ಆಂಕರ್ ಅನುಶ್ರೀ ಅವರಿಂದ ನಿವೃತ್ತಿ ಘೋಷಣೆ, ಕಿಚ್ಚ ಸುದೀಪ್ ಎದುರಲ್ಲೇ... Anchor Anushree
ಆಂಕರ್ ಅನುಶ್ರೀ ಹೆಸರು ಕನ್ನಡ ನಾಡಲ್ಲಿ ಮಾತ್ರವಲ್ಲ, ಪೂರ್ತಿ ಪಶ್ಚಿಮ ತೀರದಲ್ಲೂ ಭಾರಿ ದೊಡ್ಡ ಸದ್ದು ಮಾಡುತ್ತದೆ. ಯಾಕಂದ್ರೆ ದೂರದ ದೇಶಗಳಲ್ಲಿ ಇರುವ ಕನ್ನಡಿಗರ ಸಮೇತ ಬೇರೆ ಬೇರೆ ಭಾಷಿಕರು ಕೂಡ ಆಂಕರ್ ಅನುಶ್ರೀ ಅವರ ಆಂಕರಿಂಗ್ & ಮಾತಿನ ಶೈಲಿಯನ್ನ ಇಷ್ಟಪಟ್ಟು ಕೇಳುತ್ತಾರೆ. ಕನ್ನಡದ ರಿಯಾಲಿಟಿ ಶೋ ಅಖಾಡದಲ್ಲಿ ಆಂಕರ್ ಅನುಶ್ರೀ ಅವರ ನಿರೂಪಣೆ ಕಾರಣಕ್ಕೆ ಎಷ್ಟೋ ಕಾರ್ಯಕ್ರಮಗಳು ಗೆದ್ದು ಬೀಗಿವೆ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಅವರಿಂದ ನಿವೃತ್ತಿ ಘೋಷಣೆ, ಕಿಚ್ಚ ಸುದೀಪ್ ಎದುರಲ್ಲೇ...
ಹೌದು, ಆಂಕರ್ ಅನುಶ್ರೀ ಅವರು 36 ವರ್ಷ ವಯಸ್ಸು ಕಳೆದರೂ ಮದುವೆ ಆಗಿಲ್ಲ. ಹೀಗೆ ಆಂಕರ್ ಅನುಶ್ರೀ ಅವರ ಕೋಟಿ ಕೋಟಿ ಅಭಿಮಾನಿಗಳು, ಯಾವಾಗ ಆಂಕರ್ ಅನುಶ್ರೀ ಅವರ ಮದುವೆ ಆಗುತ್ತೋ? ಅನ್ನೋ ಕುತೂಹಲದಲ್ಲೇ ಕಾಯುತ್ತಿದ್ದಾರೆ. ಹಲವು ದಿನಗಳಿಂದಲೂ ಆಂಕರ್ ಅನುಶ್ರೀ ಅವರು ಮದುವೆ ಆಗುತ್ತಾರೆ ಅಂತಾ ಕನ್ನಡಿಗರು ಕಾಯುತ್ತಿದ್ದಾರೆ. ಇದೆಲ್ಲಾ ಇರುವಾಗಲೇ, ದಿಢೀರ್ ಅಂತಾ ಆಂಕರ್ ಅನುಶ್ರೀ ಅವರಿಂದ ನಿವೃತ್ತಿ ಘೋಷಣೆ....

ಆಂಕರ್ ಅನುಶ್ರೀ ಕಿಚ್ಚ ಸುದೀಪ್ ಎದುರು...
