ಈವರೆಗಿನ ಸುದೀರ್ಘ ಹಾಗೂ ಚೊಕ್ಕದಾದ ಬಜೆಟ್ ಭಾಷಣ ಯಾವುದು?
ನವದೆಹಲಿ, ಜನವರಿ 28: ಭಾರತದ ಬಜೆಟ್ ಆರ್ಥಿಕತೆಯ ಎಲ್ಲಾ ಕ್ಷೇತ್ರಗಳಲ್ಲಿ ಮಹತ್ತರವಾದ ಬದಲಾವಣೆಯನ್ನು ತರಬಹುದಾದ ಘಟ್ಟವಾಗಿದೆ. ಈ ಬಜೆಟ್ ಅಧಿವೇಶನವು ದೇಶದಲ್ಲಿ ಮಹತ್ವದ ಘಟನೆಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತದೆ. ಎಲ್ಲಾ ವಲಯಗಳು ಬಜೆಟ್ ಅಧಿವೇಶನದಲ್ಲಿ ಹಣಕಾಸು ಸಚಿವರ ಘೋಷಣೆಗಳಿಗಾಗಿ ಕಾಯುತ್ತಿರುತ್ತಾರೆ.
ಭಾರತದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2022 ರಂದು ತಮ್ಮ ನಾಲ್ಕನೇ ಕೇಂದ್ರ ಬಜೆಟ್ ಅನ್ನು ಘೋಷಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ದೇಶದ ಬಜೆಟ್ ಅನ್ನು ಘೋಷಿಸಲಿರುವ ಕಾರಣ, ಭಾರತೀಯ ಬಜೆಟ್ ಮಂಡನೆ ಭಾಷಣವು ಎಷ್ಟು ಸಮಯದವರೆಗೆ ಇರುತ್ತದೆ ಎಂಬುದರ ಕುರಿತು ಕೆಲವು ವಿವರಗಳು ಇಲ್ಲಿವೆ...
ಸಂಸತ್ತಿನ ಕೆಳಮನೆಯಲ್ಲಿ ಬಜೆಟ್ ಅಧಿವೇಶನವು ಎರಡು ಭಾಗಗಳಲ್ಲಿ ನಡೆಯಲಿದೆ. ಮೊದಲ ಭಾಗವು ಜನವರಿ 31 ರಿಂದ ಫೆಬ್ರವರಿ 11 ರವರೆಗೆ ಮತ್ತು ಎರಡನೇ ಭಾಗವು ಮಾರ್ಚ್ 14 ರಿಂದ ಏಪ್ರಿಲ್ 8 ರವರೆಗೆ ಇರುತ್ತದೆ. ಬಜೆಟ್ ಅಧಿವೇಶನದ ಸಮಸ್ಯೆಗಳು ಮತ್ತು ಶಾಸಕಾಂಗ ವ್ಯವಹಾರಗಳ ಬಗ್ಗೆ ಚರ್ಚಿಸಲು ಸರ್ಕಾರ ಜನವರಿ 31 ರಂದು ಸರ್ವಪಕ್ಷ ಸಭೆಯನ್ನು ಕರೆದಿದೆ. ಈ ಸರ್ವಪಕ್ಷ ಸಭೆಯು ವರ್ಚುವಲ್ ರೂಪದಲ್ಲಿ ನಡೆಯಲಿದೆ. ಅದೇ ದಿನ ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿಗಳ ಭಾಷಣದೊಂದಿಗೆ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ನಂತರ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುತ್ತದೆ.

ಕೇಂದ್ರ ಬಜೆಟ್ 2022 ವೇಳಾಪಟ್ಟಿ
ಶಿಷ್ಟಾಚಾರದಂತೆ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಲೋಕಸಭೆ ಮತ್ತು ರಾಜ್ಯಸಭೆ ಎರಡಕ್ಕೂ ಜಂಟಿ ಭಾಷಣವನ್ನು ಜನವರಿ 31 ರಂದು ಬಜೆಟ್ ಅಧಿವೇಶನದಲ್ಲಿ ಮಾಡಲಿದ್ದಾರೆ. ಮುಂದೆ, ಆರ್ಥಿಕ ಅಭಿವೃದ್ಧಿ ಮತ್ತು ಕಳೆದ ವರ್ಷದಲ್ಲಿ ಎದುರಿಸಿದ ಪ್ರಮುಖ ಸವಾಲುಗಳನ್ನು ಎತ್ತಿ ತೋರಿಸುವ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುತ್ತದೆ. ಕೇಂದ್ರ ಬಜೆಟ್ 2022 ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮರುದಿನ ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಭಾಷಣದ ನಂತರ ಫೆಬ್ರವರಿ 11 ರವರೆಗೆ ಬಜೆಟ್ ಅಧಿವೇಶನದ ಮೊದಲ ಹಂತದ ಚರ್ಚೆಗಳು ನಡೆಯಲಿವೆ.

