ಇಬ್ಬರು ಹೆಂಡತಿಯರು, ನಾಲ್ಕು ಮಕ್ಕಳು, ಲಕ್ಷಾಂತರ ಫಾಲೋವರ್ಸ್...ಬಿಗ್ ಬಾಸ್ ಸ್ಪರ್ಧಿ ಅರ್ಮಾನ್ ಮಲಿಕ್ ಬಗ್ಗೆ ನಿಮಗೆಷ್ಟು ಗೊತ್ತು?
ಸೋಶಿಯಲ್ ಮಿಡಿಯಾ ಬಳಕೆದಾರರಿಗೆ ಅರ್ಮಾನ್ ಮಲಿಕ್, ಕೃತಿಕಾ ಮಲಿಕ್ ಮತ್ತು ಪಾಯಲ್ ಮಲಿಕ್ ಎಂಬ ಹೆಸರುಗಳು ಗೊತ್ತೆ ಇರುತ್ತೆ ಬಿಡಿ. ಬೇಡ ಬೇಡ ಅಂದರೂ ಇವರು ಒಂದಲ್ಲ ಒಂದು ಕಡೆ ಕಾಣಿಸಿಕೊಳ್ಳುತ್ತಾರೆ. ಇನ್ನು ಮುಂದೆ ಇವರನ್ನು ಟಿವಿಯಲ್ಲೆ ನೋಡಬಹುದು, ಅದು ಬಿಗ್ ಬಾಸ್ ಒಟಿಟಿಯಲ್ಲಿ.
ಹೌದು... ನಟ ಅನಿಲ್ ಕಪೂರ್ ನಡೆಸಿಕೊಡುವ ಬಿಗ್ ಬಾಸ್ OTT 3ನೇ ಸೀಸನ್‌ಗೆ ಜೂನ್ 21 ರಂದು ಚಾಲನೆ ಸಿಕ್ಕಿದ್ದು, ಈಗಾಗಲೇ ಶೂ ಪ್ರಸಾರವಾಗುತ್ತಿದೆ. ಅದರಲ್ಲೂ ಈ ಬಾರಿ ಸ್ಪರ್ಧಿಗಳಲ್ಲಿ ಒಬ್ಬರಾಗಿರುವುದು ಯೂಟ್ಯೂಬರ್ ಅರ್ಮಾನ್ ಮಲಿಕ್ ಮತ್ತು ಅವರ ಇಬ್ಬರು ಪತ್ನಿಯರಾದ ಕೃತಿಕಾ ಮಲಿಕ್ ಮತ್ತು ಪಾಯಲ್ ಮಲಿಕ್. ಇದು ಜನರಲ್ಲಿ ಮತ್ತಷ್ಟು ಕುತೂಹಲ ಹುಟ್ಟಿಸಿದೆ.

ಇಬ್ಬರ ಹೆಂಡಿರ ಮುದ್ದಿನ ಗಂಡ ಅರ್ಮಾನ್ ಮಲಿಕ್ ಯಾರು?
ಯೂಟ್ಯೂಬರ್ ಅರ್ಮಾನ್ ಮಲಿಕ್, ಅವರ ನಿಜವಾದ ಹೆಸರು ಸಂದೀಪ್ ಸಿಂಗ್, ಅವರ ಚಾನೆಲ್ ಮಲಿಕ್ ವ್ಲಾಗ್ಸ್. ಅರ್ಮಾನ್ ಮಲಿಕ್ ಯೂಟ್ಯೂಬರ್ ಆಗಿ ಒಳ್ಳೆ ಹೆಸರು ಮತ್ತು ಹಣ ಗಳಿಸುತ್ತಿದ್ದಾರೆ. ಅರ್ಮಾನ್ ಮಲಿಕ್ ಯೂಟ್ಯೂಬ್‌ನಲ್ಲಿ 7.67M ಚಂದಾದಾರರನ್ನು ಹೊಂದಿದ್ದಾರೆ. ಅವರು ಕೇವಲ ಎರಡೂವರೆ ವರ್ಷಗಳಲ್ಲಿ ಭಾರತದ ಅತ್ಯಂತ ಶ್ರೀಮಂತ ಯೂಟ್ಯೂಬರ್‌ಗಳಲ್ಲಿ ಒಬ್ಬರಾಗಿದ್ದಾರೆ.
ಅರ್ಮಾನ್ ಮಲಿಕ್ ಅವರ ವಿಭಿನ್ನ ಕೌಟುಂಬಿಕ ಜೀವನವು ಅವರನ್ನು ಬಿಗ್ ಬಾಸ್ OTT 3 ರ ವರೆಗೂ ಕರೆತಂದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಹೌದು... ಪ್ರೀತಿಸಿ ಮದುವೆಯಾದ ಹೆಂಡತಿ ಮಗು ಇದ್ದರು ಕೂಡ, ಪತ್ನಿಯ ಸ್ನೇಹಿತೆಯನ್ನು ಮದುವೆಯಾಗಿ ಸುದ್ದಿಯಾದವರು ಅರ್ಮಾನ್ ಮಲಿಕ್. ಅದು ಕೂಡ ಹೆಂಡತಿಯೇ ಮದುವೆ ಮಾಡಿಸಿದ್ದು ಇನ್ನೂ ವಿಶೇಷ.

