UI Collection: 10 ಕೋಟಿ ರೂಪಾಯಿ ಗಳಿಸಿದರೂ ಉಪೇಂದ್ರ ನಿರ್ದೇಶನದ ‘ಯುಐ’ ಸಿನಿಮಾ ಸೋತೋಯ್ತಾ?
ಉಪೇಂದ್ರ ಡೈರೆಕ್ಷನ್ ಮಾಡಿರುವ 'ಯುಐ' ಭರ್ಜರಿ ಸೌಂಡ್‌ನ ಮಾಡ್ತಾ ಇದೆ. 10 ಕೋಟಿ ರೂಪಾಯಿ ಗಳಿಸಿ ಅಬ್ಬರಿಸುತ್ತಿದೆ 'ಯುಐ' ಸಿನಿಮಾ. ಈ ಮೂಲಕ ಕನ್ನಡ ಸಿನಿಮಾ ರಂಗ ಮತ್ತೆ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲಿ ತನ್ನ ಪವರ್ ತೋರಿಸಿದೆ, ಅಂತಾ ಉಪ್ಪಿ ಫ್ಯಾನ್ಸ್ ಹೇಳುತ್ತಿದ್ದಾರೆ. ಇಂತಹ ಸಮಯದಲ್ಲೇ, 10 ಕೋಟಿ ರೂಪಾಯಿ ಗಳಿಸಿದರು ಕೂಡ ಉಪೇಂದ್ರ ನಿರ್ದೇಶನದ 'ಯುಐ' ಸಿನಿಮಾ ಸೋತೋಯ್ತಾ?
ಉಪೇಂದ್ರ 'ಯುಐ' ಸಿನಿಮಾದಲ್ಲಿ ನೂರಾರು ದಾಖಲೆ ಬರೆದಿದ್ದಾರೆ. ತೆಲುಗು, ತಮಿಳು & ಮಲಯಾಳಂ ಸೇರಿ ಹಿಂದಿ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಜಗತ್ತಿನ ಹಲವು ಭಾಷೆಗಳ ಪ್ರೇಕ್ಷಕರಿಗೂ ಈ ಸಿನಿಮಾ ಇಷ್ಟವಾಗಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದ್ದು, ಮೊದಲ ದಿನವೇ 10 ಕೋಟಿ ರೂಪಾಯಿ ಗಳಿಸಿದೆ 'ಯುಐ' ಸಿನಿಮಾ ಎನ್ನಲಾಗುತ್ತಿದೆ.

'ಯುಐ'ಗೆ 10 ಕೋಟಿ ರೂಪಾಯಿ ಬಂಪರ್?
ಆದರೆ 'ಯುಐ' ಸಿನಿಮಾ 10 ಕೋಟಿ ರೂಪಾಯಿ ಗಳಿಸಿದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಸಿಕ್ಕಿಲ್ಲ. ಹಾಗೇ ಸಿನಿಮಾ ತಂಡ ಕೂಡ 'ಯುಐ' ಕಲೆಕ್ಷನ್ ಬಗ್ಗೆ ಮಾಹಿತಿ ನೀಡಿಲ್ಲ. ಹೀಗಿದ್ದಾಗಲೇ, 10 ಕೋಟಿ ರೂಪಾಯಿ ಗಳಿಸಿದರು ಕೂಡ ಉಪೇಂದ್ರ ನಿರ್ದೇಶನದ 'ಯುಐ' ಸಿನಿಮಾ ಸೋತೋಯ್ತಾ? ಎಂಬ ಪ್ರಶ್ನೆಯನ್ನ ಕೆಲವರು ಕೇಳುತ್ತಿದ್ದಾರೆ & ಹಾಗೇ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಕೂಡ ಮಾಡುತ್ತಿದ್ದಾರೆ. ಹಾಗಾದ್ರೆ ಇದಕ್ಕೆ ಕಾರಣ ಏನು? ಮುಂದೆ ಓದಿ.
