ಪೇಮೆಂಟ್ ಆ್ಯಪ್‌ ಸರ್ಕಾರದ ವಶಕ್ಕೆ? ‘ಅಲಿಬಾಬಾ’ ಸಂಸ್ಥೆಗೆ ಚೀನಾ ಶಾಕ್!

ಚೀನಾ ಸರ್ಕಾರ ಖಾಸಗಿ ಕಂಪನಿಗಳಿಗೆ ಮೂಗುದಾರ ಹಾಕಲು ದಿಟ್ಟ ಹೆಜ್ಜೆ ಇಟ್ಟಿದೆ. ಅದರಲ್ಲೂ ಟೆಕ್ ದೈತ್ಯರ 'ಅಶಿಸ್ತಿನ ಬೆಳವಣಿಗೆ' ನಿಯಂತ್ರಿಸಲು ಚೀನಾದ ಕಮ್ಯೂನಿಸ್ಟ್ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಈಗಲೂ ಅಂತಹದ್ದೇ ಮಹತ್ವದ ಆದೇಶ ಹೊರಡಿಸಿರುವ ಜಿನ್‌ಪಿಂಗ್ ಆಡಳಿತ 'ಅಲಿಬಾಬಾ' ಸಂಸ್ಥೆಗೆ ಶಾಕ್ ಕೊಟ್ಟಿದೆ.

ಚೀನಾದ ಅತಿದೊಡ್ಡ ಆನ್‌ಲೈನ್ ಪೇಮೆಂಟ್ ಅಪ್ಲಿಕೇಶನ್ 'ಅಲಿಪೇ' (Alipay)ನಲ್ಲಿ ಮಹತ್ವದ ಬದಲಾವಣೆ ತರಲು ಅಧಿಕಾರಿಗಳು ಆದೇಶಿಸಿದ್ದಾರೆ. ಚೀನಾ, ಭಾರತ ಸೇರಿದಂತೆ ಏಷ್ಯಾದ ಹಲವು ರಾಷ್ಟ್ರಗಳಲ್ಲಿ ಈ ಅಲಿಪೇ ಹವಾ ಎಬ್ಬಿಸುತ್ತಿದೆ. ಭಾರತದಲ್ಲಿ ಇತ್ತೀಚೆಗೆ 'ಅಲಿಪೇ' ಬಲಗೊಳ್ಳುತ್ತಿದ್ದರೂ ಚೀನಾದಲ್ಲಿ ಈಗಾಗಲೇ ಬಲಶಾಲಿ ಆನ್‌ಲೈನ್ ಪೇಮೆಂಟ್ ಆ್ಯಪ್‌ ಆಗಿದೆ.

ಇಷ್ಟೆಲ್ಲದರ ನಡುವೆ ಚೀನಾ ಸರ್ಕಾರ 'ಅಲಿಬಾಬಾ' ಸಂಸ್ಥೆಗೆ ಶಾಕಿಂಗ್ ಸುದ್ದಿ ಕೊಟ್ಟಿದೆ. 100 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಪೇಮೆಂಟ್ ಆ್ಯಪ್‌ನಲ್ಲಿ ಬದಲಾವಣೆ ಮಾಡಿ ಎಂದು ಸೂಚಿಸಿದೆ. ಐಟಿ ದೈತ್ಯರ ಮೇಲೆ ಹದ್ದಿನ ಕಣ್ಣಿಟ್ಟಿರುವ ಚೀನಾ ಸರ್ಕಾರ, ಬಳಕೆದಾರರ ಖಾಸಗಿ ಮಾಹಿತಿ ಸೇರಿದಂತೆ ಇನ್ನಿತರ ವಿಚಾರಗಳಲ್ಲಿ ಬದಲಾವಣೆ ತರಲು ಆದೇಶಿಸಿದೆ.

ಶೇರುಗಳಲ್ಲಿ ಭಾರಿ ಇಳಿಕೆ..!

ಶೇರುಗಳಲ್ಲಿ ಭಾರಿ ಇಳಿಕೆ..!

