FAKE: ಭಾರತೀಯ ಪಾಸ್‌ಪೋರ್ಟ್‌ಗಳಿಂದ ರಾಷ್ಟ್ರೀಯತೆಯ ಹಕ್ಕನ್ನು ತೆಗೆದುಹಾಕಿಲ್ಲ
ನವದೆಹಲಿ, ಜನವರಿ 09: ನರೇಂದ್ರ ಮೋದಿ ಸರ್ಕಾರ ಸರ್ಕಾರವು ಭಾರತೀಯ ಪಾಸ್‌ಪೋರ್ಟ್‌ಗಳಿಂದ ರಾಷ್ಟ್ರೀಯತೆಯ ಹಕ್ಕಿನ ಕಾಲಂ ತೆಗೆದುಹಾಕಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರದಾಡಿದ್ದವು.
ವಾಟ್ಸ್‌ಆ್ಯಪ್‌ನಲ್ಲಿ ಸಂಚರಿಸಿರುವ ಹಿಂದಿಯಲ್ಲಿರುವ ಸಂದೇಶವು "ಮೋದಿ ಸರ್ಕಾರವು ಭಾರತೀಯ ಪಾಸ್‌ಪೋರ್ಟ್‌ಗಳಿಂದ ರಾಷ್ಟ್ರೀಯತೆಯ ಅಂಕಣವನ್ನು ತೆಗೆದುಹಾಕಿದೆ. ಕಾನೂನು ಅಪ್‌ಡೇಟ್ ಆಗಿದೆ. ಆದರೆ ನಿಮ್ಮ ಹಳೆಯ ಪಾಸ್‌ಪೋರ್ಟ್‌ಗಳನ್ನು ನೀವು ನಾಶಪಡಿಸುವುದಿಲ್ಲ ಅಥವಾ ಕಳೆದುಕೊಳ್ಳುವುದಿಲ್ಲ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ'' ಎಂದು ವಕೀಲ ಎಂದು ಹೇಳುವ ಸೈಯದ್ ಎಟೆಮಾಡ್ ಉದ್ದೀನ್ ಹೇಳಿದ್ದಾನೆ.
ಆದರೆ ಭಾರತದಲ್ಲಿ ಪಾಸ್‌ಪೋರ್ಟ್‌ಗಳ ವಿತರಣೆಯ ಜವಾಬ್ದಾರಿ ಹೊಂದಿರುವ ವಿದೇಶಾಂಗ ಸಚಿವಾಲಯವು ಈ ಸುದ್ದಿಯನ್ನು ನಿರಾಕರಿಸಿದೆ. ಈ ಕುರಿತು ಎಂಇಎ ಮೂಲಗಳಿಂದ ಒನ್‌ಇಂಡಿಯಾ ದೃಢಪಡಿಸಿದ್ದು, ಭಾರತೀಯ ಪಾಸ್‌ಪೋರ್ಟ್ ಸೇರಿದಂತೆ ಪ್ರತಿ ಪ್ರಯಾಣ ದಾಖಲೆಯಲ್ಲಿ ರಾಷ್ಟ್ರೀಯತೆಯ ಹಕ್ಕನ್ನು ಕಾಯ್ದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಸದ್ಯ ಹರಿದಾಡುತ್ತಿರುವ ಸಂದೇಶವು ನಕಲಿ ಮತ್ತು ಸುಮ್ಮನೆ ಹರಿಬಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Fact Check
ಕ್ಲೇಮು
ಮೋದಿ ಸರ್ಕಾರ ಭಾರತೀಯ ಪಾಸ್‌ಪೋರ್ಟ್‌ಗಳಿಂದ ರಾಷ್ಟ್ರೀಯತೆಯ ಹಕ್ಕನ್ನು ತೆಗೆದುಹಾಕಿದೆ
ಪರಿಸಮಾಪ್ತಿ
ರಾಷ್ಟ್ರೀಯತೆಯ ಕಾಲಂ ತೆಗೆದುಹಾಕಲು ಸರ್ಕಾರ ಅಂತಹ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ












Click it and Unblock the Notifications