Varthur Santhosh: ವರ್ತೂರು ಸಂತೋಷ್‌ ಲವ್‌ ಮಾಡ್ತಿರೋದು ನಿಜ: ಮತ್ತೆ ಮದುವೆ ಯಾವಾಗ?

ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ ಅನೇಕ ಜನ ಸ್ಪರ್ಧಿಗಳ ಬದುಕನ್ನು ಬದಲಿಸಿದೆ. ಅನೇಕರಿಗೆ ಜನಪ್ರಿಯತೆ ತಂದುಕೊಟ್ಟಿದೆ. ಈ ಪೈಕಿ ಹಳ್ಳಿಕಾರ್‌ ಖ್ಯಾತಿಯ ವರ್ತೂರು ಸಂತೋಷ್‌ ಕೂಡ ಒಬ್ಬರು. ಬಿಗ್‌ ಬಾಸ್‌ ಕನ್ನಡ ಸೀಜನ್‌ 11 ಆರಂಭವಾಗಿ ಮುಗಿಯುವ ಹಂತಕ್ಕೆ ಬಂದರೂ ಬಿಗ್‌ ಬಾಸ್‌ ಕನ್ನಡ ಸೀಜನ್‌ 10ರ ಹವಾ ಮಾತ್ರ ಕಮ್ಮಿ ಆಗಿಲ್ಲ.

ಬಿಗ್ ಬಾಸ್ ಸೀಜನ್‌ 10ರ ಸ್ಪರ್ಧಿಗಳು ಸದಾ ಸುದ್ದಿಯಲ್ಲಿ ಇರುತ್ತಾರೆ. ಅದರಲ್ಲೂ ವರ್ತೂರ್‌ ಸಂತೋಷ್‌ ಹಾಗೂ ತನಿಷಾ ಯಾವಾಗಲೂ ಜೊತೆಯಾಗಿ ಕಾಣಿಸಿಕೊಳ್ಳುತ್ತಾ ಸುದ್ದಿಯಲ್ಲಿರುತ್ತಾರೆ. ಹೀಗಾಗಿ ಇವರಿಬ್ಬರ ಮಧ್ಯೆ ಪ್ರೀತಿ ಇದೆ ಎನ್ನುವ ಗಾಳಿ ಸುದ್ದಿ ಎಲ್ಲೆಡೆ ಹರಿದಾಡುತ್ತಿರುತ್ತದೆ. ಇದೀಗ ಈ ಬಗ್ಗೆ ಸ್ವತಃ ಹಳ್ಳಿಕಾರ್‌ ಖ್ಯಾತಿಯ ವರ್ತೂರು ಸಂತೋಷ್‌ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ತಮ್ಮ ಪ್ರೀತಿ ಹಾಗೂ ಮತ್ತೆ ಮದುವೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

When Will Bigg Boss Kannada Contestant Varthur Santhosh Got Married Again

ಕನ್ನಡ ಸುದ್ದಿ ಸಮಾಚಾರ ಯೂಟ್ಯೂಬ್‌ ಚಾನೆಲ್‌ ಜೊತೆ ಮಾತನಾಡಿದ ಅವರು, 'ಜೀವನದಲ್ಲಿ ಒಂದು ಗಂಡಿಗೆ ಒಂದು ಹೆಣ್ಣು ಅಂತಾ ಭಗವಂತ ಸೃಷ್ಟಿ ಮಾಡೇ ಮಾಡಿರುತ್ತಾನೆ. ಕೆಲವೊಬ್ಬರಿಗೆ ಒಂದಕ್ಕೆ ಹತ್ತು ಮಾಡಿರುತ್ತಾನೆ. ಹತ್ತಕ್ಕೆ ನೂರು ಮಾಡಿರುತ್ತಾನೆ. ಅದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಭಗವಂತನ ಆಶೀರ್ವಾದ ಹಾಗೂ ಜನರ ಆಶೀರ್ವಾದ ಮತ್ತೆ ಮದುವೆ ಬಗ್ಗೆ ಮುಂದೆ ನೋಡೋಣ' ಎಂದು ವರ್ತೂರು ಸಂತೋಷ್‌ ಹೇಳಿದ್ದಾರೆ.

'ಪ್ರೀತಿಯಲ್ಲಿ ಇದ್ದೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ವರ್ತೂರು ಸಂತೋಷ್‌ ಅದನ್ನು ಹೇಗೆ ಹೇಳಲು ಆಗುತ್ತದೆ ಎನ್ನುವ ಮೂಲಕ ಮಾರ್ಮಿಕವಾಗಿ ಉತ್ತರ ಕೊಟ್ಟಿದ್ದಾರೆ. ಇನ್ನು ಈ ಬಗ್ಗೆ ಸ್ಪಷ್ಟವಾಗಿ ಉತ್ತರಿಸಿದ ಅವರು, ಸೋಶಿಯಲ್‌ ಮೀಡಿಯಾದಲ್ಲಿ ನೀವು ನೋಡುತ್ತಿರುವ ಫೋಟೋ ವಿಡಿಯೋಗಳಲ್ಲಿ ಬರುತ್ತಿರುವುದಂತೂ ಅಲ್ಲ. ಆದರೆ ಲವ್‌ ಇದೆ ಆದರೆ ಅದಲ್ಲಾ' ಎನ್ನುವ ಮೂಲಕ ಪರೋಕ್ಷವಾಗಿ ತಮ್ಮ ಮತ್ತು ನಟಿ ತನಿಷಾ ಕುಪ್ಪಂಡ ಬಗ್ಗೆ ಇರುವ ಗಾಳಿ ಸುದ್ದಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.

When Will Bigg Boss Kannada Contestant Varthur Santhosh Got Married Again

ಇನ್ನು ಬಿಗ್‌ ಬಾಸ್‌ ಸೀಜನ್‌ 10ರ ಫೈನಲಿಸ್ಟ್‌ ಆಗಿದ್ದ ವರ್ತೂರು ಸಂತೋಷ್ ಮನೆಯೊಳಗೆ ಹೋಗುತ್ತಿದ್ದಂತೆ ತಮ್ಮ ಖಾಸಗಿ ಜೀವನದ ವಿಚಾರವಾಗಿ ಅನೇಕ ಸಂಕಷ್ಟಗಳನ್ನು ಎದುರಿಸಿದ್ದರು. ಮೊದಲು ಹುಲಿ ಉಗುರು ಧರಿಸಿದ ವಿಚಾರವಾಗಿ ಬಿಗ್‌ ಬಾಸ್‌ ಮನೆಯಿಂದಲೇ ಬಂಧನವಾಗಿದ್ದ ವರ್ತೂರು ಸಂತೋಷ್, ಬಳಿಕ ಮೊದಲ ಮದುವೆ ವಿಚಾರ ಕೂಡ ಈ ವೇಳೆ ಬಹಿರಂಗವಾಗಿತ್ತು. ಈ ಎಲ್ಲಾ ಸವಾಲುಗಳನ್ನು ಬಿಗ್‌ ಬಾಸ್‌ನಲ್ಲಿರುವಾಗಲೇ ಎದುರಿಸಿದ್ದ ವರ್ತೂರು ಸಂತೋಷ್ ಕೊನೆಗೆ ಫೈನಲಿಸ್ಟ್‌ ಆಗಿ ಹೊರಹೊಮ್ಮಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+