ನಟಿ ಸೋನಾಲಿ ಬೇಂದ್ರೆಗೆ ಕ್ಯಾನ್ಸರ್ ಚಿಕಿತ್ಸೆ, ಈಗ ಹೇಗಿದ್ದಾರೆ ಗೊತ್ತಾ?

ಆಕೆ ಚೆಲುವೆ. ನಾಲ್ಕಾರು ಭಾಷೆಯಲ್ಲಿ ನಟಿಸಿದ ಚಿತ್ರ ನಟಿ. ನಲವತ್ಮೂರು ವರ್ಷದ ಆಕೆಗೆ ಕ್ಯಾನ್ಸರ್. ಸದ್ಯಕ್ಕೆ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆ ಬೇಗ ಚೇತರಿಸಿಕೊಳ್ಳಲಿ ಎಂದು ಬಾಲಿವುಡ್ ನ ನಟ- ನಟಿಯರು ಹಾರೈಸುತ್ತಿದ್ದಾರೆ. ತನ್ನ ಬಗ್ಗೆಯೇ ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿರುವ ಆ ಕ್ಯಾನ್ಸರ್ ಪೀಡಿತ ನಟಿ- ಚೆಲುವೆ ಹೆಸರು ಸೋನಾಲಿ ಬೇಂದ್ರೆ.

ಹೌದು, ಅದೇ ನಟಿ. ಕನ್ನಡದಲ್ಲಿ 'ಪ್ರೀತ್ಸೆ' ಸಿನಿಮಾದಲ್ಲಿ ಉಪೇಂದ್ರ ಹಾಗೂ ಶಿವರಾಜ್ ಕುಮಾರ್ ಅವರ ಜತೆಯಾಗಿ ನಟಿಸಿದ್ದವರು. ಬಾಬ್ ಕಟ್ ಮಾಡಿಸಿಕೊಂಡಿದ್ದು, ಕಪ್ಪು ಟಾಪ್- ನೀಲಿ ಡೆನಿಮ್ ಹಾಕಿಕೊಂಡಿರುವ ಫೋಟೋವನ್ನು ಹಾಕಿರುವ ಸೋನಾಲಿ ಬೇಂದ್ರೆ ಏನು ಹೇಳಿಕೊಂಡಿದ್ದಾರೆ ಎಂಬುದರ ಸಾರಾಂಶ ನಿಮ್ಮ ಮುಂದಿದೆ.

ನನ್ನ ನೆಚ್ಚಿನ ಲೇಖಕರಾದ ಇಸಾಬೆಲ್ ಅಲೆಂಡ್ ಹೇಳಿದ್ದಾರೆ: ನಮ್ಮಲ್ಲಿ ಸುಪ್ತವಾಗಿರುವ ಶಕ್ತಿಯನ್ನು ಹೊರತರುವ ತನಕ ನಾವೆಷ್ಟು ಬಲಶಾಲಿಗಳು ಅನ್ನೋದು ನಮಗೇ ಗೊತ್ತಿರಲ್ಲ. ದುಃಖ, ಯುದ್ಧ, ಅಗತ್ಯದ ಸನ್ನಿವೇಶಗಳಲ್ಲಿ ಜನರು ಅದ್ಭುತವಾದದ್ದು ಮಾಡುತ್ತಾರೆ. ತನ್ನ ಉಳಿವು ಹಾಗೂ ಮರುಹುಟ್ಟಿಗಾಗಿ ಮನುಷ್ಯ ಮಾಡುವ ಪ್ರಯತ್ನಗಳು ಅದ್ಭುತ.

