• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಹಾರ ಚುನಾವಣೆ ಪ್ರಣಾಳಿಕೆ: 10 ಲಕ್ಷ ಉದ್ಯೋಗದ ಭರವಸೆ ನೀಡಿದ ಆರ್‌ಜೆಡಿ

|

ಪಟ್ನಾ, ಅಕ್ಟೋಬರ್ 24: ಬಿಹಾರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ, ಜೆಡಿಯು ಹಾಗೂ ಇತರೆ ರಾಜಕೀಯ ಪಕ್ಷಗಳು ಭರಪೂರ ಭರವಸೆಗಳನ್ನು ಹರಿಸಿದ ಬೆನ್ನಲ್ಲೇ, ಪ್ರಮುಖ ವಿರೋಧಪಕ್ಷ ರಾಷ್ಟ್ರೀಯ ಜನತಾದಳ ಶನಿವಾರ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ.

ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಪಟ್ನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶನಿವಾರ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ನಿರುದ್ಯೋಗ ಭೂತ ಕಾಡುತ್ತಿರುವ ಬಿಹಾರಕ್ಕೆ, ಉಳಿದ ರಾಜಕೀಯ ಪಕ್ಷಗಳಂತೆಯೇ ಉದ್ಯೋಗ ಭರವಸೆಯನ್ನು ತೇಜಸ್ವಿ ಯಾದವ್ ನೀಡಿದ್ದಾರೆ.

ಬಿಹಾರದ ಜನರಿಗೆ ಸರ್ಕಾರಿ ಉದ್ಯೋಗ ಏಕೆ ಸಿಗುತ್ತಿಲ್ಲ: ಮೋದಿ

10 ಲಕ್ಷ ಉದ್ಯೋಗ ಸೃಷ್ಟಿ, ಹೊಸ ಉದ್ಯಮ ಸ್ಥಾಪನೆಗೆ ತೆರಿಗೆ ವಿನಾಯಿಸಿ ಯೋಜನೆ ಹಾಗೂ ಬಿಹಾರದ ಜನತೆಗೆ 1,500 ರೂ. ನಿರುದ್ಯೋಗ ಭತ್ಯೆಯ ಭರವಸೆಗಳನ್ನು ಘೋಷಿಸಿದ್ದಾರೆ.

ವಲಸಿಗರು ಸತ್ತಾಗಲೂ ಮೋದಿ ತಲೆಕೆಡಿಸಿಕೊಳ್ಳಲಿಲ್ಲ: ರಾಹುಲ್ ಗಾಂಧಿ ವಾಗ್ದಾಳಿ

* ಪ್ರತಿ ಜಿಲ್ಲೆಗಳಲ್ಲಿಯೂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಸ್ಥಾಪನೆ.

* ಗುತ್ತಿಗೆ ಶಿಕ್ಷಕರು ಹಾಗೂ ಉರ್ದು ಶಿಕ್ಷಕರ ನೇಮಕಾತಿ

* ಹಳ್ಳಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು.

* ಬಡವರು ಹಾಗೂ ವೃದ್ಧರ ಪಿಂಚಣಿಯನ್ನು ತಿಂಗಳಿಗೆ 400 ರಿಂದ 1000ದವರೆಗೆ ಹೆಚ್ಚಿಸಲಾಗವುದು.

* ಸರ್ಕಾರಿ ಉದ್ಯೋಗ ಹಾಗೂ ಸರ್ಕಾರಿ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಬಿಹಾರಿಗಳು ಶುಲ್ಕ ನೀಡಬೇಕಾಗುವುದಿಲ್ಲ.

* ಹೊಸ ಕೈಗಾರಿಕಾ ನೀತಿ ರಚನೆ

* 50 ವರ್ಷ ದಾಟಿದ ಸರ್ಕಾರಿ ಉದ್ಯೋಗಿಗಳ ಕಡ್ಡಾಯ ನಿವೃತ್ತಿ ಹಿಂಪಡೆಯಲಾಗುವುದು.

English summary
Bihar Assembly Election 2020: RJD leader Tejashwi Yadav on Saturday releases manifesto with promise of 10 lakh jobs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X