Akshay Kumar: ಅಕ್ಷಯ್ ಕುಮಾರ್ ನಟನೆಯ ಸ್ಕೈ ಫೋರ್ಸ್ ಸಿನಿಮಾ ವಿರುದ್ಧ ಕೊಡವರು ಸಿಡಿದೇಳಲು ಕಾರಣವೇನು ಗೊತ್ತಾ?
ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ವೀರ್ ಪಹಾರಿಯಾ ಅವರ ಚಿತ್ರ ಸ್ಕೈ ಫೋರ್ಸ್ ಜನವರಿ 24, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ಅಕ್ಷಯ್ ಕುಮಾರ್ ನಟನೆಯ ಹೊಸ ಸಿನಿಮಾ ಸ್ಕೈ ಫೋರ್ಸ್ ಕರ್ನಾಟಕದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ಅಕ್ಷಯ್ ಕುಮಾರ್ ನಟನೆಯ ಹೊಸ ಸಿನಿಮಾ ಸ್ಕೈ ಫೋರ್ಸ್ ವಿರುದ್ಧ ಕೊಡವ ಸಮುದಾಯ ಸಿಡಿದೆದ್ದು ನಿಂತಿದೆ. 1965ರ ಭಾರತ ಪಾಕಿಸ್ತಾನದ ಯುದ್ಧದಲ್ಲಿ ಮೊದಲ ಏರ್ಸ್ಟ್ರೈಕ್ ನಡೆಸಿದ ಘಟನೆ ಆಧಾರದ ಮೇಲೆ ಈ ಸಿನಿಮಾವನ್ನು ಮಾಡಲಾಗಿದೆ. ಕರ್ನಾಟಕದಲ್ಲಿ ಈ ಸಿನಿಮಾ ವಿರುದ್ಧ ಈಗ ಕೊಡವ ಸಮುದಾಯ ಸಿಡಿದೆದ್ದು ನಿಂತಿದೆ. ಅದಕ್ಕೆ ಕಾರಣ ಕೊಡಗಿನ ವೀರ ಅಜ್ಜಮಾಡಾ ಬೊಪಯ್ಯ ದೇವಯ್ಯ ಅವರನ್ನು ಚಿತ್ರದಲ್ಲಿ ತೋರಿಸಿದ ರೀತಿಗೆ ಕೊಡವ ಸಮುದಾಯದ ವಿರೋಧ ವ್ಯಕ್ತಪಡಿಸಿದೆ.

ಈ ಸಿನಿಮಾದಲ್ಲಿ ಸ್ಕ್ವಾಡ್ರನ್ ಲೀಡರ್ ದೇವಯ್ಯ ಅವರನ್ನು ತಮಿಳುನಾಡಿನ ಯೋಧನನ್ನಾಗಿ ತೋರಿಸಿದ ಕಾರಣ ಇಡೀ ಕೊಡವ ಸಮುದಾಯದ ಜನರು ಈ ಚಿತ್ರದ ವಿರುದ್ಧ ಸಿಡಿದೆದ್ದಿದ್ದಾರೆ. ಅನೇಕ ಕೊಡವ ಸಮುದಾಯದ ಯುವ ಜನರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.
ದೇವಯ್ಯ ಎಂಬ ವೀರ ಸ್ಕ್ವಾಡನ್ ಲೀಡರ್ ಕರ್ನಾಟಕದ ಹೆಮ್ಮೆ ಅದು ಮಾತ್ರವಲ್ಲ ಅವರು ಕೊಡಗಿನ ಗರ್ವ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ. ಇನ್ನೂ ಈ ಚಿತ್ರದ ಕುರಿತು ವಿಡಿಯೋಗಳನ್ನು ಮಾಡಿ ಸಿನಿಮಾ ತಂಡದ ವಿರುದ್ಧ ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.
ಸ್ಕೈ ಫೋರ್ಸ್ ಸಿನಿಮಾದ ಕುರಿತು ಕೊಡವ ಸಮುದಾಯದ ಲಾಯರ್ ತಾನಿಯಾ ಎಂಬುವವರು ಒಂದು ವಿಡಿಯೋ ಮಾಡಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಸ್ಕ್ವಾಡನ್ ಲೀಡರ್ ದೇವಯ್ಯ ಅವರ ಸಮುದಾಯವನ್ನು ತಪ್ಪಾಗಿ ತೋರಿಸುವ ಹಿಂದಿರುವ ಉದ್ದೇವೇನು ಎಂದು ಪ್ರಶ್ನಿಸಿದ್ದಾರೆ. ಅದರಲ್ಲೂ ಒಂದು ಸಿನಿಮಾ ಕೋಟ್ಯಾಂತರ ಜನರಿಗೆ ಪ್ರೇರಣೆಯಾಗುತ್ತದೆ. ಇಂತಹ ಮಾಧ್ಯಮದ ಮೂಲಕ ಸುಳ್ಳನ್ನು ಏಕೆ ಬಿತ್ತುತ್ತಿದ್ದೀರಿ ಎಂದು ಗುಡುಗಿದ್ದಾರೆ.
