Milk Price: ಇತರ ರಾಜ್ಯಗಳಲ್ಲಿ ಹಾಲಿನ ದರ ಹೇಗಿದೆ; ಕರ್ನಾಟಕಕ್ಕಿಂತ ಹೆಚ್ಚಾಗಿದೆಯೇ... ಕಡಿಮೆಯೇ?
ಬೆಂಗಳೂರು, ಜೂನ್. 26: ರಾಜ್ಯದಲ್ಲಿ ನಂದಿನಿ ಹಾಲಿನ ದರ ಹೆಚ್ಚಳದ ಬಗ್ಗೆ ಚರ್ಚೆಗಳು ನಡೆಯುತ್ತಲೆ ಇವೆ. ರಾಜ್ಯ ಸರ್ಕಾರ ನಾವು ದರ ಹೆಚ್ಚಳ ಮಾಡಿಲ್ಲ.. ಹೆಚ್ಚುವರಿ ಹಾಲು ನೀಡುತ್ತಿದ್ದೇವೆ. ಆ ಹಾಲಿಗೆ ಎರಡು ರೂಪಾಯಿ ದರ ವಿಧಿಸಿದ್ದೇವೆ ಎಂದು ಹೇಳುತ್ತಿದೆ. ಇದೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದನ್ನು ಸಮರ್ಥಿಸಿಕೊಂಡಿದ್ದಾರೆ.
ಪ್ರತಿಪಕ್ಷಗಳ ತೀವ್ರ ಪ್ರತಿಕ್ರಿಯೆಗಳ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದು ಏರಿಕೆಯಲ್ಲ ಎಂದು ಹೇಳಿಕೆ ನೀಡಿದ್ದಾರೆ. ಕರ್ನಾಟಕ ಹಾಲು ಒಕ್ಕೂಟವು ಗ್ರಾಹಕರಿಗೆ ನೀಡುವ ಪ್ರತಿ ಪ್ಯಾಕೆಟ್‌ಗೆ 50 ಮಿಲಿ ಹಾಲು ಹೆಚ್ಚಿಸಿದೆ. ಹೆಚ್ಚುವರಿ ಹಾಲಿನ ಪ್ರಮಾಣಕ್ಕೆ ಅನುಗುಣವಾಗಿ 2 ರೂಪಾಯಿ ಹೆಚ್ಚು ಶುಲ್ಕ ವಿಧಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಇದೇ ವೇಳೆ ವಿವಿಧ ರಾಜ್ಯಗಳಲ್ಲಿನ ಹಾಲಿನ ದರದ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಕರ್ನಾಟಕದಲ್ಲಿ ಈಗ ದರ ಹೆಚ್ಚಳದ ನಡುವೆ ಒಂದು ಲೀಟರ್ ಹಾಲಿಗೆ 44 ರೂಪಾಯಿ ಇದೆ. ಬೇರೆ ರಾಜ್ಯಗಳಲ್ಲಿ ಅಂದರೆ, ಕೇರಳ ಮಿಲ್ಮಾ, ದೆಹಲಿ ಮದರ್ ಡೈರಿ, ಗುಜರಾತ್ ಅಮುಲ್, ಆಂಧ್ರ ಪ್ರದೇಶದ ವಿಜಯ ಹಾಲಿನ ದರಗಳು ನಂದಿನಿ ಹಾಲಿನ ದರಕ್ಕಿಂತ ಹೆಚ್ಚಿವೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬೆಲೆ ಚಾರ್ಟ್ ಒಂದು ವೈರಲ್ ಆಗುತ್ತಿದೆ.
