• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹವಾಮಾನ ವೈಪರೀತ್ಯದ ಪ್ರದೇಶಗಳಲ್ಲಿ ಹಸಿವು ಹಸಿವು; ಆಕ್ಸ್‌ಫಾಮ್ ವರದಿ

|
Google Oneindia Kannada News

ಹವಾಮಾನ ಬದಲಾವಣೆಯ ಹಾಟ್‌ಸ್ಪಾಟ್‌ಗಳೆಂದು ಗುರುತಿಸಲಾದ ಪ್ರದೇಶಗಳಲ್ಲಿ ತೀವ್ರ ಹಸಿವಿನಿಂದ ಬಳಲುತ್ತಿರುವ ಜನರ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಶುಕ್ರವಾರ ಬಿಡುಗಡೆಯಾದ ಆಕ್ಸ್‌ಫಾಮ್ ವರದಿಯಲ್ಲಿ ತಿಳಿಸಲಾಗಿದೆ.

ಅಫ್ಘಾನಿಸ್ತಾನ, ಬುರ್ಕಿನಾ ಫಾಸೋ, ಡಿಜಿಬೋತಿ, ಗಾಟಿಮಾಲ, ಹೈತಿ, ಕೀನ್ಯಾ, ಮಡಗಾಸ್ಕರ್, ನೈಜರ್, ಸೊಮಾಲಿಯಾ, ಜಿಂಬಾಬ್ವೆ ದೇಶಗಳಲ್ಲಿ ಕಳೆದ ಆರು ವರ್ಷಗಳಲ್ಲಿ ತೀವ್ರ ಹಸಿವಿನ ಪ್ರಮಾಣ ಶೇ. 123ರಷ್ಟು ಏರಿಕೆಯಾಗಿದೆ.

ಈ ಮೇಲಿನ 10 ದೇಶಗಳು ಅತಿ ಹೆಚ್ಚು ಕ್ಲೈಮೇಟ್ ಚೇಂಜ್ ಹಾಟ್‌ಸ್ಪಾಟ್‌ಗಳಿರುವ ದೇಶಗಳೆನಿಸಿವೆ. ಪ್ರಕೃತಿ ವಿಕೋಪ ಅವಘಡಗಳಿಂದ ಅತಿ ಹೆಚ್ಚು ಬಾರಿ ಅಂತಾರಾಷ್ಟ್ರೀಯ ನೆರವು ಯಾಚಿಸಿದ ಮಾನದಂಡದ ಮೇಲೆ ಈ ಹತ್ತು ದೇಶಗಳನ್ನು ಹವಾಮಾನ ಬದಲಾವಣೆಯ ಹಾಟ್‌ಸ್ಪಾಟ್‌ಗಳೆಂದು ವಿಶ್ವಸಂಸ್ಥೆ ಪರಿಗಣಿಸಿದೆ.

ಗ್ರೀನ್‌ಹೌಸ್ ಎಫೆಕ್ಟ್: ನಾವೆಷ್ಟು ಮಾಂಸ ತಿನ್ನಬೇಕು?ಗ್ರೀನ್‌ಹೌಸ್ ಎಫೆಕ್ಟ್: ನಾವೆಷ್ಟು ಮಾಂಸ ತಿನ್ನಬೇಕು?

ಈ ಹತ್ತು ದೇಶಗಳನ್ನು ಒಟ್ಟುಗೂಡಿಸಿ 4.8 ಕೋಟಿ ಜನರು ತೀವ್ರ ಹಸಿವೆಯಿಂದ ಬಳಲುತ್ತಿರುವ ಅಂದಾಜಿದೆ. ಮಾಮೂಲಿಯ ಹಸಿವೆಗೂ ತೀವ್ರ ಹಸಿವಿಗೂ ವ್ಯತ್ಯಾಸ ಇದೆ. ಬದಕಲು ಮೂಲ ಅವಶ್ಯಕ ಪ್ರಮಾಣದಷ್ಟು ಆಹಾರ ಪಡೆಯಲು ಅಸಾಧ್ಯವಾದರೆ ಅದನ್ನು ತೀವ್ರ ಹಸಿವಿನ ಸ್ಥಿತಿ ಎಂದು ಹೇಳಲಾಗಿದೆ. 2018ರಲ್ಲಿ ಈ ಹತ್ತು ದೇಶಗಳಲ್ಲಿ ತೀವ್ರ ಹಸಿವಿನಿಂದ ಬಳಲುತ್ತಿದ್ದವರ ಸಂಖ್ಯೆ 2.1 ಕೋಟಿ ಇತ್ತು. ನಾಲ್ಕೈದು ವರ್ಷದಲ್ಲಿ ಈ ಸಂಖ್ಯೆ ಎರಡು ಪಟ್ಟಿಗಿಂತ ಹೆಚ್ಚಾಗಿದೆ.