ಈ ಹಿಂದೆ ಬಜೆಟ್ ಅಧಿವೇಶನ ಯಾವಾಗ ನಡೆಯುತ್ತಿತ್ತು?
ಬಜೆಟ್ ಮಂಡನೆಯು ನೀತಿ ತಜ್ಞರು, ಉದ್ಯಮಿಗಳು ಮತ್ತು ಪ್ರತಿಯೊಬ್ಬ ಸಾಮಾನ್ಯರು ಕಾತುರದಿಂದ ಕಾಯುವ ಒಂದು ಪ್ರಮುಖ ಘಟನೆಯಾಗಿದೆ. ಏಕೆಂದರೆ ಈ ಬಜೆಟ್ ಪ್ರತಿ ಮನೆಯ ಒಟ್ಟಾರೆ ಹಣಕಾಸು ಯೋಜನೆಯ ಮೇಲೆ ಪರಿಣಾಮ ಬೀರುತ್ತದೆ. 2016 ರ ಮೊದಲು, ದೇಶದ ಆಗಿನ ಹಣಕಾಸು ಸಚಿವರು ಫೆಬ್ರವರಿ ಕೊನೆಯ ಕಾರ್ಯ ನಿರ್ವಹಣೆ ದಿನದಂದು ಘೋಷಿಸಿದ್ದಾರೆ. ಈ ಪದ್ಧತಿಯನ್ನು ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಬದಲಾಯಿಸಿದ್ದಾರೆ. ಈಗ ಫೆಬ್ರವರಿ ಒಂದರಂದು ಬಜೆಟ್ ಅಧಿವೇಶನ ನಡೆಯುತ್ತದೆ. ಗಮನಾರ್ಹವಾಗಿ, ಮತದಾರರಿಗೆ ಸರಿಯಾದ ಸಂದೇಶವನ್ನು ತಲುಪಿಸಲು ಸರ್ಕಾರವು ಸ್ಪಷ್ಟ ಭಾಷಣಗಳನ್ನು ನೀಡುವುದು ಮುಖ್ಯವಾಗಿದೆ.

ಸುದೀರ್ಘ ಬಜೆಟ್ ಭಾಷಣ ಯಾವುದು?
ಭಾರತದ ಬಜೆಟ್ ಅಧಿವೇಶನವು ಸರಾಸರಿ 90 ರಿಂದ 120 ನಿಮಿಷಗಳವರೆಗೆ ಇರುವುದರಿಂದ ಭಾರತದ ಬಜೆಟ್ ಮಂಡನೆಯು ದೀರ್ಘವಾಗಿರುತ್ತದೆ. ಫೆಬ್ರವರಿ 1, 2020 ರಂದು ಕೇಂದ್ರ ಬಜೆಟ್ 2020-21 ಅನ್ನು ಪ್ರಸ್ತುತ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತುತಪಡಿಸಿದರು. ಅವರು ಒಟ್ಟು 2 ಗಂಟೆ 42 ನಿಮಿಷಗಳ ಕಾಲ ಬಜೆಟ್ ಭಾಷಣವನ್ನು ಮಾಡಿದ್ದಾರೆ. ಬಜೆಟ್ ಭಾಷಣ ಮಾಡುತ್ತಿದ್ದಂತೆ ನಿರ್ಮಲಾ ಸೀತಾರಾಮನ್ ಅಸ್ವಸ್ಥರಾಗಿದ್ದರು. ನಂತರ ಉಳಿದ ಭಾಷಣವನ್ನು ಸ್ಪೀಕರ್ ಮಾಡಿದರು. ಈ ಭಾಷಣವು ಜುಲೈ 2019 ರಲ್ಲಿ ಮಾಡಿದ 2 ಗಂಟೆ 17 ನಿಮಿಷಗಳ ಸುದೀರ್ಘ ಭಾಷಣಕ್ಕಿಂತ ದೀರ್ಘವಾಗಿತ್ತು.

ಅತೀ ಸಣ್ಣದಾದ, ಚೊಕ್ಕದಾದ ಬಜೆಟ್ ಭಾಷಣ ಯಾವುದು?
ಮಾಜಿ ಹಣಕಾಸು ಸಚಿವ ಹಿರೂಭಾಯಿ ಮುಲ್ಜಿಭಾಯಿ ಪಟೇಲ್ 1977 ರಲ್ಲಿ ಕೇವಲ 800 ಪದಗಳಲ್ಲಿ ಬಜೆಟ್ ಬಾಷಣ ಮಾಡಿದರು. ಇಲ್ಲಿಯವರೆಗಿನ ಅತ್ಯಂತ ಚಿಕ್ಕ ಬಜೆಟ್ ಭಾಷಣವೆಂದು ಈ ಭಾಷಣವನ್ನು ಪರಿಗಣಿಸಲಾಗಿದೆ. ಪದಗಳ ಸಂಖ್ಯೆಗೆ ಸಂಬಂಧಿಸಿದಂತೆ, ನಾವು ಹೋಲಿಕೆ ಮಾಡುವುದಾದರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ನರಸಿಂಹ ರಾವ್ ಸರ್ಕಾರದಲ್ಲಿ ಆಗಿನ ಹಣಕಾಸು ಸಚಿವರು 1991 ರಲ್ಲಿ ಮಾಡಿದ ಬಜೆಟ್ ಭಾಷಣವು 18,650 ಪದಗಳನ್ನು ಒಳಗೊಂಡಿರುವ ಸುದೀರ್ಘ ಬಜೆಟ್ ಭಾಷಣವಾಗಿದೆ. ದಿವಂಗತ ಆರ್ ಕೆ ಷಣ್ಮುಖಂ ಚೆಟ್ಟಿಯವರ ಮೊದಲ ಕೇಂದ್ರ ಬಜೆಟ್ ಭಾಷಣವು ಚಿಕ್ಕದಾಗಿತ್ತು. ಇದು ಕೇವಲ 39 ಪ್ಯಾರಾಗಳನ್ನು ಹೊಂದಿತ್ತು.












Click it and Unblock the Notifications