'ದುರಂತ ಸಂಭವಿಸುವ ಮುನ್ನ ಸುಂದರವಾಗಿರುತ್ತೆ': ಯುವರಾಜ್ ಕುಮಾರ್...Bengaluru Stampede
ಬೆಂಗಳೂರು, ಜೂನ್ 05: 'ಬ್ಯಾಂಗಲ್ ಸದ್ದಿಗೆ ಹೃದಯ ಘಲ್ ಅನ್ನೋ ಟೈಂ ಬಂತು' ಎಂದು ಹೊಸ ಹಾಡು ಬಿಡುಗಡೆಗೆ ಸಜ್ಜಾಗಿದ್ದ ನಟ ಯುವ ರಾಜ್‌ಕುಮಾರ್ ನಟಿಸಿರುವ 'ಎಕ್ಕ' (Ekka film) ಸಿನಿಮಾ ಟೀಂಗೆ ಬ್ರೇಕ್ ಬಿದ್ದಿದೆ. ಇಂದು ಜೂನ್ 05ರಂದು ಈ ವಿಡಿಯೋ ಸಾಂಗ್ (Ekka Song) ಬಿಡುಗಡೆ ಮಾಡಬೇಕಿತ್ತು. ಅಷ್ಟರಲ್ಲಿ ನಟ ಯುವ ರಾಜಕುಮಾರ್ ಅವರು ವಿಶ್ವದಾದ್ಯಂತ ಹಾಡಿನ ಬಿಡುಗಡೆ ಮುಂದೂಡಿಕೆ ಬಗ್ಗೆ ವಿವರಣೆ ನೀಡಿ ಪೋಸ್ಟ್ ಮಾಡಿದ್ದಾರೆ.
ಹೌದು, ನಿಗದಿಯಂತೆ ಎಲ್ಲವು ನಡೆದಿದ್ದರೆ ಇಂದು 'ಎಕ್ಕ' ಸಿನಿಮಾದ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಸಂಜೆ 6.36ಕ್ಕೆ ಬಿಡುಗಡೆ ಆಗಬೇಕಿತ್ತು. ಆದರೆ ಬೆಂಗಳೂರಿನಲ್ಲಿ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಕಾಲ್ತುಳಿತ (RCB Bengaluru Stampede) ಸಂಭವಿಸಿ ಸಾವಾಗಿದೆ. ಈ ಕಾರಣಕ್ಕೆ ಹಾಡು ಬಿಡುಗಡೆ ಮಾಡುವುದನ್ನು ಮುಂದೂಡಲಾಗಿದೆ. ಈ ಕುರಿತು ಅಪ್ಡೇಟ್ ಹಂಚಿಕೊಂಡಿರುವ ನಟ ಯುವರಾಜ್ ಕುಮಾರ್ ಅವರು ಸಂತ್ರಸ್ತರ ಕುಟುಂಬಗಳ ಕುರಿತು ಪ್ರತಿಕ್ರಿಯಿಸಿ ಪೋಸ್ಟ್ ಹಂಚಿಕೊಂಡಿದ್ದಾರೆ.

'ದುರಂತ ಸಂಭವಿಸುವ ಮುನ್ನ ಸುಂದರವಾಗಿರುತ್ತೆ'
'ಪ್ರತಿ ದುರಂತಗಳು ಸಂಭವಿಸುವುದಕ್ಕು ಮುನ್ನ ಸುಂದರವಾಗಿಯೇ ಇರುತ್ತವೆ..ಸುಂದರ ಕ್ಷಣಗಳನ್ನು ಸಂಭ್ರಮಿಸುವ ಸಮಯದಲ್ಲಿ ಘೋರ ದುರಂತ ನಡೆದಿದೆ. ನೊಂದವರ ದುಃಖದಲ್ಲಿ ನಾವು ಭಾಗಿಯಾಗಿದ್ದೇವೆ. ನಮ್ಮದೊಂದು ಸಣ್ಣ ಸಂಭ್ರಮ ಮುಂದೂಡಿದ್ದೇವೆ' ಎಂದು ನಟ ಯುವ ರಾಜ್ ಕುಮಾರ್ ಹೇಳಿದ್ದಾರೆ. ಈ ಮೂಲಕ ಕಾಲ್ತುಳಿತದ ಘಟನೆಲ್ಲಿ ಮೃತಪಟ್ಟ ಹನ್ನೊಂದು ಮಂದಿ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮಾಡಿದ್ದಾರೆ.
