ಸದಾ ವಿವಾದದಲ್ಲೇ ಮುಳುಗಿ ಹೋದ ನಟ ದರ್ಶನ್, ಇತಿಹಾಸ ಏನು ಹೇಳುತ್ತೆ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ವಿವಾದ ಎರಡೂ ಒಟ್ಟೊಟ್ಟಿಗೆ ಹುಟ್ಟಿವೆ ಅಂತಾನೇ ಕಾಣಿಸುತ್ತದೆ. ಯಾಕಂದ್ರೆ ನಟ ದರ್ಶನ್ ಮಾಡಿಕೊಳ್ಳುತ್ತಿರುವ ಕಿರಿಕ್ ಒಂದಲ್ಲ, ಎರಡಲ್ಲ. ಈ ನಟ ದರ್ಶನ್ ತನ್ನ ವೈವಾಹಿಕ ಜೀವನದಿಂದ ಹಿಡಿದು, ಹೊರಗಡೆ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡುವ ತನಕ ಹಲವು ಆರೋಪ ಎದುರಿಸಿದ್ದ. ಈಗ ನೋಡಿದರೆ ನೇರವಾಗಿ ಕೊಲೆ ಮಾಡಿಸುವ ಹಂತಕ್ಕೆ ಬಂದಿದ್ದಾರೆ ಎಂಬ ಆರೋಪ ಕನ್ನಡ ನಾಡಿನಲ್ಲಿ ಸಂಚಲನ ಸೃಷ್ಟಿಸಿ ರೊಚ್ಚಿಗೆಬ್ಬಿಸಿದೆ. ಹಾಗಾದ್ರೆ ದರ್ಶನ್ ಮಾಡಿಕೊಂಡ ವಿವಾದಗಳು ಎಷ್ಟು? ಮುಂದೆ ಓದಿ.

ಅಂದಹಾಗೆ ಈ ಹಿಂದೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ & ಪವಿತ್ರ ಗೌಡ ಜಗಳ ದೊಡ್ಡ ಕಂಟಕ ತಂದಿತ್ತು. ದರ್ಶನ್ ಮತ್ತು ಪವಿತ್ರಾ ಗೌಡ ನಡುವೆ ಆತ್ಮೀಯತೆ ಇದ್ದ ಕಾರಣ ಈ ರೀತಿ ಜಗಳ ಆಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಹೀಗೆ ಜಗಳ ಶುರುವಾದಾಗ ಈಗ ಕೊಲೆ ಆಗಿರುವ ರೇಣುಕಾಸ್ವಾಮಿ, ಪವಿತ್ರ ಗೌಡ ಅವರ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿ ಪೋಸ್ಟ್ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ. ಈಗ ಅದೇ ರೇಣುಕಾಸ್ವಾಮಿ ಕೊಲೆ ಆಗಿದೆ. ಹಾಗಾದ್ರೆ ನಿಜವಾಗಿಯೂ ದರ್ಶನ್, ಈ ಕೊಲೆ ಪ್ರಕರಣದಲ್ಲಿ ಆರೋಪಿ ಆಗಿದ್ದಾರಾ? ಮುಂದೆ ಓದಿ.

What Is The Reason Behind The Kannada Actor Darshan Thoogudeepa Always Create Controversy

ದರ್ಶನ್ ಈಗ ಕೊಲೆ ಆರೋಪಿ?

ಇದೇ ಕಾರಣಕ್ಕೆ ರೇಣುಕಾಸ್ವಾಮಿಯನ್ನ ಹೊಡೆದು, ಹಲ್ಲೆ ಮಾಡಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ದರ್ಶನ್ ಅವರು ಕೂಡ ಈ ಕೊಲೆ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ ದಿಢೀರ್ ದರ್ಶನ್ ಅವರನ್ನ ಅರೆಸ್ಟ್ ಮಾಡಿ ಮೈಸೂರಿನಿಂದ ಬೆಂಗಳೂರಿಗೆ ಕರೆದುಕೊಂಡು ಬರಲಾಗಿದೆ. ಈ ವಿಚಾರವಾಗಿ ವಿಚಾರಣೆ ಶುರುವಾಗಿದ್ದು, ದರ್ಶನ್ ಪೊಲೀಸರ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದಾರೆ. ಹಾಗಾದ್ರೆ ನಟ ದರ್ಶನ್ ವಿರುದ್ಧ ಕೇಳಿಬಂದ ಕಾಂಟ್ರವರ್ಸಿ ಅಂದ್ರೆ ವಿವಾದಗಳು ಯಾವುವು ಗೊತ್ತೆ? ಮುಂದೆ ಓದಿ.

