Bajaj CNG Bike: ದೇಶದಲ್ಲಿ ಬಜಾಜ್ ಸಿಎನ್‌ಜಿ ಬೈಕ್‌ನ ಬುಕ್ಕಿಂಗ್ ಆರಂಭ
ಪೆಟ್ರೋಲ್‌ಗೆ ಪರ್ಯಾಯವಾಗಿ ಎಷ್ಟೋ ವಾಹನಗಳು ಮಾರುಕಟ್ಟೆಗೆ ಇಳಿಯುತ್ತಿವೆ. ಈ ವಾಹನಗಳಲ್ಲಿ ಬಹುಬಾಗ ವಾಹನಗಳು ಸ್ಕೂಟರ್‌ಗಳಾಗಿದ್ದು, ಬೈಕ್ ಸೆಗ್ಮೆಂಟ್‌ನಲ್ಲಿ ಬ್ಯಾಟರಿ ಚಾಲಿತ ವಾಹನ ಒಂದೂ ಬಂದಿರಲೇ ಇಲ್ಲ. ಆದರೆ ಈಗ ಬಜಾಜ್ ಸಿಎಂಜಿ ಬೈಕ್ ತರಲು ಮುಂದಾಗಿದ್ದು, ಈ ಬೈಕ್ ಪ್ರಿ ಬುಕ್ಕಿಂಗ್ ಸೇವೆಗಳು ಈಗಾಗಲೇ ಆರಂಭವಾಗಿವೆ.
ಬಜಾಜ್ ಫ್ರೀಡಂ 125 ಎಂಬ ಹೊಸ ಬೈಕ್ ಈಗ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಬೈಕ್ ಬಗ್ಗೆ ಗ್ರಾಹಕರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಈ ಬೈಕ್‌ನ ಪ್ರಿ ಬುಕ್ಕಿಂಗ್ ಈಗಾಗಲೇ ಆರಂಭವಾಗಿದ್ದು, ಈಗಾಗಲೇ ಈ ವಾಹನದ ಬಗ್ಗೆ 30 ಸಾವಿರಕ್ಕೂ ಹೆಚ್ಚು ಜನರು ವಿಚಾರಣೆ ನಡೆಸಿದ್ದಾರೆಂದು ತಿಳಿದು ಬಂದಿದೆ. ಗ್ರಾಹಕರು ವಿಚಾರಣೆಯನ್ನು ಗಮನದಲ್ಲಿಟ್ಟಕೊಂಡು ಕಂಪನಿ ಈ ಬೈಕ್ ಪ್ರಿ ಬುಕ್ಕಿಂಗ್ ಆರಂಭಿಸಿದೆ.

