Vijayalakshmi darshan: ಪತಿ ದರ್ಶನ್ ಡೆವಿಲ್ ಶೂಟಿಂಗ್ ಸಮಯದಲ್ಲೇ ವಿಜಯಲಕ್ಷ್ಮಿ ಹೊಸ ಫೋಟೋಸ್ ಭಾರೀ ವೈರಲ್
Vijayalakshmi darshan: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಿಡುಗಡೆಯಾದಗಿನಿಂದಲೂ ಪತ್ನಿ ವಿಜಯಲಕ್ಷ್ಮಿ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಂದಲ್ಲ ಒಂದು ರೀತಿಯ ಪೋಸ್ಟರ್‌ಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ. ಇದೀಗ ಮತ್ತೆ ಹೊಸ ಪೋಸ್ಟರ್‌ಗಳ ಮೂಲಕ ಗಮನ ಸೆಳೆದಿದ್ದು, ಇದು ಸಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಸದ್ಯ ನಟ ದರ್ಶನ್ ಇದೀಗ ಡೆವಿಲ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆಯೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೊಸ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ. ಹಾಗಾದ್ರೆ ಈ ಪೋಸ್ಟರ್‌ಗಳಲ್ಲಿ ಏನಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಪತಿ ದರ್ಶನ್‌ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ರಾಜ್ಯದ ಪ್ರಮುಖ ದೇಸವಾಸ್ಥಾನಗಳಲ್ಲಿ ವಿಶೇಷ ಪೂಜೆ, ವ್ರತಗಳನ್ನು ಸಹ ಮಾಡಿದ್ದರು. ಇದರ ಪ್ರತಿಫಲವೆಂಬಂತೆ ಕೊನೆಗೂ ನಟ ದರ್ಶನ್‌ಗೆ ಜಾಮೀನು ದೊರೆತು ಬಿಡುಗಡೆಯಾಗಿದ್ದರು.
ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಈಗಾಗಲೇ ಜಾಮೀನಿನ ಮೇಲೆ ಹೊರಗಡೆ ಇದ್ದು, ಅರ್ಧಕ್ಕೆ ನಿಂತಿದ್ದ ಡೆವಿಲ್ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಇದೀಗ ಚಿತ್ರಿಕರಣ ರಾಜಸ್ಥಾನದಲ್ಲಿ ನಡೆಯುತ್ತಿರುವ ಹಿನ್ನೆಲೆ ಅಲ್ಲಿಗೆ ಪತಿ ದರ್ಶನ್ ಜೊತೆ ಪತ್ನಿ ವಿಜಯಲಕ್ಷ್ಮಿ ಸಹ ತೆರಳಿದ್ದಾರೆ.
ಇನ್ನು ರಾಜಸ್ಥಾನದಲ್ಲಿ ವಿಜಯಲಕ್ಷ್ಮಿ ಫೋಟೋ ಶೂಟ್ ಮಾಡಿಸಿದ್ದು, ಈ ಪೋಟೋಗಳನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದುವರೆಗೂ ಈ ಪೋಸ್ಟರ್‌ಗೆ 93.7K ಮೆಚ್ಚುಗೆಗಳು ಬಂದಿದ್ದು, 405 ಕಾಮೆಂಟ್ಸ್ ಮಾಡಿದ್ದಾರೆ. ಅಲ್ಲದೆ 541 ಜನ ಈ ಪೋಸ್ಟರ್ ಅನ್ನು ಶೇರ್ ಮಾಡಿಕೊಂಡಿದ್ದಾರೆ.
ನಟ ದರ್ಶನ್ ಕಳೆದ 10 ದಿನಗಳಿಂದ ರಾಜಸ್ಥಾನದಲ್ಲಿ ಡೆವಿಲ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪತಿಗೆ ವಿಜಯಲಕ್ಷ್ಮಿ ಸಾಥ್ ನೀಡಿದ್ದು, ಇದೀಗ ರಾಜಸ್ಥಾನದಲ್ಲಿ ಕ್ಲಿಕ್ಕಿಸಿದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪತಿ ಜೊತೆ ವಿಜಯಲಕ್ಷ್ಮಿ ಸಹ ರಾಜಸ್ಥಾನದಲ್ಲಿ ಪತಿ ದರ್ಶನ್ ಜೊತೆ ಕಾಲ ಕಳೆಯುತ್ತಿದ್ದಾರೆ. ಬಿಡುವಿನ ವೇಳೆ ಅಲ್ಲಿನ ಅತ್ಯದ್ಭತ ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಬಂಗಲೆವೊಂದರಲ್ಲಿ ನಿಂತು ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಫೋಟೋಗೆ ಪೋಸ್ ನೀಡಿದ್ದಾರೆ. ಈ ಪೋಸ್ಟ್‌ಗೆ ಅಭಿಮಾನಿಗಳಿಂದ ಮೆಚ್ಚುಗೆಗಳ ಸುರಿಮಳೆಯೇ ಹರಿದುಬರುತ್ತಿದೆ.
ಇದೀಗ ರಾಜಸ್ಥಾನದ ಉದಯಪುರದಲ್ಲಿ ಡೆವಿಲ್ ಸಿನಿಮಾ ಚಿತ್ರಿಕರಣ ಭರ್ಜರಿಯಾಗಿ ನಡೆಯುತ್ತಿದೆ. ರಾಜಸ್ಥಾನ ಶೆಡ್ಯೂಲ್ ಚಿತ್ರೀಕರಣ ಮುಗಿಸಿ ಇಂದು ಬೆಂಗಳೂರಿಗೆ ಪತ್ನಿಯೊಂದಿಗೆ ದರ್ಶನ್ ವಾಪಸ್ಸಾಗಲಿದ್ದಾರೆ ಎನ್ನುವ ಮಾಹಿತಿ ಇದೆ.
ಡೆವಿಲ್ ಚಿತ್ರಕ್ಕೆ ಮಿಲನಾ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ. ದರ್ಶನ್ ಜೊತೆ ರಚನಾ ರೈ, ಶರ್ಮಿಳಾ ಮಾಂಡ್ರೆ, ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಸೇರಿದಂತೆ ನಟನೆ ಮಾಡುತ್ತಿದ್ದಾರೆ.
ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿಯನ್ನು ನಟ ದರ್ಶನ್ ಮತ್ತು ಗ್ಯಾಂಗ್ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದೊಯ್ದು ಭೀಕರವಾಗಿ ಹಲ್ಲೆಗೈದು ಹತ್ಯೆ ಮಾಡಿದ್ದಾರೆ ಎನ್ನುವುದು ಪೊಲೀಸ್ ಮೂಲಗಳಲ್ಲಿ ಉಲ್ಲೇಖವಾಗಿದೆ. ಇನ್ನೂ ಈ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ & ಗ್ಯಾಂಗ್ ಬಿಡುಗಡೆಯಾಗಿದ್ದಾರೆ. ಅಲ್ಲದೆ, ದರ್ಶನ್ ಅರ್ಧಕ್ಕೆ ನಿಂತಿದ್ದ ಡೆವಿಲ್ ಸಿನಿಮಾ ಚಿತ್ರಿಕರಣದಲ್ಲಿ ಬ್ಯುಸಿಯಾಗಿದ್ದಾರೆ.












Click it and Unblock the Notifications