'ಯುಐ' ಸಿನಿಮಾ ಅರ್ಥ ಆಗಲಿಲ್ವಾ?
ಹೌದು, ಉಪೇಂದ್ರ ಅವರ ಬಹು ನಿರೀಕ್ಷಿತ ಸಿನಿಮಾ 'ಯುಐ' ಅದ್ಧೂರಿಯಾಗಿ ಜಗತ್ತಿನಾದ್ಯಂತ ರಿಲೀಸ್ ಆಗಿದ್ದು 'ಯುಐ' ಸಿನಿಮಾ ನೋಡಿದ ಜನ ಬಹುಪರಾಕ್ ಹಾಕುತ್ತಿದ್ದಾರೆ. ಇದೇ ವೇಳೆ ಪ್ರಪಂಚದ ಹಲವು ದೇಶಗಳಲ್ಲೂ 'UI' ಸದ್ದು ಜೋರಾಗಿದೆ. ಆದರೆ, ಸಿನಿಮಾ ನೋಡಿರುವ ಹಲವರು ಅರ್ಥನೇ ಆಗ್ತಿಲ್ಲ ಅಂತಿದ್ದಾರೆ! ಈ ರೀತಿ ವಿಡಿಯೋಗಳು ಸೋಷಿಯಲ್ ಮೀಡಿಯಾ ಪೂರ್ತಿ ಓಡಾಡುತ್ತಿವೆ.
ಇದೇ ಕಾರಣಕ್ಕೆ 'ಯುಐ' ಸಿನಿಮಾ ಸೋತು ಹೋಯ್ತಾ? ಎನ್ನುವ ಪ್ರಶ್ನೆ ಏಳುತ್ತಿದೆ. ಆದರೆ ಅದು ಸುಳ್ಳು, ಯಾಕಂದ್ರೆ ಉಪೇಂದ್ರ ಅವರ ನಿರ್ದೇಶನದ ಸಿನಿಮಾ ಒಂದು ಬಾರಿ ನೋಡಿದರೆ ಸಾಲದು. ಕನಿಷ್ಠ 2 ಬಾರಿ ನೋಡಬೇಕು ಅಂತಾ ಉಪ್ಪಿ ಫ್ಯಾನ್ಸ್ ಈಗ ಸಲಹೆ ನೀಡುತ್ತಿದ್ದಾರೆ. ಹೀಗಾಗಿ 'ಯುಐ' ಸಿನಿಮಾ ಒಂದು ಬಾರಿ ನೋಡಿದರೆ ಅರ್ಥ ಆಗಲ್ಲ, ಹೀಗೆ ಸಿನಿಮಾ ಅರ್ಥ ಆಗಬೇಕು ಅಂದ್ರೆ ಕನಿಷ್ಠ 2 ಬಾರಿ ನೋಡಬೇಕು ಅಂತ ಉಪೇಂದ್ರ ಅಭಿಮಾನಿಗಳು ಹೇಳ್ತಿದ್ದಾರೆ.
ಇದೆಲ್ಲವನ್ನೂ ಮೀರಿ 'ಯುಐ' ಸಿನಿಮಾ ಮೊದಲ ದಿನವೇ ಬರೋಬ್ಬರಿ 10 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗಿದ್ದು, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಇನ್ನೂ ಹೊರ ಬಿದ್ದಿಲ್ಲ. ಮತ್ತೊಂದು ಕಡೆ ಹೊರ ರಾಜ್ಯಗಳಲ್ಲಿ ಕೂಡ ಉಪೇಂದ್ರ ಅವರು ಡೈರೆಕ್ಷನ್ ಮಾಡಿದ 'ಯುಐ' ಸಿನಿಮಾ ಬಗ್ಗೆ ಕ್ರೇಜ್ ಹೆಚ್ಚಾಗಿದ್ದು, ವಾರಂತ್ಯದಲ್ಲಿ ಮತ್ತಷ್ಟು ಗಳಿಕೆ ಮಾಡುವ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.












Click it and Unblock the Notifications