ಚೀನಾ ಸರ್ಕಾರದ ಅಧಿಕಾರಿಗಳು 'ಅಲಿಪೇ' (Alipay)ನಲ್ಲಿ ಬದಲಾವಣೆಗೆ ಸೂಚಿಸಿದ ತಕ್ಷಣ ಮಾರುಕಟ್ಟೆ ಮೌಲ್ಯ ಅಲ್ಲಾಡಿ ಹೋಗಿದೆ. 'ಅಲಿಪೇ' ಶೇರುಗಳೂ ಸೇರಿದಂತೆ ಅಲಿಬಾಬಾ ಸಂಸ್ಥೆಗೂ ದೊಡ್ಡ ನಷ್ಟವಾಗಿದೆ. ಸರ್ಕಾರದ ಆದೇಶ ತನ್ನ ವ್ಯವಹಾರದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತಾಗಿ 'ಅಲಿಪೇ' ಬಹಿರಂಗ ಹೇಳಿಕೆ ನೀಡಿಲ್ಲ. 'ಅಲಿಪೇ' ಆ್ಯಪ್‌ನ ಮಾತೃಸಂಸ್ಥೆ 'ಆ್ಯಂಟ್' ಗ್ರೂಪ್ ಚೀನಾದಲ್ಲಿಯೇ ಅತಿದೊಡ್ಡ ಹಣಕಾಸು ಸಂಸ್ಥೆಯಾಗಿದೆ. ಆದ್ರೆ ಚೀನಾದಲ್ಲಿ ಯಾವುದೇ ಸಂಸ್ಥೆ ಏಕಸೌಮ್ಯ ನೀತಿಯನ್ನ ಸರ್ಕಾರ ಒಪ್ಪುತ್ತಿಲ್ಲ. ಹೀಗಾಗಿಯೇ ಟೆಕ್ ದೈತ್ಯರ ಮೇಲೆ ಅಲ್ಲಿನ ಸರ್ಕಾರ ಹಾಗೂ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.

ಶ್ರೀಮಂತರ ಮೇಲೂ ಕಣ್ಣು..!

ಶ್ರೀಮಂತರ ಮೇಲೂ ಕಣ್ಣು..!

ಸರ್ಕಾರಕ್ಕೇ ಮೋಸ ಮಾಡಿ ಹಣ ಸಂಪಾದಿಸುವ ಕೆಲವರಿಗೆ ಚೀನಾದಲ್ಲಿ ಅವಕಾಶವೇ ಇಲ್ಲ. ಬಿಲಿಯನೆರ್ಸ್ ಪಟ್ಟ ಕಟ್ಟಿಕೊಂಡವರ ಮೇಲೆ ಅಧಿಕಾರಿಗಳು ಕಣ್ಣಿಟ್ಟಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಬಿಲಿಯನೆರ್ಸ್ ಮೇಲಿನ ನಿಯಮಗಳು ಮತ್ತಷ್ಟು ಕಠಿಣವಾಗಿವೆ. ಬಡತನ ನಿರ್ಮೂಲನೆ ಮಾಡಿ ಮಹತ್ತರ ಸಾಧನೆ ಮಾಡಿರುವ ಚೀನಾ ಇದೀಗ ತನ್ನ ಆರ್ಥಿಕತೆಯಲ್ಲೂ ಮಹತ್ವದ ಬದಲಾವಣೆ ತರುತ್ತಿದೆ. ಇದು ಕೆಲವು ಖಾಸಗಿ ಸಂಸ್ಥೆಗಳಿಗೆ ಕಿರಿಕಿರಿ ಉಂಟು ಮಾಡಿದ್ರೂ, ಭವಿಷ್ಯದ ದೃಷ್ಟಿಯಿಂದ ಚೀನಾ ಇಂತಹ ಹಲವು ಖಡಕ್ ನಿರ್ಧಾರ ತೆಗೆದುಕೊಂಡಿದೆ.