ವಿವಿಧ ರಾಜ್ಯಗಳಲ್ಲಿ ಹಾಲಿನ ದರ
ಕರ್ನಾಟಕ - 44 ರೂಪಾಯಿ /ಲೀಟರ್
ಆಂಧ್ರ ಪ್ರದೇಶ- 62 ರೂಪಾಯಿ /ಲೀಟರ್
ಜಾರ್ಖಾಂಡ್ - 58 ರೂಪಾಯಿ /ಲೀಟರ್
ಸಿಕ್ಕಿಂ - 65 ರೂಪಾಯಿ /ಲೀಟರ್
ಅಸ್ಸಾಂ - 64 ರೂಪಾಯಿ /ಲೀಟರ್
ಕೇರಳ - 58 ರೂಪಾಯಿ /ಲೀಟರ್
ತಮಿಳುನಾಡು- 49 ರೂಪಾಯಿ /ಲೀಟರ್
ಬಿಹಾರ- 55 ರೂಪಾಯಿ /ಲೀಟರ್
ಲಡಾಖ್ - 73 ರೂಪಾಯಿ /ಲೀಟರ್
ತೆಲಂಗಾಣ - 62 ರೂಪಾಯಿ /ಲೀಟರ್
ಛತ್ತೀಸ್‌ಘಡ - 62 ರೂಪಾಯಿ /ಲೀಟರ್
ಮಧ್ಯಪ್ರದೇಶ - 58 ರೂಪಾಯಿ /ಲೀಟರ್
ಉತ್ತರ ಪ್ರದೇಶ - 62 ರೂಪಾಯಿ /ಲೀಟರ್
ಗೋವಾ - 58 ರೂಪಾಯಿ /ಲೀಟರ್
ಮಹಾರಾಷ್ಟ್ರ - 57 ರೂಪಾಯಿ /ಲೀಟರ್
ಉತ್ತರಾಖಂಡ - 56 ರೂಪಾಯಿ /ಲೀಟರ್
ಗುಜರಾತ್ - 60 ರೂಪಾಯಿ /ಲೀಟರ್
ನಾಗಾಲ್ಯಾಂಡ್ - 65 ರೂಪಾಯಿ /ಲೀಟರ್
ಪಶ್ಚಿಮ ಬಂಗಾಳ - 52 ರೂಪಾಯಿ /ಲೀಟರ್
ಹರ್ಯಾಣ - 62 ರೂಪಾಯಿ /ಲೀಟರ್
ಒಡಿಶಾ - 52 ರೂಪಾಯಿ /ಲೀಟರ್
ಹಿಮಾಚಲ ಪ್ರದೇಶ - 66 ರೂಪಾಯಿ /ಲೀಟರ್
ಪಂಜಾಬ್ - 62 ರೂಪಾಯಿ /ಲೀಟರ್
ಜಮ್ಮು ಕಾಶ್ಮೀರ - 62 ರೂಪಾಯಿ /ಲೀಟರ್
ರಾಜಸ್ಥಾನ - 56 ರೂಪಾಯಿ /ಲೀಟರ್

ಕರ್ನಾಟಕ ಕಾಂಗ್ರೆಸ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದೆ. "ಏರಿಕೆಯಾಗಿದ್ದು ಹಾಲಿನ ದರವಲ್ಲ, ಏರಿಕೆಯಾಗಿದ್ದು ಹಾಲಿನ ಪ್ರಮಾಣ. ರಾಜ್ಯದಲ್ಲಿ ಹೆಚ್ಚು ಹಾಲು ಉತ್ಪಾದನೆ ಮಾಡುತ್ತಿರುವ ರೈತರಿಗೆ ನೆರವು ನೀಡಲು ಗ್ರಾಹಕರಿಗೆ ಹೆಚ್ಚಿನ ಹಾಲು ನೀಡಲು ಕ್ರಮ ವಹಿಸಲಾಗಿದೆ. ಪ್ರತಿ ಪ್ಯಾಕೆಟ್ ನಲ್ಲಿ 50 ಮಿಲಿ ಹೆಚ್ಚುವರಿ ಹಾಲು ನೀಡಲಾಗುತ್ತಿದೆ" ಎಂದಿದೆ.
"ಆ 50 ಮಿಲಿ ಹಾಲಿಗೆ ಪ್ರಸ್ತುತ ದರದ ಪ್ರಕಾರ 2.20 ರೂಪಾಯಿಯಾಗುತ್ತದೆ. ಆದರೆ, ಹೆಚ್ಚುವರಿ ಹಾಲಿಗೆ 2 ರೂಪಾಯಿಗಳನ್ನು ಮಾತ್ರ ಪಡೆಯಲಾಗುತ್ತಿದ್ದು 20 ಪೈಸೆ ರಿಯಾಯಿತಿ ನೀಡಲಾಗುತ್ತಿದೆ. ಅಂದರೆ ಹಾಲಿನ ದರ 20 ಪೈಸೆ ಇಳಿಕೆಯಾಗಿದೆ ಎಂದೇ ಅರ್ಥ. ಬಿಜೆಪಿಯ ಸುಳ್ಳುಗಳಿಗೆ ಸಾರ್ವಜನಿಕರು ಕಿವಿಗೊಡುವ ಅಗತ್ಯವಿಲ್ಲ" ಎಂದಿದೆ.












Click it and Unblock the Notifications