ದರ್ಶನ್ ಪತ್ನಿ ಮೇಲೆ ಹಲ್ಲೆ ಆರೋಪ

ಚಾಲೆಂಜಿಂಗ್ ಸ್ಟಾರ್ ಎಂಬ ಬಿರುದು ಪಡೆದ ನಟ ದರ್ಶನ್ ಅವರು 2011 ರಲ್ಲಿ ಹೆಂಡತಿ ಮೇಲೆ ಹಲ್ಲೆ ಮಾಡಿದ ಆರೋಪ ಎದುರಿಸಿದ್ದರು. ದರ್ಶನ್ ಅವರು ತಮ್ಮ ಹೆಂಡತಿಯಾದ ವಿಜಯಲಕ್ಷ್ಮೀ ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಹಿನ್ನೆಲೆ ಅರೆಸ್ಟ್ ಕೂಡ ಆಗಿ, ಪರಪ್ಪನ ಅಗ್ರಹಾರ ಜೈಲಿಗೂ ಹೋಗಿದ್ದರು. ಇದು ಕೂಡ ದರ್ಶನ್‌ರ, ಇಡೀ ಸಿನಿಮಾ ಜೀವನಕ್ಕೆ ಒಂದು ಕಪ್ಪುಚುಕ್ಕೆ ಆಗಿತ್ತು. ಈಗ ನೋಡಿದರೆ ಕೊಲೆ ಆರೋಪವೇ ಕೇಳಿಬಂದಿದೆ. ಅದ್ರಲ್ಲೂ ಪವಿತ್ರ ಗೌಡ ವಿಚಾರದಲ್ಲಿ ಕೊಲೆ ನಡೆದಿರುವ ಆರೋಪ ಕೂಡ ದರ್ಶನ್ ಅವರ ತಲೆಗೆ ಸುತ್ತಿಕೊಂಡಿದ್ದು, ಸಂಚಲನ ಸೃಷ್ಟಿ ಮಾಡಿದೆ.

ದರ್ಶನ್ ವಿರುದ್ಧ ಹಲ್ಲೆಗಳ ಆರೋಪದ ಸರಮಾಲೆ!

ದರ್ಶನ್ & ಹಲ್ಲೆ ಅಂದ್ರೆ ಒದೆ ಕೊಡುವುದಕ್ಕೂ ಅವಿನಾಭಾವ ಸಂಬಂಧ ಇದೆ, ಅಂತಾ ಕಾಣುತ್ತೆ ಕಣ್ರೀ. ಯಾಕಂದ್ರೆ ನಟ ದರ್ಶನ್ ಅವರ ವಿರುದ್ಧ ಪದೇ ಪದೇ, ಹಲ್ಲೆ ಮಾಡಿದ ಗಂಭೀರ ಆರೋಪಗಳು ಕೇಳಿಬಂದಿವೆ. ಸ್ವತಃ ಅವರ ಪತ್ನಿ ಮೇಲೆ ಹಲ್ಲೆ ಮಾಡಿದ ಆರೋಪ ಸಮೇತ ಇದೇ ರೀತಿ ಹಲವು ಬಾರಿ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ, ನಟ ದರ್ಶನ್ ಅವರು ವಿವಾದದ ಸುಳಿಗೆ ಸಿಲುಕಿದ್ದರು. ಈಗ ನೋಡಿದರೆ ನೇರ ಕೊಲೆ ಪ್ರಕರಣ ಆರೋಪ ದರ್ಶನ್ ಅವರ ಕೊರಳಿಗೆ ಸುತ್ತಿಕೊಂಡು ಗಂಭೀರ ತಿರುವು ಪಡೆಯುತ್ತಿದೆ.

