Fact check: WC2023- ಭಾರತದ ವಿರುದ್ಧ ಗೆಲುವಿನ ಬಳಿಕ ಶೂನಿಂದ ಪಾನಿಯ ಕುಡಿದ ಆಸ್ಟ್ರೇಲಿಯ ಆಟಗಾರರು?
ಐಸಿಸಿ ವಿಶ್ವಕಪ್ ಟ್ರೋಫಿಯ ಮೇಲೆ ಆಸ್ಟ್ರೇಲಿಯಾದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಕಾಲಿಟ್ಟು ಕುಳಿತಿರುವ ವಿವಾದಾತ್ಮಕ ಫೋಟೋ ಆನ್‌ಲೈನ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಇದೀಗ ಆಸ್ಟ್ರೇಲಿಯ ತಂಡದ ಫೈನಲ್ ಪಂದ್ಯ ವಿಜಯದ ನಂತರದ ಮತ್ತೊಂದು ಸಂಭ್ರಮಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಆಸ್ಟ್ರೇಲಿಯನ್ ಕ್ರಿಕೆಟ್ ತಂಡದ ಜೆರ್ಸಿಯನ್ನು ಧರಿಸಿದ ಪುರುಷರು ಶೂಗೆ ಪಾನೀಯವನ್ನು ಹಾಕಿ ಬಳಿಕ ಅದನ್ನು ಕುಡಿಯುತ್ತಿರುವ ವಿಚಿತ್ರ ವೀಡಿಯೊ ವೈರಲ್ ಆಗಿದೆ. "ಐಸಿಸಿ ವಿಶ್ವಕಪ್ 2023 ಗೆದ್ದ ನಂತರ ಆಸ್ಟ್ರೇಲಿಯನ್ ತಂಡದ ಸಂಭ್ರಮಾಚರಣೆ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿದೆ.

ಆದರೆ ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್ ಆಸ್ಟ್ರೇಲಿಯನ್ ಕ್ರಿಕೆಟ್ ತಂಡದ ಈ ವೀಡಿಯೊ 2021 ರದ್ದು ಎಂದು ಕಂಡುಹಿಡಿದಿದೆ.
ಸತ್ಯ ಪರಿಶೀಲನೆ
ಕೀವರ್ಡ್ ಹುಡುಕಾಟದ ಸಹಾಯದಿಂದ 2021 ನವೆಂಬರ್ 15ರಂದು ಈ ವಿಡಿಯೋದ ಬಗ್ಗೆ ANI ವರದಿಯನ್ನು ಕಂಡುಕೊಂಡಿದೆ. ಈ ಸುದ್ದಿಯಲ್ಲಿ ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್ ಇದೆ. ಅದರ ಪ್ರಕಾರ ಆಸ್ಟ್ರೇಲಿಯನ್ ಆಟಗಾರರಾದ ಮ್ಯಾಥ್ಯೂ ವೇಡ್ ಮತ್ತು ಮಾರ್ಕಸ್ ಸ್ಟೊಯಿನಿಸ್ ತಮ್ಮ ಚೊಚ್ಚಲ T20 ವಿಶ್ವಕಪ್ ವಿಜಯೋತ್ಸವವನ್ನು ಶೂನಲ್ಲಿ ಪಾನಿಯವನ್ನು ಹಾಕಿ ನಂತರ ಅದನ್ನು ಕುಡಿಯುವ ಮೂಲಕ ಆಚರಿಸುತ್ತಿರುವುದನ್ನು ಕ್ಲಿಪ್ ತೋರಿಸಿದೆ. ಈ ವೀಡಿಯೊವನ್ನು ಆಸ್ಟ್ರೇಲಿಯಾದ ಡ್ರೆಸ್ಸಿಂಗ್ ರೂಮ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದು ವರದಿಯಾಗಿದೆ ಮತ್ತು ಇದನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಹಂಚಿಕೊಂಡಿದೆ.
How's your Monday going? 😅#T20WorldCup pic.twitter.com/Fdaf0rxUiV
— ICC (@ICC) November 15, 2021
ಇದಲ್ಲದೆ 2021 ನವೆಂಬರ್ 15ರಂದು ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್‌ನ ಅಧಿಕೃತ ಟ್ವಿಟರ್ ಖಾತೆಯಿಂದಲೂ ಟ್ವೀಟ್ ಅನ್ನು ಹೊಂಚಿಕೊಳ್ಳಲಾಗಿದೆ. ಈ ಮೂಲ ವಿಡಿಯೊದ ಬಲ ಮೂಲೆಯಲ್ಲಿ ICC ಪುರುಷರ T20 ವಿಶ್ವಕಪ್ 2021ರ ಲೋಗೋವನ್ನು ಕಾಣಬಹುದು. ಇತ್ತೀಚಿನ ಕ್ಲಿಪ್ ಅನ್ನು ಹಂಚಿಕೊಳ್ಳುತ್ತಿರುವವರು ಎಮೋಜಿಗಳಿಂದ ಈ ಲೋಗೋವನ್ನು ಮರೆಮಾಡಿದ್ದಾರೆ.
2021ರಲ್ಲಿ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸಿದ ನಂತರ ಆಸ್ಟ್ರೇಲಿಯಾ ತಂಡ ಈ ವಿಶಿಷ್ಟ ಆಚರಣೆಯನ್ನು ಮಾಡಿತು. ಈ ಸಮಯದಲ್ಲಿ ಹಲವಾರು ಮಾಧ್ಯಮಗಳು ಈ ವೀಡಿಯೊವನ್ನು ವರದಿ ಮಾಡಿವೆ. ಆ ಸಮಯದಲ್ಲಿ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಈ ದೃಶ್ಯವನ್ನು "ಅಸಹ್ಯ" ಎಂದು ಕರೆದಿದ್ದರು.

