ಮುತ್ತಿಡು, ಮಜಾ ಕೊಡು ಎಂದು ರಕ್ಷಕ್ ಬುಲೆಟ್‌ಗೆ ಕೇಳಿದ ರಮೋಲಾ, ಏನಿದು ಹೊಸ ವಿಚಾರ?
ಹಾಸ್ಯ ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್ (Rakshak Bullet) ಕೂಡ ಒಂದು ರೀತಿ ಹವಾ ಕ್ರಿಯೇಟ್ ಮಾಡಿದ್ದಾರೆ. ಮೊದಲಿಗೆ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿದ ರಕ್ಷಕ್ ಆರ್‌ಬಾಸ್ ಎಂದೇ ಕರೆಸಿಕೊಂಡಿದ್ದಾರೆ. ಬಿಗ್‌ಬಾಸ್ ಸ್ಪರ್ಧಿಯಾಗಿಯೂ ಭಾಗವಹಿಸಿದ್ದ ಅವರು ಇದೀಗ ರಿಯಾಲಿಟಿ ಶೋಗಳಲ್ಲಿ ಸ್ಟಾರ್ ಆಗಿದ್ದಾರೆ. ಭರ್ಜರಿ ಬ್ಯಾಚುಲರ್ಸ್ ಶೋನಲ್ಲಿ ರಕ್ಷಕ್ ಗಮನ ಸೆಳೆಯುತ್ತಿದ್ದು, ರಕ್ಷಕ್ ಹಾಗೂ ರಮೋಲಾ ಜೋಡಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇದೀಗ ರಮೋಲಾ ಮಜಾ ಕೊಡು, ಮುತ್ತಿಡು, ತಬ್ಬಿಕೋ ಅಂತೆಲ್ಲ ರಕ್ಷಕ್ ಹಿಂದೆ ಬಿದ್ದಿದ್ದಾರೆ.
ಹೌದು, ಭರ್ಜರಿ ಬ್ಯಾಚುಲರ್ಸ್ ಶೋನಲ್ಲಿ ರಕ್ಷಕ್-ರಮೋಲಾ ಜೋಡಿಗೆ ವಿಶೇಷ ಅಭಿಮಾನಿ ಬಳಗವಿದೆ. ಇತ್ತೀಚೆಗೆ ಇಬ್ಬರೂ ತಮ್ಮ ಮನೆಗಳಿಗೆ ಕರೆದೊಯ್ದು ಆತಿಥ್ಯ ನೀಡಿದ್ದರು. ರಕ್ಷಕ್ ತಾಯಿ ಕೂಡ ರಮೋಲಾ ನನ್ನ ಸೊಸೆ ಆದ್ರೆ ಓಕೆ ಎಂದು ಗ್ರೀನ್ ಸಿಗ್ನಲ್ ಕೂಡ ನೀಡಿದ್ರು. ರಕ್ಷಕ್ ಕೂಡ ವೇದಿಕೆಗಳಲ್ಲೇ ರಮೋಲಾ ಮೇಲಿನ ಪ್ರೀತಿಯನ್ನು ಹಲವು ಬಾರಿ ಹೊರಹಾಕಿದ್ದಾರೆ. ಇದೀಗ ಅಚ್ಚರಿ ಅಂದ್ರೆ ರಮೋಲಾ ರಕ್ಷಕ್ ಬೆನ್ನುಬಿದ್ದಿದ್ದಾರೆ. ಅದು ಯಾಕೆ ಗೊತ್ತಾ?