ಪ್ರತ್ನಿಯ ಆಪ್ತ ಗೆಳತಿಯನ್ನೇ ಮದುವೆಯಾದ ಅರ್ಮಾನ್ ಮಲಿಕ್
ಅರ್ಮಾನ್ ಮಲಿಕ್ 2011 ರಲ್ಲಿ ಪಾಯಲ್ ಮಲಿಕ್ ಅವರನ್ನು ವಿವಾಹವಾದರು. ಈ ದಂಪತಿಗೆ ಚಿರಾಯು ಮಲಿಕ್ ಎಂಬ ಮಗುವಿತ್ತು. ಇದೇ ವೇಳೆ 2018 ರಲ್ಲಿ ಸ್ನೇಹಿತೆಯ ಜೊತೆಗಿರಲು ತನ್ನ ಮನೆಗೆ ಬಂದಿದ್ದ ಕೃತಿಕಾ ಅವರನ್ನು ಪ್ರೀತಿಸಲು ಆರಂಭಿಸಿದ್ದರು. ಹೀಗಾಗಿಯೇ ಒಂದು ವಾರದಲ್ಲಿ ಪ್ರೀತಿಸಿ ಪಾಯಲ್ ಅವರ ಆತ್ಮೀಯ ಸ್ನೇಹಿತೆ ಕೃತಿಕಾ ಮಲಿಕ್ ಅವರನ್ನು ವಿವಾಹವಾದರು.
ಆರಂಭದಲ್ಲಿ ಈ ವಿಷಯ ಕುಟುಂಬದಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು. ಪಾಯಲ್ ಅವರ ಕುಟುಂಬವು ಆರಂಭದಲ್ಲಿ ಆಕೆಯನ್ನು ಅರ್ಮಾನ್ ಮಲಿಕ್ ಅವರಿಂದ ದೂರ ಮಾಡಿ ಕರೆದುಕೊಂಡು ಹೋಗಿತ್ತು. ಆದರೆ, ಒಂದೂವರೆ ವರ್ಷಗಳ ನಂತರ, ಪಾಯಲ್ ಮತ್ತೆ ಅರ್ಮಾನ್‌ನೊಂದಿಗೆ ರಾಜಿ ಮಾಡಿಕೊಂಡರು ಮತ್ತು ಕೃತಿಕಾ ಮಲಿಕ್ ಅವರನ್ನು ಕುಟುಂಬದ ಸದಸ್ಯೆಯನ್ನಾಗಿಸಿಕೊಂಡರು.
ಒಟ್ಟಿಗೆ ಗರ್ಭಿಣಿಯರಾದ ಇಬ್ಬರು ಪತ್ನಿಯರು!
ಅರ್ಮಾನ್ ಮಲಿಕ್ ಹೆಚ್ಚು ಸುದ್ದಿಯಾಗಿದ್ದು 2022 ರಲ್ಲಿ. ಹೌದು.. ಒಟ್ಟಿಗೆ ತನ್ನ ಇಬ್ಬರೂ ಹೆಂಡತಿಯರು ಗರ್ಭಿಣಿಯಾಗಿದ್ದಾರೆ ಎಂದು ಘೋಷಿಸಿದ ನಂತರ ಜನ ಇವರನ್ನು ಹುಡುಕಲು ಆರಂಭಿಸಿದ್ದರು. ಇವರ ಬಗ್ಗೆ ಹೆಚ್ಚು ಸುದ್ದಿ ಮಾಡಿದ್ದರು. ಈಗ ಅರ್ಮಾನ್ ಮಲಿಕ್ ನಾಲ್ಕು ಮಕ್ಕಳ ತಂದೆಯಾಗಿದ್ದಾರೆ. ಚಿರಾಯು, ತುಬಾ, ಅಯಾನ್ ಮತ್ತು ಜೈದ್ ಎಂಬ ಮಕ್ಕಳಿದ್ದಾರೆ.
ಇಬ್ಬರು ಹೆಂಡತಿಯರು ಮೊದಲಿನಿಂದ ಆಪ್ತ ಸ್ನೇಹಿತೆಯರಾಗಿದ್ದು, ಈಗಲೂ ಕೂಡ ತಮ್ಮ ವಿಡಿಯೋಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಜನ ಹೆಚ್ಚು ಪಾಯಲ್ ಮಲಿಕ್‌ಗೆ ಸಪೋರ್ಟ್ ಮಾಡುತ್ತಾರೆ. ಆದರೆ, ಆಕೆ ಕೃತಿಕಾ ಅವರನ್ನು ಎಲ್ಲಿಯೂ ಬಿಟ್ಟುಕೊಡುವುದಿಲ್ಲ. ಒಂದೇ ರೀತಿಯ ಬಟ್ಟೆ, ಒಡವೆಗಳ ಜೊತೆಗೆ ಖುಷಿಯಾಗಿರುವಂತೆ ಪೋಸ್ಟ್ ಮಾಡುತ್ತಾರೆ. ಸದ್ಯ ಮೂವರು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದು, ಇಲ್ಲಿ ಇವರ ನಿಜರೂಪ ತಿಳಿಯಲಿದೆ ಎನ್ನುತ್ತಾರೆ ವೀಕ್ಷಕರು.











Click it and Unblock the Notifications