"ಹವಾಮಾನ ಬದಲಾವಣೆ ಈಗ ನಮಗೆದುರಾಗಲಿರುವ ಅಪಾಯವಾಗಿ ಉಳಿದಿಲ್ಲ. ಬದಲಾಗಿ ನಮ್ಮ ಕಣ್ಮುಂದೆ ಈಗಲೇ ಅಪಾಯ ಎದುರಿಸುತ್ತಿದ್ದೇವೆ" ಎಂದು ಆಕ್ಸ್‌ಫಾಮ್ ಇಂಟರ್ನ್ಯಾಷನಲ್ ಮುಖ್ಯಸ್ಥೆ ಗೇಬ್ರಿಯೆಲಾ ಬುಕರ್ ಹೇಳುತ್ತಾರೆ.

"ಬರ, ಚಂಡಮಾರುತ, ಪ್ರವಾಹದಂತಹ ಅತಿರೇಕದ ಹವಾಮಾನ ಪರಿಸ್ಥಿತಿ ಹೆಚ್ಚೆಚ್ಚು ಬಾರಿ ಎದುರುಬೀಳುತ್ತಿದೆ. ಹೆಚ್ಚೆಚ್ಚು ಅಪಾಯಕಾರಿ ಎನಿಸಿದೆ. ಕಳೆದ 50 ವರ್ಷದಲ್ಲಿ ಈ ಅತಿರೇಕದ ಹವಾಮಾನ ಸ್ಥಿತಿ ಐದು ಪಟ್ಟು ಹೆಚ್ಚಳವಾಗಿದೆ" ಎಂದು ಗೇಬ್ರಿಯೆಲಾ ತಿಳಿಸುತ್ತಾರೆ.

ಅಂತಾರಾಷ್ಟ್ರೀಯ ನೆರವಿಗೆ ಮನವಿ
ಅತಿರೇಕ ಹವಾಮಾನ ಪರಿಸ್ಥಿತಿ ಎದುರಿಸುತ್ತಿರುವ ದೇಶಗಳ ವಿಚಾರದಲ್ಲಿ ಒಂದು ಕುತೂಹಲಕಾರಿ ಅಂಶ ಇದೆ. ಯಾರೋ ಮಾಡಿದ ಪಾಪದ ಫಲವನ್ನು ಇವರು ಅನುಭವಿಸುತ್ತಿರುವುದು ಆಕ್ಸ್‌ಫಾಮ್ ವರದಿಯಿಂದ ವೇದ್ಯವಾಗುತ್ತದೆ. ಅತಿ ಕಡಿಮೆ ಪರಿಸರ ಮಾಲಿನ್ಯ ಮಾಡುವ ದೇಶಗಳಿಗೆ ಬರ, ಪ್ರವಾಹ ಇತ್ಯಾದಿ ಹವಾಮಾನ ವೈಪರೀತ್ಯ ದುರ್ಘಟನೆಗಳು ಜರುಗುತ್ತಿವೆ. ಇದು ಜಾಗತಿಕ ಅಸಮಾನತೆಗೆ ದ್ಯೋತಕವಾಗಿದೆ ಎಂದು ಆಕ್ಸ್‌ಫಾಮ್ ಹೇಳಿದೆ.

ಹವಾಮಾನ ವೈಪರೀತ್ಯದಿಂದ ಬಾಧಿತವಾಗಿರುವ ದೇಶಗಳಿಗೆ ಪಾಶ್ಚಿಮಾತ್ಯ ದೇಶಗಳು ಸಾಲ ಮನ್ನಾ ಮಾಡಿ ನೆರವಾಗಬೇಕು. ಹಾಗೆಯೇ, ಹವಾಮಾನ ಸೃಷ್ಟಿತ ಹಸಿವೆ ವಿರುದ್ಧ ಜಾಗತಿಕವಾಗಿ ಹೋರಾಡಲು ಈ ದೇಶಗಳು ಕೈಜೋಡಿಸಬೇಕು ಎಂದು ಆಕ್ಸ್‌ಫಾಮ್ ಕರೆ ನೀಡಿದೆ.

