ಜಾರ್ಖಂಡ್: ಸಿ ವೋಟರ್ ಸಮೀಕ್ಷೆಯಲ್ಲಿ ಬಿಜೆಪಿಗೆ ಜಯಭೇರಿ ಘೋಷಣೆ

ರಾಂಚಿ, ನವೆಂಬರ್ 28: ಮಹಾರಾಷ್ಟ್ರ ಕಳೆದುಕೊಂಡ ಭಾರತೀಯ ಜನತಾ ಪಕ್ಷ(ಬಿಜೆಪಿ) ಈಗ ಜಾರ್ಖಂಡ್ ಮೇಲೆ ತನ್ನ ಸಂಪೂರ್ಣ ಗಮನ ಕೇಂದ್ರಿಕೃತಗೊಳಿಸಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತದಾನಪೂರ್ವ ಸಮೀಕ್ಷೆಗಳು ಬರತೊಡಗಿದ್ದು, ಸಿ-ವೋಟರ್ ಸಂಸ್ಥೆ ಸಮೀಕ್ಷೆ ವರದಿ ಇಲ್ಲಿದೆ...

ಸಿ ವೋಟರ್ ಸಮೀಕ್ಷೆ ಪ್ರಕಾರ, ಬಿಜೆಪಿಗೆ ಅತಿ ಹೆಚ್ಚು ಸ್ಥಾನಗಳು ಲಭಿಸಲಿದೆ. ಸುಮಾರು 41 ಸ್ಥಾನಗಳನ್ನು ಕೇಸರಿ ಪಕ್ಷ ಪಡೆಯಲಿದೆ. ಆದರೆ, ಬಹುಮತ ಸಾಧಿಸುವುದು ಕಷ್ಟ ಎಂದು ತಿಳಿದು ಬಂದಿದೆ. 81 ಸ್ಥಾನಗಳ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ ಕನಿಷ್ಠ 41 ಸ್ಥಾನಗಳನ್ನು ಗೆಲ್ಲಬೇಕಾಗುತ್ತದೆ.

ಜಾರ್ಖಂಡ್ ರಾಜ್ಯದಲ್ಲಿ ಐದು ಸುತ್ತಿನಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 30 ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ಡಿಸೆಂಬರ್ 23ರಂದು ಕೊನೆ ಹಂತದ ಮತದಾನ ನಿಗದಿಯಾಗಿದೆ.

ಬಿಜೆಪಿ ವಿರುದ್ಧ ಮೈತ್ರಿಕೂಟ

ಬಿಜೆಪಿ ವಿರುದ್ಧ ಮೈತ್ರಿಕೂಟ

ಬಿಜೆಪಿಗೆ ಸೆಡ್ಡು ಹೊಡೆಯಲು ಜಾರ್ಖಂಡ್ ಮುಕ್ತಿ ಮೋರ್ಚಾ( ಜೆಎಂಎಂ), ಕಾಂಗ್ರೆಸ್, ಲಾಲೂ ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ ಮೈತ್ರಿಕೂಟ ರಚಿಸಿವೆ. ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೆನ್ ಅವರು ಮೈತ್ರಿಕೂಟದ ಸಿಎಂ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದಾರೆ.

81 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 31, ಆರ್ ಜೆಡಿ 7 ಹಾಗೂ ಜೆಎಂಎಂ 43 ಸ್ಥಾನಗಳಲ್ಲಿ ಸ್ಪರ್ಧೆಗಿಳಿದಿವೆ. ಜಾರ್ಖಂಡ್ ನಲ್ಲಿ ಕಳೆದ ವಿಧಾನಸಭೆ ಚುನಾವನೆ 2014 ರಲ್ಲಿ ನಡೆದಿತ್ತು. ಒಟ್ಟು 81 ಶಾಸಕ ಬಲದ ಜಾರ್ಖಂಡ್ ನಲ್ಲಿ ಪ್ರಸ್ತುತ ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ. 37 ಸ್ಥಾನಗಳ್ಲಲಿ ಜಯಗಳಿಸಿದ್ದ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಸ್ಥಳೀಯ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಬಹುಮತ ಸಾಬೀತುಪಡಿಸಿ, ಸರ್ಕಾರ ರಚಿಸಿತ್ತು. ರಘುವರ್ ದಾಸ್ ಮುಖ್ಯಮಂತ್ರಿಯಾಗಿದ್ದರು.