ಅಭಿಮಾನಿಗಳ ಉಗ್ರ ಹೋರಾಟ ಶುರು!

ದರ್ಶನ್ ಅಭಿಮಾನಿಗಳು ಉಗ್ರ ಹೋರಾಟಕ್ಕೆ ಸಜ್ಜಾಗಿದ್ದಾರೆ, ಹೀಗಾಗಿ ಪೊಲೀಸರು ಕೂಡ ಪರಿಸ್ಥಿತಿ ನಿಭಾಸಲು ಸಜ್ಜಾಗಿದ್ದಾರೆ. ಅದರಲ್ಲೂ ದರ್ಶನ್‌ರ ಮನೆ ಇರುವ ರಾಜರಾಜೇಶ್ವರಿ ನಗರದಲ್ಲಿ ಪರಿಸ್ಥಿತಿಯು ಕೈಮೀರುತ್ತಿದೆ. ಆರ್‌ಆರ್ ನಗರದಲ್ಲಿ ದರ್ಶನ್ ಅವರ ಫೋಟೋ ಇರುವ ಬಾವುಟ ಹಿಡಿದು ದರ್ಶನ್ ಅವರ ಅಭಿಮಾನಿಗಳು ಜಮಾಯಿಸುತ್ತಿದ್ದಾರೆ. ಈಗಾಗಲೇ ಸಾವಿರಾರು ಅಭಿಮಾನಿಗಳು ರಾಜರಾಜೇಶ್ವರಿ ನಗರದಲ್ಲಿ ಒಂದೇ ಕಡೆ ಸೇರಿದ್ದು, ಹೋರಾಟ ನಡೆಸಲು ಮುಂದಾಗಿದ್ದಾರೆ. ಹೀಗಾಗಿ ಪೊಲೀಸರು ಕೂಡ ಈ ಕುರಿತು ಕಟ್ಟೆಚ್ಚರ ವಹಿಸಿ, ಪರಿಸ್ಥಿತಿ ಹಿಡಿತಕ್ಕೆ ತರಲು ಯತ್ನಿಸುತ್ತಿದ್ದಾರೆ.

'ದರ್ಶನ್‌ಗೆ ಸಾವಿನ ಶಿಕ್ಷೆ ಕೊಡಿ'

ದರ್ಶನ್ & ಪವಿತ್ರ ಗೌಡ ಅವರಿಂದಲೇ ನನ್ನ ಮಗನ ಸಾವು ಆಗಿದೆ, ಹೀಗಾಗಿ ನನ್ನ ಮಗನಂತೆ ದರ್ಶನ್ & ಪವಿತ್ರ ಗೌಡ ಕೂಡ ಸಾಯಬೇಕು ಎಂದಿದ್ದಾರೆ ಮೃತ ರೇಣುಕಾಸ್ವಾಮಿ ಪೋಷಕರು. ನಿನ್ನೆ ಪೂರ್ತಿ ಬಿಕ್ಕಿ, ಬಿಕ್ಕಿ ಅತ್ತಿರುವ ರೇಣುಕಾಸ್ವಾಮಿ ಅವರ ಪೋಷಕರು & ಪತ್ನಿ, ದರ್ಶನ್‌ನ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕುತ್ತಿದ್ದು. ಅದ್ರಲ್ಲೂ ಯಾವ ರೀತಿ ನನ್ನ ಮಗ ರೇಣುಕಾಸ್ವಾಮಿ ಹತ್ಯೆ ಮಾಡಲಾಗಿದೆಯೋ, ಅದೇ ರೀತಿ ದರ್ಶನ್‌ಗೆ ಕೂಡ ಶಿಕ್ಷೆ ಕೊಡಿ. ಹಾಗೇ ಪವಿತ್ರಾ ಗೌಡಗೆ ಕೂಡ ಇದೇ ರೀತಿ ಕಠಿಣ ಶಿಕ್ಷೆ ನೀಡಬೇಕು ಅಂತಿದ್ದಾರೆ ರೇಣುಕಾಸ್ವಾಮಿ ಅವರ ಅಪ್ಪ & ಅಮ್ಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+