"ಕಡಿಮೆ ಆದಾಯದ ದೇಶಗಳಿಗೆ ಪ್ರಕೃತಿ ವಿಕೋಪ ದುರಂತ ಘಟನೆಗಳಿಂದ ಆದ ನಷ್ಟವನ್ನು ಪಾಶ್ಚಿಮಾತ್ಯ ದೇಶಗಳು ಭರಿಸಬೇಕು. ಅತಿ ಹೆಚ್ಚು ಬಾಧಿತ ದೇಶಗಳಿಗೆ ಈ ದೇಶಗಳು ಹಣದ ನೆರವು ನೀಡಬೇಕು" ಎಂದು ಆಕ್ಸ್‌ಫಾಮ್ ಇಂಟರ್ನ್ಯಾಷನಲ್ ಮುಖ್ಯಸ್ಥೆ ಗೇಬ್ರಿಯೆಲಾ ಬುಕರ್ ಹೇಳಿದ್ದಾರೆ.

ಕೆಟ್ಟ ಹವಾಮಾನದಿಂದ 200 ಸಾಂಕ್ರಾಮಿಕ ರೋಗಗಳು ಜಿವಂತ; ಯಾಕೆ ? ಇಲ್ಲಿದೆ ಮಾಹಿತಿಕೆಟ್ಟ ಹವಾಮಾನದಿಂದ 200 ಸಾಂಕ್ರಾಮಿಕ ರೋಗಗಳು ಜಿವಂತ; ಯಾಕೆ ? ಇಲ್ಲಿದೆ ಮಾಹಿತಿ

ಹವಾಮಾನ ವೈಪರೀತ್ಯದಿಂದ ಬಾಧಿತವಾದ ದೇಶಗಳಿಗೆ 49 ಬಿಲಿಯನ್ ಡಾಲರ್ (ಸುಮಾರು 4 ಲಕ್ಷ ಕೋಟಿ ರೂ) ನೆರವು ನೀಡಬೇಕೆಂದು ಮಾನವೀಯತೆ ದೃಷ್ಟಿಯಿಂದ ವಿಶ್ವಸಂಸ್ಥೆ ಮನವಿ ಮಾಡಿತ್ತು. ಈ ಹಣವು ತೈಲ ಕಂಪನಿಗಳ 18 ದಿನಗಳ ಆದಾಯಕ್ಕಿಂತ ಕಡಿಮೆ ಮೊತ್ತ ಎಂದು ಬುಕರ್ ತಿಳಿಹೇಳಿದ್ದಾರೆ.

ಆಕ್ಸ್‌ಫಾಮ್ ವರದಿಯಲ್ಲಿರುವ ಮುಖ್ಯಾಂಶವನ್ನು ಗಮನಿಸಿದರೆ ಆಫ್ರಿಕಾದ ಹಲವು ದೇಶಗಳು ಬರದಿಂದ ಬಾಧಿತವಾಗಿವೆ. ಸೊಮಾಲಿಯಾ ದೇಶದಲ್ಲಿ ಅತಿ ಹೆಚ್ಚು ಬರ ಸ್ಥಿತಿ ಇದೆ. 10 ಲಕ್ಷ ಜನರು ಊರು ತೊರೆದುಹೋಗಿದ್ದಾರೆ. ಕೀನ್ಯಾದಲ್ಲಿ 26 ಲಕ್ಷ ಜನರು ಸಾವನ್ನಪ್ಪಿದ್ದಾರೆ. 24 ಲಕ್ಷ ಜನರು ಹಸಿವೆಯಿಂದ ಬಳಲುತ್ತಿರುವುದು ಕಂಡು ಬಂದಿದೆ.

ಇನ್ನು, ನೈಜರ್ ದೇಶದಲ್ಲಿ ಕೃಷಿ ಉತ್ಪಾದನೆ ಶೇ. 60ರಷ್ಟು ಕುಸಿದಿದೆ. ಇಲ್ಲಿ 26 ಲಕ್ಷ ಜನರು ಅತೀ ಹಸಿವೆಯ ಸ್ಥಿತಿಯಲ್ಲಿದ್ದಾರೆ. ಬುರ್ಕಿನೋ ಫಾಸೋದ ಹಸಿರು ನೆಲ ಬಹುತೇಕ ಬರಗಾಡಾಗಿ ಮಾರ್ಪಟ್ಟಿದೆ.

(ಒನ್ಇಂಡಿಯಾ ಸುದ್ದಿ)

English summary
As poorer countries suffer the most from extreme weather, the charity has slammed major polluting countries in the West over a "stark demonstration of global inequality."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X