Fact Check: ಕೊನೆಗೂ ಮಗಳ ಫೋಟೋ ಹಂಚಿಕೊಂಡ್ರಂತೆ ವಿರಾಟ್ ಕೊಹ್ಲಿ
ಭಾರತದ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ತಮ್ಮ ಮಗಳು ವಾಮಿಕಾ ಅವರ ಮುಖವನ್ನು ಈವರೆಗೂ ಬಹಿರಂಗಪಡಿಸಿಲ್ಲ. ಆದರೂ ಕೆಲ ನೆಟ್ಟಿಗರು ವಿರುಷ್ಕಾ ದಂಪತಿಗಳ ಮಗಳು ವಾಮಿಕಾ ಅವರ ಘೋಟೋ ಎಂದು ಕೆಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಪೋಟೋಗಳಲ್ಲಿ ಇರುವವರನ್ನು ವಿರಾಟ್ ಕೊಹ್ಲಿ ಹಾಗೂ ಮಗಳು ವಾಮಿಕಾ ಎಂದು ಹೇಳಿಕೊಳ್ಳಲಾಗಿದೆ.
ವೈರಲ್ ಆದ ಎರಡು ಚಿತ್ರಗಳು ವಿರಾಟ್ ಕೊಹ್ಲಿಯನ್ನು ವಾಮಿಕಾ ಜೊತೆ ತೋರಿಸಲಾಗುತ್ತಿದೆ. ಈ ಎರಡೂ ಚಿತ್ರಗಳಲ್ಲಿ ಹೆಣ್ಣು ಮಗುವಿನ ಮುಖ ಸ್ಪಷ್ಟವಾಗಿ ಗೋಚರಿಸುತ್ತದೆ. ಟ್ವಿಟ್ಟರ್ ಬಳಕೆದಾರರು "ಅಂತಿಮವಾಗಿ ವಿರಾಟ್ ಕೊಹ್ಲಿ ಅವರ ಮಗಳು ವಮಿಕಾ ಕೊಹ್ಲಿ ಮುಖವನ್ನು ಬಹಿರಂಗಪಡಿಸಿದ್ದಾರೆ" ಎಂಬ ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಆದರೆ ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (AFWA) ವೈರಲ್ ಫೋಟೋ ವಿರಾಟ್ ಕೊಹ್ಲಿದಲ್ಲ ಬಂಗಾಳದ ರಾಣಾಘಾಟ್‌ನ ನಿವಾಸಿ ಸುಶೋಭನ್ ಅವರದ್ದು ಎಂದು ಕಂಡುಹಿಡಿದಿದೆ. ಚಿತ್ರಗಳಲ್ಲಿ ಅವರೊಂದಿಗೆ ಕಾಣಿಸಿಕೊಂಡಿರುವ ಹೆಣ್ಣು ಮಗು ಅವರ ಸೊಸೆ ಇವಾನ್ಶಿ ಭಟ್ಟಾಚಾರ್ಯ. ಇದನ್ನು ಸ್ವತಃ ಸುಶೋಭನ್ ಅವರು ಇಂಡಿಯಾ ಟುಡೇಗೆ ಖಚಿತಪಡಿಸಿದ್ದಾರೆ.

ಆರಂಭದಲ್ಲಿ ಮೆಮೆ ವೆಬ್‌ಸೈಟ್‌ನಲ್ಲಿ ವೈರಲ್ ಆದ ಎರಡು ಫೋಟೋಗಳಲ್ಲಿ ಒಂದನ್ನು ಕಂಡುಹಿಡಿಯಲಾಯಿತು. ಈ ಸುಳಿವು ಪಶ್ಚಿಮ ಬಂಗಾಳದ ಸುಶೋಭನ್ ಲಾಹಿರಿ ಅವರ ಫೇಸ್‌ಬುಕ್ ಪುಟಕ್ಕೆ ಕರೆದೊಯ್ಯಿತು. 'ಸುಶೋಭನ್ ಲಾಹಿರಿ' ಎಂಬ ವ್ಯಕ್ತಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ವೈರಲ್ ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಅಂದಹಾಗೆ ಸುಶೋಭನ್ ಲಾಹಿರಿ ಸ್ವಲ್ಪ ಮಟ್ಟಿಗೆ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಹೋಲುತ್ತಾರೆ. ಇದರಿಂದಾಗಿ ಕೆಲವರು ಈ ವೈರಲ್ ಫೋಟೋದಲ್ಲಿರುವವರು ವಿರಾಟ್ ಕೊಹ್ಲಿ ಹಾಗೂ ಅವರ ಮಗಳು ವಾಮಿಕ ಎಂದು ನಂಬಿ ಷೇರ್ ಮಾಡಿದ್ದಾರೆ.

ಸುಶೋಭನ್ ಅವರು ಮೇ 4, 2021 ರಂದು "ಮಾಮಾ ಭಟ್" ಎಂಬ ಶೀರ್ಷಿಕೆಯೊಂದಿಗೆ ವೈರಲ್ ಚಿತ್ರಗಳಲ್ಲಿ ಒಂದನ್ನು ಹಂಚಿಕೊಂಡಿದ್ದಾರೆ. ಹಿಂದಿ ಹಾಗೂ ಬಂಗಾಳಿ ಭಾಷೆಯಲ್ಲಿ 'ಮಾಮಾ' ಎಂದರೆ ತಾಯಿಯ ತಮ್ಮ/ಅಣ್ಣ ಎಂದರ್ಥವಾಗಿರುವುದರಿಂದ ಚಿತ್ರಗಳಲ್ಲಿ ಕಾಣುವ ಪುಟ್ಟ ಹುಡುಗಿ ಅವರ ಸೊಸೆಯಾಗಿರಬಹುದು ಎಂಬ ಸುಳಿವು ಸಿಕ್ಕಿದೆ. ಅವರು ನವೆಂಬರ್ 16, 2020 ರಂದು ಪೋಸ್ಟ್ ಮಾಡಿದ ಕೆಲವು ಕುಟುಂಬ ಛಾಯಾಚಿತ್ರಗಳ ಕೊಲಾಜ್‌ನಲ್ಲಿ ಈ ಚಿತ್ರವನ್ನು ಸೇರಿಸಿದ್ದರು.

ಸುಶೋಭನ್ ಅವರೊಂದಿಗೆ ಮಾತನಾಡಿದಾಗ, ಅವರು ವೈರಲ್ ಚಿತ್ರಗಳು ನಿಜವಾಗಿಯೂ ಅವರ ಅಕ್ಕನ ಮಗಳೊಂದಿಗೆ ತೋಗೆಸಿಕೊಂಡಿರುವುದಾಗಿ ಹೇಳಿಕೊಂಡರು.
ರಾಣಾಘಾಟ್‌ನಲ್ಲಿ ರೋಗನಿರ್ಣಯ ಕೇಂದ್ರವನ್ನು ನಡೆಸುತ್ತಿರುವ ಸುಶೋಭನ್, "ನನ್ನನ್ನು ವಿರಾಟ್ ಕೊಹ್ಲಿ ಎಂದು ಸಂಬೋಧಿಸುವ ಜನರು ಈಗ ನನಗೆ ಅಭ್ಯಾಸವಾಗಿದ್ದಾರೆ, ಕೆಲವೊಮ್ಮೆ ಸೆಲ್ಫಿ ಕೇಳುತ್ತಾರೆ. ಇದು ಕೇವಲ ಕಾಕತಾಳೀಯವಾಗಿದೆ. ಆದಾಗ್ಯೂ, ನಾನು ನಿಜವಾಗಿಯೂ ಕೊಹ್ಲಿಯನ್ನು ಆರಾಧಿಸುತ್ತೇನೆ "ಎಂದು ಅವರು ಇಂಡಿಯಾ ಟುಡೇ ಜೊತೆಗಿನ ಸಂವಾದದಲ್ಲಿ ಹೇಳಿದರು.

ವಿರಾಟ್ ಮತ್ತು ಅನುಷ್ಕಾ ಜನವರಿ 11, 2021 ರಂದು ಹೆಣ್ಣು ಮಗುವಿನ ಪೋಷಕರಾದರು. ಅವರು ಮಗುವಿಗೆ ವಾಮಿಕಾ ಎಂದು ಹೆಸರಿಟ್ಟಿದ್ದಾರೆ. ಅಂದರೆ ಹಿಂದೂ ದೇವತೆ ದುರ್ಗೆಯ ರೂಪ. ಅವರು ಕಾಲಕಾಲಕ್ಕೆ ವಾಮಿಕಾ ಅವರ ಫೋಟೋಗಳನ್ನು Instagram ನಲ್ಲಿ ಹಂಚಿಕೊಳ್ಳುತ್ತಾರೆ. ಆದರೆ ಈವರೆಗೂ ಯಾವ ಚಿತ್ರದಲ್ಲೂ ಆಕೆಯ ಮುಖ ಕಾಣಿಸಿಲ್ಲ.

Fact Check
ಕ್ಲೇಮು
ವಿರಾಟ್ ಕೊಹ್ಲಿ ಮಗಳು ವಾಮಿಕ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್.
ಪರಿಸಮಾಪ್ತಿ
ವಿರಾಟ್ ಕೊಹ್ಲಿಗೆ ಹೋಲುವ ವ್ಯಕ್ತಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ.












Click it and Unblock the Notifications