ಸಿ ವೋಟರ್ ಸಮೀಕ್ಷೆಯಲ್ಲಿ ಕೇಸರಿ ಪಕ್ಷಕ್ಕೆ ಜಯ

ಸಿ ವೋಟರ್ ಸಮೀಕ್ಷೆಯಲ್ಲಿ ಕೇಸರಿ ಪಕ್ಷಕ್ಕೆ ಜಯ

ಸಿ ವೋಟರ್ ಸಮೀಕ್ಷೆ ಪ್ರಕಾರ ಬಿಜೆಪಿಗೆ 41 ಸ್ಥಾನ ಸಿಗಲಿದೆ. ಪ್ರಮುಖ ವಿಪಕ್ಷ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) 18 ರಿಂದ 28 ಸ್ಥಾನಗಳನ್ನು ಗಳಿಸಬಹುದು, ಕಾಂಗ್ರೆಸ್ ಪಕ್ಷ 4 ರಿಂದ 10 ಸೀಟು ಗೆಲ್ಲಬಹುದು ಎಂದು ಹೇಳಲಾಗಿದೆ. ಅಖಿಲ ಜಾರ್ಖಂಡ್ ವಿದ್ಯಾರ್ಥಿ ಸಂಘಟನೆ(ಎಜೆಎಸ್ ಯು) 3 ರಿಂದ 9 ಸ್ಥಾನ ಗಳಿಸಬಹುದು. ಜಾರ್ಖಂಡ್ ವಿಕಾಸ್ ಮೋರ್ಚಾ ಹಾಗೂ ಇನ್ನಿರರ ಪಕ್ಷಗಳು 3-9 ಸ್ಥಾನ ಪಡೆಯಬಹುದು ಎಂದು ಹೇಳಿದೆ.

ಜಾರ್ಖಂಡ್ ಸಿಎಂ ಯಾರಾಗಬೇಕು?

ಜಾರ್ಖಂಡ್ ಸಿಎಂ ಯಾರಾಗಬೇಕು?

ಶೇ53.4ರಷ್ಟು ಮಂದಿ ಹೊಸ ಮುಖ್ಯಮಂತ್ರಿಯ ನಿರೀಕ್ಷೆಯಲ್ಲಿದ್ದಾರೆ. ಶೇ 28ರಷ್ಟು ಮಂದಿ ರಘುಬರ್ ದಾಸ್ ಅವರನ್ನೇ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲು ಬಯಸಿದ್ದಾರೆ. ಜೆಎಂಎಂ ಮುಖ್ಯಸ್ಥ , ಬಾಬುಲಾಲ್ ಮರಾಂಡಿ(ಜೆವಿಎಂ) ಪರ ಕೂಡಾ ಶೇ 22 ರಷ್ಟು ಮತಗಳು ಬಿದ್ದಿವೆ.

ಶೇಕಡಾವಾರು ಮತಗಳಿಕೆ

ಶೇಕಡಾವಾರು ಮತಗಳಿಕೆ

ಬಿಜೆಪಿ ಶೇ 33.3ರಷ್ಟು ಮತಗಳಿಕೆ ಪಡೆದರೆ, ಜೆಎಂಎಂ 18%, ಕಾಂಗ್ರೆಸ್ 12.4 %,ಜೆವಿಎಂ 7.7%, ಇನ್ನಿತರ ಪಕ್ಷಗಳು ಮಿಕ್ಕ ಶೇಕಡಾವಾರು ಮತಗಳನ್ನು ಹಂಚಿಕೊಳ್ಳಲಿವೆ ಎಂದು ಸಮೀಕ್ಷೆ ಹೇಳಿದೆ.

ಕೇಂದ್ರದ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ಸಾಧನೆಗಳ ಪ್ರಭಾವ ಎಷ್ಟಿದೆ? ಎಂಬ ಪ್ರಶ್ನೆಗೆ ಬಂದಿರುವ ಪ್ರತಿಕ್ರಿಯೆಗಳ ಪೈಕಿ ಶೇ 75ರಷ್ಟು ಮಂದಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪರ ಮತ ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+