ಆಂಕರ್ ಅನುಶ್ರೀ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಪ್ರತಿವಾರ ಟಿವಿ ಮುಂದೆ ಬಂದು & ಇಡೀ ಕನ್ನಡ ನಾಡಿನ ಜನರನ್ನೆಲ್ಲಾ ರಂಜಿಸುವ ಆಂಕರ್ ಅನುಶ್ರೀ ಅವರು ಸಿನಿಮಾ ಸ್ಟಾರ್‌ಗೂ ಕಮ್ಮಿ ಇಲ್ಲದಂತೆ ಅಭಿಮಾನಿ ಬಳಗ ಸಂಪಾದಿಸಿದ್ದಾರೆ. ಅದ್ರಲ್ಲೂ ಆಂಕರ್ ಅನುಶ್ರೀ ಅವರ ಮಾತಿಗೆ, ದೊಡ್ಡ ಮಟ್ಟದಲ್ಲಿ ಫ್ಯಾನ್ಸ್ ಇದ್ದಾರೆ & ಹರಳು ಹುರಿದಂತೆ ಅನುಶ್ರೀ ಮಾತು ಆಡುತ್ತಿದ್ರೆ ವೀಕ್ಷಕ ಪ್ರಭುಗಳು ತಮ್ಮ ತಮ್ಮ ಮನೆಯಲ್ಲಿ ಟಿವಿ ಸ್ಕ್ರೀನ್ ಬಿಟ್ಟು ಎಲ್ಲಿಗೂ ಹೋಗಲ್ಲ.
ಆದರೆ ಇಂತಿಪ್ಪ ಆಂಕರ್ ಅನುಶ್ರೀ ಅವರು, ಜೀ ಕನ್ನಡ ಸರಿಗಮಪ ಕಾರ್ಯಕ್ರಮದಲ್ಲಿ ತಾವು ಆಂಕರಿಂಗ್ ಮಾಡಲ್ಲ ಅಂತಾ ವೇದಿಕೆಯಿಂದ ಕೆಳಗೆ ಇಳಿದ ಘಟನೆ ನಡೆದಿದೆ. ಅಷ್ಟಕ್ಕೂ, ನಟ ಕಿಚ್ಚ ಸುದೀಪ್ ಅವರು ವಿಶೇಷ ಅತಿಥಿ ಆಗಿ ಜೀ ಕನ್ನಡ ಸರಿಗಮಪ ಕಾರ್ಯಕ್ರಮಕ್ಕೆ ಬಂದಿದ್ದರು. ಈ ಸಮಯದಲ್ಲಿ ಕಿಚ್ಚ ಸುದೀಪ್ ಅವರ ಮಗಳು ಹಾಡು ಹಾಡಿದ್ದರು. ಆಗ ವೇದಿಕೆ ಮೇಲೆ ಬಂದ ಕಿಚ್ಚ ಸುದೀಪ್ ಅವರು ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ಇಷ್ಟೆಲ್ಲಾ ನಡೆಯುವಾಗಲೇ, ಕಿಚ್ಚ ಸುದೀಪ್ ಅವರ ಕೈಗೆ ನಿರೂಪಣೆ ಅಂದ್ರೆ ಆಂಕರಿಂಗ್ ಮಾಡಲು ಮನವಿ ಮಾಡಿ ಮೈಕ್ ಕೊಡಲಾಯಿತು!
ಕಿಚ್ಚ ಸುದೀಪ್ ಅವರ ಹವಾ ಜೋರು!
ಹೀಗೆ ಕಿಚ್ಚ ಸುದೀಪ್ ಅವರು ತಮ್ಮ ಕೈಗೆ ಮೈಕ್ ಪಡೆದು ಮಾತನಾಡಲು ಶುರು ಮಾಡಿದ ಸಮಯದಲ್ಲಿ ಆಂಕರ್ ಅನುಶ್ರೀ ಅವರು, ಇನ್ನು ನಮಗೆ ಏನು ಕೆಲಸ? ನಾನು ಆಂಕರಿಂಗ್ ಮಾಡಲ್ಲ ಅಂತಾ ನಿವೃತ್ತಿ ಘೋಷಣೆ ಮಾಡಿಬಿಟ್ಟರು! ಆ ಮೂಲಕ ವೇದಿಕೆ ಬಿಟ್ಟು ಕೆಳಗೆ ಹೋದರು ಆಂಕರ್ ಅನುಶ್ರೀ ಅವರು.