ಎಕ್ಸ್ ಶೋ ರೂಮ್ ಪ್ರೈಸ್ ಏನು?
ವಿಶ್ವದ ಮೊದಲ ಸಿಎನ್‌ಜಿ ಬೈಕ್‌ನ ಎಕ್ಸ್ ಶೋ ರೂಮ್ ಬೆಲೆ 95 000 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಸಕತ್ ಸ್ಟೈಲಿಶ್ ಆಗಿ ಕಾಣುವ ಈ ಬೈಕ್ ಇತ್ತೀಚಿಗೆ ಪುಣೆಯಲ್ಲಿ ಲಾಂಚ್ ಮಾಡಲಾಗಿದೆ. ಈ ಬೈಕ್‌ನ ಮೊದಲ ಡಿಲೇವರಿ ಪುಣೆಯಲ್ಲಿ ನೆಲೆಸಿರುವ ಪ್ರವೀಣ್ ಥೋರಟ್ ಅವರಿಗೆ ನೀಡಲಾಗಿದೆ. ಬಜಾಜ್ ಫ್ರೀಡಂ ಸಿಎನ್‌ಜಿ ಬೈಕ್ 3 ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ. ಇದರ ಕೆರಿಬಿಯನ್ ಬ್ಲೂ, ಸೈಬರ್ ವೈಟ್, ಎಬೊನಿ ಬ್ಲ್ಯಾಕ್/ಗ್ರೇ ಮತ್ತು ರೇಸಿಂಗ್ ರೆಡ್ ಬಣ್ಣದ ಆಯ್ಕೆಗಳು ಲಭ್ಯವಿದೆ.
ಸಿಎನ್‌ಜಿ ಹಾಗೂ ಪೆಟ್ರೋಲ್ ಟ್ಯಾಂಕ್
ಸ್ಟೈಲಿಷ್ ಆಗಿರುವ ಈ ಬೈಕ್ ಸಿಂಗಲ್ ಸಿಲಿಂಡರ್ ಹೊಂದಿದ್ದು, 9.5 ಪಿಎಸ್ ಪವರ್ ಮತ್ತು 9.7 ಎನ್‌ಎಮ್ ಟ್ರಾರ್ಕ್ ಉತ್ತಪಾದಿಸುತ್ತದೆ. ಈ ಬೈಕ್‌ನಲ್ಲಿ ಐದು ಗೇರ್ ಬಾಕ್ಸ್ ಹೊಂದಿವೆ. ಈ ಬೈಕ್ ಸಿಎನ್‌ಜಿ ಹಾಗೂ ಪೆಟ್ರೋಲ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಬೈಕ್‌ನ ಸೌಂಡರ್ ಬುಲೆಟ್ ರೀತಿ ಇದೆ.
ಈ ಬೈಕ್‌ನಲ್ಲಿ ಬ್ಲೂಟೂತ್ ಕನೆಕ್ಟಿವಿಟಿ, ಡಿಜಿಟಲ್ ಸ್ಪೀಡೋಮೀಟರ್, ಸಿಎನ್‌ಜಿ ಮತ್ತು ಹ್ಯಾಂಡಲ್‌ಬಾರ್‌ನಲ್ಲಿನ ಪೆಟ್ರೋಲ್ ಶಿಫ್ಟ್ ಬಟನ್, ಯುಎಸ್‌ಬಿ ಪೋರ್ಟ್, ಉದ್ದದ ಸೀಟ್ ಮತ್ತು ಗೇರ್ ಶಿಫ್ಟ್ ಸೂಚಕದಂತಹ ವೈಶಿಷ್ಟ್ಯಗಳಿವೆ.

ಏಷ್ಯ ಕಿ.ಮಿ. ವೇಗವಾಗಿ ಓಡುತ್ತದೆ ಗೊತ್ತಾ?
ಬಜಾಜ್ ಫ್ರೀಡಂ 125 ಬೈಕ್‌ನಲ್ಲಿ ಸಿಎನ್‌ಜಿ ಹಾಗೂ ಪೆಟ್ರೋಲ್ ವ್ಯವಸ್ಥೆ ನೀಡಲಾಗಿದೆ. ಸಿಎನ್‌ಜಿ ಬೈಕ್ 2 ಕೆ.ಜಿ ಹಾಗೂ 2 ಲೀಟರ್ ಇಂಧನ ಟ್ಯಾಂಕ್ ನೀಡಲಾಗಿದೆ. ಈ ಬೈಕ್ 130 ಕಿಲೋ ಮೀಟರ್ ವೇಗವಾಗಿ ಓಡುವ ಸಾಮರ್ಥ್ಯ ಹೊಂದಿದೆ. ಒಟ್ಟಾರೆಯಾಗಿ ಈ ಬೈಕ್ 330 ಕಿಲೋ ಮೀಟರ್ ದೂರವನ್ನು ಕ್ರಮಿಸಲಿದೆ. ಈ ಬೈಕ್ 11 ಸುರಕ್ಷತಾ ಪರೀಕ್ಷೆಗಳಲ್ಲಿ ಪಾಸ್ ಆಗಿದೆ.











Click it and Unblock the Notifications