 ಚೀನಾದಲ್ಲಿ ಬಡವರೇ ಇಲ್ಲ..!

ಚೀನಾದಲ್ಲಿ ಬಡವರೇ ಇಲ್ಲ..!

ಒಂದು ಕಾಲದಲ್ಲಿ ತೀವ್ರ ಬಡತನ ತುಂಬಿದ ರಾಷ್ಟ್ರವಾಗಿದ್ದ ಚೀನಾದಲ್ಲಿ ಈಗ ಬಡವರೇ ಇಲ್ಲ. ಪವರ್ ಫುಲ್ ರಾಷ್ಟ್ರಗಳೇ ಬಡತನದ ಸಂಕೋಲೆಯಲ್ಲಿ ನರಳುತ್ತಿರುವ ಸಂದರ್ಭದಲ್ಲಿ ಚೀನಾ ಮಾತ್ರ ಜಗತ್ತು ಮೆಚ್ಚುವ ಕೆಲಸ ಮಾಡಿದೆ. ಚೀನಾ ತನ್ನ ದೇಶದಲ್ಲಿದ್ದ 77 ಕೋಟಿ ಬಡವರನ್ನು ವಿಷ ವರ್ತುಲದಿಂದ ಹೊರತಂದಿದೆ. ಫೆಬ್ರವರಿ ತಿಂಗಳಲ್ಲಿ ಈ ವಿಚಾರ ಹಂಚಿಕೊಂಡಿದ್ದ ಚೀನಾ, ಸತತ 40 ವರ್ಷಗಳ ಪರಿಶ್ರಮದ ನಂತರ ಗುರಿ ತಲುಪುವಲ್ಲಿ ಯಶಸ್ವಿಯಾಗಿತ್ತು. ಇದರ ಜೊತೆಗೆ ಶ್ರೀಮಂತರ ಪಟ್ಟಿಯಲ್ಲೂ ಚೀನಾ ನಂಬರ್ 1 ಸ್ಥಾನ ಅಲಂಕರಿಸಿದೆ.

ಸ್ವದೇಶಿ ವಸ್ತುಗಳಿಗೆ ಪ್ರಾಮುಖ್ಯತೆ..!

ಸ್ವದೇಶಿ ವಸ್ತುಗಳಿಗೆ ಪ್ರಾಮುಖ್ಯತೆ..!

ಸಾಮಾನ್ಯವಾಗಿ ಜನಸಂಖ್ಯೆಯೇ ದೊಡ್ಡ ಶಾಪ ಎಂದು ಭಾವಿಸುವ ರೂಢಿ ಈ ಜಗತ್ತಿನಲ್ಲಿದೆ. ಆದರೆ ತನ್ನಲ್ಲಿದ್ದ ಅಗಾಧ ಮಾನವ ಸಂಪನ್ಮೂಲವನ್ನೇ ದೊಡ್ಡ ಅಸ್ತ್ರ ಮಾಡಿಕೊಂಡ ಚೀನಾ ನಾಯಕರು, ಅಭಿವೃದ್ಧಿಯ ಪಥದಲ್ಲಿ ಮಹತ್ವದ ಯಶಸ್ಸು ಸಾಧಿಸಿದ್ದಾರೆ. ಎಷ್ಟೆಲ್ಲಾ ಸವಾಲುಗಳು ಇದ್ದರೂ ಬಡವರಿಗೆ ಬೇಕಾದ ಮೂಲಸೌಕರ್ಯ, ಬದಕಲು ಅಗತ್ಯವಿರುವ ವಸ್ತುಗಳ ಜೊತೆಗೆ, ದೇಶಕ್ಕೆ ಕೊಡುಗೆ ನೀಡಬಲ್ಲ ಸಾಮರ್ಥ್ಯವನ್ನೂ ಚೀನಾ ಸರ್ಕಾರ ತನ್ನ ಪ್ರಜೆಗಳಿಗೆ ಕಲಿಸಿಕೊಟ್ಟಿದೆ. ಈ ಎಲ್ಲಾ ಹಂತಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಮಾತ್ರ ಚೀನಾ ಸರ್ಕಾರದ ಸ್ವದೇಶಿ ಮಂತ್ರ. ತೊಡುವ ಬಟ್ಟೆಯಿಂದ ಹಿಡಿದು, ಶೋಕಿ ಮಾಡುವ ಕಾರುಗಳು ಕೂಡ ಅಲ್ಲಿಯೇ ತಯಾರಾದವು. ಇದನ್ನು ಚೀನಿಯರು ಪಾಲಿಸದೇ ಇದ್ದಿದ್ದರೆ ಇಂತಹ ಸಾಧನೆ ಅಸಾಧ್ಯವಾಗುತ್ತಿತ್ತು.