ಆದರೆ ಇದು ತಮಾಷೆಗೆ ನಡೆದ ಘಟನೆ ಅಂತಾ ಕೆಲವರು ಹೇಳುತ್ತಿದ್ದರೆ, ಇದೇ ವೇಳೆ ಇನ್ನೂ ಕೆಲವರು ಇದು ಕಿಚ್ಚ ಸುದೀಪ್ ಅವರಿಗೆ ಆಂಕರ್ ಅನುಶ್ರೀ ಅವರು ಸಲ್ಲಿಸಿದ ಗೌರವ ಅಂತಾ ಹೇಳುತ್ತಿದ್ದಾರೆ. ಮತ್ತೊಂದು ಕಡೆ, ಆಂಕರ್ ಅನುಶ್ರೀ ಅವರು ನಿರೂಪಣೆ ಬಿಟ್ಟು ನಿವೃತ್ತಿ ಆಗಿದ್ದಾರಾ? ಅಂತಾ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡ್ತಿದ್ದಾರೆ ಕೆಲವರು! ಈ ನಡುವೆ ಕಿಚ್ಚ ಸುದೀಪ್ ಅವರು ಅದ್ಭುತವಾಗಿ ಹಾಡು ಹೇಳಿ ಗಮನ ಸೆಳೆದರು. ಜೀ ಕನ್ನಡ ಸರಿಗಮಪ ಕಾರ್ಯಕ್ರಮ ಈ ವಾರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ ಗಮನ ಸೆಳೆದಿದೆ.
ಅಭಿಮಾನಿಗಳು ಹೇಳೋದು ಏನು?
ಒಟ್ನಲ್ಲಿ, ಆಂಕರ್ ಅನುಶ್ರೀ ಅಂದ್ರೆ ಮಾಸ್... ಆಂಕರ್ ಅನುಶ್ರೀ ಅಂದ್ರೆ ಕ್ಲಾಸ್... ಆಂಕರ್ ಅನುಶ್ರೀ ಅಂದ್ರೆ ಕನ್ನಡ ಕಿರುತೆರೆ ಸೂಪರ್ ಸ್ಟಾರ್ ಅಂತ ಕಣ್ಣುಮುಚ್ಕೊಕೊಂಡು ಹೇಳಬಹುದು ಆಂಕರ್ ಅನುಶ್ರೀ ಹೆಸರು ಕೇಳಿದ್ರೆ ಸಾಕು ಟಿಆರ್‌ಪಿ ತಾನಾಗಿ ತಾನೇ ಓಡೋಡಿ ಬಂದು ಬಿಡುತ್ತದೆ ಅನ್ನೋ ಕಾಮಿಡಿ ಟಿವಿ ಚಾನೆಲ್ ಆಫಿಸ್‌ನಲ್ಲಿ ಕಾಮನ್. ಯಾಕಂದ್ರೆ ಆಂಕರ್ ಅನುಶ್ರೀ ಒಂದು ಬಾರಿ ಸ್ಟೇಜ್ ಹತ್ತಿ ಆಂಕರಿಂಗ್ ಮಾಡಲು ನಿಂತರೆ ಆಡ್ ಬಂದ್ರು ಜನ ಚಾನಲ್ ಚೇಂಜ್ ಮಾಡದೇ ಆಂಕರ್ ಅನುಶ್ರೀ ಅವರ ಮಾತಿಗಾಗಿ ಕಾಯುತ್ತಾರೆ. ಹೀಗಾಗಿ ಆಂಕರ್ ಅನುಶ್ರೀ ಇನ್ನೂ ಹತ್ತಾರು ವರ್ಷಗಳ ಕಾಲ ಹೀಗೆ ಆಂಕರಿಂಗ್ ಮಾಡಲಿ ಅನ್ನೋದೆ ಅಭಿಮಾನಿಗಳ ಆಶಯ!












Click it and Unblock the Notifications