BSNL Best Plans: ಕಡಿಮೆ ಬೆಲೆಯ ಅತ್ಯುತ್ತಮ ಡೇಟಾ ರೀಚಾರ್ಜ್ ಪ್ಲಾನ್‌ಗಳು

ಬೆಂಗಳೂರು, ಜನವರಿ 13: ಭಾರತದ ಟೆಲಿಕಾಂ ಸಂಸ್ಥೆಗಳಲ್ಲಿ ಕ್ರಾಂತಿ ಮೂಡಿಸುತ್ತಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ವಿವಿಧ ರೀಚಾರ್ಜ್ ಯೋಜನೆಗಳನ್ನು ಈಗಾಗಲೇ ಘೋಷಣೆ ಮಾಡಿದೆ. ಖಾಸಗಿ ಸಂಸ್ಥೆಗಳ 5G ಸೇವೆ ನೀಡುತ್ತಿದ್ದರೆ, ಬಿಎಸ್‌ಎನ್‌ಎಲ್ ಇನ್ನೂ 4G ಸೇವೆ ನೀಡುವುದರಲ್ಲಿದೆ. ಹೀಗಿದ್ದರೂ ಸಹ ತನ್ನ ಯೋಜನೆಗಳ ಮೂಲಕವೇ ಸಾಕಷ್ಟು ಗ್ರಾಹಕರನ್ನು ಸೆಳೆಯುತ್ತಿದೆ. ಹಾಗಾದರೆ ಅತೀ ಕಡಿಮೆ ಬೆಲೆ ಮೊಬೈಲ್ ರೀಚಾರ್ಜ್ ಪ್ಲಾನ್ ಯಾವುವು?, ಪ್ರಯೋಜನಗಳೇನು? ಇಲ್ಲಿವೆ ಮಾಹಿತಿ.

ಖಾಸಗಿ ಟೆಲಿಕಾಂ ಸಂಸ್ಥೆಗಳಾದ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಖಾಸಗಿ ಕಂಪನಿಗಳು 4ಜಿ ಜೊತೆಗೆ 5ಜಿಗೆ ಸಂಪೂರ್ಣವಾಗಿ ಅಪ್‌ಗ್ರೇಡ್ ಆಗಿವೆ. ಆದರೆ ಬಿಎಸ್‌ಎನ್‌ಎಲ್ 4ಜಿ ಯನ್ನು ದೇಶಾದ್ಯಂತ ಆರಂಭಿಸುತ್ತಿದೆ. ಇದಕ್ಕಾಗಿ ಟವರ್ ನಿರ್ಮಾಣ ಮಾಡುವ ಹಂತದಲ್ಲಿದೆ. ಟವರ್ ನಿರ್ಮಾಣ ಆಗುತ್ತಿದ್ದಂತೆ ಬಿಎಸ್‌ಎನ್‌ಎಲ್ 4ಜಿ ಸೇವೆ ನೀಡುವ ಜೊತೆಗೆ 5ಜಿ ಗೂ ಅಪ್‌ಗ್ರೇಡ್ ಆಗಲಿದೆ.

BSNL Best Mobile Recharge Plans Under Rs 200 Benefits of BSNL Affordable Recharge plans

ಬಿಎಸ್‌ಎನ್‌ಎಲ್‌ ಕೈಗೆಟುಕುವ ರೀಚಾಜ್‌, ಡೇಟಾಗಳನ್ನು ಘೋಷಣೆ ಮಾಡಿದೆ. ಆ ಪೈಕಿ 200 ರೂಪಾಯಿಗೂ ಕಡಿಮೆ ಬೆಲೆ ರೀಚಾಜ್‌ ಪ್ಲಾನ್‌ಗಳು, ವ್ಯಾಲಿಡಿಟಿ, ವಿಶೇಷತೆ, ಪ್ರಯೋಜನ ಇಲ್ಲಿದೆ.

BSNL ರೂ. 200ಕ್ಕೂ ಅಗ್ಗದ ರೀಚಾರ್ಜ್ ಪ್ಲಾನ್‌ ಪಟ್ಟಿ

BSNL ರೂ. 107 ಯೋಜನೆ ಪ್ಲಾನ್, ವ್ಯಾಲಿಡಿಟಿ

BSNL ತನ್ನ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ರೀಚಾರ್ಜ್ ಪ್ಲಾನ್ ಸಿಗುವಂತೆ ಮಾಡಲು ರೂ. 107 ಪ್ಲಾನ್ ಘೋಷಣೆ ಮಾಡಿದೆ. ಕಡಿಮೆ ಬೆಲೆಗೆ ಉತ್ತಮ ಸೇವೆ ನೀಡಲು ಯೋಜಿಸಿದೆ. ಈ ಪ್ಲಾನ್ ದೇಶಾದ್ಯಂತ ಯಾವುದೇ ನೆಟ್‌ವರ್ಕ್‌ನಲ್ಲಿ ಸ್ಥಳೀಯ ಮತ್ತು STD ಗೆ ಕರೆ ಮಾಡಬಹುದು. ಒಟ್ಟು 200 ನಿಮಿಷಗಳವರೆಗೆ ಉಚಿತ ಕರೆ ಮಾಡಬಹುದು. ಅನಿಯಮಿತ ಕರೆ ಅವಕಾಶ ಇರುವುದಿಲ್ಲ. ಕೆಲವು ನಿರ್ದಿಷ್ಟ ಗ್ರಾಹಕರಿಗೆ 200 ನಿಮಿಷ ಉಚಿತ ಕರೆಗಳ ಪ್ಲಾನ್ ಸಾಕಾಗುತ್ತಿದೆ. ಇದು ಸೂಕ್ತ ಯೋಜನೆ ಎಂದು ಕಂಪನಿ ಹೇಳುತ್ತದೆ.

BSNL 153 ರೂ.ನ ಅತ್ಯುತ್ತಮ ಯೋಜನೆ

ಈ 153 ರೂಪಾಯಿ ಯೋಜನೆ ಅಗತ್ಯ ಡೇಟಾ ಮತ್ತು ಅನ್‌ಲಿಮಿಟೆಡ್ ಕರೆಗೆ ಅವಕಾಶ ಇದ್ದು, ಒಟ್ಟು 26 ದಿನಗಳ ವ್ಯಾಲಿಡಿಟಿ ಇದಾಗಿರಲಿದೆ. ಲೋಕಲ್ ಮತ್ತು ನ್ಯಾಷನಲ್ ರೋಮಿಂಗ್ ಸೇರಿದಂತೆ ದೇಶದ ಯಾವ ನಟ್‌ವರ್ಕ್‌ಗಳಲ್ಲಿಯೂ ಸೇವೆಯ ಪ್ರಯೋನ ಪಡೆಯಬಹುದಾಗಿದೆ. ಇದು 3ಜಿಬಿ ಡೇಟಾ ಖಾಲಿಯಾದ ನಂತರ ಇಂಟರ್‌ನೆಟ್ ವೇಗ 40 Kbps ಆಗುತ್ತದೆ. ನಿಯಮಿತ ಡೇಟಾ ಇದರಲ್ಲಿ ಸಿಗಲಿದೆ. ನಂತರ ವೇಗ ಕೊಂಚ ಕಡಿಮೆ ಆಗಲಿದೆ.

BSNL ರೂ. 199ನ ಬಜೆಟ್ ಪ್ಲಾನ್

ದೆಹಲಿ, ಮುಂಬೈ, ಬೆಂಗಳೂರು ಸೇರಿದಂತೆ ದೇಶ ಯಾವುದೇ ನೆಟ್‌ವರ್ಕ್‌ ಅಡಿಯಲ್ಲಿ ಈ BSNL ನ ರೂ. 199 ಯೋಜನೆ ರೋಮಿಂಗ್ ಕರೆಗೆ ಅವಕಾಶ ನೀಡುತ್ತದೆ. ಪ್ರತಿ ದಿನ 2ಜಿಬಿ ದೈನಂದಿನ ಇಂಟರ್‌ನೆಟ್ ಸೇವೆ ಲಭ್ಯವಾಗಲಿದೆ. ನಿಗದಿತ ಜಿಬಿ ಖಾಲಿ ಆದ ಬಳಿಕ 40Kbps ಗೆ ಸೇವೆ ಸಿಗಲಿದೆ. ನಿತ್ಯ 100 ಉಚಿತ ಎಸ್‌ಎಂಎಸ್ ಲಭ್ಯ ಇರಲಿದೆ. ಇದು ನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಿರುವ ಅಭ್ಯರ್ಥಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ ಎಂದು ಹೇಳಲಾಗುತ್ತಿದೆ.

ರೂ. 299ಗೆ BSNL ಅತ್ಯುತ್ತಮ ಡೇಟಾ ಪ್ಯಾಕ್ ಯೋಜನೆ

ರೂಪಾಯಿ 200 ಕ್ಕಿಂತ ಈ ಯೋಜನೆ ಹೆಚ್ಚಾಗಿದೆ. ಆದರೆ ಹೆಚ್ಚಿನ ಪ್ರಯೋಜನ ನೀಡುತ್ತದೆ. ಅಲಿಮಿಟೆಡ್ ಲೋಕಲ್ ಆಂಡ್ ನ್ಯಾಷನಲ್ ಕರೆಗಳು, 3ಜಿಬಿ ಡೇಟಾ ಪ್ರಯೋಜನ ನೀಡುತ್ತಿದೆ. ಡೇಟಾ ನಿಗದಿತ ಮಿತಿ ಮುಗಿದ ಬಳಿಕ ಬಳಕೆದಾರರಿಗೆ 40Kbps ನಲ್ಲಿ ಬ್ರೌಸಿಂಗ್ ಇಂಟರ್‌ನೆಟ್ ಸೇವೆ ಸಿಗುತ್ತದೆ. ಇಷ್ಟು ಕಡಿಮೆ ಪ್ರಮಾಣ ಸೇವೆ ನಿಮಗೆ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವವರಿಗೆ ಅನುಕೂಲ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+