ಇದು ಸತ್ಯ ಘಟನೆ ಆಧಾರಿತ ಸಿನಿಮಾ ನೀವು ಇದರಲ್ಲಿ ಸ್ಕ್ವಾಡರ್ನ್ ಲೀಡರ್ ದೇವಯ್ಯ ಅವರನ್ನ ಕೊಡವರನ್ನಾಗಿ ತೋರಿಸುವ ಬದಲು ತಮಿಳಿಗನನ್ನಾಗಿ ತೋರಿಸಿದ್ದೀರಿ ಈ ಮೂಲಕ ಒಂದು ಜನಾಂಗವನ್ನು ಒಂದು ವಂಶಾವಳಿಯನ್ನು ನೀವು ಅಪಮಾನ ಮಾಡಿದ್ದೀರಿ ಎಂದು ಮತ್ತೊಬ್ಬ ಎಕ್ಸ್ ಖಾತೆಯ ಬಳಕೆದಾರ ಆಕ್ರೋಶ ಹೊರಹಾಕಿದ್ದಾರೆ.
ಮಹಾವೀರ ಚಕ್ರ ಪ್ರಶಸ್ತಿ ಪಡೆದ ಏಕೈಕ ವಾಯುಸೇನೆಯ ಅಧಿಕಾರಿ ಎಂದರೇ ಸ್ಕ್ವಾರ್ಡನ್ ಲೀಡರ್ ದೇವಯ್ಯ. 1965ರಲ್ಲಿ ಅವರು ತೋರಿದ ಶೌರ್ಯ ಭಾರತೀಯ ಇತಿಹಾಸ ಎಂದು ಮರೆಯಲು ಸಾಧ್ಯವಿಲ್ಲ. ಅಂತಹ ವೀರ ಯೋಧನ ಜೀವನ ಕುರಿತು ಮಾಡುತ್ತಿರುವ ಚಿತ್ರದಲ್ಲಿ ದೊಡ್ಡ ಪ್ರಮಾದ ನಡೆದಿದೆ ಎಂದು ಹೇಳಲಾಗುತ್ತಿದೆ. ಇನ್ನು ನಟ ಗುಲ್ಷನ್ ದೇವಯ್ಯ ಕೂಡ ಇದೇ ಕೊಡವ ಸಮುದಾಯಕ್ಕೆ ಸೇರುತ್ತಾರೆ.
ಸ್ಕೈ ಫೋರ್ಸ್ ಸಿನಿಮಾ ಟೇಕನ್ ಆಫ್ ಆದಾಗಿನಿಂದ ನಾನು ಒಂದು ವಿಚಾರವನ್ನ ಈ ರಣಕಲಿಯ ಬಗ್ಗೆ ನಿಮ್ಮ ಗಮನಕ್ಕೆ ತರಬೇಕು. ನಾವಿಬ್ಬರು ಒಂದೇ ಸರ್ ನೇಮ್ ಹೊಂದಿದ್ದೇವೆ ಆದ್ರೆ ನಾವು ಸಂಬಂಧಿಕರಲ್ಲ. ಆದ್ರೆ ಎಬಿ ದೇವಯ್ಯ ಅವರು 1988ರಲ್ಲಿ ಎರಡನೇ ಅತ್ಯುನ್ನತ ಸೇನಾ ಗೌರವವಾದ ಮಹಾವೀರ ಚಕ್ರ ಪ್ರಶಸ್ತಿ ಪಡೆದ ಯೋಧ. ಸುಮಾರು 23 ವರ್ಷ ಅವರು ನಾಪತ್ತೆಯಾದ ಯೋಧರ ಲಿಸ್ಟ್ನಲ್ಲಿದ್ದರು. 1965ರಲ್ಲಿ ನಡೆದ ಏರ್ಸ್ಟ್ರೈಕ್ ಆಪರೇಷನ್ ವೇಳೆ ಅವರು ಶತ್ರುಗಳ ಪ್ರದೇಶದಲ್ಲಿ ಜೀವ ಬಿಟ್ಟಿದ್ದರು ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.












Click it and Unblock the Notifications