Maha Kumbh Mela 2025: ಸನ್ಯಾಸಿ ಆದ ಮೇಲೂ ನಟನ 'ಒನ್ ನೈಟ್ ಸೀಕ್ರೆಟ್' ಬಿಚ್ಚಿಟ್ಟ ನಟಿ
ಉತ್ತರ ಪ್ರದೇಶದ ಪ್ರಯಾಗ್ ರಾಜ್ನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಹತ್ತಾರು ಜನರು ಲೌಕಿಕ ಜಗತ್ತನ್ನು ತೊರೆದು ಆಧ್ಯಾತ್ಮಿಕಗೆ ಕಾಲಿಡುತ್ತಿದ್ದು, ಬಹುಭಾಷಾ ನಟಿ ಮಮತಾ ಕುಲಕರ್ಣಿ ಕೂಡ ಸನ್ಯಾಸತ್ವ ಸ್ವೀಕರಿಸಿದ್ದರು. ಆದರೆ ಆಂತರಿಕವಾಗಿ ನಡೆದ ಕೆಲವು ಬೆಳವಣಿಗಳಿಂದ ಕಿನ್ನರ ಅಖಾಡ ಅವರನ್ನು ಉಚ್ಛಾಟನೆ ಮಾಡಿದೆ.
ಬಾಲಿವುಡ್ ನಟಿಯಾಗಿ ಮಿಂಚಿದ್ದ ಮಮತಾ ಕುಲಕರ್ಣಿ ಕಳೆದ ಕೆಲವು ವರ್ಷಗಳಿಂದ ಆಫ್ರಿಕಾದಲ್ಲಿ ನೆಲೆಸಿದ್ದಾರೆ. ವಿಕಿ ಗೋಸ್ವಾಮಿ ಎನ್ನುವವರು ಮದುವೆಯಾಗಿದ್ದು ಬಳಿಕ ಅಲ್ಲಿಯೇ ವಾಸವಿದ್ದಾರೆ. ಈ ಹಿಂದೆ 2000 ಕೋಟಿ ಹಣದ ಡ್ರಗ್ಸ್ ಪ್ರಕರಣದಲ್ಲಿ ಮಮತಾ ಕುಲಕರ್ಣಿಯರ ಹೆಸರು ಕೇಳಿ ಬಂದಿತ್ತು. ಅನೇಕ ಬಾರಿ ತನಿಖೆಗೂ ಹಾಜರಾಗಿದ್ದ ನಟಿ ಲೌಕಿಕ ಜೀವನದ ಬಗ್ಗೆ ಬೇಸತ್ತಿದ್ದರು.

ಕಳೆದ ಹಲವು ವರ್ಷಗಳಿಂದ ಕಿನ್ನರ ಅಖಾಡ ಜೊತೆ ಸಂಪರ್ಕ ಹೊಂದಿದ್ದ ಮಮತಾ ಕುಲಕರ್ಣಿ 2012ರಲ್ಲಿ ನಡೆದ ಕುಂಭ ಮೇಳದಲ್ಲಿ ಭಾಗವಹಿಸಿದ್ದರು. ಈ ಬಾರಿ ಸನ್ಯಾಸತ್ವ ಸ್ವೀಕರಿಸುವ ನಿರ್ಧಾರ ಮಾಡಿ 2025ರ ಮಹಾ ಕುಂಭ ಮೇಳದಲ್ಲಿ ಪಾಲ್ಗೊಂಡ ನಟಿ ಮಮತಾ ಕುಲಕರ್ಣಿ ಮೊದಲು ತ್ರಿವೇಣಿ ಸಂಗಮದಲ್ಲಿ ಪವಿತ್ರಾ ಸ್ನಾನ ಮಾಡಿ ಬಳಿಕ ಸ್ವ ಪಿಂಡ ಪ್ರದಾನ ಮಾಡಿ ಕಿನ್ನರ ಅಖಾಡಕ್ಕೆ ಸೇರಿಕೊಂಡಿದ್ದರು.
ಆಚಾರ್ಯ ಮಹಾಮಂಡಲೇಶ್ವರ ಲಕ್ಷ್ಮಿ ನಾರಾಯಣ ತ್ರಿಪಾಠಿ ದೀಕ್ಷೆ ಪಡೆದಿದ್ದ ಮಮತಾ ಕುಲಕರ್ಣಿ, ಮಾಯಿ ಮಮತಾ ನಂದಗಿರಿ ಎಂದು ಹೆಸರು ಬದಲಿಸಿಕೊಂಡಿದ್ದರು. ಅದೇನಾಯ್ತೋ ಗೊತ್ತಿಲ್ಲ ಸನ್ಯಾಸ್ಯತ್ವ ಸ್ವೀಕರಿಸಿದ್ದ ಮಮತಾ ಕುಲಕರ್ಣಿಯನ್ನು ಕಿನ್ನರ ಅಖಾಡ ವಜಾಗೊಳಿಸಿ ಈ ಬಗ್ಗೆ ಎಲ್ಲರಿಗೂ ಮಾಹಿತಿ ಬಹಿರಂಗ ಪಡಿಸಿತ್ತು.

ಈ ಉಚ್ಚಾಟನೆ ಬೆನ್ನಲ್ಲೇ ಮಮತಾ ಕುಲಕರ್ಣಿ ಬಾಲಿವುಡ್ ನಟನ ಬಗ್ಗೆ ನೀಡಿರುವ ಹೇಳಿಕೆ ವೈರಲ್ ಆಗುತ್ತಿದೆ. ಆ ಸಮಯದಲ್ಲಿ ಬಾಲಿವುಡ್‌ನಲ್ಲಿ ಉತ್ತುಂಗದಲ್ಲಿದ್ದಾಗ ನಟರೊಬ್ಬರು ಮಮತಾ ಅವರನ್ನು ಒನ್ ನೈಟ್ ಅಂದರೆ ಒಂದು ರಾತ್ರಿ ಜೊತೆಯಲ್ಲಿ ಕಳೆಯಲು ಕೇಳಿದ್ದರಂತೆ. ನಟನ ಈ ಬೇಡಿಕೆಗೆ ಮಮತಾ ನಿಮ್ಮ ಗೆಳತಿ ಅನುಮತಿ ಪಡೆದರೆ ನಾನು ಯೋಚಿಸುತ್ತೇನೆ ಎಂದು ಹೇಳಿದ್ದರಂತೆ. ಇತ್ತೀಚಿಗೆ ನೀಡಿದ ಸಂದರ್ಶನದಲ್ಲಿ ನಟ ಬಾಬಿ ಡಿಯೋಲ್ ಬಗ್ಗೆ ಈ ರೀತಿ ಹೇಳಿದ್ದಾರೆ ಎನ್ನಲಾಗಿದೆ. ನಟಿಯ ಈ ಹೇಳಿಕೆ ಸದ್ಯ ಚರ್ಚೆಗೆ ಗ್ರಾಸವಾಗಿದೆ. ಇನ್ನು ನಟಿ ಮಮತಾ ಕುಲಕರ್ಣಿ ಕನ್ನಡದ ವಿಷ್ಣು ವಿಜಯ ಸಿನಿಮಾದಲ್ಲಿ ನಟಿಸಿದ್ದು, ಬಾಲಿವುಡ್ ಹಾಗೂ ದಕ್ಷಿಣ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದಿದ್ದರು.












Click it and Unblock the Notifications