ಬಡವರಿಗೆ ಐಷಾರಾಮಿ ಫ್ಲ್ಯಾಟ್‌ಗಳು..!

ಬಡವರಿಗೆ ಐಷಾರಾಮಿ ಫ್ಲ್ಯಾಟ್‌ಗಳು..!

ಚೀನಾದಲ್ಲಿ ಬಡವರಿಗೆ ವಸತಿ ಒದಗಿಸುವ ಯೋಜನೆ ಜಾರಿಗೆ ಬಂದಾಗ, ಜಗತ್ತಿನ ಇತರ ರಾಷ್ಟ್ರಗಳಂತೆ ಇಲ್ಲೂ ಮಾಮೂಲಿ ಸೂರು ಸಿಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಆ ಊಹೆ ಸುಳ್ಳಾಗಿತ್ತು. ಈಗಲೂ ಬಹುತೇಕ ಕೊಳೆಗೇರಿ ಜನರಿಗೆ ಐಷಾರಾಮಿ ಫ್ಲ್ಯಾಟ್‌ಗಳನ್ನ ಒದಗಿಸಿದೆ ಚೀನಿ ಸರ್ಕಾರ. ಇದಕ್ಕಾಗಿ ಸಾವಿರಾರು ಕೋಟಿ ವೆಚ್ಚ ಮಾಡಿ, ಹತ್ತಾರು ವರ್ಷಗಳ ಪರಿಶ್ರಮವನ್ನೂ ಹಾಕಿದೆ. ಇದರ ಪರಿಣಾಮ ಬಡ ಜನರಿಗೂ ಅತ್ಯುತ್ತಮ ಸೇವೆ ಸಿಗುವಂತಾಗಿದೆ. ಈ ಸಾಧನೆ ಕಂಡಿದ್ದ ಬಹುತೇಕ ಶ್ರೀಮಂತ ರಾಷ್ಟ್ರಗಳು ಶಾಕ್‌ ಆಗಿದ್ದುಂಟು.

ವಾಯುಮಾಲಿನ್ಯ ಕೂಡ ಮಾಯ..!

ವಾಯುಮಾಲಿನ್ಯ ಕೂಡ ಮಾಯ..!

