನಮ್ಮ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಸುಶ್ಮಿತಾ ಮತ್ತು ರಾಹುಲ್ ಗಾಂಧಿಯವರು ಇಂಟರ್ ವ್ಯೂ ತೆಗೆದುಕೊಂಡರು. ಮೊದಲ ಸುತ್ತಿನಲ್ಲಿ ಸೆಲೆಕ್ಟ್ ಆದೆ. ನಂತರ 2 ಸುತ್ತಿನ ಮಾತುಕತೆ ಸಹ ನಡೆಯಿತು. ಕಡೆಯದಾಗಿ ಐವರು ಆಕಾಂಕ್ಷಿಗಳ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಐವರು ಕೂಡ ಸರಿಸಮವಾದ ಸ್ಥಾನದಲ್ಲಿಯೇ ಇದ್ದೆವು. ಆ ಐವರಲ್ಲಿ ನನಗೆ ಪಕ್ಷ ಜವಾಬ್ದಾರಿಯನ್ನ ನೀಡಿತ್ತು. ಆ ಜವಾಬ್ದಾರಿಯನ್ನ ಅಚ್ಚುಕಟ್ಟಾಗಿ ನಿರ್ವಹಿಸಿದ್ದೇನೆ ಎಂದು ಪುಷ್ಪಾ ಅಮರನಾಥ್ ಅವರು ತಿಳಿಸಿದ್ದಾರೆ.
ಮೈಸೂರಿನವರಾಗಿ ನಾನು ನನ್ನ ಕಾಂಗ್ರೆಸ್ ಪಯಣವನ್ನು ಮೈಸೂರಿನಲ್ಲೇ ಆರಂಭಿಸಿದೆ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್‌ಯಲ್ಲೂ ನಾನು ಕೆಲಸ ಮಾಡಿದ್ದೇನೆ. ನನ್ನನ್ನು ಗುರುತಿಸಿದ್ದು ಮಾಜಿ ಸಿಎಂ ಸಿದ್ದರಾಮಯ್ಯನವರು. ನನ್ನ ಈ ಬೆಳವಣಿಗೆಗೆ ನನ್ನ ಕುಟುಂಬದವರೂ ಕಾರಣ. ಅವರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಜಿಲ್ಲಾ ಪಂಚಾಯತಿಯಿಂದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದೇನೆ. ನಮ್ಮ ಪಕ್ಷ ಯಾವುದೇ ಹುದ್ದೆಯನ್ನ ನೀಡಿದರು ನಾನು ಆ ಹುದ್ದೆಯನ್ನ ಜವಾಬ್ದಾರಿಯುತವಾಗಿ ನಿರ್ವಹಿಸುತ್ತೇನೆ ಎಂದು ಪುಷ್ಪಾ ಅವರು ಹೇಳಿದರು.












Click it and Unblock the Notifications