ಕಿಚ್ಚ ಸುದೀಪ್ ಅವರು ಸುಂದರಿ ಸುಂದರಿ ಹಾಡಿಗೆ ರಕ್ಷಕ್ ಹಾಗೂ ರಮೋಲಾ ರೀಲ್ಸ್ ಮಾಡಿದ್ದಾರೆ. ಇದರಲ್ಲಿ ಬಿಸಿ ಬಿಸಿ ಮುತ್ತಿಡು, ಬಿಗಿ ಬಿಗಿ ತಬ್ಬಿಕೋ, ನಡುವನು ನುಡಿಸು, ತನುವನು ತಣಿಸು, ಸಜೆಯಲೂ ಮಜಾ ಕೊಡು ಓ ನಲ್ಲ ಎಂಬ ಸಾಲುಗಳಿಗೆ ರಮೋಲಾ ರೀಲ್ಸ್ ಮಾಡಿದ್ದು, ಇದನ್ನು ನೋಡಿ ಪ್ರೇಕ್ಷಕರು ಒಂದು ಕ್ಷಣ ದಂಗಾಗಿದ್ದಾರೆ. ಇವರ ಜೋಡಿ ನಿಜಜೀವನದಲ್ಲೂ ಒಂದಾಗಲಿ ಎಂದು ಹಲವರು ಆಸೆ ಬಿಚ್ಚಿಟ್ಟಿದ್ದಾರೆ.
ಮನೆ ಅಳಿಯ ಎಂದು ರಕ್ಷಕ್ ಫಿಕ್ಸ್ ಆಗಿದ್ದಾನೆ!
ಭರ್ಜರಿ ಬ್ಯಾಚುಲರ್ಸ್‌ನಲ್ಲಿ ರಕ್ಷಕ್‌ಗೆ ಮೆಂಟರ್ ಆಗಿರುವ ರಮೋಲಾ ಅವರಿಂದ ಇತ್ತೀಚೆಗೆ ಸಾಕಷ್ಟು ಬದಲಾವಣೆಗಳು ಆಗಿವೆ ಎಂದು ಹೇಳಲಾಗುತ್ತಿದೆ. ರಕ್ಷಕ್ ಕೂಡ ರಗಡ್ ಶೇಡ್‌ನಿಂದ ಲವ್‌ಬಾಯ್ ಶೇಡ್‌ಗೆ ವಾಲಿದಂತಿದೆ. ಇದೇ ವಿಚಾರವಾಗಿ ಈ ಶೋನ ಜಡ್ಜ್ ಆಗಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಆಗಾಗ ರಕ್ಷಕ್‌ನ ರೇಗಿಸುತ್ತಿದ್ದಾರೆ.

ಇತ್ತೀಚೆಗೆ ರಮೋಲಾ ಹುಟ್ಟೂರಿಗೆ ರಕ್ಷಕ್‌ನ ಕರೆದೊಯ್ದು ಮನೆಯವರನ್ನು ಪರಿಚಯ ಮಾಡಿಸಿ ಆತಿಥ್ಯ ನೀಡಿದ್ದರು. ಈ ಬಗ್ಗೆ ಕಾಲೆಳೆದ ರವಿಚಂದ್ರನ್, ರಕ್ಷಕ್‌ಗೆ ಮನೆ ಒಳಗೆ ಹೋಗುವಾಗ ಅಳಿಯ ಎಂಬ ಭಾವನೆ ಬಂದುಬಿಟ್ಟಿದೆ. ಅವನು ಇಲ್ಲ ಅಂತ ಹೇಳಲಿ, ನಾನು ಬೇಕಾದ್ರೆ ಈ ಸೀಟ್ ಬಿಟ್ಟು ಹೋಗ್ತೀನಿ ಎಂದು ಸವಾಲ್ ಹಾಕಿದರು. ಆಗ ರಕ್ಷಕ್ ಅದು ನಿಜ ಎಂದು ಒಪ್ಪಿಕೊಂಡಿದ್ದು, ಇದನ್ನು ನೋಡಿ ರಮೋಲಾ ಫುಲ್ ಶಾಕ್‌ಗೆ ಒಳಗಾಗಿದ್ದಾರೆ.
ಈ ಹಿಂದೆ ರಕ್ಷಕ್ ಮನೆಗೆ ರಮೋಲಾ ಅವರನ್ನ ಕರೆದೊಯ್ದು ಆತಿಥ್ಯ ನೀಡಲಾಗಿತ್ತು. ಆಗ ರಕ್ಷಕ್ ತಾಯಿ ನನ್ನ ಮಗನಿಗೆ ಹುಡುಗಿ ಹುಡುಕೋದನ್ನ ಬಿಟ್ಟಿದ್ದೀನಿ. ರಮೋಲಾ ನನ್ನ ಸೊಸೆಯಾದ್ರೆ ಓಕೆ ಎಂದು ವೇದಿಕೆಯಲ್ಲೇ ಹೇಳಿದ್ದರು. ಆಗ ರಕ್ಷಕ್ ಕೂಡ ಒಪ್ಪಿಕೋ ಪ್ಲೀಸ್ ಎಂದು ರಮೋಲಾಗೆ ಕೇಳಿದ್ದರು. ಆದರೆ ಇದೆಲ್ಲವೂ ತಮಾಷೆಯೋ ಅಥವಾ ನಿಜವಾಗಿಯೂ ಇಬ್ಬರ ನಡುವೆ ಲವ್ ಮೂಡಿದೆಯೋ ಎನ್ನುವುದು ಸದ್ಯಕ್ಕಂತೂ ಪಕ್ಕಾ ಆಗಿಲ್ಲ.












Click it and Unblock the Notifications