ಈ ಕುರಿತು ಇನ್‌ಸ್ಟಾಗ್ರಾಮ್ ನಲ್ಲಿ ಸ್ಟೋರಿ ಪೋಸ್ಟ್ ಮಾಡಿದ್ದ ಅವರು, ತಮ್ಮ ಸಿನಿಮಾದ ಕುರಿತು ಅಪ್ಡೇಟ್ ನೀಡಿದ್ದಾರೆ. ರಿಲೀಸ್ ಆಗಬೇಕಿದ್ದ 'ಬ್ಯಾಂಗಲ್ ಬಂಗಾರಿ' ಮುನ್ನ ಅವರು ನೀವು ಪ್ರೀತಿಸುವ ಹುಡುಗಿಗೆ ಪ್ರೀತಿಯಿಂದ ಏನೆಂದು ಕರೆಯುತ್ತೀರಿ.. ಎಂದು ಅಭಿಮಾನಿಗಳನ್ನು ಪ್ರಶ್ನಿಸಿ ವಿಡಿಯೋ ಮಾಡಿದ್ದರು. ಈ ಮೂಲಕ ಹೊಸ 'ಎಕ್ಕ' ಹೊಸ ಸಾಂಗ್ ರಿಲೀಸ್ ಬಗ್ಗೆ ಹಿಂಟ್ ಕೊಟ್ಟಿದ್ದರು.
ಈಗಾಗಲೇ 'ಎಕ್ಕಾ ಮಾರ್ ಮಾರ್...' ಹಾಡು ಬಿಡುಗಡೆ ಮಾಡಿದ್ದ 'ಎಕ್ಕ' ಚಿತ್ರತಂಡುವ ಇದೀಗ ಈ ಬ್ಯಾಂಗಲ್ ಬಂಗಾರಿ ಹಾಡು ಬಿಡುಗಡೆಗೆ ಮುಂದಾಗಿದ್ದು, ಶೀಘ್ರವೇ ಹೊಸ ದಿನಾಂಕದ ಬಗ್ಗೆ ಮಾಹಿತಿ ನೀಡಲಿದೆ. ಈ ಹಾಡನ್ನು ಅಂತೋನಿದಾಸ್ ಅವರು ಹಾಡಿದ್ದಾರೆ. ಚರಣ್ ರಾಜ್ ಅವರು ಸಂಗೀತವಿದ್ದು, ನಾಗಾರ್ಜುನ್ ಶರ್ಮಾ ಅವರು ಸಾಹಿತ್ಯ ಬರೆದಿದ್ದಾರೆ.
ಯುವ ಜತೆ ಸಂಜನಾ ಆನಂದ್ ಡಾನ್ಸ್
ರಗಢ ಹಾಡು ಇದಾಗಿರಲಿದ್ದು, ಯುವ ರಾಜ್ ಕುಮಾರ್ ಜೊತೆಗೆ ನಟಿ ಸಂಜನಾ ಆನಂದ್ ಅವರು ಬಣ್ಣ ಹಚ್ಚಿಸಿದ್ದಾರೆ. ಯುವನ ಬೆಡಗಿಯಾಗಿ ಈ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ 'ಎಕ್ಕ' ಸಿನಿಮಾವನ್ನು ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ, ಜಯಣ್ಣ ಹಾಗೂ ಕೆಆರ್‌ಜಿ ಸ್ಟುಡಿಯೋ ಈ ಮೂವರು ಬಂಡವಾಳ ಹೂಡಿದ್ದಾರೆ. ಸಿನಿಮಾ ಮುಂದಿನ ತಿಂಗಳು ಜುಲೈ 18ಕ್ಕೆ ತೆರೆಗೆ ಬರಲಿದೆ ಎಂದು ಚಿತ್ರತಂಡ ಈ ಹಿಂದೆ ತಿಳಿಸಿತ್ತು.












Click it and Unblock the Notifications