'ಶೂ': ಒಂದು ಆಸಿ ಸಂಪ್ರದಾಯ
ಪ್ರತಿ ವರದಿಗಳ ಪ್ರಕಾರ ಇದು "ಶೂಯ್" ಎಂದು ಕರೆಯಲ್ಪಡುವ ಶೂನಿಂದ ಕುಡಿಯುವುದು ಆಸ್ಟ್ರೇಲಿಯಾದಲ್ಲಿ ಆಚರಿಸುವ ಜನಪ್ರಿಯ ವಿಧಾನವಾಗಿದೆ. ಆಸ್ಟ್ರೇಲಿಯಾದ ಫಾರ್ಮುಲಾ ಒನ್ ಚಾಲಕ ಡೇನಿಯಲ್ ರಿಕಿಯಾರ್ಡೊ 2016ರ ಜರ್ಮನ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ವೇದಿಕೆಯ ಮೇಲೆ ತನ್ನ ರೇಸಿಂಗ್ ಬೂಟ್‌ಗಳಿಂದ "ಶೂಯ್" ಕುಡಿದಿದ್ದರು. ಅಲ್ಲಿಂದೀಚೆಗೆ ಹಲವಾರು ಕ್ರೀಡಾಪಟುಗಳು, ದೂರದರ್ಶನ ತಾರೆಯರು ಮತ್ತು ಗಾಯಕರು ಸಹ ಶೂಯ್ ಮಾಡಿದ್ದಾರೆ.
ಹೀಗಾಗಿ ಆಸ್ಟ್ರೇಲಿಯಾದ ಕ್ರಿಕೆಟಿಗರು "ಶೂ" ಕುಡಿಯುತ್ತಿರುವ ಹಳೆಯ ವೀಡಿಯೊವನ್ನು ಇತ್ತೀಚೆಗೆ ತಪ್ಪಾಗಿ ಹಂಚಿಕೊಳ್ಳಲಾಗಿದೆ ಎಂಬುದು ಹೆಚ್ಚು ಸ್ಪಷ್ಟವಾಗಿದೆ.

Fact Check
ಕ್ಲೇಮು
ಭಾರತದ ವಿರುದ್ಧದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಜಯ ಸಾಧಿಸಿದ ನಂತರ ಆಸ್ಟ್ರೇಲಿಯಾದ ಆಟಗಾರರು ಶೂನಿಂದ ಪಾನಿಯ ಕುಡಿದರು ಎಂದು ವಿಡಿಯೋದ ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಪರಿಸಮಾಪ್ತಿ
ಭಾರತದ ವಿರುದ್ಧದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಜಯ ಸಾಧಿಸಿದ ನಂತರ ಆಸ್ಟ್ರೇಲಿಯಾದ ಆಟಗಾರರು ಶೂನಿಂದ ಪಾನಿಯ ಕುಡಿದಿಲ್ಲ, ವೈರಲ್ ವಿಡಿಯೋ ಹಳೆಯದಾಗಿದೆ.
Rating
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications