Fact check: ಚೆನಾಬ್ ನದಿ ಮೇಲೆ ನಿರ್ಮಿಸಲಾದ ರೈಲ್ವೇ ಹಳಿ ಯಶಸ್ವಿ ಪ್ರಯೋಗ?
ಜಮ್ಮು ಮತ್ತು ಕಾಶ್ಮೀರದ ಚೆನಾಬ್ ನದಿಗೆ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಶೀಘ್ರದಲ್ಲೇ ಈ ಕೇಬಲ್ ರೈಲ್ವೇ ಸೇತುವೆಯ ಕಾಮಗಾರಿ ಪೂರ್ಣಗೊಳ್ಳಲಿದೆ. ಅದಾಗಲೇ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವೊಂದು ಹೆಚ್ಚು ವೈರಲ್ ಆಗುತ್ತಿದೆ. ವಿಡಿಯೊದಲ್ಲಿ ಕಂಡುಬರುವ ಸೇತುವೆ ಜಮ್ಮು ಮತ್ತು ಕಾಶ್ಮೀರದ ಚೆನಾಬ್ ಸೇತುವೆ ಎಂದು ಹೇಳಲಾಗುತ್ತಿದೆ. ಹಾಗಾದರೆ ವೈರಲ್ ಆದ ವಿಡಿಯೋದ ಸತ್ಯಾಸತ್ಯತೆ ಏನು?
दुनिया का सबसे ऊंचा रेलवे ट्रैक का सफल परीक्षण...👍🇮🇳🇮🇳
— Vrajander Singh (@vrajandersingh_) March 25, 2023
जम्मू कश्मीर स्थित चिनाब नदी पर उधमपुर-श्रीनगर-बारामूला रेल लिंक पर निर्माणाधीन दुनिया के सबसे ऊंचे रेलवे ट्रैक पर 21 मार्च को ट्रेन का सफल परीक्षण किया गया। चिनाब नदी पर बने ब्रिज की ऊंचाई नदी के तल से 359 मीटर । pic.twitter.com/gQIyrBUC2H
ಜಮ್ಮು ಮತ್ತು ಕಾಶ್ಮೀರದ ಚೆನಾಬ್ ನದಿಯ ಮೇಲೆ ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ಸಂಪರ್ಕಿಸಲು ನಿರ್ಮಾಣವಾಗುತ್ತಿರುವ ವಿಶ್ವದ ಅತಿ ಎತ್ತರದ ರೈಲು ಹಳಿ ಇದಾಗಿದೆ. ಮಾರ್ಚ್ 21 ರಂದು ಈ ಸೇತುವೆಯ ಮೇಲೆ ರೈಲನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವನ್ನು ಪೋಸ್ಟ್ ಮಾಡಲಾಗಿದೆ.

ಈ ವಿಡಿಯೊದಲ್ಲಿ ಎರಡು ಪರ್ವತಗಳ ನಡುವೆ ನಿರ್ಮಿಸಲಾದ ಎತ್ತರದ ರೈಲ್ವೆ ಸೇತುವೆಯ ಮೇಲೆ ರೈಲು ಚಲಿಸುತ್ತಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ಕಾಣುವ ಸೇತುವೆ ಜಮ್ಮು ಮತ್ತು ಕಾಶ್ಮೀರದ ಚೆನಾಬ್ ಸೇತುವೆ ಎಂದು ಹೇಳಲಾಗುತ್ತಿದೆ.
ಈ ವಿಡಿಯೋದ ಸತ್ಯ ಏನು ಗೊತ್ತಾ?
ವೈರಲ್ ಆದ ವಿಡಿಯೊ ಚೆನಾಬ್ ಸೇತುವೆಯದ್ದು ಎಂದು ಹೇಳಲಾಗುತ್ತಿದೆ. ಆದರೆ ಚೆನಾಬ್ ಸೇತುವೆ ನಿರ್ಮಾಣ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಅದು ಶೀಘ್ರದಲ್ಲೇ ಪೂರ್ಣಗೊಳ್ಳುತ್ತದೆ. ಹೀಗಾಗಿ ವೈರಲ್ ಆಗಿರುವ ವಿಡಿಯೋ ಚೆನಾಬ್ ಸೇತುವೆಯದ್ದಲ್ಲ.
ತನಿಖೆಯಲ್ಲಿ ಈ ವಿಡಿಯೊ ಚೀನಾದಲ್ಲಿ ನಿರ್ಮಿಸಲಾದ ಬೈಪಾನ್‌ಜಿಯಾಂಗ್ ರೈಲ್ವೆ ಸೇತುವೆಯದ್ದು ಎಂದು ಕಂಡುಬಂದಿದೆ. ಇದನ್ನು ಲಿಯುಪಾನ್‌ಶುಯಿ ನಗರದ ಬಳಿ ಬೈಪಾನ್ ನದಿಯ ಮೇಲೆ ನಿರ್ಮಿಸಲಾಗಿದೆ. ತನಿಖೆಯ ಸಮಯದಲ್ಲಿ ಈ ಸೇತುವೆಯನ್ನು ಸಂಧಿಸುವ ಚೀನಾದ ವೆಬ್‌ಸೈಟ್‌ನಲ್ಲಿ ಬೈಪಾಂಜಿಯಾಂಗ್ ರೈಲ್ವೆ ಸೇತುವೆಯ ಅನೇಕ ಫೋಟೋಗಳು ಕಂಡುಬಂದಿವೆ. ಹೀಗಾಗಿ ವೈರಲ್ ವಿಡಿಯೋ ಮತ್ತು ಫೋಟೋಗಳು ಚೆನಾಬ್ ಸೇತುವೆಯದ್ದಲ್ಲ.