10-15 ವರ್ಷದ ಹಿಂದೆ ಚೀನಾ ಎಂದರೆ ಮಾಲಿನ್ಯ, ಮಾಲಿನ್ಯ ಅಂದ್ರೆ ಚೀನಾ ಎಂದು ಜಗತ್ತು ಜರಿಯುತ್ತಿತ್ತು. ಆದರೆ ಈಗ ಇದೇ ಚೀನಾ ಪ್ರಕೃತಿ ಸೊಬಗಿನ ತವರಾಗಿದೆ. ಅದರಲ್ಲೂ ಚೀನಾ ರಾಜಧಾನಿ ಬೀಜಿಂಗ್ ಎಷ್ಟು ಸುಧಾರಿಸಿದೆ ಎಂದರೆ, ಕೆಲವೇ ವರ್ಷಗಳಲ್ಲಿ ಸಂಪೂರ್ಣ ವಾಯು ಮಾಲಿನ್ಯವನ್ನ ಸರ್ಕಾರ ಕಂಟ್ರೋಲ್‌ಗೆ ತಂದಿದೆ. ಮಾಲಿನ್ಯ ನಿಯಂತ್ರಣದ ಹಿಂದೆ ಹಲವು ಕಠಿಣ ಕ್ರಮಗಳು ಕೂಡ ಪ್ರಭಾವ ಬೀರಿವೆ. ಅದರಲ್ಲೂ ಕಾರ್ಬನ್ ಮತ್ತು ಸಿಎಫ್‌ಸಿ ಅನಿಲ ಹೊರಸೂಸುವ ಯಂತ್ರ, ಮತ್ತಿತರ ವಸ್ತುಗಳಿಗೆ ನಿಷೇಧ ಹೇರಿದ್ದು ಫಲ ನೀಡಿದೆ. ಇನ್ನು ಕೈಗಾರಿಕೆಗಳಿಗೆ ನೀಡಿದ ಖಡಕ್ ವಾರ್ನಿಂಗ್ ಕೂಡ ಚೀನಾದ ಮಾಲಿನ್ಯ ನಿಯಂತ್ರಿಸಿದೆ.

 ಯುರೋಪ್‌ಗೂ ಚೀನಿಯರಿಂದ ಹೆಲ್ಪ್..!

ಯುರೋಪ್‌ಗೂ ಚೀನಿಯರಿಂದ ಹೆಲ್ಪ್..!

ಚೀನಾ ಎಷ್ಟರಮಟ್ಟಿಗೆ ಜಾಗತಿಕವಾಗಿ ಹಿಡಿತ ಸಾಧಿಸಿದೆ ಎಂದರೆ ಯುರೋಪ್ ದೇಶಗಳು ಚೀನಾ ಮೇಲೆಯೇ ಅವಲಂಬಿತವಾಗಿವೆ. ಯುರೋಪ್‌ನ ಹಲವು ಬಡ ರಾಷ್ಟ್ರಗಳಲ್ಲಿ ಚೀನಾ ಸರ್ಕಾರ ಹಾಗೂ ಚೀನಾ ಮೂಲದ ಕಂಪನಿಗಳು ಹೂಡುವ ಬಂಡವಾಳವೇ ಬಹುಮುಖ್ಯ ಎನಿಸಿದೆ. ಇದೇ ಕಾರಣಕ್ಕೆ ಯುರೋಪ್ ಒಕ್ಕೂಟದಲ್ಲಿ ಚೀನಾ ಪರ ಹಾಗೂ ವಿರುದ್ಧದ ಧ್ವನಿ ಮೊಳಗುತ್ತಿರುತ್ತದೆ. ಜರ್ಮನಿ ಮತ್ತು ಫ್ರಾನ್ಸ್ ಸೇರಿದಂತೆ ಈ ಮೊದಲು ಯುರೋಪ್ ಒಕ್ಕೂಟದ ಭಾಗವಾಗಿದ್ದ ಬ್ರಿಟನ್ ಚೀನಾ ಬಗ್ಗೆ ಅಷ್ಟಾಗಿ ಒಲವು ಬೆಳೆಸಿಕೊಂಡಿರಲಿಲ್ಲ. ಆದರೆ ಇದೇ ಒಕ್ಕೂಟದ ಬಡ ರಾಷ್ಟ್ರಗಳು, ತಮ್ಮ ಮೂಲ ಸೌಕರ್ಯದಿಂದ ಹಿಡಿದು ಕೈಗಾರಿಕೆಗಳ ಅಭಿವೃದ್ಧಿವರೆಗೂ ಚೀನಾದ ಬೆನ್ನು ಬಿದ್ದಿವೆ ಎಂದರೆ ಲೆಕ್ಕ ಹಾಕಿ ಡ್ರ್ಯಾಗನ್ ರಾಷ್ಟ್ರ ಎಷ್ಟರಮಟ್ಟಿಗೆ ಬೆಳೆದಿದೆ ಎಂದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+