ಆ ಅನುಭವಗಳು ಧೈರ್ಯ ತುಂಬುತ್ತಿವೆ

ಆ ಅನುಭವಗಳು ಧೈರ್ಯ ತುಂಬುತ್ತಿವೆ

ಕಳೆದ ಕೆಲವು ದಿನಗಳಿಂದ ನನಗೆ ಸಿಗುತ್ತಿರುವ ಪ್ರೀತಿಯಿಂದ ಮನಸ್ಸು ತುಂಬಿ ಬಂದಿದೆ. ಅದರಲ್ಲೂ ಕ್ಯಾನ್ಸರ್ ಜತೆ ಬಡಿದಾಡಿ ಗೆದ್ದು ಬಂದ ಅನುಭವವನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿರುವವರಿಗೆ ನಾನು ಆಭಾರಿ. ಅದು ನಿಮ್ಮದು ಹಾಗೂ ನಿಮ್ಮ ಪ್ರೀತಿಪಾತ್ರರು ಯಾರದೇ ಆಗಿರಲಿ. ಆ ಅನುಭವಗಳು ನನ್ನಲ್ಲಿ ಇನ್ನೂ ಹೆಚ್ಚು ಬಲ ಹಾಗೂ ಧೈರ್ಯ ತುಂಬುತ್ತಿದೆ. ಅದರ ಜತೆಗೆ ನಾನು ಒಂಟಿಯಲ್ಲ ಎಂಬ ಭಾವ ಮೂಡುತ್ತಿದೆ.

ದಿನಕ್ಕೊಂದು ಹೊಸ ಸವಾಲು, ಗೆಲುವು

ದಿನಕ್ಕೊಂದು ಹೊಸ ಸವಾಲು, ಗೆಲುವು

ಈ ವರೆಗೆ ದಿನಕ್ಕೊಂದು ಹೊಸ ಸವಾಲು ಹಾಗೂ ಗೆಲುವು. ಒಂದು ಸಲಕ್ಕೆ ಒಂದೇ ದಿನ ಅಂತ ತೀರ್ಮಾನಿಸಿದ್ದೀನಿ. ಸಕಾರಾತ್ಮಕ ಆಲೋಚನೆ ಮಾಡುವುದರಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದ್ದೀನಿ. ಅಕ್ಷರಶಃ ಬೆಳಕಿನ ಕಡೆಗೆ ನನ್ನ ದೃಷ್ಟಿ- ಇದು ನಾನು ಕ್ಯಾನ್ಸರ್ ಜತೆಗೆ ನಡೆದುಕೊಳ್ಳುತ್ತಿರುವ ರೀತಿ.

ಎಲ್ಲವನ್ನೂ ಕಳೆದುಕೊಂಡಿಲ್ಲ ಎಂಬ ಧೈರ್ಯ

ನನ್ನ ಪಯಣದ ಬಗ್ಗೆ ಅನುಭವ ಹಂಚಿಕೊಳ್ಳುವುದು ಸಹ ಆ ಪ್ರಕ್ರಿಯೆಯ ಭಾಗವೇ. ನನಗಿರುವ ಭರವಸೆ ಏನೆಂದರೆ, ನಾನು ಎಲ್ಲವನ್ನೂ ಕಳೆದುಕೊಂಡಿಲ್ಲ ಅನ್ನೋದು ನೆನಪು ಆಗುತ್ತಲೇ ಇರುತ್ತದೆ. ನಿಮ್ಮ ಪರಿಸ್ಥಿತಿ ಹೇಗಿದೆ, ನೀವೆಂಥ ಸನ್ನಿವೇಶದಲ್ಲಿ ಇದ್ದೀರಾ ಎಂಬುದನ್ನು ಯಾರಾದರೂ ಎಲ್ಲಾದರೂ ಅರ್ಥ ಮಾಡಿಕೊಳ್ತಾರೆ.

ಇವರೆಲ್ಲ ಕ್ಯಾನ್ಸರ್ ಎದುರಿಸಿದವರು

ಇವರೆಲ್ಲ ಕ್ಯಾನ್ಸರ್ ಎದುರಿಸಿದವರು

ಅಂದಹಾಗೆ ಒಂಬತ್ತು ವರ್ಷದ ಹಿಂದೆ ಕ್ಯಾನ್ಸರ್ ಕಾಣಿಸಿಕೊಂಡು, ಆ ನಂತರ ಚೇತರಿಸಿಕೊಂಡ ನಟಿ ಲೀಸಾ ರೇ ಕೂಡ ಟ್ವಿಟ್ಟರ್ ನಲ್ಲಿ ಸೋನಾಲಿ ಬೇಂದ್ರೆಗೆ ಸಂದೇಶ ಕಳುಹಿಸಿದ್ದಾರೆ. ಇರ್ಫಾನ್ ಖಾನ್, ಮನಿಷಾ ಕೊಯಿರಾಲ, ಯುವರಾಜ್ ಸಿಂಗ್, ಮುಮ್ತಾಜ್ ಕೂಡ ಕ್ಯಾನ್ಸರ್ ಇರುವುದಾಗಿ ಗುರ್ತಿಸಿಕೊಂಡವರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+