ಚೆನಾಬ್ ನದಿ ಸೇತುವೆ
ವೈರಲ್ ವಿಡಿಯೋದಲ್ಲಿ ಕಾಣುವ ಸೇತುವೆ ಚೆನಾಬ್ ಸೇತುವೆಗೆ ಸಾಮ್ಯತೆಯನ್ನು ಹೊಂದಿದೆ. ಚೆನಾಬ್ ರೈಲು ಸೇತುವೆಯು ಭಾರತದ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಬಕ್ಕಲ್ ಮತ್ತು ಕೌರಿ ನಡುವಿನ ಭಾರತೀಯ ರೈಲ್ವೆ ಉಕ್ಕು ಮತ್ತು ಕಾಂಕ್ರೀಟ್ ಕಮಾನು ಸೇತುವೆಯಾಗಿದೆ. ಜಮ್ಮು ಮತ್ತು ಕಾಶ್ಮೀರದ ಚೆನಾಬ್ ನದಿಯ ಮೇಲಿನ ಸೇತುವೆ ಮೋಡದ ಮೇಲೆ ಹಾದು ಹೋಗುವ ಎತ್ತರ ನದಿಯ ತಳದಿಂದ 359 ಮೀಟರ್ ಎತ್ತರದಲ್ಲಿದೆ.
111 ಕಿಲೋಮೀಟರ್ ಉದ್ದದ ಪೈಕಿ 97 ಕಿಲೋಮೀಟರ್ ಸುರಂಗ ಮಾರ್ಗ ನಿರ್ಮಿಸಲಾಗಿದೆ.ಈ ರೈಲ್ವೇ ಮೇಲ್ಸೇತುವೆಯು ಗಂಟೆಗೆ 266 ಕಿಲೋಮೀಟರ್ ವೇಗದ ಬಿರುಗಾಳಿಯನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. 17 ಪಿಲ್ಲರ್ ಗಳನ್ನು ನಿರ್ಮಿಸಲಾಗಿದೆ. 28,660 ಮೆಟ್ರಿಕ್ ಟನ್ ಸ್ಟೀಲ್ ಅನ್ನು ಬಳಸಲಾಗಿದೆ. ಬ್ರಿಡ್ಜ್ 120 ವರ್ಷ ಬಾಳಿಕೆ ಬರುವ ವಿಶ್ವಾಸ ಹೊಂದಲಾಗಿದೆ.
ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಈ ರೈಲ್ವೇ ಬ್ರಿಡ್ಜ್ ಮೇಲೆ ರೈಲುಗಳು ಸಂಚರಿಸಬಹುದು. ಚೆನಾಬ್ ಸೇತುವೆಯ ಜೊತೆಗೆ, ಜಮ್ಮು ಮತ್ತು ಕಾಶ್ಮೀರದ ಪ್ರತಿಕೂಲ ಭೂಪ್ರದೇಶದಲ್ಲಿ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (ಕೆಆರ್‌ಸಿಎಲ್) ಗಾಗಿ ಆಫ್ಕಾನ್ಸ್ 16 ಇತರ ರೈಲ್ವೆ ಸೇತುವೆಗಳನ್ನು ನಿರ್ಮಿಸುತ್ತಿದೆ. ಎಲ್ಲಾ ಸೇತುವೆಗಳು ಉಧಂಪುರ್ ಶ್ರೀನಗರ ಬಾರಾಮುಲ್ಲಾ ರೈಲ್ ಲಿಂಕ್ (USBRL) ಯೋಜನೆಯ ಭಾಗವಾಗಿದೆ.

Fact Check
ಕ್ಲೇಮು
ಜಮ್ಮು ಮತ್ತು ಕಾಶ್ಮೀರದ ಚೆನಾಬ್ ನದಿ ಮೇಲೆ ನಿರ್ಮಿಸಲಾದ ರೈಲ್ವೇ ಹಳಿ ಯಶಸ್ವಿ ಪ್ರಯೋಗ ಮಾಡಲಾಗಿದೆ ಎಂದು ವಿಡಿಯೋ ವೈರಲ್ ಆಗಿದೆ.
ಪರಿಸಮಾಪ್ತಿ
ವೈರಲ್ ವಿಡಿಯೋದಲ್ಲಿ ಕಂಡು ಬಂದ ದೃಶ್ಯ ಚೆನಾಬ್ ನದಿ ಮೇಲೆ ನಿರ್ಮಿಸಲಾದ ರೈಲ್ವೇ ಹಳಿಯದ್ದಲ್ಲ ಚೀನಾದ್ದಾಗಿದೆ.
Rating
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications